ಬೇರೆಯವರನ್ನು ನೋಡಿದ್ರೆ ಯಾಕೆ ಆಕಳಿಕೆ ಬರುತ್ತೆ? – ಅತಿಯಾಗಿ ಆಕಳಿಕೆ ಬಂದ್ರೆ ಹುಷಾರು!

ಬೇರೆಯವರನ್ನು ನೋಡಿದ್ರೆ ಯಾಕೆ ಆಕಳಿಕೆ ಬರುತ್ತೆ? – ಅತಿಯಾಗಿ ಆಕಳಿಕೆ ಬಂದ್ರೆ ಹುಷಾರು!

ನಾವು ದಿನದಲ್ಲಿ ಎರಡು ಮೂರು ಬಾರಿಯಾದರೂ ಆಕಳಿಸ್ತೇವೆ. ನಿದ್ರೆ ಕಡಿಮೆ ಆದಾಗ, ಆಯಾಸ ಆದಾಗ, ಬೋರ್ ಆದಾಗ ಆಕಳಿಕೆ ಬರೋದು ಸಾಮಾನ್ಯ. ಆದ್ರೆ ಆಕಳಿಕೆ ಬೇರೆ ಕಾರಣಕ್ಕೂ ಬರುತ್ತೆ ಅಂತಾ ಅಧ್ಯಯನದಿಂದ ಗೊತ್ತಾಗಿದೆ. ಆಕಳಿಕೆ ಬರಲು ಏನು ಕಾರಣ ಎಂಬ ಮಾಹಿತಿ ಈ ಲೇಖನದಲ್ಲಿದೆ.

ಆಕಳಿಕೆಯು ನಿದ್ರೆಯ ಪೂರ್ವಭಾವಿಯಾಗಿದ್ದು, ಸಾಮಾನ್ಯವಾಗಿ ಜನರು ದಣಿದಾಗ ಅಥವಾ ಬೇಸರಗೊಂಡಾಗ ಆಕಳಿಸುತ್ತಾರೆ. ಇದು ಸಾಂಕ್ರಾಮಿಕವಾದದ್ದು ಎಂಬುದು ಜನಪ್ರಿಯ ಪರಿಕಲ್ಪನೆಯಾಗಿದೆ. ಒಬ್ಬ ವ್ಯಕ್ತಿ ಆಕಳಿಸುವುದನ್ನು ನೋಡಿದ ಮತ್ತೊಬ್ಬ ವ್ಯಕ್ತಿಯೂ ಹಾಗೆಯೇ ಆಕಳಿಸುತ್ತಾನೆ. ಮತ್ತೊಬ್ಬನನ್ನು ನೋಡಿದಾಗ ಯಾಕೆ ಆಕಳಿಕೆ ಬರುತ್ತದೆ ಎಂಬುವುದರ ಕುರಿತು ಅಧ್ಯಯನ ನಡೆದಿದೆ.

ಇದನ್ನೂ ಓದಿ: ಕಚಗುಳಿ ಮಾಡುವಾಗ ನಗು – ಕೋಪ ಬರಲು ಇದೇ ಕಾರಣ!

ಸಂಶೋಧನೆಗಳ ಪ್ರಕಾರ ರಕ್ತದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾದಾಗ ಆಕಳಿಕೆ ಬರುತ್ತೆ. ರಕ್ತಕ್ಕೆ ಇನ್ನಷ್ಟು ಆಮ್ಲಜನಕ ಬೇಕಿರುತ್ತೆ. ಅದರಲ್ಲೂ ಮೆದುಳಿನ ಹೈಪೋಥಲಮಸ್ ಗೆ ಆಮ್ಲಜನದ ಕೊರತೆಯಾದಾಗ, ಅಲ್ಲಿ ಬಿಡುಗಡೆಯಾಗುವ ಕೆಲವು ರಾಸಾಯನಿಕಗಳಿಂದ ಆಕಳಿಕೆ ಬರುತ್ತೆ ಅಂತಾ ಗೊತ್ತಾಗಿದೆ. ಇನ್ನು ನಮ್ಮೆದುರು ಯಾರಾದ್ರೂ ಆಕಳಿಸಿದ್ರೆ ನಮಗೂ ಆಕಳಿಕೆ ಬರುತ್ತೆ. ಸಂಶೋಧನೆ ಪ್ರಕಾರ, ಶೇ.50ರಷ್ಟು ಮಂದಿಗೆ ಮತ್ತೊಬ್ಬರನ್ನು ನೋಡಿದಾಗ ಆಕಳಿಕೆ ಬರುತ್ತೆ. ಒಬ್ಬ ವ್ಯಕ್ತಿ ಆಕಳಿಸುವುದನ್ನು ನೋಡಿದಾಗ, ಅವನ ನರಕೋಶದ ವ್ಯವಸ್ಥೆ ಸಕ್ರಿಯಗೊಳ್ಳುತ್ತೆ. ಅದು ಅವನನ್ನು ಅನುಕರಿಸಲು ಪ್ರೇರೇಪಿಸೋದ್ರಿಂದ ಆಕಳಿಕೆ ಬರುತ್ತೆ.

ಇನ್ನು ವಿನಾ ಕಾರಣ ಆಕಳಿಕೆ ಬರ್ತಿದ್ರೆ ಅದು ಕಾಯಿಲೆಯ ಮುನ್ಸೂಚನೆಯಿರಬಹುದು. ಸರಿಯಾಗಿ ನಿದ್ದೆಯಾಗಿಲ್ಲ ಅಂತ ಸುಮ್ಮನಾಗೋದು ಸರಿಯಲ್ಲ. ನಿದ್ದೆ ಕೆಟ್ಟರೆ ಹೊಟ್ಟೆ ಕೆಡುತ್ತದೆ. ಹೊಟ್ಟೆಯಿಂದ ತಲೆ ತನಕ ಹೋಗೋ ನರಗಳಿಗೂ ತೊಂದರೆಯಾಗುತ್ತದೆ. ಈ ನರಗಳಿಗೆ ವೇಗಸ್ ನರ ಎನ್ನುತ್ತಾರೆ. ಇದರಿಂದ ಹೃದಯಕ್ಕೂ ತೊಂದರೆಯಾಗುವ ಸಾಧ್ಯತೆಗಳಿವೆ ಅಂತಾ ಅಧ್ಯಯನದಿಂದ ಗೊತ್ತಾಗಿದೆ.

Shwetha M