ನಿವೃತ್ತಿ ಬಗ್ಗೆ ರೋಹಿತ್ ಶರ್ಮಾ ಮಾತಾಡಿದ್ಯಾಕೆ?- ಹಿಟ್‌ಮ್ಯಾನ್ ದಿಢೀರ್ ಈ ನಿರ್ಧಾರಕ್ಕೆ ಬಂದಿದ್ಯಾಕೆ?

ನಿವೃತ್ತಿ ಬಗ್ಗೆ ರೋಹಿತ್ ಶರ್ಮಾ ಮಾತಾಡಿದ್ಯಾಕೆ?- ಹಿಟ್‌ಮ್ಯಾನ್ ದಿಢೀರ್ ಈ ನಿರ್ಧಾರಕ್ಕೆ ಬಂದಿದ್ಯಾಕೆ?

ಟೀಂ ಇಂಡಿಯಾದ ಕ್ಯಾಪ್ಟನ್​​ ಆಗಿ ರೋಹಿತ್​ ಶರ್ಮಾ ಈಗ ತಮ್ಮ ಕೆರಿಯರ್​ನ ಪೀಕ್​​ನಲ್ಲಿದ್ದಾರೆ. ರೋಹಿತ್ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ಟಾಪ್ ಕ್ಲಾಸ್ ಪರ್ಫಾಮೆನ್ಸ್ ನೀಡ್ತಿದೆ. ವಂಡೇ, ಟೆಸ್ಟ್ ಎಲ್ಲಾ ಫಾರ್ಮೆಟ್​​ನಲ್ಲಿ ಭಾರತೀಯ ತಂಡ ಸಕ್ಸಸ್ ಕಾಣ್ತಿದೆ. ಅದ್ರಲ್ಲೂ ಇಂಗ್ಲೆಂಡ್​ ವಿರುದ್ಧದ ಸೀರಿಸ್​​ ವಿನ್ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯ ವೇಯ್ಟೇಜ್​​ನ್ನ ಇನ್ನಷ್ಟು ಹೆಚ್ಚಿಸಿದೆ. ಯಾಕಂದ್ರೆ ಟೀಂನಲ್ಲಿದ್ದವರೆಲ್ಲಾ ಆಲ್​​ಮೋಸ್ಟ್ ಯಂಗ್​ಸ್ಟರ್ಸ್​ಗಳೇ. ಡೆಬ್ಯೂ ಆಟಗಾರರನ್ನ, ಇನ್​ಎಕ್ಸ್​ಪೀರಿಯನ್ಸ್​ಡ್ ಪ್ಲೇಯರ್ಸ್​ಗಳನ್ನಿಟ್ಟುಕೊಂಡೇ ಫುಲ್​ ಫ್ಲೆಡ್ಜ್​​ ಸ್ಕ್ವಾಡ್​​ನಲ್ಲಿ ಬಂದಿದ್ದ ಇಂಗ್ಲೆಂಡ್​​ನ್ನ ಹೀನಾಯವಾಗಿ ಸೋಲಿಸಿದ್ದಾರೆ. ಯಂಗಸ್ಟರ್ಸ್​ಗಳನ್ನ ರೋಹಿತ್ ಶರ್ಮಾ ಎನ್​ಕರೇಜ್ ಮಾಡಿ, ಪುಶ್​ ಮಾಡಿದ ರೀತಿ ನಿಜಕ್ಕೂ ನೆಕ್ಸ್ಟ್ ಲೆವೆಲ್​ನಲ್ಲಿತ್ತು. ರೋಹಿತ್ ಭವಿಷ್ಯದ ಟೀಂ ಇಂಡಿಯಾವನ್ನ, ನೆಕ್ಸ್ಟ್ ಜನರೇಷನ್ ಟೀಮ್​​ನ್ನ ರೆಡಿ ಮಾಡ್ತಿದ್ದಾರೆ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಬಟ್ ರೋಹಿತ್ ಕ್ಯಾಪ್ಟನ್ಸಿಯನ್ನ ಫ್ಯಾನ್ಸ್​ ಸೆಲೆಬ್ರೇಟ್ ಮಾಡೋ ಟೈಮ್​ನಲಲ್ಲೇ ​ಹಿಟ್​​ಮ್ಯಾನ್​ ಒಂದು ಇಂಪಾರ್ಟೆಂಟ್ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ರಿಟೈರ್​​ಮೆಂಟ್ ಬಗ್ಗೆ ರೋಹಿತ್ ಮಾತನಾಡಿದ್ದಾರೆ.

ಇದನ್ನೂ ಓದಿ: ಸಿಕ್ಸ್ ಹೊಡೆದರೆ 9 ರನ್..! – ಟಿ10 ಕ್ರಿಕೆಟ್ ರೂಲ್ಸ್ ಫುಲ್ ಡಿಫರೆಂಟ್

ಕೆಲ ವರ್ಷಗಳ ಹಿಂದೆ ರೋಹಿತ್ ಶರ್ಮಾ ಭಾರತೀಯ ಟೆಸ್ಟ್​ ತಂಡದಲ್ಲಿ ಪರ್ಮನೆಂಟ್ ಸ್ಥಾನ ಪಡೆದಿರಲಿಲ್ಲ. ಟೆಸ್ಟ್ ಕ್ರಿಕೆಟ್​​ನಲ್ಲಿ ರೋಹಿತ್ ಅಷ್ಟಾಗಿ ಗುರುತಿಸಿಕೊಂಡಿರಲಿಲ್ಲ. ಇಂಟರ್​​ನ್ಯಾಷನಲ್​​ ಕ್ರಿಕೆಟ್​ನಲ್ಲಿ 16-17 ವರ್ಷಗಳ ಎಕ್ಸ್​ಪೀರಿಯನ್ಸ್ ಆದ್ರೂ ಕೂಡ ರೋಹಿತ್ ಇದುವರೆಗೆ ಆಡಿರೋದು 59 ಟೆಸ್ಟ್ ಮ್ಯಾಚ್​ಗಳನ್ನ. ಆದ್ರೆ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಇವ್ರೆಲ್ಲಾ 100 ಟೆಸ್ಟ್​ ​ಮ್ಯಾಚ್​ಗಳನ್ನ ಕ್ರಾಸ್ ಮಾಡಿದ್ದಾರೆ. ​ಈಗ ಆರ್.ಅಶ್ವಿನ್ ಕೂಡ 100 ಟೆಸ್ಟ್ ಕ್ಲಬ್​​ನ್ನ ಸೇರಿಕೊಂಡಿದ್ದಾರೆ. ಆದ್ರೆ ರೋಹಿತ್ ಶರ್ಮಾ ಇದುವರೆಗೆ ಆಡಿರೋದು 59 ಟೆಸ್ಟ್​ ಮ್ಯಾಚ್​​ಗಳನ್ನ ಮಾತ್ರ. 438 ರನ್ ಗಳಿಸಿದ್ದಾರೆ. 12 ಸೆಂಚೂರಿ ಹೊಡೆದಿದ್ದಾರೆ. ಟೋಟಲಿ ರೋಹಿತ್​ ಶರ್ಮಾ ಟೆಸ್ಟ್​ ಫಾರ್ಮೆಟ್​ಗಿಂತ ಹೆಚ್ಚಾಗಿ ವಂಡೇ ಮತ್ತು ಟಿ20ಯಲ್ಲೇ ಹೆಚ್ಚು ಕ್ಲಿಕ್ ಆಗಿರೋದು. ಆದ್ರೆ 2021ರಲ್ಲಿ ಕ್ಯಾಪ್ಟನ್ ಆದ ಬಳಿಕ ರೋಹಿತ್ ಟೆಸ್ಟ್​ ಮ್ಯಾಚ್​​ಗಳನ್ನ ಕೂಡ ಕನ್ಸಿಸ್ಟೆಂಟ್ ಆಗಿ ಆಡ್ತಿದ್ದಾರೆ. ಆ್ಯಕ್ಚುವಲಿ ಹೆಚ್ಚು ಹೆಚ್ಚು ಟೆಸ್ಟ್​ ಕ್ರಿಕೆಟ್ ಆಡಬೇಕು. ಟೆಸ್ಟ್​ನಲ್ಲಿ ಸೆಂಚೂರಿ ಡಬಲ್​ ಸೆಂಚೂರಿ ಹೊಡಿಬೇಕು ಅನ್ನೋದು ರೋಹಿತ್ ಶರ್ಮಾ ಅವರ ತಂದೆಯ ಡ್ರೀಮ್ ಆಗಿತ್ತು. ರೋಹಿತ್ ತಂದೆ ಟೆಸ್ಟ್​​ ಫಾರ್ಮೆಟ್​ನ ದೊಡ್ಡ ಫಾಲೋವರ್​. ಈ ಬಗ್ಗೆ ಇಂಟರ್​​ವ್ಯೂ ಒಂದರಲ್ಲಿ ರೋಹಿತ್ ಶರ್ಮಾ ಅವರೇ ಹೇಳಿಕೊಂಡಿದ್ರು. ಆದ್ರೆ ಟೆಸ್ಟ್​ನಲ್ಲಿ ರೋಹಿತ್ ಇದುವರೆಗೆ ಒಂದು ಡಬಲ್ ಸೆಂಚೂರಿ ಮಾತ್ರ ಹೊಡೆದಿರೋದು. ಬಟ್​ ವಂಡೇನಲ್ಲೇ ಮೂರು ಡಬಲ್ ಸೆಂಚೂರಿ ಹೊಡೆದಿದ್ದಾರೆ. ಆದ್ರೀಗ ಕ್ಯಾಪ್ಟನ್​ ಆಗಿ ಟೆಸ್ಟ್​ ಟೀಂನ್ನ ಕೂಡ ಲೀಡ್ ಮಾಡಿ, ಅಲ್ಲೂ ಸಕ್ಸಸ್ ಆಗಿರೋದು ರೋಹಿತ್​ ಶರ್ಮಾಗೆ ತುಂಬಾನೆ ಸ್ಯಾಟಿಸ್​ಫ್ಯಾಕ್ಷನ್ ನೀಡಿರುವಂತೆ ಕಾಣ್ತಿದೆ. ಹೀಗಾಗಿ ಎಲ್ಲೋ ಒಂದು ಕಡೆ ರಿಟೈರ್​​ಮೆಂಟ್ ಬಗ್ಗೆಯೂ ಯೋಚನೆ ಮಾಡ್ತಿದ್ದಾರೆ ಅನ್ಸುತ್ತೆ. ಯಾಕಂದ್ರೆ, ರಿಟೈರ್​ಮೆಂಟ್ ವಿಚಾರವಾಗಿ ರೋಹಿತ್ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.

ಯಾವಗಾದ್ರೂ ಒಂದು ದಿನ ಬೆಳಗ್ಗೆ ಎದ್ದಾಗ ಅಷ್ಟೊಂದು ಬೆಟರ್ ಫೀಲ್ ಮಾಡ್ತಾ ಇಲ್ಲ, ಇನ್ಮುಂದೆ ಟೀಂ ಇಂಡಿಯಾ ಪರ ಆಡುವಷ್ಟು ಸಾಮರ್ಥ್ಯ ನಂಗೆ ಇಲ್ಲ ಅಂತಾ ಅನ್ನಿಸಿದ್ರೆ ಆ ದಿನವೇ ರಿಟೈರ್​​ಮೆಂಟ್ ಬಗ್ಗೆ ನಿರ್ಧರಿಸ್ತೇನೆ. ಹಾಗೆಯೇ ಟೀಂ ಜೊತೆಗೂ ಈ ಬಗ್ಗೆ ಮಾತುಕತೆ ನಡೆಸ್ತೇನೆ ಅಂತಾ ರೋಹಿತ್ ಶರ್ಮಾ ಹೇಳಿದ್ದಾರೆ. ಹಾಗೆಯೇ ಕಳೆದ ಮೂರು ವರ್ಷಗಳಲ್ಲಿ ನನ್ನ ಪರ್ಫಾಮೆನ್ಸ್ ಇನ್ನಷ್ಟು ಬೆಟರ್ ಆಗಿದೆ. ನನ್ನ ಕೆರಿಯರ್​​ನ ಬೆಸ್ಟ್ ಕ್ರಿಕೆಟ್ ಆಡ್ತಿದ್ದೇನೆ. ನಾನು ಯಾವತ್ತೂ ನಂಬರ್ ಬಗ್ಗೆ ತಲೆಕೆಡಿಸಿಕೊಳ್ಳುವವನಲ್ಲ. ಆದ್ರೆ ಬಿಗ್​ ಸ್ಕೋರ್ ಗಳಿಸೋದು ಮ್ಯಾಟರ್ ಆಗುತ್ತೆ. ಬಟ್ ನಾನು ಒಂದು ಟೀಮ್ ಆಗಿ ಆಡೋ ಬಗ್ಗೆ ಫೋಕಸ್ ಮಾಡ್ತಾ ಬಂದಿದ್ದೀನಿ. ಪ್ಲೇಯರ್ಸ್​ಗೆ ಫುಲ್ ಫ್ರೀಡಂ ಕೊಟ್ಟಿದ್ದೀನಿ. ಇಂಡಿವಿಜ್ಯುವಲ್ ಆಗಿ ಯಾರು ಎಷ್ಟು ಸ್ಕೋರ್ ಮಾಡಿದ್ದಾರೆ. ಎಷ್ಟು ವಿಕೆಟ್​ ತೆಗೆದಿದ್ದಾರೆ. ಈ ಸ್ಟ್ಯಾಟಿಸ್ಟಿಕ್ಸ್​​ಗಳಿಗೆ ಹೆಚ್ಚು ಪ್ರಿಫರೆನ್ಸ್ ಕೊಡೋ ಅವಶ್ಯಕತೆ ಇಲ್ಲ. ನಮ್ಮ ಟೀಮ್​ನಲ್ಲಿ ಈಗ ಯಾರು ಕೂಡ ನಂಬರ್​​ ಬಗ್ಗೆ ಫೋಕಸ್ ಮಾಡೋದಿಲ್ಲ. ಪರ್ಸನಲ್ ಸ್ಕೋರ್ ಎಷ್ಟಾಗಿ ಅನ್ನೋ ಬಗ್ಗೆ ಯೋಚನೆ ಮಾಡೋದಿಲ್ಲ. ಚೆನ್ನಾಗಿ ಆಡ್ತಾ ಇದ್ರೆ ನಂಬರ್​​ ಅಟೋಮೆಟಿಕಲಿ ಬಂದಿರುತ್ತೆ ಅಂತಾ ರೋಹಿತ್ ಹೇಳಿದ್ದಾರೆ.

ರೋಹಿತ್​ ಶರ್ಮಾರ ಈ ಸ್ಟೇಟ್​ಮೆಂಟ್​ ಪೈಕಿ ಹೆಚ್ಚು ಹೈಲೈಟ್ ಆಗಿರೋದು ರಿಟೈರ್​ಮೆಂಟ್​ ಬಗ್ಗೆ ಅವರು ಹೇಳಿರೋ ಮಾತು. ಈ ಬಾರಿಯ ಟಿ20 ವರ್ಲ್ಡ್​​ಕಪ್​​ಗೆ ಟೀಂ ಇಂಡಿಯಾವನ್ನ ರೋಹಿತ್ ಶರ್ಮಾರೇ ಲೀಡ್ ಮಾಡ್ತಾ ಇದ್ದಾರೆ. ಇದು ರೋಹಿತ್ ಪಾಲಿಗೆ ಕೊನೆಯ ಟಿ20 ವರ್ಲ್ಡ್​ಕಪ್ ಆಗಿರಲಿದೆ. ಸೋತ್ರೂ, ಗೆದ್ರೂ ಮುಂದಿನ ವಿಶ್ವಕಪ್​ ವೇಳೆಗೆ ರೋಹಿತ್ ಟೀಮ್​​ನಲ್ಲಿ ಇರೋದಿಲ್ಲ. ಅದಂತೂ ಕನ್ಫರ್ಮ್. 2022ರ ಟಿ20 ವರ್ಲ್ಡ್​ಕಪ್ ಬಳಿಕ ರೋಹಿತ್ ಟೀಂ ಇಂಡಿಯಾ ಪರ ಸುಮಾರು ಒಂದೂವರೆ ವರ್ಷಗಳ ಕಾಲ ಯಾವುದೇ ಟಿ20 ಮ್ಯಾಚ್​ಗಳನ್ನ ಆಡಿಲ್ಲ. ಕಳೆದ ಅಫ್ಘಾನಿಸ್ತಾನ ವಿರುದ್ಧ ಮೂರು ಮ್ಯಾಚ್ ವೇಳೆ ಟಿ20 ಫಾರ್ಮೆಟ್​​ಗೆ ಕಮ್​ಬ್ಯಾಕ್ ಮಾಡಿದ್ರು. ಇದೀಗ ವರ್ಲ್ಡ್​ಕಪ್​​ನಲ್ಲಿ ಮತ್ತೆ ಟೀಂ ಇಂಡಿಯಾವನ್ನ ರೋಹಿತ್ ಲೀಡ್ ಮಾಡ್ತಾ ಇದ್ದಾರೆ. ಮೋಸ್ಟ್ ಪ್ರಾಬಬ್ಲಿ ರೋಹಿತ್ ಈ ವರ್ಲ್ಡ್​ಕಪ್ ಬಳಿಕ ಟಿ20 ಫಾರ್ಮೆಟ್​ಗೆ ಮೊದಲು ಗುಡ್​​ಬೈ ಹೇಳುವ ಸಾಧ್ಯತೆ ಇದೆ. ವರ್ಲ್ಡ್​ಕಪ್ ಗೆದ್ರೂ, ಸೋತ್ರೂ ರೋಹಿತ್ ಟಿ20 ಕ್ರಿಕೆಟ್​​ನಿಂದ ಮೊದಲು ರಿಟೈರ್​ ಆಗಬಹುದು. ರೋಹಿತ್ ಫೇವರೇಟ್ ಫಾರ್ಮೆಟ್ ಆಗಿರೋ ವಂಡೇ ಮತ್ತು ಟೆಸ್ಟ್​ನಲ್ಲಿ ಮುಂದುವರಿಬಹುದೋ ಏನೋ. ಕೆಲ ವರದಿಗಳ ಪ್ರಕಾರ ವಂಡೇನಲ್ಲಿ ರೋಹಿತ್ ಈಗಾಗ್ಲೇ ಸಾಕಷ್ಟು ಅಚೀವ್​ಮೆಂಟ್​ ಮಾಡಿದ್ದಾರೆ. ಹೀಗಾಗಿ ಟೆಸ್ಟ್​ ಮಾತ್ರ ಆಡಬಹುದು ಅಂತಾನೂ ಹೇಳಲಾಗ್ತಿದೆ. ಅದ್ರೆ ರೋಹಿತ್​ ಶರ್ಮಾರ ಮೇನ್​ ಗೋಲ್ ಆಗಿರೋದು ವಂಡೇ ವರ್ಲ್ಡ್​​ಕಪ್ ಗೆಲ್ಲಬೇಕು ಅನ್ನೋದು. 2023ರ ವಿಶ್ವಕಪ್​ಗೂ ಮುನ್ನ ರೋಹಿತ್ ಅದನ್ನೇ ಹೇಳಿದ್ರು. ವಂಡೇ ವರ್ಲ್ಡ್​​ಕಪ್​ ಗೆಲ್ಲೋದ್ರಲ್ಲಿರೋ ಫೀಲಿಂಗ್​ ಇನ್ಯಾವುದರಲ್ಲೂ ಇಲ್ಲ ಅನ್ನೋ ಮಾತನ್ನ ರೋಹಿತ್ ಹೇಳಿದ್ರು. ಅದು ರೋಹಿತ್​ ಶರ್ಮಾರ ಅಲ್ಟಿಮೇಟ್ ಗೋಲ್. ಕಳೆದ ವಿಶ್ವಕಪ್​​ನಲ್ಲಿ ರೋಹಿತ್​ ಟೀಮ್​ನ್ನ ಯಾವ ರೀತಿ ಲೀಡ್​ ಮಾಡಿದ್ರು. ಫೈನಲ್​ವರೆಗೂ ಹೇಗೆ ಟೀಮ್​​ನ್ನ ತಗೊಂಡುಬಂದ್ರು ಅನ್ನೋದನ್ನ ನೀವು ನೋಡಿದ್ರಿ. ಬಟ್ ಟ್ರೋಫಿ ಮಿಸ್ ಆಯ್ತು. ರೋಹಿತ್ ಕನಸು ನನಸಾಗಿಲ್ಲ. ಈಗ ರೋಹಿತ್ ಶರ್ಮಾಗೆ 36 ವರ್ಷ ವಯಸ್ಸು. ಮುಂದಿನ ವಂಡೇ ವಿಶ್ವಕಪ್​ವರೆಗೂ ಟೀಮ್​​ನಲ್ಲಿರ್ತಾರಾ? ಕ್ರಿಕೆಟ್ ಆಡ್ತಾರಾ ಡೌಟ್. ಯಾಕಂದ್ರೆ ನೆಕ್ಸ್ಟ್ ವರ್ಲ್ಡ್​ಕಪ್​​ ವೇಳೆಗೆ ಹಿಟ್​ಮ್ಯಾನ್​ಗೆ 39 ವರ್ಷವಾಗಿರುತ್ತೆ. ಆದ್ರೆ ರಿಟೈರ್​ಮೆಂಟ್ ಬಗ್ಗೆ ಈಗ ರೋಹಿತ್ ಶರ್ಮಾ ನೀಡಿರೋ ಸ್ಟೇಟ್​ಮೆಂಟ್​ನ್ನ ಇನ್ನೊಂದು ಆ್ಯಂಗಲ್​ನಲ್ಲೂ ಅನಾಲಿಸಿಸ್ ಮಾಡಬಹುದು. ಕಳೆದ ಮೂರು ವರ್ಷಗಳಿಂದ ನಾನು ಬೆಸ್ಟ್ ಕ್ರಿಕೆಟ್ ಆಡ್ತಿದ್ದೀನಿ ಅನ್ನೋದಾಗಿ ರೋಹಿತ್ ಶರ್ಮಾ ಹೇಳಿದ್ದಾರೆ. ಏಜ್​ ಜಾಸ್ತಿಯಾದ್ರೂ ರೋಹಿತ್​ ಪರ್ಫಾಮೆನ್ಸ್ ಬೆಟರ್​ & ಬೆಟರ್ ಆಗ್ತಿದೆ. ಕ್ಯಾಪ್ಟನ್ ಆಗಿಯಂತೂ ರೋಹಿತ್​ ಅಚೀವ್​​ ಮಾಡಬೇಕಿರೋದು ಇನ್ನಷ್ಟಿದೆ. ಯಾಕಂದ್ರೆ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಭಾರತ ಇದುವರೆಗೂ ಯಾವುದೇ ಐಸಿಸಿ ಟೂರ್ನಿಯನ್ನ ಗೆದ್ದಿಲ್ಲ. ಈಗ ರೋಹಿತ್​​ ಮುಂದೆ ಅಟ್​​ಲೀಸ್ಟ್ ಮೂರು ಮೆಗಾ ಐಸಿಸಿ ಟೂರ್ನಿಗಳಿವೆ. ಒಂದು ಟಿ20 ವರ್ಲ್ಡ್​ಕಪ್.. ಬಳಿಕ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯುತ್ತೆ. ಸದ್ಯಕ್ಕೆ ಅದು ಪಾಕಿಸ್ತಾನದಲ್ಲಿ ನಿಗದಿಯಾಗಿದೆ. ಆದ್ರೆ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗೋದು ಅನುಮಾನವೇ. ಈ ಟೂರ್ನಿಯ ಲೊಕೇಶನ್​ನಲ್ಲಿ ಏನು ಬೇಕಾದ್ರೂ ಚೇಂಜೆಸ್​​ಗಳಾಗಬಹುದು. 2025ರ ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್ ಕೂಡ ಇದೆ. ಹೀಗಾಗಿ ರೋಹಿತ್​ ಶರ್ಮಾಗೆ ಭಾರತಕ್ಕೆ ಟಿ20 ವರ್ಲ್ಡ್​​ಕಪ್​ ಗೆಲ್ಲಿಸೋ ಅವಕಾಶ ಇದೆ. ನಂತರ ಚಾಂಪಿಯನ್ಸ್ ಟ್ರೋಫಿ..ಹಾಗೆಯೇ ಟೆಸ್ಟ್ ವರ್ಲ್ಡ್​​ಕಪ್. ಒಂದು ವೇಳೆ ಈ ಮೂರನ್ನೂ ಗೆದ್ರೆ as a ಕ್ಯಾಪ್ಟನ್ ಆಗಿ ರೋಹಿತ್​ ಪಾಲಿಗೆ ಗ್ರೇಟೆಸ್ಟ್ ಅಚೀವ್​ಮೆಂಟ್ ಆಗುತ್ತೆ. ಈಗ ರೋಹಿತ್ ರಿಟೈರ್​ಮೆಂಟ್ ಬಗ್ಗೆ ಸ್ಟೇಟ್​​ಮೆಂಟ್ ಕೊಟ್ಟಿದ್ರೂ, ಶೀಘ್ರವೇ ರಿಟೈರ್​ಮೆಂಟ್ ಘೋಷಿಸಲಿಕ್ಕಿಲ್ವೋ ಏನೊ. ಒಂದು ವೇಳೆ ಕೊಟ್ರೂ ಟಿ20 ವರ್ಲ್ಡ್​ಕಪ್​ ಬಳಿಕ ಟಿ20 ಫಾರ್ಮೆಟ್​​ಗೆ ಮೊದಲು ರಿಸೈನ್​ ಮಾಡಬಹುದು. ಚಾಂಪಿಯನ್ಸ್​ ಟ್ರೋಫಿ ಬಳಿಕ ವಂಡೇ ಫಾರ್ಮೆಟ್​​ಗೆ ಗುಡ್​ಬೈ ಹೇಳಬಹುದು. 2025ರ ವರ್ಲ್ಡ್​​ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ಗೆ ಹೋದ್ರೆ ಆ ಮ್ಯಾಚ್​ ಬಳಿಕ ಟೆಸ್ಟ್​ಗೆ ರಿಟೈರ್​ಮೆಂಟ್ ಅನೌನ್ಸ್​ ಮಾಡಬಹುದೋ ಏನೋ..

 

Sulekha