ಸ್ಯಾಮ್ಸನ್ Vs ಪರಾಗ್ Vs ಜೈಸ್ವಾಲ್ – ಮನೆಯೊಂದು 3 ಬಾಗಿಲಾದ ರಾಜಸ್ಥಾನ ರಾಯಲ್ಸ್!
ಕ್ಯಾಪ್ಟನ್ಸಿ ಕಿತ್ತಾಟಕ್ಕೆ ದ್ರಾವಿಡ್ ತಲೆದಂಡ?

ಸ್ಯಾಮ್ಸನ್ Vs ಪರಾಗ್ Vs ಜೈಸ್ವಾಲ್ – ಮನೆಯೊಂದು 3 ಬಾಗಿಲಾದ ರಾಜಸ್ಥಾನ ರಾಯಲ್ಸ್!ಕ್ಯಾಪ್ಟನ್ಸಿ ಕಿತ್ತಾಟಕ್ಕೆ ದ್ರಾವಿಡ್ ತಲೆದಂಡ?

ಟೀಂ ಇಂಡಿಯಾ ಕಂಡಂತಹ ಲೆಜೆಂಡರಿ ಪ್ಲೇಯರ್, ಭಾರತಕ್ಕೆ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸೂಪರ್ ಕೋಚ್. ಅದೆಲ್ಲಕ್ಕಿಂತ ಹೆಚ್ಚಾಗಿ ಇಡೀ ಕ್ರಿಕೆಟ್ ಜಗತ್ತು ಕಂಡ ಒನ್ ಆಫ್ ದಿ ಬೆಸ್ಟ್ ಹ್ಯೂಮನ್ ಬೀಯಿಂಗ್ ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್. ಬಹುಶಃ ದ್ರಾವಿಡ್​ರನ್ನ ಹತ್ತಿರದಿಂದ ನೋಡಿರೋರು ದ್ವೇಷ ಮಾಡೋಕೆ ಚಾನ್ಸೇ ಇಲ್ಲ ಅನ್ಸುತ್ತೆ. ಹೀಗಿರೋ ದ್ರಾವಿಡ್ ರಾಜಸ್ಥಾನ ರಾಯಲ್ಸ್ ತಂಡದಿಂದ ಸಡನ್ ಆಗಿ ಹೊರ ಬಂದಿದ್ದಾರೆ. ತಾವು ಕ್ಯಾಪ್ಟನ್ ಆಗಿ ಪ್ಲೇಯರ್ ಆಗಿ ಆಡಿದ ಹಳೇ ನಂಟಿನ ಟೀಂ ಬಿಟ್ಟು ಬರೋಕೆ ಕಾರಣಗಳು ಏನೂ ಅನ್ನೋದು ರಿವೀಲ್ ಆಗಿದೆ.

ಇದನ್ನೂ ಓದಿ : ABD ಟಾಪ್ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಗಿಲ್ಲ ಜಾಗ – ಪಾಕ್ ಮಾಜಿ ವೇಗಿಯೇ ವಿಲಿಯರ್ಸ್ ಅಚ್ಚುಮೆಚ್ಚು

‘ಸ್ಟ್ರಕ್ಚರಲ್ ರಿವ್ಯೂ’ ಸಭೆಯೇ ದ್ರಾವಿಡ್ ರಾಜೀನಾಮೆಗೆ ಕಾರಣ?

2024ರ ಟಿ-20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡದ ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿದ ರಾಹುಲ್ ದ್ರಾವಿಡ್ 2025ರ ಐಪಿಎಲ್​ಗೂ ರಾಜಸ್ಥಾನ ರಾಯಲ್ಸ್ ತಂಡದ ಹೆಡ್ ಕೋಚ್ ಆಗಿ ಸೆಲೆಕ್ಟ್ ಆಗಿದ್ರು. ಬಟ್ ಟೂರ್ನಿ ಆರಂಭಕ್ಕೂ ಮುನ್ನವೇ ಕಾಲಿಗೆ ಗಂಭೀರ ಗಾಯವಾಗಿ ವ್ಹೀಲ್ ಚೇರ್​ನಲ್ಲೇ ತರಬೇತಿ ನೀಡುವಂತಾಗಿತ್ತು. ಮತ್ತೊಂದೆಡೆ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಕೂಡ ಇಂಜುರಿ ಕಾರಣಕ್ಕೆ ಕೆಲ ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ರು. ಹೀಗೆ ತಂಡದೊಳಗಿನ ಕೆಲ ಬೆಳವಣಿಗೆಗಳ ಫಲವಾಗಿ ಫೀಲ್ಡ್​ನಲ್ಲಿ ನಿರೀಕ್ಷಿತ ಪ್ರದರ್ಶನ ಬರ್ಲಿಲ್ಲ. ಲೀಗ್ ಹಂತದಲ್ಲಿ 14 ಪಂದ್ಯಗಳ ಪೈಕಿ ಕೇವಲ ನಾಲ್ಕರಲ್ಲಿ ಮಾತ್ರವೇ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದ ಮೂಲಕ ಟೂರ್ನಿ ಮುಗಿಸಿತ್ತು. ಹೀಗಾಗಿ ರಾಜಸ್ಥಾನ ಫ್ರಾಂಚೈಸಿಯು ಕಳೆದ ಸೀಸನ್​ನ ಸ್ಟ್ರಕ್ಚರಲ್ ರಿವ್ಯೂ ಹಾಗೇ ನೆಕ್ಸ್​​ಟ್ ಸೀಸನ್​ಗೆ ಮಾಡಬೇಕಾದ ಚೇಂಜಸ್ ಬಗ್ಗೆ ಚರ್ಚೆ ಮಾಡೋಕೆ ಸಭೆ ಕರೆಯಲಾಗಿತ್ತು. ಆದ್ರೆ ಈ ಸಭೆಯೇ ಕೊನೆಗೆ ರಾಹುಲ್ ದ್ರಾವಿಡ್ ತಂಡ ತೊರೆಯುವಂತೆ ಮಾಡಿದೆ. ಮನೆಯೊಂದು ಮೂರು ಬಾಗಿಲು ಎನ್ನುವಂತೆ ಮೂವರು ಕ್ಯಾಪ್ಟನ್​ಗಳ ಹೆಸರಿನಿಂದ ಶುರುವಾದ ಗೊಂದಲ ತಂಡದೊಳಗಿನ ಹುಳುಕನ್ನ ಜಗಜ್ಜಾಹೀರು ಮಾಡಿದೆ.

ಕ್ಯಾಪ್ಟನ್ಸಿಗಾಗಿ ಸ್ಯಾಮ್ಸನ್, ಜೈಸ್ವಾಲ್ & ಪರಾಗ್ ಬಣ!

ಆರ್​ಆರ್​ನಲ್ಲಿ ಬಿರುಕು ಮೂಡೋಕೆ ಮುಖ್ಯ ಕಾರಣನೇ ಇದು. 2026ರ ಐಪಿಎಲ್ ಸೀಸನ್​ಗೆ ಯಾರನ್ನ ನಾಯಕನಾಗಿ ಆಡಿಸ್ಬೇಕು ಅನ್ನೋ ಬಗ್ಗೆ ಫ್ರಾಂಚೈಸಿಯಲ್ಲೇ ಅಸಮಾಧಾನ ಇದೆ.  ಒಂದು ಬಣ ಪ್ರಸ್ತುತ ತಂಡದ ಕ್ಯಾಪ್ಟನ್ ಆಗಿರುವ ಸಂಜು ಸ್ಯಾಮ್ಸನ್ ಅವರನ್ನೇ ನಾಯಕನಾಗಿ ಮುಂದುವರೆಸಬೇಕೆಂದು  ಪಟ್ಟು ಹಿಡಿದಿದ್ದಾರೆ. ಬಟ್ ಇದಕ್ಕೆ ಮತ್ತೊಂದು ಬಣ ತಗಾದೆ ತೆಗೆದಿದೆ. ರಿಯಾನ್ ಪರಾಗ್ ಅವರನ್ನು ನಾಯಕನಾಗಿ ಆಯ್ಕೆ ಮಾಡಬೇಕೆಂಬ ಡಿಮ್ಯಾಂಡ್ ಇಟ್ಟಿದೆ. ಪರಾಗ್ ಆಲ್​ರೌಂಡರ್ ಆಟಗಾರ, ಭವಿಷ್ಯದ ದೃಷ್ಟಿಯಲ್ಲಿ ಈಗಾಲೇ ನಾಯಕತ್ವ ನೀಡುವುದು ಉತ್ತಮ ಅನ್ನೋದು ಅವ್ರ ಸಜೇಷನ್. ಬಟ್ ಇನ್ನೊಂದು ಗುಂಪು ಯಶಸ್ವಿ ಜೈಸ್ವಾಲ್ ಮೇಲೆ ಒಲವು ಹೊಂದಿದೆ. ಜೈಸ್ವಾಲ್ ಅವರಿಗೆ ನಾಯಕತ್ವ ನೀಡಬೇಕೆಂದು ಆಗ್ರಹಿಸಿದ್ದಾರೆ. ಜೈಸ್ವಾಲ್ ಕಳೆದ ಕೆಲ ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಫ್ಯೂಚರ್ ಕ್ಯಾಪ್ಟನ್ ಆಗೋಕೆ ಬೆಸ್ಟ್ ಚಾಯ್ಸ್ ಅಂದಿದ್ದಾರೆ. ಇದೇ ಮೂರು ಬಣಗಳ ಕಿತ್ತಾಟವೇ ಗೊಂದಲಕ್ಕೆ ಕಾರಣವಾಗಿದೆ. ಇನ್ನು ದ್ರಾವಿಡ್ ಸಂಜುರನ್ನೇ ನಾಯಕನಾಗಿ ಮುಂದುವರಿಸಬೇಕು ಅನ್ನೋ ಅಭಿಪ್ರಾಯ ಮುಂದಿಟ್ಟಿದ್ದಾರೆ. ಆದ್ರೆ ಇದಕ್ಕೆ ಉಳಿದ ಎರಡು ಬಣಗಳು ಒಪ್ಪಿಕೊಂಡಿಲ್ಲ. ಸೋ ಅನಿವಾರ್ಯವಾಗಿ ದ್ರಾವಿಡ್ ತಂಡದಿಂದಲೇ ಹೊರ ಬಂದಿದ್ದಾರೆ. ಇದೆಲ್ಲ ಒಂದೆಡೆಯಾದ್ರೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ಕೂಡ ಇದೆ.

ರಾಜಸ್ಥಾನಕ್ಕೆ ಗುಡ್ ಬೈ ಹೇಳ್ತಾರಾ ಕುಮಾರ್ ಸಂಗಕ್ಕಾರ?

ಇನ್ನು ದ್ರಾವಿಡ್ ಜೊತೆ ರಾಜಸ್ಥಾನ್​ ರಾಯಲ್ಸ್​ ತಂಡದ ಕ್ರಿಕೆಟ್ ನಿರ್ದೇಶಕ ಹುದ್ದೆಗೆ ಕುಮಾರ್​ ಸಂಗಾಕ್ಕರ ಗುಡ್​ ಬೈ ಹೇಳೋಕೆ ಹೊರಟಿದ್ದಾರೆ ಅನ್ನೋ ಹೊಸ ಸುದ್ದಿ ಹೊರಬಿದ್ದಿದೆ. ರಾಜಸ್ಥಾನ ತಂಡಕ್ಕೆ ಕಳೆದ ವರ್ಷ ದ್ರಾವಿಡ್ ಹೆಡ್​ ಕೋಚ್​ ಆಗಿ​ ಬಂದ ಬಳಿಕ ಕುಮಾರ್​ ಸಂಗಾಕ್ಕರಗೆ ಹೆಚ್ಚಿನ ಸಿಕ್ಕಿರಲಿಲ್ಲ. ಮುಂದಿನ ಸೀಸನ್​​ಗೂ ಮುನ್ನ ಕುಮಾರ್​ ಸಂಗಾಕ್ಕರ ರಾಜಸ್ಥಾನ್​​ ರಾಯಲ್ಸ್​ ತೊರೆದು ಬೇರೊಂದು ಫ್ರಾಂಚೈಸಿ ಸೇರಲು ಚಿಂತಿಸಿದ್ದಾರೆ. ಹಾಗೇ ಸಂಜು ಸ್ಯಾಮ್ಸನ್ ಕೂಡ ಆರ್ ಆರ್ ಬಿಡೋದು ಬಹುತೇಕ ಪಕ್ಕಾ ಆದಂತಾಗಿದ್ದಾರೆ. ಈಗಾಗ್ಲೇ ಸಂಜು ಮೇಲೆ ಸಿಎಸ್​ಕೆ ಕಣ್ಣಿಟ್ಟಿದೆ. ಕೆಕೆಆರ್ ಕೂಡ ಗಾಳ ಹಾಕೋ ಸಾಧ್ಯತೆ ಇದೆ.

ರಾಜಸ್ಥಾನ ತಂಡದಲ್ಲಿ ಮುಂದಿನ ಸೀಸನ್​ಗೆ ದೊಡ್ಡ ದೊಡ್ಡ ತಲೆಗಳೇ ಉರುಳಲಿವೆ. ಅದ್ರಲ್ಲೂ ದ್ರಾವಿಡ್ ಆರ್ ಆರ್ ಬಿಟ್ಟಿದ್ದೇ ಸೋಜಿಗ ಅನ್ಸುತ್ತೆ. ಯಾಕಂದ್ರೆ ದ್ರಾವಿಡ್ ಮತ್ತು ರಾಜಸ್ಥಾನ ತಂಡದ ನಂಟು ನಿನ್ನೆ ಮೊನ್ನೆಯದಲ್ಲ. ಭಾರತೀಯ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ 2011 ರಲ್ಲಿ ರಾಯಲ್ಸ್ ತಂಡಕ್ಕೆ ಆಟಗಾರನಾಗಿ ಸೇರಿದ್ರು. ಬಳಿಕ 2012 ಮತ್ತು 2013 ರ ಎರಡು ಸೀಸನ್​ಗಳಲ್ಲಿ ನಾಯಕನಾಗಿ ಮುನ್ನಡೆಸಿದರು. ಇದೀಗ 2025ರ ಸೀಸನ್​ಗೆ ಮತ್ತೆ ಹೆಡ್​ಕೋಚ್ ಆಗಿ ವಾಪಸ್ ಆಗಿದ್ರು. ಆದ್ರೆ ಈ ಸಲ ಒಂದೇ ವರ್ಷಕ್ಕೆ ತಂಡದಿಂದ ಹೊರ ಬಂದಿದ್ದಾರೆ.

Shantha Kumari