ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಎಡವಟ್ಟು – ಕ್ಯಾಪ್ಟನ್ ರೋಹಿತ್ ಶರ್ಮಾ ಹೊಡೆಯಲು ಓಡಿ ಬಂದ್ರಾ?
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೈದಾನದಲ್ಲಿ ಕೋಪಗೊಳ್ಳೋದು ಒಮ್ಮೊಮ್ಮೆ ಕಂಡು ಬರುತ್ತದೆ. ಈ ಬಾರಿ ರೋಹಿತ್ ಶರ್ಮಾ ಮತ್ತೊಮ್ಮೆ ತಾಳ್ಮೆ ಕಳೆದುಕೊಂಡಿದ್ದಾರೆ. ಬೌಲಿಂಗ್ ಮಾಡಲು ಸರಿಯಾಗಿ ರನ್ ಅಪ್ ತೆಗೆದುಕೊಳ್ಳುವಲ್ಲಿ ಪದೇ ಪದೇ ತಪ್ಪು ಮಾಡಿದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರಿಗೆ ರೋಹಿತ್ ಶರ್ಮಾ ಹೊಡೆಯಲು ಓಡಿ ಬಂದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಲಂಕಾದ ಮುಂದೆ ಮಂಕಾದ ಟೀಮ್ ಇಂಡಿಯಾ – 32 ರನ್‌ಗಳಿಂದ ಶ್ರೀಲಂಕಾ ಗೆಲುವು
ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿಕೊಂಡು ನಾಯಕನ ಸಿಟ್ಟಿಗೆ ಗುರಿಯಾದರು.
33ನೇ ಓವರ್ ಎಸೆಯುವ ಜವಬ್ದಾರಿ ಹೊತ್ತ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮೊದಲ ಬಾರಿ ರನ್ ಅಪ್ ತೆಗೆದುಕೊಳ್ಳುವಲ್ಲಿ ಎಡವಿದ್ರು. ಆದರೆ ಎರಡನೇ ಬಾರಿ ಅದೇ ಪುನರಾವರ್ತನೆಯಾದ ರೋಹಿತ್, ಸುಂದರ್ ಕಡೆಗೆ ಕೈ ತೋರಿಸಿದರು. ಇಲ್ಲಿಗೆ ನಿಲ್ಲದ ಸುಂದರ್ ಮೂರನೇ ಬಾರಿಯೂ ಅದೇ ತಪ್ಪು ಮಾಡಿದರು. ಈ ವೇಳೆ ತಮ್ಮ ತಾಳ್ಮೆ ಕಳೆದುಕೊಂಡ ರೋಹಿತ್, ಸಂದುರ್ನತ್ತ ಹೊಡೆಯಲು ಓಡಿದರು.
ಮೊದಲ ಪಂದ್ಯದಲ್ಲೂ ಇಂಥದ್ದೇ ಘಟನೆ ಸರಣಿಯ ಮೊದಲ ಪಂದ್ಯದಲ್ಲೂ ರೋಹಿತ್ ಶರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಇಂತಹದ್ದೇ ತಮಾಷದಾಯಕ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಶ್ರೀಲಂಕಾ ಇನಿಂಗ್ಸ್ನ 29ನೇ ಓವರ್ನಲ್ಲಿ ಸುಂದರ್ ಎಲ್ ಬಿಡಬ್ಲ್ಯುಗೆ ಮನವಿ ಮಾಡಿದರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಬಳಿಕ ವಾಷಿಂಗ್ಟನ್ ಸುಂದರ್ ನಾಯಕ ರೋಹಿತ್ ಶರ್ಮಾ ಕಡೆಗೆ ನೋಡಲಾರಂಭಿಸಿದರು.ಆ ಸಮಯದಲ್ಲಿ ರೋಹಿತ್ ಕೂಡ ಸ್ಲಿಪ್‌ನಲ್ಲಿದ್ದರು, ಇದರಿಂದಾಗಿ ಚೆಂಡು ಮೊದಲು ಎಲ್ಲಿಗೆ ಬಡಿಯಿತು ಎಂದು ಅವರಿಗೆ ತಿಳಿದಿರಲಿಲ್ಲ. ಹೀಗಾಗಿ ಸುಂದರ್ ದಿಟ್ಟಿಸಿ ತನ್ನತ್ತ ನೋಡುವುದನ್ನು ನೋಡಿದ ರೋಹಿತ್, ‘ಏನು, ನೀನು ಹೇಳಪ್ಪ. ನನ್ನ ನೋಡಿದ್ರೆ ಆಗುತ್ತಾ?’ (ನಾನು ನೋಡಿಲ್ಲ, ಬೌಲಿಂಗ್ ಮಾಡಿದ್ದು ನೀನು, ಖಚಿತವಾಗಿ ಅದು ಔಟ್ ಅನ್ನುವ ಹಾಗಿದ್ರೆ ಹೇಳು ಡಿಆರ್ಎಸ್ ತೆಗೆದುಕೊಳ್ಳುವ ಅನ್ನುವ ಅರ್ಥದಲ್ಲಿ) ಎಂದು ಹೇಳಿ ನಕ್ಕಿದ್ದರು.
ಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಎರಡು ಓವರ್ ಬೌಲ್ ಮಾಡುವುದರೊಂದಿಗೆ ರೋಹಿತ್ ಶರ್ಮಾ ತಮ್ಮ ಹೆಸರಿನಲ್ಲಿ ದಾಖಲೆ ಕೂಡ ಬರೆದರು. 37 ವರ್ಷದ ರೋಹಿತ್ ಶರ್ಮಾ, ಏಕದಿನದಲ್ಲಿ ಬೌಲಿಂಗ್ ಮಾಡಿ ಈ ದಾಖಲೆ ಬರೆದಿದ್ದಾರೆ. ಟೀಂ ಇಂಡಿಯಾ ಪರ ಏಕದಿನದಲ್ಲಿ ಬೌಲಿಂಗ್ ಮಾಡಿದ ಮೂರನೇ ಅತ್ಯಂತ ಹಿರಿಯ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.