ನಿಮ್ಗೆ ಯಾವಾಗ್ಲೂ ಖಾರ ತಿನ್ಬೇಕು ಅನ್ಸುತ್ತಾ? – ಖಾರ ತಿನ್ನುವ ಬಯಕೆ ಹುಟ್ಟಲು ಇದೇ ಕಾರಣ!  

ನಿಮ್ಗೆ ಯಾವಾಗ್ಲೂ ಖಾರ ತಿನ್ಬೇಕು ಅನ್ಸುತ್ತಾ? – ಖಾರ ತಿನ್ನುವ ಬಯಕೆ ಹುಟ್ಟಲು ಇದೇ ಕಾರಣ!  

ಕೆಲವರಿಗೆ ಸಿಹಿ, ಇನ್ನು ಕೆಲವರಿಗೆ ಖಾರ, ಮತ್ತಷ್ಟು ಜನಕ್ಕೆ ಹುಳಿ ಹೀಗೆ ನಾನಾ ತರದ ಆಹಾರ ಇಷ್ಟವಿರುತ್ತದೆ. ಅದರಲ್ಲೂ  ಶೀತ ಅಥವಾ ಜ್ವರದಿಂದ ಬಳಲುತ್ತಿರುವಾಗ ಖಾರ ಖಾರ  ತಿನ್ನಲು ಹಂಬಲಿಸುತ್ತಾರೆ.  ಇಂತ ಆಹಾರವನ್ನು ಒಮ್ಮೊಮ್ಮೆ ತಿಂದ್ರೆ ಪರವಾಗಿಲ್ಲ. ಆದರೆ ಪ್ರತಿನಿತ್ಯ ತಿಂದ್ರೆ ಅಜೀರ್ಣ, ಅಸಿಡಿಟಿ ಆಗಬಹುದು.. ಆದ್ರೆ ಕೆಲವೊಬ್ಬರು ಯಾವಾಗ ನೋಡಿದ್ರೂ ಖಾರಾನೇ ತಿನ್ತಾರೆ. ನೀವು ಕೂಡಾ ಅದೇ ಪೈಕಿನಾ ?  ಇಷ್ಟಕ್ಕೂ ಯಾವಾಗ್ಲೂ ಖಾರ ತಿನ್ಬೇಕು ಅಂತನಿಸೋದಕ್ಕೆ ಮುಖ್ಯ ಕಾರಣವೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡುತ್ತಿದ್ದೀರಾ?

ಗರ್ಭಿಣಿಯರಿಗೆ ವಿವಿಧ ರೀತಿಯ ಆಹಾರ ತಿನ್ನುವ ಬಯಕೆಯಾಗುತ್ತಿರುತ್ತದೆ . ಕೇವಲ ಮಸಾಲೆಯುಕ್ತ ಆಹಾರವಲ್ಲ. ಬಹಳಷ್ಟು ಗರ್ಭಿಣಿಯರು ಸಿಹಿತಿಂಡಿಗಳು, ಚಾಕೊಲೇಟ್‌ಗಳು ಮತ್ತು ಖಾರದ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಈ ಕಡುಬಯಕೆಗಳು ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದ ಬರುತ್ತವೆ.  ಇನ್ನು ಹವಾಮಾನ ತಂಪಾಗಿರುವಾಗ, ಬಹಳಷ್ಟು ಜನರು ಖಾರ ತಿನ್ನಲು ಹಂಬಲಿಸುತ್ತಾರೆ.

ಇನ್ನು ಖಾರದ ಆಹಾರಗಳಲ್ಲಿ ಕ್ಯಾಪ್ಸೈಸಿನ್ ಇರುತ್ತದೆ. ಇದು ದೇಹದಲ್ಲಿ ಉಷ್ಣತೆಯ ಭಾವನೆಯನ್ನು ಉತ್ತೇಜಿಸುತ್ತದೆ, ಅಲ್ಲದೆ ಶೀತ ತಡೆಯಲು ಸಹಾಯ ಮಾಡುತ್ತದೆ. ಇನ್ನು ಖಿನ್ನತೆಗೆ ಒಳಗಾದಾಗಲೂ ಖಾರ ತಿನ್ನಲು  ಹಂಬಲಿಸಬಹುದು. ಇದು ಖಿನ್ನತೆ-ಶಮನಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಸೋ ಇನ್ಮುಂದೆ ನಾನ್ಯಾಕಪ್ಪಾ ಇಷ್ಟು ಖಾರ ತಿನ್ತೀನಿ ಅಂತ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಕಾರಣ ಗೊತ್ತಾಯ್ತಲ್ಲಾ..ಹೆಚ್ಚು ಖಾರ ತಿನ್ತೀರಿ ಆದ್ರೆ ನಡುವೆ ಅಂತರವಿರಲಿ ಸಾಕು.

Shwetha M