SRH ಕೊಟ್ಟಿದ್ದು 256 ರನ್‌ಗಳ ಟಾರ್ಗೆಟ್ – RCB ಗುರಿ 166 ರನ್‌ಗಳಷ್ಟೇ – ಫ್ಯಾನ್ಸ್‌ಗೆ ನಿರಾಶೆ ಮಾಡಿದ್ದೇಕೆ ಬೆಂಗಳೂರು ಟೀಮ್?

ಆರ್‌ಸಿಬಿ ಅಂದುಕೊಂಡಂತೆ ಆಗಿದೆ. ನಂಬರ್ ಒನ್ ಪ್ಲೇನ್ ಆರ್‌ಸಿಬಿಯಲ್ಲೇ ಉಳಿದಿದೆ. ಆದರೆ, ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ಎದುರು ಆರ್‌ಸಿಬಿ ಹೀರೋಗಳು ಟಾರ್ಗೆಟ್ ಮರೆತಿರೋದು ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 55 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಇದನ್ನೂ ಓದಿ:GT ಈಗ ಮೋಸ್ಟ್ ಡೇಂಜರಸ್ – ALL OUT ಮಂತ್ರ ಸಕ್ಸಸ್ ಆಗ್ತಿದ್ಯಾ?
ಹೈದ್ರಾಬಾದ್‌ನಲ್ಲಿ ಆರ್‌ಸಿಬಿ ಹವಾ ಜೋರಾಗಿಯೇ ಇರುತ್ತೆ ಅಂತಾ ಅಂದುಕೊಂಡ ಫ್ಯಾನ್ಸ್ ಸಹಜವಾಗಿಯೇ ಬೇಸರ ಮಾಡಿಕೊಂಡಿದ್ದಾರೆ. ಆದರೆ, ಆರ್‌ಸಿಬಿಯೇ ನಂಬರ್ ಒನ್ ಪಟ್ಟದಲ್ಲಿ ಉಳಿದುಕೊಂಡಿರೋ ಸಮಾಧಾನ ಅಭಿಮಾನಿಗಳದ್ದು. ಇನ್ನು ತವರು ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಗುಡುಗು, ಸಿಡಿಲಿನ ಅಬ್ಬರ ತೋರಿಸಿದೆ. ತವರಿನಲ್ಲಿ ಅಭಿಮಾನಿಗಳ ಎದುರು ಹೈದ್ರಾಬಾದ್ ತಂಡದ ಬ್ಯಾಟಿಂಗ್ ಅಬ್ಬರ ಜೋರಾಗಿಯೇ ಇತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದ್ರಾಬಾದ್ ತಂಡ, 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 255 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.
ಹೈದರಾಬಾದ್ ತಂಡ ಆರಂಭದಿಂದ ಅಂತ್ಯದವರೆಗೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿತು. ಇಶಾನ್ ಕಿಶನ್ 46 ಎಸೆತಗಳಲ್ಲಿ 79 ರನ್‌ಗಳಿಸಿದರೆ, ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 56 ರನ್, ಹೆನ್ರಿಕ್ ಕ್ಲಾಸೆನ್ 24 ಎಸೆತಗಳಲ್ಲಿ 51 ರನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ 12 ಎಸೆತಗಳಲ್ಲಿ 29 ರನ್‌ಗಳಿಸಿ 255 ರನ್‌ಗಳ ಬೃಹತ್ ಮೊತ್ತ ದಾಖಲಿಸಲು ನೆರವಾದರು.
256 ರನ್‌ಗಳ ಗುರಿಯನ್ನ ಬೆನ್ನಟ್ಟಿದ ಆರ್‌ಸಿಬಿ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 200 ರನ್ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಆರ್‌ಸಿಬಿ ತಂಡದ ಆರಂಭ ಉತ್ತಮವಾಗಿತ್ತು. ವಿರಾಟ್ ಕೊಹ್ಲಿ ಜೊತೆ ಓಪನರ್ಸ್ ಆಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಸ್ಫೋಟಕ ಆಟವಾಡಿದರು. ಕೇವಲ 19 ಎಸೆತಗಳಲ್ಲಿ ತಲಾ 4 ಬೌಂಡರಿ, ಸಿಕ್ಸರ್‌ಗಳ ಸಹಿತ 44 ರನ್‌ಗಳಿಸಿದರು. ವಿರಾಟ್ ಕೊಹ್ಲಿ 15 ರನ್‌ಗಳಿಸಿ ಔಟಾದರು. 3ನೇ ಕ್ರಮಾಂಕದಲ್ಲಿ ಆಡಿದ ದೇವದತ್ ಪಡಿಕ್ಕಲ್ ಇಂದು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. 14 ಎಸೆತಗಳಲ್ಲಿ 21 ರನ್‌ಗಳಿಸಿದರು. 3 ವಿಕೆಟ್ ಕಳೆದುಕೊಂಡ ನಂತರ ಕೇವಲ ಅಗ್ರಸ್ಥಾನ ಉಳಿಸಿಕೊಳ್ಳಲು ನಿರ್ಧರಿಸಿ ನಿಧಾನಗತಿಯ ಬ್ಯಾಟಿಂಗ್‌ಗೆ ಮೊರೆ ಹೋಗಬೇಕಾಯಿತು. ನಾಯಕ ರಜತ್ ಹಾಗೂ ಕೃನಾಲ್ ಪಾಂಡ್ಯ ಇಬ್ಬರು 166 ರನ್‌ಗಳ ಗಡಿ ದಾಟಿಸಲು ಸಿಂಗಲ್ ಡಬಲ್ಸ್ಗಳಲ್ಲೇ ಆಡಿದರು. ಹಾಗೊಂದು, ಹೀಗೊಂದು ಬೌಂಡರಿ ಸಿಡಿಸುತ್ತಿದ್ದ ಈ ಜೋಡಿ 4ನೇ ವಿಕೆಟ್ ಜೊತೆಯಾಟದಲ್ಲಿ 84 ರನ್ ಸೇರಿಸಿದರು. ರಜತ್ ಪಾಟೀದಾರ್ 39 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 56 ರನ್‌ಗಳಿಸಿ ಔಟಾದರು. ಕೃನಾಲ್ ಪಾಂಡ್ಯ 41ರನ್‌ಗಳಿಸಿದರೆ, ಟಿಮ್ ಡೇವಿಡ್ ಅಜೇಯ 15 ರನ್‌ಗಳಿಸಿದರು. ಅಗ್ರಸ್ಥಾನವನ್ನ ಪಡೆಯುವ ಉದ್ದೇಶವೇ ಮುಖ್ಯವಾಗಿದ್ದರಿಂದ ಆರ್‌ಸಿಬಿ ಯಾವುದೇ ಹಂತದಲ್ಲಿ ಗೆಲುವಿಗಾಗಿ ಪ್ರಯತ್ನಿಸದೇ 20 ಓವರ್ ಪೂರ್ಣಗೊಳಿಸಿತು. ಈ ನಿಧಾನಗತಿಯ ಬ್ಯಾಟಿಂಗ್ ಆರ್‌ಸಿಬಿ ಫ್ಯಾನ್ಸ್ ನಿರಾಶೆಗೆ ಕಾರಣವಾಯಿತು.

ನೋಡಿರಿ

