ಸಾಯಿ ಸುದರ್ಶನ್ ಗೆ ಯಾಕಿಲ್ಲ ಸೆಕೆಂಡ್ ಚಾನ್ಸ್? – 1 ಟೆಸ್ಟ್.. 2 ಇನ್ನಿಂಗ್ಸ್.. ಇದೇನಾ TEST?
ಸುದರ್ಶನ್ ಕೆರಿಯರ್ ಮೇಲೆ ಕರಿನೆರಳು!

ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ಗೆ ಯುವ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಅವರನ್ನು ಕೈಬಿಟ್ಟಿದ್ದಕ್ಕೆ ಬಾರೀ ಟೀಕೆಗಳು ಕೇಳಿ ಬರ್ತಿವೆ. ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರತದ ಪರ ಪಾದಾರ್ಪಣೆ ಮಾಡಿದ್ದ ಸಾಯಿ ಸುದರ್ಶನ್ ಅವರನ್ನು ಕೇವಲ ಒಂದೇ ಒಂದು ಪಂದ್ಯ ಆಡಿಸಿ ಕೈಬಿಟ್ಟಿರೋದನ್ನ ಫ್ಯಾನ್ಸ್ ವಿರೋಧಿಸಿದ್ದಾರೆ. ಎರಡನೇ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಶಾರ್ದೂಲ್ ಠಾಕೂರ್ ಮತ್ತು ಸುದರ್ಶನ್ ಅವರನ್ನು ಕೈಬಿಡಲಾಯಿತು. ಅವರ ಸ್ಥಾನದಲ್ಲಿ ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರನ್ನು ತಂಡಕ್ಕೆ ಸೇರಿಸಲಾಯಿತು. ಬಟ್ ಸುದರ್ಶನ್ರನ್ನ ಡ್ರಾಪ್ ಮಾಡಿದ್ದೇ ಪೋಸ್ಟ್ ವಾರ್ಗೆ ಕಾರಣ ಆಗಿದೆ.
ಇದನ್ನೂ ಓದಿ : 80 ಎಸೆತ.. ಸೆಂಚುರಿ.. ಸ್ಮಿತ್ ಸಿಡಿಲು.. ಟೆಸ್ಟ್ ನಲ್ಲಿ ಮೆಕಲಂ ರೆಕಾರ್ಡ್ ಹೇಗಿದೆ? – ಫಾಸ್ಟೆಸ್ಟ್ ಸೆಂಚುರಿ ಲಿಸ್ಟ್ ನಲ್ಲಿ ಯಾರೆಲ್ಲಾ?
23 ವರ್ಷದ ಸಾಯಿ ಸುದರ್ಶನ್ ಐಪಿಎಲ್ 2025 ರ ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ರು. ಇದಾಗ ಬಳಿಕ ಇಂಗ್ಲೆಂಡ್ ಟೂರ್ಗೆ ಅವ್ರನ್ನ ಸೆಲೆಕ್ಟ್ ಮಾಡಲಾಗಿತ್ತು. ಹಾಗೇ ಮೊದಲ ಪಂದ್ಯದಲ್ಲಿ ಪ್ಲೇಯಿಂಗ್ 11ನಲ್ಲಿ 3ನೇ ಕ್ರಮಾಂಕದಲ್ಲಿ ಆಡಿಸಲಾಗ್ತಿತ್ತು. ಚೇತೇಶ್ವರ ಪೂಜಾರ ಸುದರ್ಶನ್ ಅವರಿಗೆ ಟೆಸ್ಟ್ ಕ್ಯಾಪ್ ನೀಡಿ ವಿಶ್ ಮಾಡಿದ್ರು. ಆದ್ರೆ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದ ಸುದರ್ಶನ್ ಎರಡನೇ ಇನ್ನಿಂಗ್ಸ್‌ನಲ್ಲಿ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಇದೀಗ ಎರಡನೇ ಪಂದ್ಯಕ್ಕೆ ಪ್ಲೇಯಿಂಗ್ XI ನಿಂದ ಹೊರಗಿಡಲಾಗಿದೆ. ನಿತೀಶ್ ಕುಮಾರ್ ರೆಡ್ಡಿಗೆ ಚಾನ್ಸ್ ನೀಡಿರುವ ಗಂಭೀರ್ ನೇತೃತ್ವದ ಆಡಳಿತ ಮಂಡಳಿಯ ನಿರ್ಧಾರಕ್ಕೆ ಫ್ಯಾನ್ಸ್ ಸಿಟ್ಟಾಗಿದ್ದಾರೆ. ಒಂದೇ ಒಂದು ಚಾನ್ಸ್ ನೀಡಿ ಒಬ್ಬ ಆಟಗಾರನ ಸಾಮರ್ಥ್ಯವನ್ನ ಹೇಗೆ ಜಡ್ಜ್ ಮಾಡ್ತೀರಿ ಅಂತಾ ಸಾಮಾಜಿಕ ಜಾಲತಾಣಗಳನ್ನ ಪೋಸ್ಟ್ಗಳನ್ನ ಹಾಕಿದ್ದಾರೆ. ಸಾಯಿ ಸುದರ್ಶನ್ ಯಂಗ್ ಕ್ರಿಕೆಟರ್ ಆಗಿದ್ದು ಈಗಷ್ಟೇ ಟೆಸ್ಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಪಂದ್ಯ ಅಂದಾಗ ನರ್ವಸ್, ಪ್ರೆಶರ್ ಇದ್ದೇ ಇರುತ್ತೆ. ಹೀಗಾಗಿ ರನ್ಸ್ ಬರದೇ ಇರಬಹುದು. ಸೋ ಮುಂದಿನ ಪಂದ್ಯಗಳಲ್ಲಿ ಕಮ್ ಬ್ಯಾಕ್ ಮಾಡ್ತಾರೆ. ಅವ್ರಲ್ಲಿ ಆ ಸಾಮರ್ಥ್ಯ ಇದೆ. ಹೀಗಿದ್ರೂ ಅವಕಾಶಗಳನ್ನ ಕೊಡದೇ ಇದ್ರೆ ಸುದರ್ಶನ್ ತಮ್ಮ ಸಾಮರ್ಥ್ಯ ಪ್ರೂವ್ ಮಾಡೋದು ಹೇಗೆ ಅಂತಾ ಪ್ರಶ್ನಿಸಿದ್ದಾರೆ.
ಇನ್ನು ಇಂಗ್ಲೆಂಡ್ ಸರಣಿಗೆ ಸಾಯಿ ಸುದರ್ಶನ್ ಸೆಲೆಕ್ಟ್ ಆಗಿದ್ದೇ ಐಪಿಎಲ್ನ ಪ್ರದರ್ಶನದಿಂದ. 18ನೇ ಸೀಸನ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಕಣಕ್ಕಿಳಿದು ಸಾಲಿಡ್ ಪ್ರದರ್ಶನ ನೀಡಿದ್ರು. ಜಿಟಿ ಬ್ಯಾಟ್ಸ್‌ಮನ್ 15 ಇನ್ನಿಂಗ್ಸ್‌ಗಳಲ್ಲಿ 759 ರನ್ ಗಳಿಸಿದ್ರು. 23 ವರ್ಷದಲ್ಲೇ ಆರೆಂಜ್ ಕ್ಯಾಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಸುದರ್ಶನ್ ಪಾತ್ರರಾಗಿದ್ರು. ಹೀಗಾಗಿ ಆರೆಂಜ್ ಕ್ಯಾಪ್, ಎಮರ್ಜಿಂಗ್ ಪ್ಲೇಯರ್, ಆನ್ ದಿ ರೋ ಫೋರ್ಸ್ ಆಫ್ ದಿ ಸೀಸನ್ ಪ್ರಶಸ್ತಿಗಳನ್ನ ಬಾಚಿಕೊಂಡಿದ್ರು. ಹೀಗಾಗೇ ಟೀಂ ಇಂಡಿಯಾದಲ್ಲೂ ಇಂಥದ್ದೇ ಪ್ರದರ್ಶನದ ನಿರೀಕ್ಷೆಯೊಂದಿಗೆ ಕಣಕ್ಕಿಳಿಸಲಾಗಿತ್ತು. ಅಷ್ಟಕ್ಕೂ ಇಲ್ಲಿ ಸಾಯಿ ಸುದರ್ಶನ್ರನ್ನ ಎರಡನೇ ಪಂದ್ಯಕ್ಕೆ ಡ್ರಾಪ್ ಮಾಡೋಕೆ ಕಾರಣ ನಿತೀಶ್ ಕುಮಾರ್ ರೆಡ್ಡಿ.
22 ವರ್ಷದ ನಿತೀಶ್ ಕುಮಾರ್ ರೆಡ್ಡಿ ಆಲ್ ರೌಂಡರ್ ಆಗಿದ್ದು, 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಡೌನ್ ಅಂಡರ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ತಮ್ಮ ಚೊಚ್ಚಲ ಟೆಸ್ಟ್ ಪ್ರವಾಸದಲ್ಲಿ ಎಲ್ಲಾ ಐದು ಟೆಸ್ಟ್ ಪಂದ್ಯಗಳನ್ನ ಆಡಿದ್ರು. ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 298 ರನ್ ಗಳಿಸಿದ್ರು. ಭಾರತವು 221 ರನ್ಗಳಿಗೆ 7 ವಿಕೆಟ್ ಕಳ್ಕೊಂಡಿದ್ದಾಗ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ರು. ವಾಶಿಂಗ್ಟನ್ ಸುಂದರ್ ಅವರೊಂದಿಗೆ ಒಳ್ಳೆ ಪಾರ್ಟರ್ಶಿಪ್ ಮೂಲಕ ಭಾರತವನ್ನು 474 ಕ್ಕೆ ಮುನ್ನಡೆಸಿದ್ರು.. ಅದೂ ಅಲ್ದೇ ಬೌಲರ್ ಕೂಡ ಆಗಿದ್ದು ಆಸ್ಟ್ರೇಲಿಯಾ ಪ್ರವಾಸದಲ್ಲಿ ಐದು ಟೆಸ್ಟ್‌ಗಳಲ್ಲಿ 44 ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ರು. ಹೀಗಾಗಿ ಇಂಗ್ಲೆಂಡ್ ಸರಣಿಗೂ ಸೆಲೆಕ್ಟ್ ಆಗಿದ್ರು. ಇದೀಗ ಸಾಯಿ ಸುದರ್ಶನ್ರನ್ನ ತಂಡದಿಂದ ಹೊರಗಿಟ್ಟು ನಿತೀಶ್ ಕುಮಾರ್ ರೆಡ್ಡಿಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಕೊಡಲಾಗಿತ್ತು.

ನೋಡಿರಿ

