14 ವರ್ಷಗಳ ಕಾಲ ರಾಮ ವನವಾಸಕ್ಕೆ ತೆರಳಿದ್ಯಾಕೆ? – ಈ 14ರ ಗುಟ್ಟೇನು?

14 ವರ್ಷಗಳ ಕಾಲ ರಾಮ ವನವಾಸಕ್ಕೆ ತೆರಳಿದ್ಯಾಕೆ? –  ಈ 14ರ ಗುಟ್ಟೇನು?
14 ವರ್ಷಗಳ ಕಾಲ ರಾಮ ವನವಾಸಕ್ಕೆ ತೆರಳಿದ್ಯಾಕೆ? – ಈ 14ರ ಗುಟ್ಟೇನು?

ಇಡೀ ದೇಶ ಈಗ ರಾಮನಾಮ ಜಪ ಮಾಡ್ತಾ ಇದೆ. ಅಯೋಧ್ಯೆ ರಾಮಮಂದಿರದ ಸಂಭ್ರಮ ಭಾರತದ ಮನೆ ಮನೆಗಳಲ್ಲೂ ಇದೆ. ದೇಶಾದ್ಯಂತ ರಾಮನ ಕಥೆಗಳೇ ಕೇಳಿ ಬರ್ತಾ ಇದೆ. ಶ್ರೀರಾಮನ ಜೀವನಗಾಥೆಯೇ ದೇಶದ ಜನತೆಗೆ ಒಂದು ಸ್ಫೂರ್ತಿ ಮತ್ತು ಶಕ್ತಿ. ಶ್ರೀರಾಮ ಅಂದ್ರೆ ಭಾರತದ ಸಂಸ್ಕೃತಿಯ ನಿಜವಾದ ರಾಯಭಾರಿ. ಇಂಥಾ ಶ್ರೀರಾಮ ತಮ್ಮ ಜೀವನದಲ್ಲಿ ಎದುರಿಸಿದ ಸವಾಲುಗಳು ಒಂದೆರಡಲ್ಲ. ಅದ್ರಲ್ಲೂ ವನವಾಸ ಅನ್ನೋದು ಶ್ರೀರಾಮನನ್ನ ಅಕ್ಷರಶ: ದೇವರನ್ನಾಗಿಸಿಬಿಟ್ಟಿತ್ತು. ಮರ್ಯಾದಾ ಪುರುಷೋತ್ತಮದ 14 ವರ್ಷಗಳ ಕಾಲ ವನವಾಸ ಅನುಭವಿಸಿದ್ದು ನಿಮಗೆ ಗೊತ್ತಿರೋ ವಿಚಾರವೇ. ಆದ್ರೆ ಈ ವನವಾಸದ ವಿಚಾರದಲ್ಲಿ ಒಂದು ಪ್ರಶ್ನೆ ಇದೆ. 14 ವರ್ಷಗಳ ಕಾಲವೇ ರಾಮ ವನವಾಸಕ್ಕೆ ತೆರಳಿದ್ಯಾಕೆ? ಅದ್ಯಾಕೆ 15 ವರ್ಷ ಆಗಲಿಲ್ಲ. ಅಥವಾ 13 ವರ್ಷ, 12, 10 ವರ್ಷಕ್ಕೆ ಯಾಕೆ ಇಳಿದಿಲ್ಲ? ಸರಿಯಾಗಿ 14 ವರ್ಷಗಳೇ ರಾಮ ವನವಾಸವಿದ್ದಿದ್ದು ಯಾಕೆ ಅನ್ನೋದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮೈಸೂರು ಕೃಷ್ಣಶಿಲೆ..ಕನ್ನಡದ ಕೈ! – ರಾಮಲಲ್ಲಾ ಆಯ್ಕೆ ಹೇಗಾಯ್ತು?

ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದಲ್ಲಿ ರಾಮನ ವನವಾಸದ ಕುರಿತು ಉಲ್ಲೇಖವಾಗಿರುವಂತೆ, ಮಂಥರೆಯ ಮಾತಿನಿಂದ ರಾಜ ದಶರಥನ ಮೂರನೇ ಪತ್ನಿ ಕೈಕೆಯಿಗೆ ಒಂದು ಭಾವನೆ ಬಂದಿರುತ್ತೆ. ಒಂದು ವೇಳೆ ಶ್ರೀರಾಮ ಅಯೋಧ್ಯೆಯ ರಾಜನಾದ್ರೆ, ಭರತನಿಗೆ ಯಾವತ್ತಿಗೂ ಅಯೋಧ್ಯೆ ರಾಜಪಟ್ಟ ಸಿಗೋದಿಲ್ಲ ಅನ್ನೋ ಮಂಥರೆಯ ಒಂದು ಮಾತು ಕೈಕೆಯ ತಲೆ ಹಾಳು ಮಾಡಿಬಿಡುತ್ತೆ. ಅದಕ್ಕೆ ಸರಿಯಾಗಿ ಅಯೋಧ್ಯೆ ಜನರ ಭಾವನೆಗಳು ಕೂಡ ರಾಮನ ಪರವಾಗಿಯೇ ಇದೆ. ಒಂದು ವೇಳೆ ಭರತನಿಗೆ ರಾಜನ ಪಟ್ಟ ಕೊಟ್ರೂ ಕೂಡ ಅಯೋಧ್ಯೆಯಲ್ಲಿ ರಾಮ ಇರೋವರೆಗೂ ಯಾರೂ ಸಹ ಭರತನನ್ನ ರಾಜ ಅಂತಾ ಪರಿಗಣಿಸೋದಿಲ್ಲ. ಹೀಗಾಗಿ ಶ್ರೀರಾಮನನ್ನ ಅಯೋಧ್ಯೆಯಿಂದ ಹೊರಗಟ್ಟಲೇಬೇಕು ಅನ್ನೋದು ಕೈಕೆಯಿಗೆ ಅರ್ಥವಾಗಿತ್ತು. ಮೊದಲಿಗೆ ರಾಜಪಟ್ಟದ ಹುಳಬಿಟ್ಟ ಬಳಿಕ ಮಂಥರೆ ಇನ್ನೊಂದು ವಿಚಾರವನ್ನ ಕೂಡ ಕೈಕೆಯಿ ಮುಂದೆ ಪ್ರಸ್ತಾಪಿಸ್ತಾಳೆ. ಈಗ ನಮ್ಮಲ್ಲಿ ಹೇಗೆ ಆಸ್ತಿ ವಿಚಾರದಲ್ಲಿ ಕಾನೂನುಗಳಿವೆಯೋ ಅದೇ ರೀತಿ ರಾಮಾಯಣದ ಸಂದರ್ಭದಲ್ಲಿ ಅಂದ್ರೆ ತ್ರೇತಾಯುಗದಲ್ಲಿ ಅಂಥಾ ನಿಯಮಗಳಿದ್ದವು. ಆಗಿನ ರಾಜಕೀಯ ನಿಯಮದ ಪ್ರಕಾರ ಯಾವುದಾದ್ರೂ ಸಂಪತ್ತು ಅಥವಾ ಅಧಿಕಾರ 14 ವರ್ಷಗಳ ಕಾಲ ಒಬ್ಬರ ಬಳಿಯೇ ಇದ್ರೆ, ಅದನ್ನೇ ಒಬ್ಬರೇ ಅನುಭವಿಸಿದ್ರೆ ನಂತರ ಆ ಸಂಪತ್ತು ಶಾಶ್ವತವಾಗಿಯೇ ಅವರ ಬಳಿಯೇ ಉಳಿದುಕೊಳ್ಳುತ್ತೆ. ಬೇರೆ ಇನ್ಯಾರಿಗೂ ಕೂಡ ಆ ಸಂಪತ್ತನ್ನ ಅಥವಾ ಅಧಿಕಾರವನ್ನ ಪಡೆದುಕೊಳ್ಳುವ ಹಕ್ಕು ಇರೋದಿಲ್ಲ. ಇದನ್ನ ಕೇಳಿ ಕೈಕೆ ಒಂದು ನಿರ್ಧಾರಕ್ಕೆ ಬರ್ತಾಳೆ. ಪತಿ ದಶರಥನ ಜೊತೆಗೆ ರಾಮನಿಗೆ 14 ವರ್ಷಗಳ ಕಾಲ ವನವಾಸ ಅನುಭವಿಸುವಂತೆ ಸೂಚಿಸಬೇಕು. ಆಗ ತನ್ನ ಪುತ್ರ ಭರತ ಅಯೋಧ್ಯೆಯ ರಾಜನಾಗಬಹುದು. ಅತ್ತ ಶ್ರೀರಾಮ ಅಯೋಧ್ಯೆಯ ಮೇಲಿನ ತನ್ನ ಅಧಿಕಾರವನ್ನ ಕಳೆದುಕೊಳ್ತಾನೆ. ವನವಾಸ ಮುಗಿಸಿ ರಾಮ ಮರಳೋ ಹೊತ್ತಿಗೆ ಭರತ 14 ವರ್ಷಗಳ ಕಾಲ ಅಯೋಧ್ಯೆಯನ್ನ ಆಳಿರ್ತಾನೆ. ಆಗ ಅಯೋಧ್ಯೆಯ ರಾಜಪಟ್ಟ, ಶಾಸನ ಶಾಶ್ವತವಾಗಿ ಭರತನ ಪಾಲಾಗುತ್ತೆ ಅನ್ನೋದು ಕೈಕೆಯ ಲೆಕ್ಕಾಚಾರವಾಗಿತ್ತು. ಹೀಗಾಗಿ ಕೈಕೆಯ ಒತ್ತಾಯದ ಮೇರೆಗೆ ರಾಮನಿಗೆ 14 ವರ್ಷಗಳ ವನವಾಸದ ಶಿಕ್ಷೆ ನೀಡಲಾಗುತ್ತೆ. ಇದ್ರ ಜೊತೆಗೆ ರಾಮಾಯಣದ ಕಾಲದಲ್ಲಿ ಇನ್ನೊಂದು ನಂಬಿಕೆ ಕೂಡ ಇತ್ತು. ಯಾವುದೇ ವ್ಯಕ್ತಿ 14 ವರ್ಷಗಳ ಕಾಲ ದೈಹಿಕವಾಗಿ ಉಪಸ್ಥಿತಿ ಇಲ್ಲದೇ ಇದ್ರೆ, ಯಾರ ಜೊತೆಗೂ ಸಂಪರ್ಕದಲ್ಲೂ ಇರದಿದ್ರೆ, ಅಂದ್ರೆ ಕಣ್ಣಿಗೇ ಕಾಣಿಸದಿದ್ರೆ, ಅವರ ಬಗ್ಗೆ ಸುದ್ದಿಯೂ ಇರದಿದ್ರೆ ಅಂಥವರನ್ನ ಸತ್ತೇ ಹೋಗಿದ್ದಾರೆ ಅಂತಾ ಪರಿಗಣಿಸಲಾಗ್ತಿತ್ತು. ಹೀಗಾಗಿ 14 ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಿದ್ರೆ ರಾಮ ಮತ್ತೆ ಮರಳೋಕೆ ಸಾಧ್ಯವೇ ಇಲ್ಲ ಅಂತಾ ಕೈಕೆ ಅಂದುಕೊಂಡಿದ್ಲು. ಯಾಕಂದ್ರೆ, 14 ವರ್ಷ ಕಾಡಿನಲ್ಲಿ ಕಳೆಯೋದು ಅಂದ್ರೇನು ಸುಮ್ನೇನಾ. ಅಂದು ಇದ್ದ ಕಾಡಿನಲ್ಲಿ ಸಾಕಷ್ಟು ಕ್ರೂರ ಪ್ರಾಣಿಗಳಿದ್ವು, ಡಕಾಯಿತರಿದ್ರು. ಹೀಗಾಗಿ 14 ವರ್ಷ ಕಾಡಿನಲ್ಲಿ ಜೀವಂತವಾಗಿ ಉಳಿಯೋದು ಸಾಧ್ಯವೇ ಇರಲಿಲ್ಲ. ಹೀಗಾಗಿ ಮರಳಿ ಬರೋಕೆ ಹೇಗೆ ಸಾಧ್ಯ ಹೇಳಿ. ಹಾಗೆಯೇ ರಾಮ ಕೂಡ ಒಮ್ಮೆ ಕಾಡಿಗೆ ಹೋದ್ರೆ ಮತ್ತೆ ಅಯೋಧ್ಯೆಗೆ ವಾಪಸ್ ಆಗೋಕೆ ಸಾಧ್ಯವೇ ಇಲ್ಲ. ಇದ್ರಿಂದಾಗಿ ಭರತನಿಗೆ ಯಾವುದೇ ಅಡ್ಡಿ ಆತಂಕ ಇಲ್ಲದೆ 14 ವರ್ಷ ಅಯೋಧ್ಯೆಯನ್ನ ಆಳ್ವಿಕೆ ಮಾಡಬಹುದು. 14 ವರ್ಷಗಳ ಬಳಿಕ ರಾಮ ಮತ್ತೆ ಮರಳೋಕೆ ಸಾಧ್ಯವೇ ಇಲ್ಲ. ಹೀಗಾಗಿ ರಾಮ ಮೃತಪಟ್ಟಿದ್ದಾನೆ ಅಂತಾ ಭಾವಿಸಿ ಭರತ ತನ್ನ ಅಣ್ಣನಿಗೆ ಕೊನೆಯ ವಿಧಿವಿಧಾನಗಳನ್ನ ಪೂರೈಸಬಹುದು. ನಂತ್ರ ಭರತನೇ ಅನಭಿಷಕ್ತ ದೊರೆಯಾಗಿ ಆಳ್ವಿಕೆ ಮಾಡಬಹುದು ಅನ್ನೋದು ಕೈಕೆಯ ಭಾವನೆ ಆಗಿತ್ತು.

ಇಲ್ಲಿ ಇನ್ನೊಂದು ಕಥಾನಕ ಕೂಡ ಇದೆ. ರಾಜ ದಶರಥ ತಮ್ಮ ಗುರು ವಸಿಷ್ಠರ ಜೊತೆಗೆ ಚರ್ಚೆಸಿ ರಾಮನನ್ನ ಅಯೋಧ್ಯೆಯ ರಾಜನನ್ನಾಗಿ ಮಾಡುವ ನಿರ್ಧಾರ 14 ದಿನಗಳಲ್ಲಿ ಕೈಗೊಂಡಿದ್ರಂತೆ. ಯಾವಾಗ 14 ದಿನಗಳಲ್ಲಿ ರಾಮನನ್ನ ರಾಜನನ್ನಾಗಿ ಮಾಡುವ ನಿರ್ಧಾರಕ್ಕೆ ದಶರಥ ಬಂದ್ರೋ ಇದ್ರಿಂದ ಬೇಸತ್ತ ಕೈಕೆ ಆ 14 ದಿನಗಳು ನನಗೆ 14 ವರ್ಷಕ್ಕೆ ಸಮಾನ ಅಂತಾ ಪರಿಗಣಿಸ್ತಾಳೆ. ಈ ಕಾರಣಕ್ಕಾಗಿಯೂ ರಾಮನನ್ನ 14 ವರ್ಷಗಳ ಕಾಲ ವನವಾಸಕ್ಕೆ ಕಳುಹಿಸುತ್ತೇನೆ ಅಂತಾ ದಶರಥನ ಕೈಯಿಂದ ಕೈಕೆ ವಚನವನ್ನ ಕೂಡ ತೆಗೆದುಕೊಳ್ತಾಳೆ. ಅಂತೂ ಮಗ ಭರತನನ್ನ ಅಯೋಧ್ಯೆ ರಾಜನನ್ನಾಗಿ ಮಾಡಬೇಕು ಅನ್ನೋ ಒಂದೇ ಕಾರಣಕ್ಕೆ ರಾಮನನ್ನ 14 ವರ್ಷ ವನವಾಸಕ್ಕೆ ಕಳುಹಿಸಲಾಗುತ್ತೆ. ಆದ್ರೆ ಭರತನಿಗೆ ಈ ಅಧಿಕಾರ, ಅಂತಸ್ತು ಇದ್ಯಾವುದು ಕೂಡ ಬೇಕಾಗಿರಲಿಲ್ಲ. ಭರತನಿಗೆ ಅಣ್ಣ ರಾಮನಷ್ಟೇ ಬೇಕಿತ್ತು. ಭರತ ಮಾತ್ರ ಶ್ರೀರಾಮನನ್ನ ಅತಿಯಾಗಿ ಪ್ರೀತಿಸ್ತಿದ್ದ. ಎಷ್ಟರ ಮಟ್ಟಿಗೆ ಅಂದ್ರೆ, 14 ವರ್ಷ ರಾಮನನ್ನ ವನವಾಸಕ್ಕೆ ಕಳುಹಿಸಬೇಕು ಅನ್ನೋ ತನ್ನ ತಾಯಿ ಕೈಕೆಯ ಆಗ್ರಹವನ್ನ ಕೇಳಿ ಭರತ ಅಕ್ಷರಶ: ಕಂಗಾಲಾಗಿ ಹೋಗಿದ್ದ. ಯಾವೊಬ್ಬ ತಂದೆ ಕೂಡ ತನ್ನ ಮಗಳಿಗೆ ಇನ್ಮುಂದೆ ಕೈಕೆಯಿ ಅಂತಾ ನಾಮಕರಣ ಮಾಡಬಾರದು ಅಂತಾ ಆದೇಶಿಸಿದ್ದ. ಅಷ್ಟೇ ಅಲ್ಲ, ಅಣ್ಣ ಶ್ರೀರಾಮ 14 ವರ್ಷಗಳ ವನವಾಸದ ಬಳಿಕ ಅಯೋಧ್ಯೆಗೆ ಆಗಮಿಸುವಲ್ಲಿ ಒಂದು ನಿಮಿಷ ತಡ ಮಾಡಿದ್ರೂ ಕೂಡ ತಾನು ಹೊತ್ತಿ ಉರಿಯುತ್ತಿರುವ ಚಿತೆಗೆ ಹಾರಿ ಸಾಯುತ್ತೇನೆ ಅಂತಾ ಭರತ ರಾಮನ ಬಳಿ ಹೇಳಿರ್ತಾನೆ. ನೋಡಿ, ಭರತ ಇಲ್ಲಿ ಶ್ರೀರಾಮನ ಖಾಸ ತಮ್ಮ ಕೂಡ ಆಗಿರಲಿಲ್ಲ. ಬೇರೆ ಬೇರೆ ತಾಯಿಯ ಗರ್ಭದಿಂದ ಜನಿಸಿದ್ರೂ ಕೂಡ ಒಡಹುಟ್ಟಿದವರಿಂದಲೂ ಹೆಚ್ಚು ಪ್ರೀತಿ ಭರತನಿಗೆ ರಾಮನ ಮೇಲಿತ್ತು. ರಾಮನ ಅತೀ ದೊಡ್ಡ ಗುಣ ಏನಂದ್ರೆ, ಯಾರಲ್ಲೂ ಹುಳುಕನ್ನ ನೋಡ್ತಾ ಇರಲಿಲ್ಲ. ಯಾರ ಬಗ್ಗೆಯೂ ಕೆಟ್ಟದಾಗಿ ಯೋಚಿಸ್ತಿರಲಿಲ್ಲ.. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡ್ತಾ ಇರಲಿಲ್ಲ. ಆದ್ರೂ ಕೂಡ ಅಯೋಧ್ಯೆಯ ರಾಜನಾಗಿ ಪಟ್ಟಾಭಿಷೇಕವಾಗೋ ಮುನ್ನವೇ ಶ್ರೀರಾಮ ವನವಾಸಕ್ಕೆ ಹೋಗಬೇಕಾಗಿ ಬಂತು.

14 ವರ್ಷಗಳ ವನವಾಸ ಅನುಭವಿಸಿ ಅಯೋಧ್ಯೆಗೆ ಮರಳಿದ ರಾಮ ಮೊದಲಿಗೆ ಭೇಟಿಯಾಗಿದ್ದೇ ತನ್ನ 14 ವರ್ಷಗಳ ವನವಾಸಕ್ಕೆ ಕಾರಣವಾದ ಕೈಕೆಯನ್ನ. ಆದ್ರೆ ರಾಮನಿಗೆ ಕೈಕೆ ಮೇಲೆ ಸ್ವಲ್ಪವೂ ದ್ವೇಷವಿರಲಿಲ್ಲ.. ಸಿಟ್ಟು ಇರಲಿಲ್ಲ. ಕೈಕೆಯಿಂದಾಗಿಯೇ 14 ವರ್ಷ ಕಾಡಿನಲ್ಲಿರಬೇಕಾಯಿತು ಅನ್ನೋ ಸಣ್ಣ ಭಾವನೆ ಕೂಡ ರಾಮನಿಗೆ ಇರಲಿಲ್ಲ. ಆದ್ರೆ ಕೈಕೆ ಬಗ್ಗೆ ರಾಮನಿಗೆ ಕರುಣೆ ಇತ್ತು. ಯಾರು ನಮಗೆ ಕೆಟ್ಟದ್ದನ್ನ ಬಯಸ್ತಾರೋ, ಯಾರು ನಮಗೆ ಕೆಟ್ಟದ್ದನ್ನ ಮಾಡ್ತಾರೋ ಅವರ ಜೊತೆಗೂ ಉತ್ತಮವಾಗಿ ನಡೆದುಕೊಳ್ಳೋದೆ ಅತೀ ದೊಡ್ಡ ಧರ್ಮ ಅನ್ನೋದು ಇಲ್ಲಿರುವ ಶ್ರೀರಾಮನ ಸಂದೇಶ.

 

Sulekha