ಕನ್ನಡದಲ್ಲಿ ಹಾಡು.. ಇಂಗ್ಲೀಷ್‌ನಲ್ಲಿ ಮಾತು – ಸುದೀಪ್ ಮಗಳು ಸಾನ್ವಿ ಟ್ರೋಲ್ ಆಗಿದ್ಯಾಕೆ?
ಕಿಚ್ಚ ಸುದೀಪ್ ಅವರು ಮ್ಯಾಕ್ಸ್ ಸಿನಿಮಾ ಗೆಲುವಿನ ಖುಷಿಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಮುದ್ದಿನ ಮಗಳು ಸಾನ್ವಿ, ಪತ್ನಿ ಪ್ರಿಯಾ ಜೊತೆ ಸುದೀಪ್ ಝೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದ್ರೆ, ಇಲ್ಲೂ ಕೂಡಾ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಕೆಲವರು ಮಾಡಿದ್ದಾರೆ. ಸುದೀಪ್ ಮಗಳು ಸಾನ್ವಿ ಇಂಗ್ಲೀಷ್ ಮಾತಾಡಿದ್ದನ್ನೇ ದೊಡ್ಡದಾಗಿ ಹೈಲೆಟ್ ಮಾಡಿದ್ದಾರೆ. ಅಪ್ಪ ಮಗಳ ಬಾಂಧವ್ಯಕ್ಕೆ ಸಂತಸ ಪಡುವುದು ಬಿಟ್ಟು ಸಾನ್ವಿ ಮಾತಾಡಿದ್ದನ್ನೇ ಟ್ರೋಲ್ ಮಾಡಲಾಗ್ತಿದೆ.
ಇದನ್ನೂ ಓದಿ: ಚೈತ್ರಾಳನ್ನ ಮತ್ತೆ ಟಾರ್ಗೆಟ್ ಮಾಡಿದ ಖಳನಾಯಕ ರಜತ್ – ಈ ವಾರ ಫ್ರೈರ್‌ಬ್ರ್ಯಾಂಡ್ ಮನೆಗೆ ಹೋಗೋದು ಫಿಕ್ಸ್?
ಸುದೀಪ್ ಅವರು ಕನ್ನಡ ಭಾಷೆಗೆ ಬಹಳ ಮಹತ್ವ ನೀಡುತ್ತಾರೆ. ಆದರೆ, ಸುದೀಪ್ ಅವರ ಮಗಳ ಇಂಗ್ಲಿಷ್ ಭಾಷೆಯಲ್ಲೇ ಯಾಕೆ ಮಾತಾಡಿದ್ದು ಎಂಬ ಪ್ರಶ್ನೆಯನ್ನ ಅನೇಕರು ಕೇಳಿದ್ದಾರೆ. ಇನ್ನು ಕೆಲವರು ಸಿಕ್ಕಾಪಟ್ಟೆ ಟ್ರೋಲ್ ಕೂಡಾ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ಜೀ ಕನ್ನಡದ ‘ಸರಿಗಮಪ’ ವೇದಿಕೆ ಮೇಲೆ ಕಿಚ್ಚ ಸುದೀಪ್, ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಆಗಮಿಸಿದ್ದರು. ಈ ವೇಳೆ ಸಾನ್ವಿ ಅವರು ತಂದೆಗಾಗಿ, ‘ಜಸ್ಟ್ ಮಾತ್ ಮಾತಲ್ಲಿ..’ ಹಾಡನ್ನು ಸುಮಧುರವಾಗಿ ಹಾಡಿದರು. ಈ ಹಾಡಿನ ಬಳಿಕ ಅವರು ಸಂಪೂರ್ಣವಾಗಿ ಮಾತನಾಡಿದ್ದು ಇಂಗ್ಲಿಷ್ನಲ್ಲಿ. ‘ಪ್ರತಿವರ್ಷ’ ಎಂಬ ಶಬ್ದ ಬಿಟ್ಟು ಅವರು ಮತ್ತೆಲ್ಲಿಯೂ ಕನ್ನಡ ಶಬ್ದ ಮಾತನಾಡಿಲ್ಲ. ಅಪ್ಪನಿಗೆ ಇರೋ ಕನ್ನಡ ಪ್ರೀತಿ ಮಗಳಿಗಿಲ್ವಾ ಅಂತಾ ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.
ಕನ್ನಡ ರಿಯಾಲಿಟಿ ಶೋನಲ್ಲಿ ಮಗಳಿಗೇಕೆ ಅವರು ಕನ್ನಡ ಮಾತನಾಡುವಂತೆ ಒತ್ತಾಯಿಸಿಲ್ಲ ಎಂದು ಅನೇಕರು ಪ್ರಶ್ನೆ ಮಾಡುತ್ತಾ ಇದ್ದಾರೆ. ಇನ್ನೂ ಕೆಲವು ಸಾನ್ವಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಸುದೀಪ್ ಮಗಳು ಸಾನ್ವಿ ಇಂಗ್ಲಿಷ್ನಲ್ಲೇ ಮಾತನಡಿರಬಹುದು, ಆದರೆ, ಅವರು ಹಾಡಿದ್ದು ಕನ್ನಡದ ಹಾಡನ್ನೇ. ಈ ಕಾರಣಕ್ಕೆ ಸಂತೋಷ ವ್ಯಕ್ತಪಡಿಸಬೇಕು ಎಂದು ಕೆಲವರು ಹೇಳಿದ್ದಾರೆ.