ಡ್ರಾಪ್ ಹಿಂಟ್.. ರೋಹಿತ್ ಗುಡ್ ಬೈ – BCCIಗೇ ಶಾಕ್ ಕೊಟ್ರಾ HITಮ್ಯಾನ್?
ENG ಪ್ರವಾಸಕ್ಕೆ ಕ್ಯಾಪ್ಟನ್ ಯಾರು?

ಡ್ರಾಪ್ ಹಿಂಟ್.. ರೋಹಿತ್ ಗುಡ್ ಬೈ – BCCIಗೇ ಶಾಕ್ ಕೊಟ್ರಾ HITಮ್ಯಾನ್?ENG ಪ್ರವಾಸಕ್ಕೆ ಕ್ಯಾಪ್ಟನ್ ಯಾರು?

18ನೇ ಸೀಸನ್ ಐಪಿಎಲ್ ಆಲ್ಮೋಸ್ಟ್ ಪ್ಲೇಆಫ್ ಹಂತಕ್ಕೆ ಬಂದಿದೆ. ಇನ್ನೇನು ಎರಡು ವಾರಗಳಲ್ಲೇ ಫಿನಾಲೆ ಕೂಡ ಮುಗ್ದು ಅಂತಾರಾಷ್ಟ್ರೀಯ ಪಂದ್ಯಗಳು ಸ್ಟಾರ್ಟ್ ಆಗುತ್ತೆ. ಬಟ್ ಅಷ್ಟ್ರಲ್ಲೇ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ ಆಗಿದೆ. ಹಿಟ್​ಮ್ಯಾನ್ ರೋಹಿತ್ ಶರ್ಮಾ ವೈಟ್ ಜೆರ್ಸಿ ಕಳಚಿ ರೆಡ್ ಬಾಲ್ ಫಾರ್ಮೆಟ್​ಗೆ  ಗುಡ್ ಬೈ ಹೇಳಿದ್ದಾರೆ. ಇದೇ ನಿವೃತ್ತಿಯ ನಿರ್ಧಾರ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಇದನ್ನೂ ಓದಿ : ಭಾರತ ಪಾಕ್ ಯುದ್ಧ ಭೀತಿ -ಐಪಿಎಲ್​ ಪಂದ್ಯಕ್ಕೆ ಬೀಳುತ್ತಾ ಬ್ರೇಕ್? – ಪಾಕಿಸ್ತಾನ್ ಸೂಪರ್ ಲೀಗ್ ಆಡಲ್ವಾ ವಿದೇಶಿ ಕ್ರಿಕೆಟರ್ಸ್?

ಸದ್ಯ ಟೀಂ ಇಂಡಿಯಾ ಆಟಗಾರರೆಲ್ಲಾ ಐಪಿಎಲ್​ನಲ್ಲಿ ಬ್ಯುಸಿಯಾಗಿದ್ದಾರೆ. ಮೇ 25ರಂದು ಫೈನಲ್ ಪಂದ್ಯ ನಡೆಯಲಿದೆ. ಆ ನಂತ್ರ ನೆಕ್ಸ್​ಟ್ ಮಂತ್ ಭಾರತ ತಂಡದ ಆಟಗಾರರೆಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಾಪಸ್ ಆಗಲಿದ್ದಾರೆ. ಜೂನ್​ನಲ್ಲಿ ನಡೆಯಲಿರೋ ಇಂಗ್ಲೆಂಡ್ ಪ್ರವಾಸಕ್ಕೆ ಯಾರನ್ನೆಲ್ಲಾ ಸೆಲೆಕ್ಟ್ ಮಾಡ್ಬೇಕು ಅಂತಾ ಬಿಸಿಸಿಐ ಕಸರತ್ತು ನಡೆಸ್ತಾ ಇರುವಾಗ್ಲೇ ರೋಹಿತ್ ಶರ್ಮಾ ದಿಢೀರ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ರೋಹಿತ್​ರ ಈ ನಿರ್ಧಾರಕ್ಕೆ ಕ್ರಿಕೆಟ್ ಫ್ಯಾನ್ಸ್ ಕೂಡ ಶಾಕ್ ಆಗಿದ್ದಾರೆ. ಌಕ್ಚುಲಿ ರೋಹಿತ್ ನಿರ್ಧಾರದ ಹಿಂದೆ ಬಿಸಿಸಿಐನ ಗೇಮ್ ಪ್ಲ್ಯಾನ್ ಕೂಡ ಇದೆ. ಈ ಹಿಂದೆಯೇ ರೋಹಿತ್ ಶರ್ಮಾಗೆ ಬಿಸಿಸಿಐ ಸೂಚನೆ ನೀಡಿತ್ತು. ಟೆಸ್ಟ್ ನಾಯಕತ್ವದಿಂದ ರೋಹಿತ್ ಶರ್ಮಾರನ್ನು ಕೆಳಗಿಳಿಸೋ ಬಗ್ಗೆ ಚರ್ಚೆಯೂ ಆಗಿತ್ತು. ಇದೀಗ ಇಂಗ್ಲೆಂಡ್ ಪ್ರವಾಸದಿಂದ ರೋಹಿತ್​ರನ್ನ ಡ್ರಾಪ್ ಮಾಡೋ ಸುದ್ದಿ ಸದ್ದು ಮಾಡುತ್ತಲೇ ರೋಹಿತ್ ತಾವೇ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗ್ತಿದೆ.

ನಿಜ ಹೇಳ್ಬೇಕಂದ್ರೆ ರೋಹಿತ್​ಗೆ ಈಗ್ಲೇ ಟೆಸ್ಟ್​ಗೆ ವಿದಾಯ ಹೇಳೋದು ಇಷ್ಟ ಇರ್ಲಿಲ್ಲ. ಬಟ್ ಸಿಚುಯೇಷನ್ಸ್ ಹಾಗೇ ಕ್ರಿಯೇಟ್ ಆಯ್ತು. ಜೂನ್ 20 ರಿಂದ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿ ಆರಂಭಗೊಳ್ಳಲಿದೆ. ಹೀಗಾಗಿ ಐಪಿಎಲ್ ಟೂರ್ನಿ ನಡುವೆ ಟೀಂ ಇಂಡಿಯಾ ಆಯ್ಕೆ ಸಮಿತಿ ಯಾರನ್ನ ಫೈನಲ್ ಮಾಡ್ಬೇಕು ಅಂತಾ ಲೆಕ್ಕಾಚಾರದಲ್ಲಿದೆ. ಅದ್ರ ಜೊತೆಗೆ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೈಕಲ್​ನ ಗಮನದಲ್ಲಿಟ್ಟುಕೊಂಡು ಇಂಗ್ಲೆಂಡ್ ವಿರುದ್ಧದ ಸರಣಿಗೆ ಹೊಸ ನಾಯಕನ ಆಯ್ಕೆ ಮಾಡಲು ಮುಂದಾಗಿತ್ತು. ಬಟ್ ರೋಹಿತ್​ಗೆ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯನ್ನ ತಾವೇ ಲೀಡ್ ಮಾಡ್ಬೇಕು ಅನ್ನೋ ಆಸೆಯಲ್ಲಿದ್ರು. ಆಯ್ಕೆ ಸಮಿತಿ ಮಾತ್ರ ಹೊಸ ನಾಯಕನ ಆಯ್ಕೆಗೆ ತಯಾರಿ ಮಾಡಿತ್ತು. ಹೀಗಾಗಿ ರೋಹಿತ್ ಇಂಗ್ಲೆಂಡ್ ಸರಣಿಯಲ್ಲಿ ಕೇವಲ ಆಟಗಾರನಾಗಿ ಮಾತ್ರ ಕಾಣಿಸಿಕೊಳ್ಳುವ ಸಾಧ್ಯತೆ ಇತ್ತು. ಈ ಚರ್ಚೆ, ಹೈಡ್ರಾಮ ಬೆನ್ನಲ್ಲೇ ರೋಹಿತ್ ಶರ್ಮಾ ಟೆಸ್ಟ್ ಮಾದರಿಗೆ ವಿದಾಯ ಹೇಳಿದ್ದಾರೆ. ಇನ್ನು ಟೆಸ್ಟ್ ಮಾದರಿಯಲ್ಲಿ ಭಾರತದ ಪರ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ಗಳಲ್ಲಿ ಒಬ್ಬರಾಗಿದ್ದ ರೋಹಿತ್ 67 ಟೆಸ್ಟ್‌ ಪಂದ್ಯಗಳನ್ನ ಆಡಿದ್ದಾರೆ. ಈ ವೇಳೇ 40.57 ಸರಾಸರಿಯಲ್ಲಿ 4301 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕಗಳು ಮತ್ತು 18 ಅರ್ಧಶತಕಗಳಿವೆ.

ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ ಗೆ ಗುಡ್ ಬೈ ಹೇಳಿದ ಬೆನ್ನಲ್ಲೇ ಇಂಗ್ಲೆಂಡ್ ಪ್ರವಾಸಕ್ಕೆ ಹೊಸ ಆಟಗಾರನಿಗೆ ನಾಯಕತ್ವ ಕಟ್ಟಬೇಕಿದೆ. ಈ ರೇಸ್‌ನಲ್ಲಿ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಮುಂಚೂಣಿಯಲ್ಲಿದ್ದಾರೆ.

ಕ್ಯಾಪ್ಟನ್ಸಿ ರೇಸ್!

ಟೆಸ್ಟ್ ತಂಡವನ್ನು ಮುನ್ನಡೆಸಲು ಪ್ರಬಲ ಸ್ಪರ್ಧಿ ಬುಮ್ರಾ

ಜಸ್ಪ್ರೀತ್ ಬುಮ್ರಾ ಲಿಸ್ಟ್ ನಲ್ಲಿ ಇದ್ರೂ ಇಂಜುರಿ ಪ್ರಾಬ್ಲಂ

ಯುವ ನಾಯಕನ ರೇಸ್ ನಲ್ಲಿ ಗಿಲ್ ಮುಂಚೂಣಿ

ಟೆಸ್ಟ್ ತಂಡವನ್ನು ಮುನ್ನಡೆಸಲು ಪಂತ್ ಕೂಡ ಪ್ರಬಲ ಸ್ಪರ್ಧಿ

2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5 T20I ಪಂದ್ಯಗಳಲ್ಲಿ ನಾಯಕ

ಲಿಸ್ಟ್ ನಲ್ಲಿ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಹೆಸರು

Shantha Kumari

Leave a Reply

Your email address will not be published. Required fields are marked *