ಫ್ಯಾನ್ಸಿ‌ ಫುಂಡ್ ಡೇಂಜರಾ?‌ – ಆಹಾರದಲ್ಲಿ ಬೆಂಕಿ ಎಬ್ಬಿಸಿದ್ರೆ ಏನಾಗುತ್ತೆ??

ಫ್ಯಾನ್ಸಿ‌ ಫುಂಡ್ ಡೇಂಜರಾ?‌ – ಆಹಾರದಲ್ಲಿ ಬೆಂಕಿ ಎಬ್ಬಿಸಿದ್ರೆ ಏನಾಗುತ್ತೆ??

ಇದು ಫಾಸ್ಟ್ ಫುಡ್ ಜಮಾನ.. ಊಟ ತಿಂಡಿ ತಿನ್ನೋದನ್ನ ಬಿಟ್ಟು ಬರೀ ಫಾಸ್ಟ್ ಫುಡ್ ಗಳನ್ನೇ ತಿಂತಾರೆ.. ಹೀಗಾಗಿಯೇ ಹೋಟೆಲ್, ರೆಸ್ಟೋರೆಂಟ್ ಗಳಲ್ಲೂ ಕೂಡ ಡಿಫ್ರೆಂಟ್ ಡಿಫ್ರೆಂಟ್ ಮೆನುಗಳನ್ನ ತಂದಿರ್ತಾರೆ.. ಇದು ತಿನ್ನೋದಾ ಅಥಾವ ಶೋಗೆ ಇಟ್ಟಿರೋದಾ ಅಂತಾ ಗ್ರಾಹಕರಿಗೆ ಕನ್ಫ್ಯೂಸ್ ಆಗುವಂತಿರುತ್ತದೆ..‌ ಈ ಫ್ಯಾನ್ಸಿ ರೆಸ್ಟೋರೆಂಟ್ ಗಳಲ್ಲಿ  ನೀವು ಆಹಾರ ಸೇವಿಸೋ ಮುನ್ನ ಎಚ್ಚರವಹಿಸೋದು ಮುಖ್ಯ.. ಸ್ವಲ್ಪ ಎಚ್ಚರ ತಪ್ಪಿದ್ರೂ ನೀವು ಆಸ್ಪತ್ರೆಗೆ ಸೇರ್ಬೇಕಾಗ್ಬೋದು..

ಮೊದ್ಲೆಲ್ಲಾ  ಹಸಿವಾದಾಗ ಊಟ ಸಿಕ್ರೆ ಸಾಕು.. ಹೊಟ್ಟೆ ತುಂಬಿದ್ರೆ ಸಾಕು ಅಂತ ಹೇಳ್ತಿದ್ರು. ಆದ್ರೆ ಈಗ ಹಾಗಲ್ಲ ಊಟ ಮಾಡೋದನ್ನ‌ ಕೂಡ ಫ್ಯಾಷನ್ ಅನ್ನೋ ರೀತಿಯಲ್ಲಿ ಟ್ರೀಟ್ ಮಾಡಲಾಗ್ತಿದೆ. ಈಗ ಊಟ ತಿಂಡಿ ತಿನ್ನೋದು ಬಿಟ್ಟು ಪಿಜ್ಜಾ.. ಬರ್ಗರ್.. ನೂಡಲ್ಸ್ ಚಾಟ್ಸ್ ಮುಂತಾದವುಗಳನ್ನೇ ತಿಂತಾರೆ‌‌.. ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೋಟೆಲ್, ರೆಸ್ಟೊರೆಂಟ್ ಗಳು ತಮ್ಮ ಮೆನುನ ಮಾರ್ಪಾಡು ಮಾಡಿಕೊಂಡಿವೆ. ರೆಸ್ಟೋರೆಂಟ್ ಗಳು ಆಹಾರವನ್ನು ಗ್ರಾಹಕರಿಗೆ ಫ್ಯಾಶನ್ ರೀತಿಯಲ್ಲಿ ನೀಡುತ್ತಿವೆ.   ಅವು ನೋಡಲು ಚೆನ್ನಾಗಿ ಕಾಣುತ್ತವೆ, ಆದರೆ ಕೆಲವು ವಿಧಾನಗಳು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡಬಹುದು. ಹೊರಗೆ ರೆಸ್ಟೋರೆಂಟ್ ಗೆ ಹೋದಾಗ ಫ್ಯಾನ್ಸಿ ಆಹಾರ ಸೇವಿಸೋ ಮುನ್ನ ಈ ವಿಚಾರಗಳನ್ನ ತಿಳ್ಕೊಳೊದು ಉತ್ತಮ.

ಈ ಹೊಸ ಫ್ಯಾನ್ಸಿ ಐಟಮ್ ಗಳಲ್ಲಿ ಡ್ರೈ ಐಸ್ ಬಳಕೆಯು ಒಂದು ಭಾಗ. ಇತ್ತೀಚೆಗೆ, ಕೆಲವರು ಆಕಸ್ಮಿಕವಾಗಿ ಡ್ರೈ ಐಸ್ ಸೇವಿಸಿದ್ರು.. ಇದನ್ನ ತಿಂದ ಕೆಲವೇ ಹೊತ್ತಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಕೂಡ ದಾಖಲಾಗಿದ್ರು. ಈ ಡ್ರೈ  ಐಸ್ ಗಳನ್ನು ರೆಸ್ಟೋರೆಂಟಿನಲ್ಲಿ, ಆಹಾರದ ಜೊತೆಗೆ ಹೊಗೆಯ ಎಫೆಕ್ಟ್ ಸೃಷ್ಟಿಸಲು ಬಳಸಲಾಗುತ್ತದೆ. ಇದೊಂದು ಹೆಪ್ಪುಗಟ್ಟಿದ ಇಂಗಾಲದ ಡೈಆಕ್ಸೈಡ್ ಆಗಿದೆ. ಇದು ತಿನ್ನುವಂತಹ ವಸ್ತು ಅಲ್ಲವೇ ಅಲ್ಲ.

ಇದನ್ನೂ ಓದಿ: ನೀವು ಫ್ರಿಡ್ಜ್‌ ನಲ್ಲಿ ಎರಡು ದಿನಕ್ಕಿಂತ ಹೆಚ್ಚು ದಿನ ಇಟ್ಟ ಆಹಾರವನ್ನು ಸೇವಿಸ್ತಿದ್ದೀರಾ?

ತಜ್ಞರ ಪ್ರಕಾರ ಡ್ರೈ ಐಸ್ ಇಂಗಾಲದ ಡೈಆಕ್ಸೈಡ್ ನ ರೂಪವಾಗಿದ್ದು, ಇದು ಆಹಾರ ಪದಾರ್ಥವಲ್ಲ, ಆಂದರೆ ಅದು ಚರ್ಮದ ಮೇಲೆ ಬಿದ್ದರೆ, ಅದು ಚರ್ಮವನ್ನು ಸುಡುವ ಸಾಧ್ಯತೆ ಹೆಚ್ಚು..  ಮುಚ್ಚಿದ ಕೋಣೆಯಲ್ಲಿ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುವ ಶಕ್ತಿಯನ್ನು ಡ್ರೈ ಐಸ್ ಹೊಂದಿದೆ. ಇದನ್ನ ಆಹಾರ ನೀಡುವ ವೇಳೆ ಹೊಗೆಯ ಎಫೆಕ್ಟ್ ತೋರಿಸಲು ಬಳಸುತ್ತಿದ್ದರೆ, ಅದು ಇನ್ನೂ ಹೆಚ್ಚು ಅಪಾಯಕಾರಿ. ಏಕೆಂದರೆ ಇದು ಸುತ್ತಮುತ್ತಲಿನ ಆಮ್ಲಜನಕದ  ಮೇಲೆ ಪರಿಣಾಮ ಬೀರಬಹುದು. ಅಷ್ಟೇ ಅಲ್ಲದೇ ಆ ಸ್ಥಳದಲ್ಲಿ ಇದ್ದ  ವ್ಯಕ್ತಿ ಪ್ರಜ್ಞೆ ತಪ್ಪಿ ಬೀಳುವ ಸಾಧ್ಯತೆ ಇರುತ್ತೆ. ಹೀಗಾಗಿ ಎಚ್ಚರ ವಹಿಸೋದು ಮುಖ್ಯ.

ಇನ್ನು ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಕಾಕ್ ಟೈಲ್-ಮಾಕ್ಟೇಲ್ ಪಾನೀಯಗಳಿಂದ ಹೊಗೆ ಏಳುವುದನ್ನು ನೀವು ನೋಡಿರಬಹುದು. ಈ ಹೊಗೆಯು ದ್ರವ ಸಾರಜನಕದಿಂದ ಕೂಡಿದೆ. ಆದರೆ ಇದೇ ರೀತಿಯ ಕಾಕ್ಟೈಲ್‌ನಿಂದಾಗಿ, ಕೆಲವು ವರ್ಷಗಳ ಹಿಂದೆ ಒಬ್ಬ ವ್ಯಕ್ತಿಯ ಹೊಟ್ಟೆಯಲ್ಲಿ ರಂಧ್ರ ಉಂಟಾದ ಸುದ್ದಿ ಕೇಳಿ ಬಂದಿತ್ತು. ಇದ್ರಿಂದಾಗಿ ಆ ವ್ಯಕ್ತಿಯ ಹೊಟ್ಟೆಯ ಒಂದು  ಭಾಗವನ್ನು ಕತ್ತರಿಸುವ ಮೂಲಕ ಅವರ ಜೀವ ಉಳಿಸಲಾಯಿತು.

ತಜ್ಞರ ಪ್ರಕಾರ ಲಿಕ್ವಿಡ್ ನೈಟ್ರೋಜನ್ ತುಂಬಾ ಕೂಲ್ ಆಗಿರುತ್ತೆ. ಆದರೆ ಇದು ಸಾಮಾನ್ಯ ತಾಪಮಾನದ ಸಮೀಪಕ್ಕೆ ಬಂದರೆ, ಸ್ಫೋಟದಂತಹ ಪ್ರತಿಕ್ರಿಯೆ ಉಂಟಾಗುತ್ತೆ.. ಇನ್ನು ಇದು ಹೊಟ್ಟೆಗೆ ಹೋದ್ರೆ ನಮ್ಮ ಕತೆ ಅಷ್ಟೇ.. ಈ ದ್ರವ ನಮ್ಮ ಹೊಟ್ಟೆಗೆ ಹೋಗಿ ಹಾನಿಯನ್ನುಂಟು ಮಾಡುತ್ತೆ. ಅಲ್ದೆ ಬಾಯಿಯನ್ನು ಸಹ ಹಾನಿಗೊಳಿಸಬಹುದು. ಈ ಹೊಗೆ ನೇರವಾಗಿ ಮೂಗಿಗೆ ಹೋದರೂ, ಕೂಡ ಅಸ್ವಸ್ಥತೆಗೆ  ಸೆಏರಲು ಕಾರಣ ಆಗ್ಬೋದು. ಒಂದು ವೇಳೆ ಹೊಗೆಯ ಪರಿಣಾಮವನ್ನು ಉಂಟುಮಾಡಲು, ಅದನ್ನು ಆಹಾರಕ್ಕೆ ಸೇರಿಸಿದ್ದರೆ, ಅದರ ಹೊಗೆ ಅಂದರೆ ಸಾರಜನಕವನ್ನು ಮೊದಲು ತೆಗೆದುಹಾಕಿ.. ಬಳಿಕ ಆಹಾರ ಸೇವಿಸಿ.‌

ಇನ್ನು ಇತ್ತೀಚಿನ ದಿನಗಳಲ್ಲಿ, ರೆಸ್ಟೋರೆಂಟ್ ಗಳಲ್ಲಿ ಆಹಾರ ಬಡಿಸುವ ಮತ್ತೊಂದು ವಿಧಾನವು ತುಂಬಾನೇ ಫೇಮಸ್ ಆಗಿದೆ, ಇದರಲ್ಲಿ ಅವರು ಆಹಾರ ಪದಾರ್ಥಗಳನ್ನು ತಂದಾಗ, ಅದು ಬಿಸಿಯಾಗಿರುವುದು ಮಾತ್ರವಲ್ಲದೆ ಅದರಲ್ಲಿ ಬೆಂಕಿ ಉರಿಸಿ ಸರ್ವ್ ಮಾಡಲಾಗುತ್ತದೆ. ಕೆಲವು ರೆಸ್ಟೋರೆಂಟ್ ಗಳು ಇದನ್ನು ಮೀರಿ ಮೇಜಿನ ಮೇಲಿರುವ ಆಹಾರಕ್ಕೆ ಬೆಂಕಿ ಹಚ್ಚುವ ಮೂಲಕ ಹೀಟ್ ಮಾಡಲು ಪ್ರಾರಂಭಿಸಿವೆ. ಬೆಂಕಿ ಹಾಕುವ ಮೊದಲು, ಆಹಾರದ ಮೇಲೆ ಸ್ವಲ್ಪ ದ್ರವ ಹಾಕಲಾಗುತ್ತೆ.. ಆ ದ್ರವ ಬೇರೇನೂ ಅಲ್ಲ.. ಅದು  ಆಲ್ಕೋಹಾಲ್.. ಇದನ್ನ ಆಹಾರಕ್ಕೆ ಹಾಕಿದ್ರೆ ಬೇಗನೆ ಬೆಂಕಿ ತಗಲುತ್ತದೆ. ಇದನ್ನು ಫ್ಲೇಂಬಿ ಫುಡ್ (flambe food) ಅಂತಾ ಕರೆಯಲಾಗುತ್ತದೆ. ಈ ಬೆಂಕಿ ಆಹಾರ ನಮ್ಮ ಅರೋಗ್ಯಕ್ಕೆ  ಒಳ್ಳೆದಲ್ಲ ಅಂತಾ   ತಜ್ಞರು ಹೇಳುತ್ತಾರೆ. ಮೊದಲನೆಯದಾಗಿ, ಇದು ತುಂಬಾ ಬಿಸಿಯಾಗಿರುತ್ತದೆ, ಅದನ್ನು ತಿಂದ ಕೂಡಲೇ ಬಾಯಿ ಸುಡಬಹುದು. ಆಹಾರ ಪದಾರ್ಥಗಳ ಮೇಲೆ ಆಲ್ಕೋಹಾಲ್ ಇರುತ್ತೆ. ಇದಕ್ಜೆ ಬೆಂಕಿ ಕೊಡುವ ವೇಳೆ ನಮ್ಮ ಮೇಲೂ ಬೆಂಕಿ ತಗಲೋ ಸಾಧ್ಯತೆ ಇರುತ್ತೆ.. ಈ ಬೆಂಕಿಯನ್ನ ಬೇಗ ಆರಿಸೋಕೆ ಸಾಧ್ಯ ಆಗೋದಿಲ್ಲ.. ಸಣ್ಣ ಮಗು ಏನಾಸರು ಜೊತೆಗಿದ್ದರೆ ಅಪಘಾತ ಸಂಭವಿಸಬಹುದು. ಇನ್ನು ರೆಸ್ಟೋರೆಂಟ್ ಸಣ್ಣ ಜಾಗದಲ್ಲಿ ಇದ್ದರೆ, ಆ ಅಪಾಯ ಮತ್ತಷ್ಟು ಹೆಚ್ಚುತ್ತದೆ. ಹೀಗಾಗಿ‌ ರೆಸ್ಟೋರೆಂಟ್ ಗಳಲ್ಲಿ ಈ ಹೊಸ ಹೊಸ ಪ್ರಯೋಗಗಳ ಬಗ್ಗೆ ಎಚ್ಚರಿಕೆಯಿಂದ ಇರೋದು ಮುಖ್ಯ.. ಆದ್ರೆ ಆಹಾರಗಳ ಮೇಲೆ ಮಾಡಿದ ಎಲ್ಲಾ ಪ್ರಯೋಗವೂ ಹಾನಿಕಾರ ಅಲ್ಲ‌‌‌‌.. ಆದರೆ ಕೆಲವೊಂದನ್ನು ತಿನ್ನೋದು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ‌. ಹಾಗಾಗಿ ರೆಸ್ಟೋರೆಂಟ್ ನಲ್ಲಿ ಕಂಡುಬರುವ ಅಲಂಕಾರಿಕ ಆಹಾರ ಪದಾರ್ಥಗಳನ್ನು ತಿನ್ನುವಾಗ ಜಾಗರೂಕರಾಗಿರೋದು ಉತ್ತಮ.

Shwetha M