ENG ಬೇಟೆಗೆ ಶತಕವೀರ ನಿತೀಶ್? – ಗೇಮ್ ಚೇಂಜರ್ ಆಗ್ತಾರಾ ಕುಲ್ದೀಪ್?
ಆರ್ಚರ್ ಎಂಟ್ರಿ ಭಾರತಕ್ಕೆ ಸವಾಲು?

ಹೆಡಿಂಗ್ಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಒಂದು ಗೆಲುವಿನ ಮುನ್ನಡೆಯಲ್ಲಿದೆ. ಸೋ ಸರಣಿ ಸಮಬಲ ಮಾಡಿಕೊಳ್ಳೋಕೆ ಭಾರತ ಎರಡನೇ ಪಂದ್ಯ ಗೆಲ್ಲಬೇಕು. ಜುಲೈ 2ರಿಂದ 6ರವರೆಗೆ ಬರ್ಮಿಂಗ್ ಹ್ಯಾಮ್ನಲ್ಲಿ ನಡೆಯಲಿರೋ ಈ ಪಂದ್ಯ ಭಾರತದ ಪಾಲಿಗೆ ಅಗ್ನಿಪರೀಕ್ಷೆಯಾಗಲಿದೆ. ಈ ಪಂದ್ಯಕ್ಕೂ ಮುನ್ನ ತಂಡದಲ್ಲಿ ಒಂದಷ್ಟು ಚೇಂಜಸ್ ಕೂಡ ಆಗಲಿದೆ.
ಇದನ್ನೂ ಓದಿ : 80 ಓವರ್.. ನ್ಯೂ ಬಾಲ್ ರೂಲ್ಸ್ ಏನು? – ಅಂಪೈರ್ ಜೊತೆ ಪದೇಪದೆ ಕಿರಿಕ್ ಸರಿನಾ?
ಇಂಗ್ಲೆಂಡ್ ವಿರುದ್ಧ ಸರಣಿಗೆ ಅಚ್ಚರಿಯ ರೀತಿಯಲ್ಲಿ 19ನೇ ಆಟಗಾರನಾಗಿ ತಂಡಕ್ಕೆ ಸೇರ್ಪಡೆಯಾಗಿದ್ದ ವೇಗದ ಬೌಲರ್ ಹರ್ಷಿತ್ ರಾಣಾ ಅವರನ್ನು ಸದ್ಯ ತಂಡದಿಂದ ಕೈಬಿಡಲಾಗಿದೆ. ಈ ಬಗ್ಗೆ ಗೌತಮ್ ಗಂಭೀರ್ ಅವ್ರೇ ಸ್ಪಷ್ಟಪಡಿಸಿದ್ದಾರೆ. ತಂಡದಲ್ಲಿ ಸ್ವಲ್ಪ ಸಮಸ್ಯೆ ಇದ್ದ ಕಾರಣ ಹರ್ಷಿತ್ ರಾಣಾ ಅವರನ್ನು ಬ್ಯಾಕಪ್ ಆಗಿ ಕರೆತರಲಾಗಿತ್ತು. ಎಲ್ಲವೂ ಸರಿಯಾಗಿದ್ದು, ಅವರು ವಾಪಸ್ ಹೋಗಬೇಕಾಗುತ್ತದೆ ಎಂದಿದ್ದಾರೆ. ಸರಣಿ ಪ್ರಾರಂಭವಾಗಲು ಇನ್ನೇನು 3 ದಿನ ಬಾಕಿ ಇರುವಾಗ ಹರ್ಷಿತ್ ರಾಣಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಬಟ್ ಈಗ ರಾಣಾ ತಂಡದಿಂದ ಹೊರ ಬಿದ್ದಾಗಿದೆ.
ಇಂಗ್ಲೆಂಡ್ ಸರಣಿಗೆ ಬಿಸಿಸಿಐ ಭಾರತೀಯ ತಂಡವನ್ನು ಘೋಷಣೆ ಮಾಡ್ದಾಗ ಆಲ್‌ರೌಂಡರ್‌ಗಳಾಗಿ ಇಬ್ಬರು ವೇಗದ ಬೌಲರ್ಗಳನ್ನ ಸೇರಿಸಲಾಗಿತ್ತು. ಒಬ್ಬರು ಶಾರ್ದೂಲ್ ಠಾಕೂರ್ ಮತ್ತು ಇನ್ನೊಬ್ಬರು ನಿತೀಶ್ ಕುಮಾರ್ ರೆಡ್ಡಿ. ಆದ್ರೆ ಮೊದಲ ಪಂದ್ಯದಲ್ಲಿ ಆಡೋಕೆ ಅವಕಾಶ ಸಿಕ್ರೂ ಶಾರ್ದೂಲ್ ಈ ಅವಕಾಶವನ್ನು ಸಧ್ಬಳಕೆ ಮಾಡಿಕೊಳ್ಳಲಿಲ್ಲ. ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶಾರ್ದೂಲ್ ಠಾಕೂರ್ ಎಂಟು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿದ್ದರು. ಇದಾದ ನಂತರ, ಎರಡನೇ ಇನ್ನಿಂಗ್ಸ್‌ನಲ್ಲಿ 12 ಎಸೆತಗಳಲ್ಲಿ 4 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಅಂದರೆ, ಶಾರ್ದೂಲ್ ಬ್ಯಾಟಿಂಗ್‌ನಲ್ಲಿ ತುಂಬಾ ಕಳಪೆ ಪ್ರದರ್ಶನ ನೀಡಿದರು. ಇನ್ನು ಬೌಲಿಂಗ್ ವಿಷಯಕ್ಕೆ ಬಂದರೆ ಮೊದಲ ಇನ್ನಿಂಗ್ಸ್‌ನಲ್ಲಿ ಆರು ಓವರ್‌ಗಳಲ್ಲಿ 38 ರನ್‌ಗಳನ್ನು ನೀಡಿ ಯಾವುದೇ ವಿಕೆಟ್ ಪಡೆದಿರಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳಲ್ಲಿ ಎರಡು ವಿಕೆಟ್‌ಗಳನ್ನು ಬೇಟೆಯಾಡಿದ್ರು. ಆದರೆ 60 ಎಸೆತಗಳಲ್ಲಿ 51 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ, ಒಬ್ಬ ಬೌಲರ್ 5 ಕ್ಕಿಂತ ಹೆಚ್ಚು ಎಕಾನಮಿಯಲ್ಲಿ ರನ್ ನೀಡಿದರೆ, ಅದನ್ನು ದುಬಾರಿ ಎಂದೇ ಪರಿಗಣಿಸ್ತಾರೆ.
ಶಾರ್ದೂಲ್ ಠಾಕೂರ್ಗಿಂತ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ನೀಡಿದ್ರೆ ಪ್ಲಸ್ ಆಗಬಹುದು. ರೆಡ್ಡಿ ಕೂಡ ಯಂಗ್ ಪ್ಲೇಯರ್ ಆಗಿದ್ದು ಹೆಚ್ಚು ಅನುಭವವಿಲ್ಲದಿದ್ದರೂ, ಅವರು ಭಾರತಕ್ಕಾಗಿ ಆಡಿರುವ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಲ್ಲಿಯವರೆಗೆ ಐದು ಟೆಸ್ಟ್ ಪಂದ್ಯಗಳನ್ನು ಆಡಿರುವ ನಿತೀಶ್ ಕುಮಾರ್ ರೆಡ್ಡಿ, ಒಂದು ಶತಕ ಸೇರಿದಂತೆ 298 ರನ್ ಗಳಿಸಿದ್ದಾರೆ. ಅಷ್ಟೇ ಅಲ್ದೇ ಐದು ವಿಕೆಟ್‌ಗಳನ್ನು ಪಡೆಯುವಲ್ಲಿಯೂ ಯಶಸ್ವಿಯಾಗಿದ್ರು.
ಭಾರತ vs ಇಂಗ್ಲೆಂಡ್ ಎರಡನೇ ಟೆಸ್ಟ್ ಪಂದ್ಯ ನಡೆಯುವ ಎಡ್ಜ್‌ಬಾಸ್ಟನ್‌ನಲ್ಲಿ ಸ್ಪಿನ್ ಸ್ನೇಹಿ ವಾತಾವರಣ ಇರೋದ್ರಿಂದ ಮತ್ತೊಬ್ಬ ಸ್ಪಿನ್ನರ್ ನನ್ನು ಆಡಿಸುವ ಸಾಧ್ಯತೆ ಹೆಚ್ಚಾಗಿದೆ. ಕುಲದೀಪ್ ಯಾದವ್ ಕೂಡ ಟೆಸ್ಟ್ ಪ್ಲೇಯಿಂಗ್ 11ಗೆ ಮರಳುವ ನಿರೀಕ್ಷೆಯಿದೆ. ಕುಲ್ದೀಪ್ ಬಂದ್ರೆ ಲೀಡ್ಸ್‌ನಲ್ಲಿ ಆಡಿದ್ದ ಮೊಹಮ್ಮದ್ ಸಿರಾಜ್ ಅಥವಾ ಪ್ರಸಿದ್ಧ್ ಕೃಷ್ಣ ಇಬ್ಬರಲ್ಲಿ ಒಬ್ರನ್ನ ಬದಲಾಯಿಸಬಹುದು. ವೇಗದ ಬೌಲರ್ಗಳಿಂತ ಸ್ಪಿನ್ನರ್ಸ್ ಗೆ ಜಾಸ್ತಿ ಒತ್ತು ನೀಡಬಹುದು. ಉಳಿದಂತೆ ಬ್ಯಾಟಿಂಗ್‌ನಲ್ಲಿ ಯಾವುದೇ ಬದಲಾವಣೆಗಳನ್ನ ಮಾಡಲ್ಲ. ಆದ್ರೆ ಇಂಗ್ಲೆಂಡ್ ತಂಡಕ್ಕೆ ಈಗ ಮತ್ತಷ್ಟು ಶಕ್ತಿ ತುಂಬೋಕೆ ಜೋಫ್ರಾ ಆರ್ಚರ್ ಕೂಡ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ.
ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಫಸ್ಟ್ ಕ್ಲಾಸ್ ಕ್ರಿಕೆಟ್ಗೆ ಮತ್ತೆ ಮರಳಿದ್ದಾರೆ. ಅದು ಕೂಡ ಬರೋಬ್ಬರಿ 4 ವರ್ಷಗಳ ಬಳಿಕ. ಫಿಟ್ನೆಸ್ ಸಮಸ್ಯೆಯ ಕಾರಣ ವರ್ಷಗಳ ಕಾಲ ಇಂಗ್ಲೆಂಡ್ ತಂಡದಿಂದ ಹೊರಗುಳಿದಿದ್ದ ಆರ್ಚರ್ ಇತ್ತೀಚೆಗಷ್ಟೇ ಸೀಮಿತ ಓವರ್ಗಳ ಸರಣಿಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ವರ್ಷಗಳ ಬಳಿಕ ಆರ್ಚರ್ ರೆಡ್ ಬಾಲ್ ಕ್ರಿಕೆಟ್ಗೆ ಮರಳಿದ್ದಾರೆ. ಕೌಂಟಿ ಕ್ರಿಕೆಟ್‌ನಲ್ಲಿ ಆರ್ಚರ್ 18 ಓವರ್ಗಳನ್ನು ಬೌಲ್ ಮಾಡಿದ್ದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಮೂಲಕವೇ ಕಂಬ್ಯಾಕ್ ಮಾಡಲು ಜೋಫ್ರಾ ಆರ್ಚರ್ ಪ್ಲ್ಯಾನ್ ರೂಪಿಸಿದ್ದಾರೆ. ಅದರಂತೆ ಭಾರತದ ವಿರುದ್ಧದ ಎರಡನೇ ಅಥವಾ ಮೂರನೇ ಟೆಸ್ಟ್ ಪಂದ್ಯದ ವೇಳೆ ಜೋಫ್ರಾ ಆರ್ಚರ್ ಇಂಗ್ಲೆಂಡ್ ಟೆಸ್ಟ್ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ಜೋಫ್ರಾ ಆರ್ಚರ್ ಇಂಗ್ಲೆಂಡ್ ತಂಡವನ್ನು ಸೇರಿಕೊಂಡರೆ ಆಂಗ್ಲರ ಬೌಲಿಂಗ್ ಲೈನಪ್ ಮತ್ತಷ್ಟು ಬಲಿಷ್ಠವಾಗಲಿದೆ.

ನೋಡಿರಿ

