ಫ್ರೈಡ್ ಚಿಕನ್ ಫೆವರೇಟಾ?  –  ಇನ್ನೊಮ್ಮೆ ತಿನ್ನೋಕು ಮೊದ್ಲು‌ ತಿಳ್ಕೊಳ್ಳಿ!

ಫ್ರೈಡ್ ಚಿಕನ್ ಫೆವರೇಟಾ?  –  ಇನ್ನೊಮ್ಮೆ ತಿನ್ನೋಕು ಮೊದ್ಲು‌ ತಿಳ್ಕೊಳ್ಳಿ!

 ಫ್ರೈಡ್ ಚಿಕನ್.. ಈ ಹೆಸ್ರು ಕೇಳಿದ ತಕ್ಷಣನೇ ನಾನ್ ವೆಜ್ ಪ್ರಿಯರ ಬಾಯಲ್ಲಿ ನಿರೂರೋದು ಸಹಜ.. ಇನ್ನು ಕಣ್ಮುಂದೆ ಗರಿಗರಿಯಾದ ಪ್ರೈಡ್ ಚಿಕನ್ ಇಟ್ರೇ ಬಾಯಿ ಚಪ್ಪರಿಸ್ಕೊಂಡು ತಿಂತಾರೆ.. ನಿಮ್ಗೊಂದು ವಿಚಾರ ಗೊತ್ತಾ? ಈ ಫ್ರೈಡ್ ಚಿಕನ್ ತಿಂದ್ರೆ ನೀವು ಆರೋಗ್ಯ ಹಾಳಾಗಲು ಆಹ್ವಾನ ಕೊಡ್ತಿದ್ದೀರಿ  ಅಂತಾ ಅರ್ಥ..

ಚಿಕನ್ ನಾನ್ ಪ್ರಿಯರ ಹಾಟ್ ಫೆವರೇಟ್ ಅಂತಾನೇ ಹೇಳ್ವೋದು.. ಉಟಕ್ಕೆ ಉಪ್ಪಿನಕಾಯಿ ಅನ್ನೋ ಹಾಗೆ.. ಊಟದ ಜೊತೆ ಒಂದಾದ್ರೂ ಚಿಕನ್ ಪೀಸ್ ಪ್ಲೇಟ್ ನಲ್ಲಿ ಇರ್ಲೇ ಬೇಕು ಅನ್ನುವ ನಾನ್ ವೆಜ್ ಪ್ರಿಯರಿದ್ದಾರೆ.. ವಿವಿಧ ರೀತಿಯ ಚಿಕನ್ ಖಾದ್ಯಗಳಿವೆ.. ಅದ್ರಲ್ಲಿ ಫ್ರೈಡ್ ಚಿಕನ್ ಎಲ್ಲರ ಬಾಯಲ್ಲಿ ನೀರೂರಿಸುವ ಖಾದ್ಯವಾಗಿದೆ. ಕೆಲವರು ಮಧ್ಯಾಹ್ನ ಮತ್ತು ರಾತ್ರಿಯ ಊಟದ ಬದಲು ಚಿಕನ್ ಬಕೆಟ್‌ಗಳನ್ನು ಒಯ್ಯಲು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ರಾಗಿಯಿಂದಲೂ ರೋಗ ಬರುತ್ತಾ?- ಸೂಪರ್‌ಫುಡ್ ಯಾರಿಗೆ‌ ಒಳ್ಳೇದಲ್ಲಾ?

ಹಾಟ್ ವಿಂಗ್ಸ್ ಮತ್ತು ಗರಿಗರಿಯಾದ ಚಿಕನ್‌ ಕಾರ್ನ್‌ನಂತಹ ವೈವಿಧ್ಯಮಯ ರುಚಿಕರವಾದ ಆಹಾರ ಲಭ್ಯವಿರುವುದರಿಂದ, ವಯಸ್ಸಿನ ಭೇದವಿಲ್ಲದೆ ಎಲ್ಲರೂ ಪ್ರೈಡ್ ಚಿಕನ್‌ಗೆ ವ್ಯಸನಿಗಳಾಗಿದ್ದಾರೆ. ಈ ಪ್ರೈಡ್ ಚಿಕನ್ ಮಳಿಗೆಗಳಿಗೆ ಈಗ ಭಾರತಲ್ಲೂ  ಪುಲ್ ಡಿಮ್ಯಾಂಡ್ ಇದೆ.. ಆದರೆ ಪ್ರತಿದಿನ ಈ ರೀತಿ ಪ್ರೈಡ್ ಚಿಕನ್ ತಿನ್ನುವುದು ಸುರಕ್ಷಿತವೇ? ಇದರ ಬಗ್ಗೆ ಆಗಾಗ  ಚರ್ಚೆ ನಡೆಯುತ್ತಲೇ ಇರುತ್ತೆ. ಆದ್ರೆ ಈಗ ಶಾಕಿಂಗ್ ವಿಚಾರವೊಂದು ರಿವೀಲ್ ಆಗಿದೆ..  ಹೆಚ್ಚು ಪ್ರೈಡ್ ಚಿಕನ್ ತಿಂದರೆ, ನೀವು ನಿಮ್ಮ ಸಾವನ್ನು ಖರೀದಿಸಿದಂತೆ ಅಂತಾ ಅಧ್ಯಯನವೊಂದು ಹೇಳಿದೆ.

ಬ್ರಿಟಿಷ್ ಮೆಡಿಕಲ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಈ ವಿಚಾರ ಉಲ್ಲೇಖವಾಗಿದೆ.. ಫ್ರೈಡ್ ಚಿಕನ್ ಸೇರಿದಂತೆ ಅತಿಯಾಗಿ ಫಾಸ್ಟ್ ಫುಡ್ ತಿನ್ನುವವರ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಅಮೆರಿಕದಲ್ಲಿ ನಡೆದಿರುವ ಈ ಅಧ್ಯಯನದಲ್ಲಿ ಹಲವು ಆತಂಕಕಾರಿ ಸಂಗತಿಗಳು ಹೊರಬಿದ್ದಿವೆ. ನಿಯಮಿತವಾಗಿ ಪ್ರೈಡ್ ಚಿಕನ್ ತಿನ್ನುವ ಮೂರನೇ ಒಂದು ಭಾಗದಷ್ಟು ಜನರು ಟೈಪ್ 2 ಮಧುಮೇಹ ಬೆಳೆಯುವ ಅಪಾಯವನ್ನು ಹೊಂದಿರುತ್ತಾರೆ. ಮೇಲಾಗಿ.. ಇವರಿಗೆ ಹೃದ್ರೋಗದ ಅಪಾಯವೂ ಅಧಿಕವಾಗಿರುತ್ತದೆ ಅಂತಾ ಗೊತ್ತಾಗಿದೆ.. ಇನ್ನು ಹೆಚ್ಚು ಪ್ರೈಡ್ ಚಿಕನ್ ತಿನ್ನುವವರಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಅತಿಯಾಗಿ ಕರಿಯುವುದು, ಅತಿಯಾದ ಎಣ್ಣೆ ಬಳಸುವುದು, ಚಿಕನ್ ತುಂಡುಗಳನ್ನು ಕರಿದ ಎಣ್ಣೆಯಲ್ಲೇ ಮತ್ತೆ ಮತ್ತೆ ಕರಿಯುವುದು ಆರೋಗ್ಯಕ್ಕೆ ಹಾನಿಕರ ಅಂತಾ ತಜ್ಞರು ಹೇಳುತ್ತಾರೆ.. ಹೀಗಾಗಿ ಬಾಯಲ್ಲಿ ನೀರೂರಿಸುವ ಪ್ರೈಡ್ ಚಿಕನ್ , ಕ್ರಿಸ್ಪಿ ಚಿಕನ್‌ ತಿನ್ನುವ ಮೊದಲು ನೂರು ಬಾರಿ ಯೋಚಿಸಿ.. ತೀರಾ ಬಿಡೋಕೇ ಆಗಲ್ಲ ಅಂತಾದ್ರೆ ಹೊಟೇಲ್ ಗಳಲ್ಲಿ ತಿನ್ನುವ ಬದಲು‌ ಮನೆಯಲ್ಲೇ ತಯಾರಿಸಿ ತಿನ್ನಿ.. ಆಗ ಕರಿದ ಎಣ್ಣೆಯಲ್ಲೇ ಮತ್ತೆ ಮತ್ತೆ ಕರಿದು ತಿನ್ನುವುದಾದ್ರೂ ತಪ್ಪುತ್ತದೆ.‌

Shwetha M