ಅಫ್ಘಾನ್ ಮೇಲೆ ಪಾಕ್ ಏರ್‌ಸ್ಟ್ರೈಕ್! – ತಾಲಿ*ಬಾನ್‌ಗೆ ಭಾರತದ ಬಲ!
ಭಾರತ-ಅಫ್ಘಾನ್ ದೋಸ್ತಿಗೆ ಉರಿದು ಬಿದ್ದ ಪಾಕ್

ಪಾಕಿಸ್ತಾನಕ್ಕೆ ಅತೀ ದೊಡ್ಡ ಶತ್ರು ದೇಶ ಅಂದ್ರೆ ಅದು ಭಾರತ.. ಎರಡನೇ ಶತ್ರುದೇಶ ಅಂದ್ರೆ ಅದು ಅಫ್ಘಾನ್.. ಈಗ ಭಾರತ ಮತ್ತು ಅಫ್ಘಾನ್ ಸ್ನೇಹ ಗಟ್ಟಿಯಾಗುತ್ತಿದ್ದು, ಪಾಕ್‌ಗೆ ಚಳಿಜ್ವರ ಬರೋಕೆ ಶುರುವಾಗಿದೆ.. ಅಕ್ಕಪಕ್ಕ ಶತ್ರುಗಳ ಮಧ್ಯೆ ಭಿಕಾರಿ ದೇಶವಾಗಿರೋ ಪಾಕ್ ವಿಲವಿಲ ಓದ್ದಾಡುವಂತೆ ಆಗಿದೆ. ಅಂದಹಾಗೇ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಇದೇ ಗುರುವಾರ ಭಾರತಕ್ಕೆ ಬಂದಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಆಹ್ವಾನದ ಮೇರೆಗೆ ಇವ್ರು ಬಂದಿದ್ದಾರೆ. ಇವರು ಅಕ್ಟೋಬರ್16ರ ತನಕ ಭಾರತದಲ್ಲೇ ಇರ್ತಾರೆ. 2021 ರ ನಂತರ ತಾಲಿಬಾನ್‌ನಿಂದ ಭಾರತದತ್ತ ನಡೆದ ಅತ್ಯಂತ ಉನ್ನತ ಮಟ್ಟದ ಭೇಟಿ ಎಂದು ಪರಿಗಣಿಸಲಾಗಿದೆ. ಎರಡು ದೇಶದ ಜೊತೆಗಿವ ಸಂಬಂಧ, ವ್ಯಾಪಾರ, ಆರೋಗ್ಯ ಸೇವೆ ಹಾಗೂ ಭದ್ರತಾ ಸಹಕಾರ ಕುರಿತಂತೆ ಚರ್ಚೆಗಳು ನಡೆಯಲಿವೆ.
ಇದನ್ನೂ ಓದಿ: 8 ದಿನದಲ್ಲಿ 509 ಕೋಟಿ ಕಲೆಕ್ಷನ್ ಮಾಡಿದ ಕಾಂತಾರ 1 – KGF, ಕಾಂತಾರ ದಾಖಲೆ ಉಡೀಸ್
ಭಾರತವು ತಾಲಿಬಾನ್ ಸರ್ಕಾರವನ್ನು ಇನ್ನೂ ಅಧಿಕೃತವಾಗಿ ಗುರುತಿಸಿಲ್ಲ. ಆದ್ರೆ ತಾಲಿಬಾನ್ ಆಡಳಿತದೊಂದಿಗೆ ನೇರ ಸಂವಾದವನ್ನು ಪ್ರಾರಂಭಿಸುವುದರಿಂದ ಭಾರತ ತನ್ನ ಪ್ರಭಾವವನ್ನು ಕಾಬೂಲ್‌ನಲ್ಲಿ ಪುನಃ ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಪ್ರಸ್ತುತ ಭಾರತವು ಅಫ್ಘಾನಿಸ್ತಾನದಲ್ಲಿ ಮಾನವೀಯ ನೆರವು ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಆಹಾರ, ಔಷಧಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಭಾರತ ಅಲ್ಲಿ ವಿಶ್ವಾಸಾರ್ಹ ರಾಷ್ಟ್ರವಾಗಿ ಉಳಿದಿದೆ.
ಮತ್ತೊಂದೆಡೆ, ರಷ್ಯಾ ದೇಶವು ಈಗಾಗಲೇ ತಾಲಿಬಾನ್ ಅನ್ನು ಅಧಿಕೃತವಾಗಿ ಗುರುತಿಸಿದೆ. ಆದ್ರೆ ಭಾರತ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಇನ್ನು ಭಾರತಕ್ಕೆ ಪ್ರಮುಖ ಕಾಳಜಿ ಎಂದರೆ ಭಯೋತ್ಪಾದಕ ಗುಂಪುಗಳು ಅಫ್ಘಾನ್ ಭೂಮಿಯನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಬಾರದು ಅನ್ನೋದು. ತಾಲಿಬಾನ್ ಈ ವಿಷಯದಲ್ಲಿ ಸ್ಪಷ್ಟ ನಿಲುವು ತಾಳಿದ್ದು, ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿಗಳನ್ನು ಖಂಡಿಸಿದೆ. ಪಾಕ್ ವಿರುದ್ಧ ಕೂಡ ಅಪ್ಘಾನ್ ರೊಚ್ಚಿಗೆದ್ದಿದೆ. ಹೀಗೆ ತಾಲಿಬಾನ್ ಮತ್ತು ಭಾರತದ ಸಂಬಂಧ ಗಟ್ಟಿಯಾಗುತ್ತಿದ್ದಂತೆ, ಪಾಕಿಸ್ತಾನಕ್ಕೆ ತಲೆ ಕೆಟ್ಟೋಗಿದೆ. ಯಾಕಂದ್ರೆ ಇಸ್ಲಾಮಾಬಾದ್ ದೀರ್ಘಕಾಲದಿಂದ ಕಾಬೂಲ್‌ನಲ್ಲಿ ಭಾರತ ಪ್ರಭಾವವನ್ನು ಕಡಿಮೆ ಮಾಡಲು ಪ್ರಯತ್ನ ಮಾಡ್ತಿದೆ. ಆದ್ರೆ, ಈಗ ತಾಲಿಬಾನ್ ಸರ್ಕಾರವೇ ಭಾರತದೊಂದಿಗೆ ನೇರವಾಗಿ ಮಾತುಕತೆ ನಡೆಸುತ್ತಿರುವುದು ಪಾಕಿಸ್ತಾನದ ಪ್ರಾದೇಶಿಕ ಕಾರ್ಯತಂತ್ರಕ್ಕೆ ಹೊಡೆತ ನೀಡುತ್ತೆ. ಯಾಕಂದ್ರೆ ಪಾಕಿಸ್ತಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಾಲಿಬಾನ್ ಭಾರತವನ್ನು ಹೊಸ ಜೊತೆಗಾರ ಅಂತ ನೋಡುತ್ತಿದೆ.
ಇನ್ನು, 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನ ಮತ್ತು ತಾಲಿಬಾನ್ ನಡುವಿನ ಸಂಬಂಧಗಳು ಹದಗೆಟ್ಟಿವೆ. ಗಡಿಯಾಚೆಯ ದಾಳಿಗಳು ಮತ್ತು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಆರೋಪಗಳಿಂದಾಗಿ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ. ಪಾಕಿಸ್ತಾನದಲ್ಲಿನ ಭಯೋತ್ಪಾದನೆಗೆ ತಾಲಿಬಾನ್ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಇಸ್ಲಾಮಾಬಾದ್ ಆರೋಪಿಸುತ್ತಿದೆ. ಇದೇ ವೇಳೆ ಲಕ್ಷಾಂತರ ಅಫ್ಘಾನ್ ನಿರಾಶ್ರಿತರನ್ನು ಗಡಿಪಾರು ಮಾಡುವ ಪಾಕಿಸ್ತಾನದ ನಿರ್ಧಾರ ಕಾಬೂಲ್‌ನೊಂದಿಗೆ ಸಂಬಂಧ ಹದಗೆಡಿಸಿದೆ. ಈ ನಡುವೆ ತಾಲಿಬಾನ್ ವಿದೇಶಾಂಗ ಸಚಿವ ಭಾರತಕ್ಕೆ ಬಂದ ದಿನವೇ ಅಫ್ಘಾನ್ ಮೇಲೆ ವಾಯುದಾಳಿ ಮಾಡಲಾಗಿದೆ. ಟಿಪಿ ಮುಖ್ಯಸ್ಥ ನೂರ್ ವಾಲಿ ಮೆಹ್ಸೂದ್ ಗುರಿಯಾಗಿಸಿಕೊಂಡು ನಡೆದ ವೈಮಾನಿಕ ದಾಳಿಯಾಗಿದೆ. ಆದ್ರೆ ದಾಳಿಯಲ್ಲಿ ಮೆಹ್ಸೂದ್ ಅವರಿಗೆ ಏನು ಆಗಿಲ್ಲ ಬಟ್ ಅವರ ಮಗ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿ ಆಗಿದೆ. 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಮೇಲೆ ಕಾಬೂಲ್‌ನಲ್ಲಿ ನಡೆದ ಮೊದಲ ದಾಳಿ ಇದಾಗಿದೆ. ಈ ದಾಳಿಯಿಂದ ಪಾಕಿಸ್ತಾನ ಮತ್ತು ಅಫ್ಘಾನ್ ಸಂಬಂಧಕ್ಕೆ ಮತ್ತಷ್ಟು ಬೆಂಕಿ ಬಿದ್ದ ಹಾಗೇ ಆಗಿದೆ.
ಭಾರತವು ಸದಾ “ಅಫ್ಘಾನ್ ಮಣ್ಣನ್ನು ಯಾವುದೇ ದೇಶದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಬಾರದು” ಎಂಬ ನಿಲುವು ತಾಳಿದೆ. ಹಾಗಾಗಿ, ಮುತ್ತಕಿಯವರ ಭೇಟಿಯಿಂದ ಈ ದೃಷ್ಟಿಕೋನವನ್ನು ತಾಲಿಬಾನ್ ಸರ್ಕಾರದಿಗೂ ಸ್ಪಷ್ಟವಾಗಿ ತಿಳಿಸುವ ಅವಕಾಶ ಸಿಕ್ಕಿದೆ. ಎರಡೂ ರಾಷ್ಟ್ರಗಳ ನಡುವೆ ವ್ಯಾಪಾರ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಹಕಾರದ ನೂತನ ದಾರಿಗಳು ತೆರೆಯುವ ಸಾಧ್ಯತೆ ಇದೆ. ಅಫ್ಘಾನಿಸ್ತಾನದ ಜನರಿಗಾಗಿ ಭಾರತ ಕಳೆದ ದಶಕದಲ್ಲಿ 500 ಕ್ಕೂ ಹೆಚ್ಚು ಅಭಿವೃದ್ಧಿ ಯೋಜನೆಗಳನ್ನು ನೆರವೇರಿಸಿದೆ. ಇವುಗಳಲ್ಲಿ ರಸ್ತೆ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯುತ್ ಯೋಜನೆಗಳು ಸೇರಿವೆ. ಮುಂದೆ ಕೂಡ ಈ ಸಂಬಂಧ ಗಟ್ಟಿಯಾಗೋಕೆ ಈ ಬೇಟಿ ಸಾಕ್ಷಿಯಾಗಲಿದೆ.
ಹೀಗಾಗಿಯೇ ಈ ಹೊಸ ರಾಜತಾಂತ್ರಿಕ ಚಟುವಟಿಕೆಗಳು ಪಾಕಿಸ್ತಾನದ ವಲಯದಲ್ಲಿ ಆತಂಕವನ್ನು ಉಂಟುಮಾಡುತ್ತಿವೆ. ಇತ್ತೀಚೆಗೆ ವಿಶ್ವಸಂಸ್ಥೆಯು ಮುತ್ತಕಿಯವರ ಪ್ರಯಾಣ ನಿಷೇಧವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ್ದು, ಭಾರತ ಭೇಟಿ ನೀಡೋಕೆ ಸಾಧ್ಯವಾಗಿದೆ. ಪಾಕಿಸ್ತಾನವು ಇದನ್ನು ತಡೆಯಲು ಪ್ರಯತ್ನಿಸಿದರೂ ವಿಶ್ವಸಂಸ್ಥೆಯು ಅನುಮೋದನೆ ನೀಡಿತು. ಇದು ಪಾಕಿಸ್ತಾನಕ್ಕೆ ಮತ್ತೊಂದು ರಾಜತಾಂತ್ರಿಕ ಹಿನ್ನಡೆಯಾಗಿದೆ.
ಹೀಗಾಗಿ ಮುತ್ತಕಿಯವರ ಭಾರತ ಪ್ರವಾಸವು ದ್ವಿಪಕ್ಷೀಯ ಸಂಬಂಧಗಳ ಹೊಸ ಅಧ್ಯಾಯವನ್ನು ಆರಂಭಿಸುತ್ತಿದೆ. ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಭಾರತ ಭೇಟಿಯೂ ಇದೀಗ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಅತಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹೌದು, ಆಗಸ್ಟ್ 2021ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಇದು ನವದೆಹಲಿಗೆ ಅವರ ಮೊದಲ ಅಧಿಕೃತ ಭೇಟಿಯಾಗಿದೆ. ಹಾಗಾಗಿ, ಅವ್ರ ಈ ಭೇಟಿಯೂ ಭಾರತ ಮತ್ತು ತಾಲಿಬಾನ್ ನಡುವಿನ ಸಂಬಂಧಗಳನ್ನು ಹೊಸ ಹಾದಿಗೆ ಕೊಂಡೊಯ್ಯುತ್ತಿದ್ದ್ರೆ, ಅತ್ತ ಪಾಕಿಸ್ತಾನ ಮಾತ್ರ ಈ ಹೊಸ ಆಟ ನೋಡಿ ತಲೆ ಕಡೆಸಿಕೊಂಡಿದೆ.

ನೋಡಿರಿ

