ಎರಡು ಬಾರಿ ಕೈಕೊಟ್ಟಿರೋ ನಿತೀಶ್ಕುಮಾರ್ ಜೊತೆ ಬಿಜೆಪಿ ಮತ್ತೆ ದೋಸ್ತಿಗೆ ಮುಂದಾಗಿದ್ಯಾಕೆ?
ಕಳೆದ 10 ವರ್ಷಗಳಲ್ಲಿ 4ನೇ ಬಾರಿಗೆ ಯೂ ಟರ್ನ್ ಹೊಡೆದಿರೋ ನಿತೀಶ್ ಕುಮಾರ್ ಈಗ ಮತ್ತೆ ಬಿಜೆಪಿ ತೆಕ್ಕೆಗೆ ಜಾರಿದ್ದಾರೆ. ನಿತೀಶ್ ಕುಮಾರ್ ಮತ್ತೆ ಬಿಜೆಪಿ ಜೊತೆಗೆ ಕೈಜೋಡಿಸಿದ್ದಾರೆ. ಇಲ್ಲಿ ನಿತೀಶ್ ಕುಮಾರ್ಗೆ ಮಾತ್ರವಲ್ಲ ಬಿಜೆಪಿಗೆ ಕೂಡ ಜೆಡಿಯು ಜೊತೆಗಿನ ಮೈತ್ರಿ ಬೇಕಾಗಿತ್ತು. ಅದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಆಫ್‌ನ 7 ಶಾಸಕರನ್ನ ಖರೀದಿಸಲು ಬಿಜೆಪಿಯಿಂದ ಬಿಗ್ ಪ್ಲಾನ್!– ಹೊಸ ಬಾಂಬ್ ಸಿಡಿಸಿದ ಕೇಜ್ರಿವಾಲ್!
ಬಿಹಾರದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳಿವೆ. 2019ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿ ಮಾಡಿಮಾಡಿಕೊಂಡಿತ್ತು. ಆಗ ಬಿಜೆಪಿ 17 ಕ್ಷೇತ್ರಗಳನ್ನ ಗೆದ್ದಿತ್ತು. ಜೆಡಿಯು 16 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಒಟ್ಟಾಗಿ 33 ಕ್ಷೇತ್ರಗಳನ್ನ ಗೆದ್ದಿದ್ದವು. ಆದ್ರೆ 2020ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಸರಿಯಾಗಿಯೇ ಹೊಡೆತ ತಿಂದಿತ್ತು. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕೇವಲ 43 ಕ್ಷೇತ್ರಗಳನ್ನಷ್ಟೇ ಗೆದ್ದಿತ್ತು. ಆರ್ಜೆಡಿ 75 ಸ್ಥಾನಗಳನ್ನ ಗೆದ್ದು ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿತ್ತು. ಬಿಜೆಪಿ 74 ಸ್ಥಾನಗಳನ್ನ ಗೆದ್ದು ದೋಸ್ತಿಯಾಗಿದ್ದ ಜೆಡಿಯುವನ್ನ ಕೂಡ ಹಿಂದಿಕ್ಕಿತ್ತು. ಆದ್ರೂ ನಿತೀಶ್ ಕುಮಾರ್ಗೆ ಸಿಎಂ ಆಗೋ ಅವಕಾಶ ಸಿಗ್ತು. 2022ರಲ್ಲಿ ರಾತ್ರೋರಾತ್ರಿ ಬಿಜೆಪಿ ಜೊತೆಗಿನ ಮೈತ್ರಿ ಮುರಿದು ಆರ್ಜೆಡಿ ಜೊತೆ ಸೇರಿ ಮತ್ತೆ ಸಿಎಂ ಆದ್ರು. ಈಗ ಅದು ಕೂಡ ಮುರಿದು ಬಿದ್ದಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಜೆಡಿಯು ವರ್ಚಸ್ಸು ಕೂಡ ನಿಧಾನಕ್ಕೆ ಕಡಿಮೆಯಾಗ್ತಿದೆ. ಈಗ ನಿತೀಶ್ಗೆ ಅಳಿವು ಉಳಿವಿನ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಲೋಕಸಭೆ ಚುನಾವಣೆಗೂ ಮುನ್ನ 2019ರಂತೆ ಮತ್ತೊಮ್ಮೆ ಬಿಜೆಪಿ ಜೊತೆ ಸೇರಿ ಸೀಟು ಹಂಚಿಕೆ ಡೀಲ್ಗೆ ಮುಂದಾಗಿದ್ದಾರೆ. ಇದ್ರ ಜೊತೆಗೆ ಬಿಜೆಪಿಯಿಂದ ಮತ್ತೊಂದು ಭರವಸೆ ಕೂಡ ಸಿಕ್ಕಿದ್ಯಂತೆ.
ಲೋಕಸಭೆ ಚುನಾವಣಾ ಫಲಿತಾಂಶ ಏನೇ ಆದ್ರೂ, 2025ರ ಬಿಹಾರ ವಿಧಾನಸಭೆ ಚುನಾವಣೆವರೆಗೂ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿರ್ತಾರೆ. ಇಲ್ಲಿ ನಿತೀಶ್ ಕುಮಾರ್ಗೆ ಕೂಡ ಬೇಕಾಗಿರೋದು ಇದೇ. ಮತ್ತೆ ಮುಖ್ಯಮಂತ್ರಿಯಾಗುವ ಚಾನ್ಸ್ ಮುಂದಕ್ಕೆ ಸಿಗೋದಿಲ್ಲ ಅನ್ನೋದು ನಿತೀಶ್ಗೂ ಅರ್ಥವಾಗಿಬಿಟ್ಟಿದೆ. ಅಟ್ಲೀಸ್ಟ್ ಬಿಜೆಪಿ ಜೊತೆ ಸೇರಿಯಾದ್ರೂ ಈ ಬಾರಿಯ ಟರ್ಮ್ ಕಂಪ್ಲೀಟ್ ಮಾಡಿಬಿಡೋಣ ಅನ್ನೋ ಲೆಕ್ಕಾಚಾರದಲ್ಲಿ ನಿತೀಶ್ ಕುಮಾರ್ ಇದ್ದಂತೆ ಕಾಣ್ತಿದೆ.
ಮತ್ತೊಂದು JDS ಆಗುತ್ತಾ JDU?
ಸದ್ಯದ ಬೆಳವಣಿಗೆ ನೋಡಿದ್ರೆ ನಿತೀಶ್ ಕುಮಾರ್ ಕಥೆಯೂ ನಮ್ಮ ದಳಪತಿಗಳಂತೆಯೇ ಆಗುತ್ತಾ ಅನ್ನೋ ಅನುಮಾನ ಕಾಡ್ತಿದೆ. ಕರ್ನಾಟಕದಲ್ಲಿ ಜೆಡಿಎಸ್ ಪರಿಸ್ಥಿತಿ ಏನಾಗಿದ್ಯೋ ಅದೇ ಸ್ವಿಚ್ಯುವೇಶನ್ನಲ್ಲಿ ಬಿಹಾರದ ಜೆಡಿಯು ಇದೆ. ಎರಡೂ ಪಕ್ಷಗಳಿಗೆ ಈ ಲೋಕಸಭೆ ಚುನಾವಣೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ದೈತ್ಯ ಬಿಜೆಪಿ ಜೊತೆ ಸೇರಿ ಎರಡೂ ಸ್ಥಳೀಯ ಪಕ್ಷಗಳು ಜೀವ ಪಡೆದುಕೊಳ್ತಾವೋ, ಇಲ್ಲಾ ಜೀವ ಕಳೆದುಕೊಳ್ತಾವೋ ಅನ್ನೋದೆ ಇಲ್ಲಿರುವ ಕುತೂಹಲ. ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಜೆಡಿಯು ಸಿಂಗಲ್ ಡಿಜಿಟ್ಗೆ ಬಂತು ಅಂದ್ರೆ ಮುಂದಿನ ದಿನಗಳಲ್ಲಿ ನಿತೀಶ್ ಕುಮಾರ್ ಖೇಲ್ ಖತಂ ಅಂತಾನೆ ಅರ್ಥ. ಜೆಡಿಯುವನ್ನ ಬಿಜೆಪಿ ನುಂಗಿ ನೀರು ಕುಡಿದ್ರೂ ಆಶ್ಚರ್ಯ ಇಲ್ಲ. ಭವಿಷ್ಯದಲ್ಲಿ ಬಿಹಾರದಲ್ಲಿ ಬಿಜೆಪಿ VS ಆರ್ಜೆಡಿ ನಡುವೆಯೇ ಅಧಿಕಾರಕ್ಕಾಗಿ ಫೈಟ್ ನಡೆಯಬಹುದು. ಅಂತೂ ನಿತೀಶ್ ಕುಮಾರ್ ಪಲ್ಟಿ ಹೊಡೆದು ಹೊಡೆದು ಈಗ ತಮ್ಮ ರಾಜಕೀಯ ಕೆರಿಯರ್ಗೆ ಬೇಜಾನ್ ಗಾಯ ಮಾಡಿಕೊಂಡಿದ್ದಾರೆ. ಈ ಗಾಯವೇ ನಿತೀಶ್ ರಾಜಕೀಯವನ್ನೇ ಮುಗಿಸಿದ್ರೂ ಅಚ್ಚರಿ ಬೇಡ.