ಕೇಸರಿ ಬಣ್ಣಕ್ಕೆ ತಿರುಗಿದ ಆಕಾಶ – ನೀಲಿ ಬಾನಿನ ಬಣ್ಣ ಬದಲಾಗಿದ್ದು ಎಲ್ಲಿ?

ಕೇಸರಿ ಬಣ್ಣಕ್ಕೆ ತಿರುಗಿದ ಆಕಾಶ – ನೀಲಿ ಬಾನಿನ ಬಣ್ಣ ಬದಲಾಗಿದ್ದು ಎಲ್ಲಿ?

ಸೂರ್ಯಾಸ್ತ ಅಥವಾ ಸೂರ್ಯೋದಯದ ವೇಳೆ ಆಕಾಶ ಕಿತ್ತಳೆ ಬಣ್ಣಕ್ಕೆ ತಿರುಗುವುದನ್ನು ನಾವು ನೋಡಿದ್ದೇವೆ. ಆದರೆ ಕೆನಡಾ, ಅಮೆರಿಕ ಸೇರಿದಂತೆ ಉತ್ತರ ಅಮೆರಿಕ ಖಂಡದಲ್ಲಿರುವ ಅನೇಕ ಪ್ರದೇಶದ ಆಗಸದ ಬಣ್ಣ ಬದಲಾಗಿದೆ. ಅಲ್ಲಿನ ಆಕಾಶ ಸಂಪೂರ್ಣವಾಗಿ ಕೇಸರಿಮಯವಾಗಿದೆ. ದಿನವಿಡೀ ಕೇಸರಿ ಬಣ್ಣದಲ್ಲೇ ಇರುತ್ತಿದೆ. ಈ ವಿದ್ಯಾಮಾನ ಅಲ್ಲಿನ ಜನರ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಆಕಾಶ ಕಿತ್ತಳೆ ಬಣ್ಣಕ್ಕೆ ತಿರುಗಲು ಕಾರಣವೇನು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಸಾಮಾನ್ಯವಾಗಿ ಆಕಾಶ ಸೂರ್ಯೋದಯ, ಸೂರ್ಯಾಸ್ತ ವೇಳೆ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ಆದರೆ ಉತ್ತರ ಅಮೆರಿಕ ಖಂಡದಲ್ಲಿರುವ ಅನೇಕ ಪ್ರದೇಶದ ಆಗಸದ ಬಣ್ಣ ಬದಲಾಗುತ್ತಿದೆ. ಈ ವಿದ್ಯಾಮಾನದಿಂದಾಗಿ ಅಲ್ಲಿನ ಜನರು ಆತಂಕದಿಂದ ಇದ್ದರು. ಈ ವಿದ್ಯಾಮಾನದ ಹಿಂದೆ ಇರುವುದು ಕೆನಡಾದಲ್ಲಿ ಹೊತ್ತಿ ಉರಿಯುತ್ತಿರುವ ಅರಣ್ಯ ಪ್ರದೇಶ!. ಸುಮಾರು ಒಂದು ತಿಂಗಳ ಹಿಂದೆ ಕಾಡ್ಗಿಚ್ಚು ಶುರುವಾಗಿದ್ದು ಇರದ ಪರಿಣಾಮವಾಗಿ 2.5 ಕೋಟಿ ಎಕರೆಗೂ ಅಧಿಕ ಅರಣ್ಯ ಪ್ರದೇಶ ಹಾನಿಗೀಡಾಗಿದೆ. ಈ ಕಾಡ್ಗಿಚ್ಚು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಬೆಂಕಿಯಿಂದ ಬರುವ ಹೊಗೆಯೂ ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ. ಹೀಗಾಗಿಯೇ ಉತ್ತರ ಅಮೆರಿಕ ಖಂಡದರುವ ಆನೇಕ ಪ್ರದೇಶದಲ್ಲಿ ಅಗಸದ ಬಣ್ಣ ಬದಲಾಗಿದೆ.

ಇದನ್ನೂ ಓದಿ: ಚಂದ್ರಯಾನ-3 ಗೆ ಮತ್ತೊಂದು ಯಶಸ್ಸು – ನೌಕೆಯಿಂದ ಬೇರ್ಪಟ್ಟ ಲ್ಯಾಂಡರ್ ಮಾಡ್ಯೂಲ್!

ಬೆಂಕಿಯಿಂದ ಬರುವ ಹೊಗೆಯ ಕಣಗಳಿಂದಾಗಿ ಆಕಾಶವು ವಿಲಕ್ಷಣವಾಗಿ ಕಿತ್ತಳೆ ಬಣ್ಣಕ್ಕೆ ರೂಪಾಂತರಗೊಂಡಿದೆ. ಈ ಕಣಗಳು ನೀಲಿ ಮತ್ತು ಹಸಿರು ಮುಂತಾದ ಕಡಿಮೆ ತರಂಗಾಂತರಗಳನ್ನು ಹೊಂದಿರುವ ಬೆಳಕನ್ನು ನಿರ್ಬಂಧಿಸಿ ಸೂರ್ಯನ ಬೆಳಕಿನ ದೀರ್ಘ ತರಂಗಾಂತರ ಬಣ್ಣಗಳಾದ ಕೆಂಪು ಮತ್ತು ಕಿತ್ತಳೆ ಹಾದುಹೋಗಲು ಅನುವು ಮಾಡಿಕೊಡುತ್ತವೆ. ಈ ವಿದ್ಯಮಾನವು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಕಾರಣ ಆ ಸಮಯದಲ್ಲಿ ಸೂರ್ಯನ ಬೆಳಕು ಭೂಮಿಯ ವಾತಾವರಣದ ಮೂಲಕ ಹೆಚ್ಚು ಹಾದುಹೋಗಬೇಕಾಗುತ್ತದೆ. ಕಡಿಮೆ ತರಂಗಾಂತರಗಳನ್ನು ಫಿಲ್ಟರ್ ಮಾಡಿ ದೀರ್ಘ ತರಂಗಾಂತರ ಉಳ್ಳ ಬೆಳಕು ನಮ್ಮನ್ನು ತಲುಪಲು ವಾತಾವರಣ ಅನುವು ಮಾಡಿಕೊಡುವಾಗ ಈ ಘಟನೆ ಸಂಭವಿಸುತ್ತದೆ. ಪರಿಣಾಮವಾಗಿ, ಆಕಾಶವು ಕಿತ್ತಳೆ ಬಣ್ಣಕ್ಕೆ ಬದಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

suddiyaana