ಮಗುವಿನ ತಲೆ ಬಿಸಿಯಾಗುತ್ತಿದೆಯೇ? – ಕಾರಣ ಏನೇನು ಗೊತ್ತಾ?

ಮಗುವಿನ ತಲೆ ಬಿಸಿಯಾಗುತ್ತಿದೆಯೇ? – ಕಾರಣ ಏನೇನು ಗೊತ್ತಾ?

ಮನೆಯಲ್ಲಿ  ಪುಟ್ಟ ಮಕ್ಕಳಿದ್ರೆ ಅವ್ರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇ ಬೇಕಾಗುತ್ತೆ. ಅವರ ದೇಹ ತುಂಬಾ ಸೂಕ್ಷ್ಮ ಆಗಿರೋದ್ರಿಂದ ಯಾವಾಗಲೂ ಎಚ್ಚರಿಕೆಯಿಂದ ಇರೋದು ಮುಖ್ಯ ಆಗಿರುತ್ತೆ.. ಅನೇಕ ಬಾರಿ ಜ್ವರ ಇಲ್ಲದಿದ್ರೂ ಮಕ್ಕಳ ತಲೆ ಮಾತ್ರ ಬಿಸಿಯಾಗಿರುತ್ತದೆ. ಇದು ಪೋಷಕರ ಆತಂಕಕ್ಕೆ ಕಾರಣವಾಗುತ್ತೆ.

ಇದನ್ನೂ ಓದಿ: ರೆಬಲ್‌ ನಾಯಕಿ ಸುಮಲತಾ ನಡೆ ಇನ್ನೂ ನಿಗೂಢ – ಕುಮಾರಸ್ವಾಮಿ ಭೇಟಿಗೆ ಡಿಕೆಶಿ ಟೀಕೆ

ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚು ಗಮನ ನೀಡ್ತಾರೆ. ಮಕ್ಕಳ ದೇಹದಲ್ಲಿ ಸ್ವಲ್ಪ ಬದಲಾವಣೆ ಕಂಡ್ರೂ ಆಸ್ಪತ್ರೆಗೆ ಕರೆದುಕೊಂಡು ಓಡೋರಿದ್ದಾರೆ. ಮತ್ತೆ ಕೆಲವರು ಮನೆ ಮದ್ದುಗಳ ಪ್ರಯೋಗ ಮಾಡ್ತಾರೆ. ಸಾಮಾನ್ಯವಾಗಿ ಸಣ್ಣ ಮಕ್ಕಳ ತಲೆ ಬಿಸಿಯಾಗೋದನ್ನು ನೀವು ಗಮನಿಸಿರಬಹುದು. ಥರ್ಮಾಮೀಟರ್ ನಲ್ಲಿ ನೋಡಿದ್ರೆ ಜ್ವರ ಇರೋದಿಲ್ಲ. ಆದ್ರೆ ತಲೆ ಮಾತ್ರ ಬಿಸಿಯಾಗಿರುತ್ತದೆ. ಪಾಲಕರು ಈ ಸಂದರ್ಭದಲ್ಲಿ ಆತಂಕಕ್ಕೊಳಗಾಗ್ತಾರೆ. ಮಕ್ಕಳ ತಲೆ ಹೀಗೆ ಬಿಸಿಯಾಗಲು ಅನೇಕ ಕಾರಣಗಳಿವೆ.‌ ಮಗುವನ್ನು ಮಲಗಿಸಿದ ಕೋಣೆ ಬಿಸಿಯಾಗಿದ್ದರೆ,  ಮಗುವಿನ ತಲೆ ಬಿಸಿಯಾಗಲು ಕಾರಣವಾಗಬಹುದು. ಇದು ಸಾಮಾನ್ಯವಾಗಿ ಬಿಸಿ ಮತ್ತು ಶುಷ್ಕ ವಾತಾವರಣದಲ್ಲಿ ಸಂಭವಿಸುತ್ತದೆ.

ಮಗುವಿಗೆ ಹವಾಮಾನಕ್ಕೆ ಅನುಗುಣವಾಗಿ ಬಟ್ಟೆ ಹಾಕದಿದ್ದರೆ, ತಲೆ ಬೆಚ್ಚಗಾಗುವ ಸಾಧ್ಯತೆಗಳಿವೆ. ಶೀತ ವಾತಾವರಣದಲ್ಲಿ ಮಗುವಿಗೆ ಟೋಪಿ ಅಥವಾ ಚಳಿಗಾಲದ ಟೋಪಿ ಧರಿಸುವುದು ಸಹ ದೇಹದ ಉಳಿದ ಭಾಗಗಳಿಗೆ ಹೋಲಿಸಿದರೆ ತಲೆಯನ್ನು ಬೆಚ್ಚಗಾಗಿಸುತ್ತದೆ. ಹವಾಮಾನವು ಬಿಸಿಯಾಗಿದ್ದರೆ ಅಥವಾ ನಮ್ಮ ನೇರ ಸೂರ್ಯನ ಬೆಳಕಿನಲ್ಲಿದ್ದರೆ, ಮಗುವಿನ ತಲೆಯು ಜ್ವರವಿಲ್ಲದಿದ್ದರೂ ಬಿಸಿಯಾಗಿರುತ್ತದೆ.

ಮಗುವು ತನ್ನ ಬೆನ್ನಿನ ಮೇಲೆ ದೀರ್ಘಕಾಲ ಮಲಗಿದ್ದರೆ ತಲೆಯು ಜ್ವರವಿಲ್ಲದಿದ್ರೂ ಬಿಸಿಯಾಗುತ್ತೆ. ಇನ್ನು ಹಲ್ಲು ಹುಟ್ಟುವ ವೇಳೆ ದೇಹದ ಉಷ್ಣಾಂಶದಲ್ಲಿ ಸ್ವಲ್ಪ ಹೆಚ್ಚಳ ಆಗಬಹುದು. ಇನ್ನು ಮಗುವಿಗೆ ವಿಟಮಿನ್‌ಕೊರತೆ ಇದ್ದಾಗಲೂ ತಲೆ ಬಿಸಿಯಾಗಿ ಇತುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಕ್ಕಳ ತಲೆ ಬಿಸಿಯಾದಾಗ ಪೋಷಕರು ಆತಂಕಕ್ಕೆ ಒಳಗಾಗದೇ ಸಮಸ್ಯೆ ಕಾರಣ ಏನು ಅಂತಾ ಕಂಡುಕೊಳ್ಳುವುದು ಉತ್ತಮ.

Shwetha M