ಫ್ಯಾನ್ಸ್ ಕ್ರೇಜ್ ಹೆಚ್ಚಿಸಲು ಬ್ಯಾಟಿಂಗ್ ಫ್ರೆಂಡ್ಲಿ ಪಿಚ್ ಮಾಡಿದ್ರಾ – ಬ್ಯಾಲೆನ್ಸ್ ತಪ್ಪಿತಾ ಕ್ರಿಕೆಟ್? –  

ಫ್ಯಾನ್ಸ್ ಕ್ರೇಜ್ ಹೆಚ್ಚಿಸಲು ಬ್ಯಾಟಿಂಗ್ ಫ್ರೆಂಡ್ಲಿ ಪಿಚ್ ಮಾಡಿದ್ರಾ – ಬ್ಯಾಲೆನ್ಸ್ ತಪ್ಪಿತಾ ಕ್ರಿಕೆಟ್? –  

ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಮೊದಲ ದಿನದಾಟದ ಪಂದ್ಯಗಳನ್ನ ನೋಡಿದ ಕ್ರಿಕೆಟ್ ಫ್ಯಾನ್ಸ್ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಯಾಕಂದ್ರೆ ಫಸ್ಟ್ ಡೇನೇ ಬ್ಯಾಟರ್​ಗಳು ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಸಾಲು ಸಾಲು ಶತಕ ಬಾರಿಸಿದ್ದಾರೆ. ಡಬಲ್ ಸೆಂಚುರಿಯೂ ಬಂದಿದೆ. ಆದ್ರೆ ಇನ್ನೂ ಕೆಲವರು ಬ್ಯಾಟರ್​ಗಳ ಅಬ್ಬರಕ್ಕೆ ಅಸಮಾಧಾನಗೊಂಡಿದ್ದಾರೆ. ಕ್ರಿಕೆಟ್ ಎಕ್ಸ್​ಪರ್ಟ್ಸ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಬ್ಯಾಟರ್​ಫ್ರೆಂಡ್ಲಿ ಪಿಚ್​ಗಳಿಗೆ ಜಾಸ್ತಿ ಇಂಪಾರ್ಟೆನ್ಸ್ ಕೊಡ್ತಿದ್ದಾರೆ ಅನ್ನೋದು. ಹೀಗೇ ಆದ್ರೆ ಫ್ಯೂಚರ್ ಕ್ರಿಕೆಟ್ ಮೇಲೆ ಎಂಥಾ ಎಫೆಕ್ಟ್ ಆಗುತ್ತೆ ಅನ್ನೋದು ಅವ್ರ ವಾದ.

ಇದನ್ನೂ ಓದಿ : ವೈಭವ್ ಸೂರ್ಯವಂಶಿಯನ್ನ ಭಾರತ ತಂಡಕ್ಕೆ ಕರೆತನ್ನಿ – ಕಾಂಗ್ರೆಸ್ ಸಂಸದ ಶಶಿ ತರೂರ್

ಮಾರ್ಡ್ರೆನ್ ಕ್ರಿಕೆಟ್ ನಲ್ಲಿ ಬ್ಯಾಟರ್​ಗಳದ್ದೇ ದರ್ಬಾರ್. ಪಂದ್ಯದಿಂದ ಪಂದ್ಯಕ್ಕೆ ಬಿಗ್ ಸ್ಕೋರ್​ಗಳು ಬರ್ತಾನೇ ಇದೆ. ಐಪಿಎಲ್​ನಲ್ಲಂತೂ ನೆಕ್ಸ್​ಟ್ ಲೆವೆಲ್ ಬ್ಯಾಟಿಂಗ್ ಪರ್ಫಾಮೆನ್ಸ್ ಇರುತ್ತೆ. ಆದ್ರೆ ಬ್ಯಾಟರ್​ಗಳ ಸಿಡಿಲಬ್ಬರದ ಮುಂದೆ ಬೌಲರ್​ಗಳಿಗಂತೂ ಬೆಲೆನೇ ಇಲ್ದಂಗ್ ಆಗೋಗಿದೆ. ಅದಕ್ಕೆ ಮುಖ್ಯ ಕಾರಣವೇ ಇತ್ತೀಚಿಗೆ ನಿರ್ಮಾಣವಾಗ್ತಿರೋ ಬ್ಯಾಟಿಂಗ್ ಸ್ನೇಹಿ ಪಿಚ್​ಗಳು. ಲೀಲಾಜಾಲವಾಗಿ ಬ್ಯಾಟ್​ ಬೀಸೋ ಥರ ಫ್ಲ್ಯಾಟ್ ಟ್ರ್ಯಾಕ್​ಗಳನ್ನ ರೆಡಿ ಮಾಡ್ತಿರೋದೇ ಇದಕ್ಕೆಲ್ಲಾ ಕಾರಣ ಅನ್ನೋ ಆರೋಪಗಳು ಕೇಳಿ ಬರ್ತಿವೆ. ಇದೀಗ ಡಿಸೆಂಬರ್ 24ರಂದು ನಡೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಮೊದಲ ದಿನದ ಪಂದ್ಯದಲ್ಲಿ ಬಂದಿರುವಂಥ ಪ್ರದರ್ಶನಗಳು.

ಬ್ಯಾಟರ್ ಗಳ ಸಿಡಿಲಬ್ಬರ!

ಟೂರ್ನಿಯ ಮೊದಲ ದಿನವೇ ಒಟ್ಟು 22 ಶತಕ ಸಿಡಿಸಿ ಆಟಗಾರರು

ಒಡಿಶಾ ತಂಡದ ಸ್ವಸ್ತಿಕ್ ಸಮಲ್ ದ್ವಿಶತಕ, 169 ಎಸೆತ, 212 ರನ್ಸ್

ಒಂದೇ ದಿನ ಅತೀ ವೇಗದ ಶತಕದ ದಾಖಲೆ ಬರೆದ ಮೂವರು ಬ್ಯಾಟರ್ಸ್

ಬಿಹಾರ ಪರ ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಸೆಂಚುರಿ

ಜಾರ್ಖಂಡ್ ತಂಡದ ನಾಯಕ ಇಶಾನ್ ಕೇವಲ 33 ಎಸೆತಗಳಲ್ಲಿ ಶತಕ

ಬಿಹಾರ ತಂಡದ ನಾಯಕ ಸಕಿಬುಲ್ ಗನಿ ಕೇವಲ 32 ಎಸೆತಗಳಲ್ಲಿ ಶತಕ

84 ಎಸೆತಗಳಲ್ಲಿ 190 ರನ್ ಚಚ್ಚಿದ ವೈಭವ್ ಸೂರ್ಯವಂಶಿ

574 ರನ್ ಸಿಡಿಸಿ ಬಿಹಾರ ವಿಶ್ವದಾಖಲೆ, ಲಿಸ್ಟ್ ಎ ಕ್ರಿಕೆಟ್ ನ ಗರಿಷ್ಠ ಮೊತ್ತ

ಬಿಹಾರ ಪರ 38 ಸಿಕ್ಸರ್‌ ಗಳು ಬಂದಿದ್ದು ಇನ್ನಿಂಗ್ಸ್ ನ ಅತೀಹೆಚ್ಚು ದಾಖಲೆ

ಬಿಹಾರ ಪರ ಮೂವರ ಶತಕ, ವಿಹೆಟ್ ಟಿ ಇತಿಹಾಸದಲ್ಲೇ ಮೊದಲು

ವೈಭವ್ ಸೂರ್ಯವಂಶಿ, ಸಕಿಬುಲ್ ಗನಿ ಮತ್ತು ಆಯುಷ್ ಆನಂದ್ ಶತಕ

ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಕರ್ನಾಟಕ ದಾಖಲೆಯ ಚೇಸಿಂಗ್

ಜಾರ್ಖಂಡ್ ನಿಗದಿತ 50 ಓವರ್ ​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 412 ರನ್

ಟಾರ್ಗೆಟ್ ಬೆನ್ನತ್ತಿದ ಕರ್ನಾಟಕ ಪರ 147 ರನ್ ಬಾರಿಸಿದ ಪಡಿಕ್ಕಲ್

47.3 ಓವರ್ ಗಳಲ್ಲೇ 413 ರನ್ ಚೇಸಿಂಗ್ ಮಾಡಿ ಕರ್ನಾಟಕ ದಾಖಲೆ

ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಯಶಸ್ವಿ ಚೇಸ್

ಭಾರತದಲ್ಲಿ ಮೊದಲ ಬಿಗ್ ಸ್ಕೋರ್ ಚೇಸಿಂಗ್ ಮಾಡಿದ ಕರ್ನಾಟಕ

ರೋಹಿತ್ ಶರ್ಮಾ ಭರ್ಜರಿ 155 ರನ್, ವಿರಾಟ್ ಕೊಹ್ಲಿ 131 ರನ್ಸ್

ಇಶಾನ್ ಕಿಶನ್, ದೇವದತ್ ಪಡಿಕ್ಕಲ್ ಸೇರಿದಂತೆ 22 ಆಟಗಾರರ ಶತಕ

ಈ ಎಲ್ಲಾ ದಾಖಲೆಗಳನ್ನ ನೋಡಿದ ಮೇಲೆ ಕ್ರಿಕೆಟ್ ಎಕ್ಸ್​ಪರ್ಟ್ಸ್ ಬ್ಯಾಟಿಂಗ್ ಫ್ರೆಂಡ್ಲಿ ಪಿಚ್​ಗಳ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ನೋಡುಗರಿಗೆ ಥ್ರಿಲ್ ಕೊಡೋದೇ ಸಿಕ್ಸ್, ಫೋರ್ಸ್ ಹಾಗೇ ಬಿಗ್ ಸ್ಕೋರ್ ಬಂದಾಗ. ಹೀಗಾಗಿ ಮ್ಯಾನೇಜ್​ಮೆಂಟ್​ಗಳ ಅಣತಿಯಂತೆ ಪಿಚ್ ಕ್ಯುರೇಟರ್​ಗಳು ಬ್ಯಾಟರ್​ಗಳಿಗೆ ಅನುಕೂಲವಾಗುವಂತೆ ಫ್ಲಾಟ್ ಟ್ರ್ಯಾಕ್, ಲೋ ಗ್ರಾಸ್ ಅಥವಾ ಸಮತಟ್ಟಾದ ಮೇಲ್ಮೈಯನ್ನು ಮಾಡ್ತಿದ್ದಾರೆ. ಹೀಗೆ ಮಾಡೋದ್ರಿಂದ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬಂದು ರನ್ ಗಳಿಸಲು ಸುಲಭವಾಗುತ್ತದೆ ಮತ್ತು ಬೌಲರ್‌ಗಳಿಗೆ ವಿಕೆಟ್ ಪಡೆಯಲು ಕಷ್ಟವಾಗುತ್ತದೆ. ಬ್ಯಾಟರ್ಸ್ ಅಗ್ರೆಸ್ಸಿವ್ ಆಗಿ ಆಡೋದ್ರಿಂದ ಬೌಲರ್ಸ್ ವೀಕ್ ಆಗಿ ಕಾಣ್ತಾರೆ. ಹಾಗಂತ ವಿಜಯ್ ಹಜಾರೆ ಟೂರ್ನಿಯ ಮೊದಲ ದಿನದಾಟದಲ್ಲಿ ಬೌಲರ್​ಗಳು ಯಾರೂ ಮಿಂಚೇ ಇಲ್ವ ಅಂದ್ರೆ ಖಂಡಿತ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ. ಹ್ಯಾಟ್ರಿಕ್ ವಿಕೆಟ್ಸ್ ತೆಗೆದವ್ರೂ ಇದ್ದಾರೆ. ಬಟ್ ಬ್ಯಾಟಿಂಗ್​ನಲ್ಲೇ ಅತೀ ಹೆಚ್ಚು ದಾಖಲೆಗಳಾಗಿರೋದೇ ಆತಂಕಕ್ಕೆ ಕಾರಣವಾಗಿದೆ ಅಷ್ಟೇ.

Shantha Kumari