ಟೆಸ್ಟ್‌ನಲ್ಲಿ ರೋಹಿತ್ ಎವರೇಜ್ ಕ್ಯಾಪ್ಟನ್ ಎಂದಿದ್ಯಾಕೆ? – ಎರಡನೇ ಟೆಸ್ಟ್ ಆಡಲ್ವಾ ವಿರಾಟ್ ಕೊಹ್ಲಿ?

ಟೆಸ್ಟ್‌ನಲ್ಲಿ ರೋಹಿತ್ ಎವರೇಜ್ ಕ್ಯಾಪ್ಟನ್ ಎಂದಿದ್ಯಾಕೆ? – ಎರಡನೇ ಟೆಸ್ಟ್ ಆಡಲ್ವಾ ವಿರಾಟ್ ಕೊಹ್ಲಿ?

ವಿರಾಟ್ ಕೊಹ್ಲಿ ಇಂಗ್ಲೆಂಡ್​​ ವಿರುದ್ಧ ಇಡೀ ಸೀರಿಸ್​​ನ್ನೇ ಆಡ್ತಾ ಇಲ್ವಾ? ಫಸ್ಟ್​​ ಎರಡು ಮ್ಯಾಚ್​​ಗಳನ್ನ ಆಡಲ್ಲ ಎಂದಿರೋ ಕೊಹ್ಲಿ, ಕೊನೆಯ ಮೂರು ಟೆಸ್ಟ್​ಗೂ ಟೀಂನ್ನ ಜಾಯಿನ್ ಆಗೋದಿಲ್ವಾ? ಹಾಗೆಯೇ ಮಾಜಿ ಕ್ರಿಕೆಟಿಗರೊಬ್ಬರು ರೋಹಿತ್ ಶರ್ಮಾರದ್ದು ಎವರೇಜ್ ಕ್ಯಾಪ್ಟನ್ಸಿ ಎಂದಿದ್ದಾರೆ. ರೋಹಿತ್​ಗಿಂತ ಕೊಹ್ಲಿಯೇ ಬೆಸ್ಟ್ ಕ್ಯಾಪ್ಟನ್ ಎಂದಿದ್ದಾರೆ. ಅವರು ಹೇಳಿಕೆ ಹಿಂದೆ ಇರುವ ಉದ್ದೇಶವೇನು ಎಂಬ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ: ಕಾಯುತ್ತಿದ್ದ ದಿನಗಳು ಬಂದೇ ಬಿಟ್ಟಿತು – ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದ ಸರ್ಫರಾಜ್ ಖಾನ್

ಇಂಗ್ಲೆಂಡ್ ವಿರುದ್ಧದ ಫಸ್ಟ್​ ಟೆಸ್ಟ್ ಮ್ಯಾಚ್​​ನಲ್ಲಿ ಕೊಹ್ಲಿ ಆಡಿಲ್ಲ. ಸೆಕೆಂಡ್ ಟೆಸ್ಟ್​​ನಲ್ಲೂ ಆಡ್ತಾ ಇಲ್ಲ. ಬಟ್ ಉಳಿದ ಮೂರು ಟೆಸ್ಟ್​ ಮ್ಯಾಚ್​​ಗಳಲ್ಲಿ ಆಡ್ತಾರೆ ಅನ್ನೋದು ಕೂಡ ಗ್ಯಾರಂಟಿ ಇಲ್ಲ. ಯಾಕಂದ್ರೆ ಈ ಬಗ್ಗೆ ಬಿಸಿಸಿಐ ಮಹತ್ವದ ಮಾಹಿತಿಯೊಂದನ್ನ ಕೊಟ್ಟಿದೆ. ವಿರಾಟ್ ಕೊಹ್ಲಿ ಮೊದಲ ಎರಡು ಮ್ಯಾಚ್​​​ಗಳಲ್ಲಿ ಆಡೋಕೆ ಆಗೋದಿಲ್ಲ ಅಂತಷ್ಟೇ ಬಿಸಿಸಿಐಗೆ ಇನ್​​ಫಾರ್ಮ್ ಮಾಡಿದ್ರಂತೆ. ಹಾಗಂತಾ ಉಳಿದ ಮೂರು ಮ್ಯಾಚ್​ಗಳಿಗೆ ಕಮ್​ಬ್ಯಾಕ್​ ಮಾಡ್ತೀನಿ ಅನ್ನೋ ಬಗ್ಗೆ ಕೊಹ್ಲಿ ಯಾವುದೇ ಮಾಹಿತಿಯನ್ನ ಕೊಟ್ಟಿಲ್ವಂತೆ. ಕೊಹ್ಲಿ ಮೂರನೇ ಟೆಸ್ಟ್​​ಗೆ ಅವೈಲೆಬಲ್​ ಇದ್ದಾರಾ? ಇಲ್ವಾ? ಅನ್ನೋ ಬಗ್ಗೆ ಬಿಸಿಸಿಐಗೂ ಯಾವುದೇ ಕ್ಲ್ಯಾರಿಟಿ ಇಲ್ಲ. ಈಗಾಗ್ಲೇ ಕೊಹ್ಲಿ ಆಬ್ಸೆನ್ಸ್​​ನಲ್ಲಿ ಟೀಂ ಇಂಡಿಯಾ ಫಸ್ಟ್ ಮ್ಯಾಚ್​​ನ್ನ ಸೋತಾಗಿದೆ. ​ಕೊನೆಯ ಮೂರು ಟೆಸ್ಟ್​​ ಮ್ಯಾಚ್​ಗಳಲ್ಲಾದ್ರೂ ವಿರಾಟ್ ಕೊಹ್ಲಿ ಆಡಲಿ ಅಂತಾನೆ ಎಲ್ಲರೂ ಕಾಯ್ತಾ ಇದ್ದಾರೆ. ಒಂದು ವೇಳೆ ಲಾಸ್ಟ್​​ ಮೂರು ಟೆಸ್ಟ್​ ಮ್ಯಾಚ್​​ಗಳಿಗೂ ಕೊಹ್ಲಿ ಅವೈಲೇಬಲ್ ಇಲ್ಲಾಂದ್ರೆ ಟೀಂ ಇಂಡಿಯಾಗೆ ದೊಡ್ಡ ಹೊಡೆತ ಬೀಳೋದ್ರಲ್ಲಿ ಡೌಟೇ ಇಲ್ಲ.

ಈ ನಡುವೆ ಟೆಸ್ಟ್​ನಲ್ಲಿ ರೋಹಿತ್​ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ಈಗ ಒಂದಷ್ಟು ಚರ್ಚೆಗಳು ಶುರುವಾಗಿವೆ. ಇಂಗ್ಲೆಂಡ್​ ವಿರುದ್ಧದ ಫಸ್ಟ್ ಟೆಸ್ಟ್ ಸೋಲಿನ ಬಳಿಕ ಟೆಸ್ಟ್ ಕ್ಯಾಪ್ಟನ್ಸಿಗೆ ರೋಹಿತ್​ಗಿಂತ ವಿರಾಟ್ ಕೊಹ್ಲಿಯೇ ಬೆಟರ್ ಅಂತಾ ಒಂದಷ್ಟು ಮಂದಿ ಹೇಳ್ತಾ ಇದ್ದಾರೆ. ಇಂಗ್ಲೆಂಡ್ ಟೀಮ್​ನ ಮಾಜಿ ನಾಯಕ ಮೈಕಲ್ ವಾನ್ ಕೂಡ ಈ ಬಗ್ಗೆ ಮಾತನಾಡಿದ್ದು, ಒಂದು ವೇಳೆ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿರ್ತಿದ್ರೆ ಇಂಗ್ಲೆಂಡ್​​ ವಿರುದ್ಧದ ಫಸ್ಟ್​ ಟೆಸ್ಟ್​​ನಲ್ಲಿ ಭಾರತ ಸೋಲ್ತಾ ಇರಲಿಲ್ಲ ಅಂತಾ ಮೈಕಲ್ ವಾನ್ ಹೇಳಿದ್ದಾರೆ. ಫಸ್ಟ್​​ ಇನ್ನಿಂಗ್ಸ್​​ನಲ್ಲಿ 190 ರನ್​ಗಳ ಲೀಡ್ ಪಡೆದುಕೊಂಡ್ರೂ ಟೀಂ ಇಂಡಿಯಾ ಮ್ಯಾಚ್ ಸೋತಿದೆ. ಸೆಕೆಂಡ್​ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್​​ ಬ್ಯಾಟಿಂಗ್ ಮಾಡೋ ವೇಳೆ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಕಂಪ್ಲೀಟ್ ಸ್ವಿಚ್ ಆಫ್ ಆಗಿದ್ರು. ಒಂದು ವೇಳೆ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿರ್ತಿದ್ರೆ ಹೀಗಾಗ್ತಾ ಇರಲಿಲ್ಲ. ಟೆಸ್ಟ್​ ಫಾರ್ಮೆಟ್​ನಲ್ಲಿ ಇಂಡಿಯನ್​ ಕ್ರಿಕೆಟ್ ಟೀಮ್​ ಕೊಹ್ಲಿ ಕ್ಯಾಪ್ಟನ್ಸಿಯನ್ನ ತುಂಬಾನೆ ಮಿಸ್ ಮಾಡಿಕೊಳ್ತಿದೆ ಅಂತಾ ಮೈಕಲ್ ವಾನ್ ಹೇಳಿದ್ದಾರೆ. ಅಷ್ಟೇ ಅಲ್ಲ, ಟೆಸ್ಟ್​​ನಲ್ಲಿ ವಿರಾಟ್ ಕೊಹ್ಲಿಯೇ ಬೆಸ್ಟ್ ಕ್ಯಾಪ್ಟನ್. ಬಟ್ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಎವರೇಜ್ ಆಗಿದ್ಯಷ್ಟೇ. ಓಲಿ ಪಾಪ್ ನಿರಂತರವಾಗಿ ಸ್ವೀಪ್​ ಶಾಟ್ಸ್​​ಗಳನ್ನ ಹೊಡೀತಿದ್ರೂ ರೋಹಿತ್​ ಶರ್ಮಾ ಮಾತ್ರ ಕ್ಲೂಲೆಸ್ ಆಗಿದ್ರು ಅಂತಾ ಮೈಕಲ್ ವಾನ್ ಹೇಳಿದ್ದಾರೆ.

Sulekha