ಚಿನ್ನಸ್ವಾಮಿಯಲ್ಲಿ ಸೆಕೆಂಡ್ ಬ್ಯಾಟಿಂಗ್ ಮಾಡೋರಿಗೆ ಅಡ್ವಾಂಟೇಜ್ – ಆರ್ ಸಿಬಿ ಗೆಲ್ಲುತ್ತಾ?

ಹೋಂ ಗ್ರೌಂಡ್ನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರೋ ಆರ್ಸಿಬಿ. ಮತ್ತೊಂದೆಡೆ ಗೆಲುವಿನ ಟ್ರ್ಯಾಕ್ಗೆ ಕಮ್ ಬ್ಯಾಕ್ ಮಾಡೋಕೆ ಕಾಯ್ತಿರೋ ಆರ್ಆರ್. ಎರಡೂ ತಂಡಗಳಿಗೂ ಚಿನ್ನಸ್ವಾಮಿ ಮೈದಾನದಲ್ಲಿ ಇಂದು ನಡೆಯಲಿರುವ ಪಂದ್ಯ ಮೋಸ್ಟ್ ಇಂಪಾರ್ಟೆಂಟ್. ಎರಡೂ ತಂಡಗಳು ಪ್ಲೇ-ಆಫ್ ಕನಸು ಕಾಣುತ್ತಿದ್ದು, ಗೆಲುವು ಯಾರಿಗೆ ಸಿಗಲಿದೆ ಅನ್ನೋ ಕ್ಯೂರಿಯಾಸಿಟಿ ಇದೆ. ಅಂತಿಮ ನಾಲ್ಕರ ಘಟ್ಟ ತಲುಪೋರೆ ಆರ್ಸಿಬಿ ಇವತ್ತಿನ ಪಂದ್ಯ ಗೆಲ್ಲಲೇಬೇಕಿದೆ. ಈಗಾಗಲೇ 8 ಪಂದ್ಯಗಳಲ್ಲಿ ಐದು ಗೆದ್ದಿರುವ ಆರ್ಸಿಬಿ, ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬಟ್ ರಾಜಸ್ಥಾನ್ ರಾಯಲ್ಸ್, ಈ ಬಾರಿ ಸೋಲಿನ ಸುಳಿಯಲ್ಲಿ ಸಿಲುಕಿ ಒದ್ದಾಡ್ತಿದೆ. ಈಸಿಯಾಗಿ ಗೆಲ್ಲೋ ಮ್ಯಾಚ್ಗಳನ್ನೂ ಕೈಚೆಲ್ಲಿಕೊಂಡಿದೆ. 8 ಪಂದ್ಯಗಳನ್ನ ಆಡಿ ಈ ಪೈಕಿ ಎರಡರಲ್ಲಿ ಮಾತ್ರವೇ ಗೆದ್ದು ಪಾಯಿಂಟ್ಸ್ ಟೇಬಲ್ನಲ್ಲಿ 8ನೇ ಸ್ಥಾನದಲ್ಲಿದೆ.
ಇದನ್ನೂ ಓದಿ : IND Vs PAK ಪಂದ್ಯಗಳು ಬ್ಯಾನ್? – ಪಹಲ್ಗಾಂ ದಾಳಿಗೆ ಭಾರತದ ರಿವೇಂಜ್?
ಚಿನ್ನಸ್ವಾಮಿ ಮೈದಾನ ಬ್ಯಾಟಿಂಗ್ ಫ್ರೆಂಡ್ಲಿಯಾಗಿದ್ರೂ ಸ್ಪಿನ್ನರ್ಗಳಿಗೂ ಅಷ್ಟೇ ಸಪೋರ್ಟಿವ್ ಆಗಿದೆ. ಅದ್ರಲ್ಲೂ ಇಲ್ಲಿ ಟಾಸ್ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಟಾಸ್ ಗೆದ್ದವ್ರು ಫಸ್ಟ್ ಬೌಲಿಂಗ್ನೇ ಸೆಲೆಕ್ಟ್ ಮಾಡಿಕೊಳ್ತಾರೆ. ಆರಂಭದ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಅಷ್ಟು ಸಹಕಾರಿಯಾಗದೇ ಇದ್ರೂ ಸೆಕೆಂಡ್ ಬ್ಯಾಟಿಂಗ್ಗೆ ಬರೋರಿಗೆ ಪ್ಲಸ್ ಆಗುತ್ತೆ. ಅಂದ್ರೆ ಫಸ್ಟ್ ಇನ್ನಿಂಗ್ಸ್ನಲ್ಲಿ ಬೌಲರ್ಸ್ ಮೇಲುಗೈ ಸಾಧಿಸಿದ್ರೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬ್ಯಾಟರ್ಸ್ ಪ್ರಾಬಲ್ಯ ಮೆರೀತಾರೆ. ಬಟ್ ಇತ್ತೀಚಿನ ದಿನಗಳಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬದಲಾಗಿದೆ. ಮೊದಲು ಈ ಪಿಚ್‌ನಲ್ಲಿ ಬಿಗ್ ಸ್ಕೋರ್ ಪಂದ್ಯಗಳು ನಡೆಯುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪಿಚ್ ಬೌಲರ್ಸ್‌ಗೆ ಹೆಚ್ಚು ಅನುಕೂಲವಾಗಿದೆ. ಪಂದ್ಯದಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡೋದೇ ಬೆಸ್ಟ್ ಅನ್ಕೊಳ್ತಾರೆ. ಬ್ಯಾಡ್ ಲಕ್ ಅಂದ್ರೆ ಕಳೆದ ಮೂರೂ ಪಂದ್ಯಗಳಲ್ಲೂ ಆರ್ ಸಿಬಿ ಟಾಸ್ ಸೋತು ಪಸ್ಟ್ ಬ್ಯಾಟಿಂಗ್ ಮಾಡಿ ಸೋಲು ಕಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಾದ್ರೂ ಟಾಸ್ ಗೆದ್ದು ಫಸ್ಟ್ ಫೀಲ್ಡಿಂಗ್ ಮಾಡೋ ಅವಕಾಶ ಸಿಗುತ್ತಾ ಅನ್ನೋದೇ ಪ್ರಶ್ನೆ.
ಈ ಸೀಸನ್ನ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಹೋಂ ಗ್ರೌಂಡ್ನಲ್ಲಿ ಗೆಲ್ಲದೇ ಇರೋ ಏಕೈಕ ಟೀಂ ಆರ್ ಸಿಬಿ. ತವರಿನಾಚೆ ಐದಕ್ಕೆ ಐದೂ ಪಂದ್ಯಗಳನ್ನು ಗೆದ್ದರೂ ಬೆಂಗಳೂರಿನಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಅಲ್ದೇ ಟಾಪ್ ಆರ್ಡರ್ ಬ್ಯಾಟರ್ಸ್ ಕಂಪ್ಲೀಟ್ ಫ್ಲ್ಯಾಪ್. ಗುಜರಾತ್ ವಿರುದ್ಧ ಲಿಯಾಮ್ ಲಿವಿಂಗ್ ಸ್ಟೋನ್ ಹಾಗೇ ಪಂಜಾಬ್ ವಿರುದ್ಧ ಟಿಮ್ ಡೇವಿಡ್ ಇಬ್ರೇ ಅರ್ಧಶತಕ ಸಿಡಿಸಿರೋದಿ. ತವರಿನಲ್ಲಿ ಆರ್ ಸಿಬಿಯ ಟಾಪ್ ಸಿಕ್ಸ್ ಬ್ಯಾಟ್ಸ್ ಮನ್ ಗಳ ಸರಾಸರಿ ಕೇವಲ 13.94 ಇದೆ. ಇದು ಬೇರೆ ತಂಡಗಳಿಗೆ ಕಂಪೇರ್ ಮಾಡಿದ್ರೆ ತೀರಾ ಕಡಿಮೆ. ಪವರ್‌ಪ್ಲೇಯಲ್ಲಿ ಸರಾಸರಿ ಪ್ರತಿ 12 ಬಾಲ್ ಗಳಿಗೆ ಒಂದು ವಿಕೆಟ್ ಕಳ್ಕೊಂಡಿದ್ದಾರೆ. ಬೇರೆ ಕಡೆ ಮಾತ್ರ ಕನ್ಸಿಸ್ಟೆನ್ಸಿಯಾಗಿ ಪರ್ಫಾಮ್ ಮಾಡಿದ್ದಾರೆ.
ಇನ್ನು ಐಪಿಎಲ್ ಇತಿಹಾಸವನ್ನ ಕೆದಕಿದ್ರೆ ಉಭಯ ತಂಡಗಳ ನಡುವೆ ನೆಕ್ ಟು ನೆಕ್ ಫೈಟ್ ನಡೆದಿದೆ. 2008 ರಿಂದ ಐಪಿಎಲ್‌ನಲ್ಲಿ 33 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಪಂದ್ಯಗಳಲ್ಲಿ ಗೆದ್ದಿದ್ದರೆ, ರಾಜಸ್ಥಾನ ರಾಯಲ್ಸ್ 14 ಬಾರಿ ಆರ್ ಸಿಬಿ ವಿರುದ್ಧ ಗೆದ್ದಿದ್ದಾರೆ, ಆದರೆ 3 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಇನ್ನೂ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ಒಟ್ಟು 9 ಬಾರಿ ಸ್ಪರ್ಧಿಸಿದ್ದು, 4 ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ಗೆದ್ದಿದ್ದರೆ ಮೂರು ಪಂದ್ಯಗಳಲ್ಲಿ ಆರ್ ಸಿಬಿ ಗೆಲುವು ಸಾಧಿಸಿದೆ. ಎರಡು ಪಂದ್ಯಗಳು ಯಾವುದೇ ಫಲಿತಾಂಶ ಇಲ್ಲದೆ ಕೊನೆಗೊಂಡಿದೆ.
ಇನ್ನು ಈ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ಗೆ ನಾಯಕ ಸಂಜು ಸ್ಯಾಮ್ಸನ್ ಇಂಜುರಿಯೇ ದೊಡ್ಡ ಆಘಾತವಾಗಿದೆ. ಸ್ಯಾಮ್ಸನ್ ಆಬ್ಸೆನ್ಸ್ನಲ್ಲಿ ರಿಯಾನ್ ಪರಾಗ್ ತಂಡವನ್ನು ಲೀಡ್ ಮಾಡ್ತಿದ್ದಾರೆ. ಅಲ್ದೇ ರಾಜಸ್ಥಾನ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಸಾಕಷ್ಟು ಸವಾಲುಗಳನ್ನ ಎದುರಿಸ್ತಾ ಇದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ಕಡೆಯೂ ಸ್ಟ್ರಗಲ್ ಪಡ್ತಿರೋದು ಎದ್ದು ಕಾಣ್ತಿದೆ. ಪ್ಲೇ ಆಫ್‌ನಲ್ಲಿ ಸ್ಥಾನ ಪಡೆಯುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ಬಾಕಿ ಇರುವ 6 ಪಂದ್ಯಗಳಲ್ಲಿ ಕನಿಷ್ಠ 5ರಲ್ಲಾದರೂ ಗೆಲ್ಲಲೇಬೇಕು. ಹೀಗಾಗಿ, ಸಿಕ್ಕಾಪಟ್ಟೆ ಅಂಡರ್ ಪ್ರೆಶರ್ನಲ್ಲಿದೆ. ಅಲ್ದೇ ಕಳೆದ ಪಂದ್ಯದಲ್ಲಿ ಐಪಿಎಲ್‌ಗೆ ಕಾಲಿಟ್ಟ 14 ವರ್ಷದ ವೈಭವ್ ಸೂರ್ಯ ವಂಶಿ ಮೇಲೂ ಹೆಚ್ಚಿನ ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿದೆ.