ಪ್ರಧಾನಿ ಮೋದಿ ಪೋಖ್ರಾನ್‌ ವಿಸಿಟ್ ಮಾಡಿದ್ಯಾಕೆ? – ಪೋಖ್ರಾನ್ ಮೇಲೆ ಫೋಕಸ್ ಶಿಫ್ಟ್

ಪ್ರಧಾನಿ ಮೋದಿ ಪೋಖ್ರಾನ್‌ ವಿಸಿಟ್ ಮಾಡಿದ್ಯಾಕೆ? – ಪೋಖ್ರಾನ್ ಮೇಲೆ ಫೋಕಸ್ ಶಿಫ್ಟ್

ಪೋಖ್ರಾನ್‌.. ರಾಜಸ್ಥಾನದ ಜೈಸಲ್ಮೇರ್​ ನಗರದಿಂದ 112 ಕಿಲೋ ಮೀಟರ್ ದೂರದಲ್ಲಿರುವ ಈ ಮರುಭೂಮಿಯ ಜಾಗದ ಹೆಸರನ್ನ ಕೇಳಿದ್ರೇನೆ ಮೈ ರೋಮಾಂಚನವಾಗುತ್ತೆ. ಯಾಕಂದ್ರೆ 1999ರಲ್ಲಿ ಅಟಲ್​ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಮೊಟ್ಟ ಮೊದಲ ಬಾರಿಗೆ ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು ಇದೇ ಪೋಖ್ರಾಣ್​​ನಲ್ಲಿ. ಅಂದು ಇಡೀ ಜಗತ್ತನ್ನೇ ಭಾರತ ನಿಬ್ಬೆರಗಾಗಿಸಿತ್ತು. ಇಡೀ ಜಗತ್ತು ಭಾರತದತ್ತ ತಿರುಗಿ ನೋಡಿತ್ತು. ಬಗಲಲ್ಲೇ ಇರೋ ಶತ್ರು ಪಾಕಿಸ್ತಾನವಂತೂ ಥಂಡಾ ಹೊಡೆದಿತ್ತು. ಪೋಖ್ರಾನ್‌ ಅನ್ನೋದು ಭೂಪಟದಲ್ಲಿ ಹೊಸ ಸ್ಥಾನವನ್ನ ಪಡೆದುಕೊಂಡಿತ್ತು. ಫೋಖ್ರಾನ್‌ ಅನ್ನೋದು ಭಾರತದ ತಾಕತ್ತಿನ ಸಂಕೇತವಾಯ್ತು. ಅದೇ ಪೋಖ್ರಾನ್‌​ನಲ್ಲಿ ಮತ್ತೊಂದು ದೊಡ್ಡ ಬೆಳವಣಿಗೆಯಾಗುವ ಎಲ್ಲಾ ಲಕ್ಷಣಗಳು ಈಗ ಕಾಣ್ತಾ ಇದೆ. ಪ್ರಧಾನಿ ಮೋದಿ ಕೂಡ ಪೋಖ್ರಾಣ್​​ಗೆ ವಿಸಿಟ್ ಮಾಡಿದ್ದಾರೆ. ಮತ್ತೆ ಪೋಖ್ರಾನ್‌ ಮೇಲೆ ಫೋಕಸ್ ಶಿಫ್ಟ್ ಆಗ್ತಿರೋದ್ಯಾಕೆ? ಮೋದಿ ಅಲ್ಲಿಗೆ ಹೋಗಿರೋದ್ಯಾಕೆ? ಇವೆಲ್ಲದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಮುದ್ರದೊಳಗೆ ಸೀಕ್ರೆಟ್ ಕೇಬಲ್ ಕಟ್ ಮಾಡಿದ್ಯಾರು? – ಶುರುವಾಯ್ತಾ ಹೊಸ ಯುದ್ಧ?

ಇತ್ತೀಚೆಗಷ್ಟೇ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಫ್ ಮುನೀರ್ ಒಂದು ಮಾತು ಹೇಳಿದ್ರು. ಪ್ರಧಾನಿ ಮೋದಿ ಪೋಖ್ರಾನ್‌​ಗೆ ಭೇಟಿ ನೀಡ್ತಾರೆ. ಭಾರತ ತನ್ನ ಬ್ರಹ್ಮಾಸ್ತ್ರಗಳನ್ನ ಇಡೀ ಜಗತ್ತಿನ ಮುಂದೆ ಪ್ರದರ್ಶನ ಮಾಡುತ್ತೆ. ಭಾರತಕ್ಕೆ ಕೌಂಟರ್​ ಕೊಡೋಕೆ ಅಂತಾ ಪಾಕಿಸ್ತಾನ ಕೂಡ ಒಂದು ಪ್ಲ್ಯಾನ್ ಮಾಡ್ತಾ ಇದೆ ಅಂತಾ ಪಾಕ್ ಸೇನಾ ಮುಖ್ಯಸ್ಥ ಸ್ಟೇಟ್​​ಮೆಂಟ್ ಕೊಟ್ಟಿದ್ರು. ಹಾಗಿದ್ರೆ ನಿಜಕ್ಕೂ ಪೋಖ್ರಾಣ್​​ನಲ್ಲಿ ಏನಾಗ್ತಿದೆ. ಪೋಖ್ರಾಣ್​​ ಮೇಲೆ ಪಾಕಿಸ್ತಾನ ಈ ಲೆವೆಲ್​ಗೆ ಕಣ್ಣಿಟ್ಟಿರೋದ್ಯಾಕೆ ಅನ್ನೋದು ಇಲ್ಲಿರುವ ಕುತೂಹಲದ ಸಂಗತಿ. ಭಾರತದ ರಕ್ಷಣೆಯ ವಿಚಾರಕ್ಕೆ ಬರೋದಾದ್ರೆ ಪೋಖ್ರಾಣ್ ಅತ್ಯಂತ ಪ್ರಮುಖ ಮತ್ತು ಸೂಕ್ಷ್ಮವಾದ ಸ್ಟ್ರ್ಯಾಟಜಿಕಲ್ ಲೊಕೇಶನ್. ಇಲ್ಲಿ ಭಾರತ ಇದುವರೆಗೆ ಎರಡು ಬಾರಿ ಅಂಡರ್​​ಗ್ರೌಂಡ್ಸ್ ನ್ಯೂಕ್ಲಿಯರ್ ಟೆಸ್ಟ್ ನಡೆಸಿದೆ. ರಕ್ಷಣಾ ವಲಯಕ್ಕೆ ಸಂಬಂಧಿಸಿ ಭಾರತ ಯಾವುದೇ ರೀತಿಯ ದೊಡ್ಡ ನಿರ್ಧಾರ ಕೈಗೊಳ್ಳುತ್ತೆ ಅನ್ನೋದಾದ್ರೆ ಅದ್ರ ಕೇಂದ್ರ ಬಿಂದು ಪೋಖ್ರಾಣ್ ಆಗಿರುತ್ತೆ. ಇದೀಗ ಪೋಖ್ರಾಣ್​ನಲ್ಲೇ ನಮ್ಮ ಸೇನೆ ಭಾರತ್ ಶಕ್ತಿ ಹೆಸರಲ್ಲಿ ಸಮರಾಭ್ಯಾಸ ನಡೆಸಿದೆ. ಖುದ್ದು ಪ್ರಧಾನಿ ಮೋದಿ ಈ ಸಮರಾಭ್ಯಾಸವನ್ನ ವೀಕ್ಷಿಸಿದ್ದಾರೆ.

ಭೂಸೇನೆ, ವಾಯುಪಡೆ ಮತ್ತು ನೌಕಾಪಡೆ.. ಈ ಮೂರು ವಿಭಾಗಗಳು ಸಮರಾಭ್ಯಾಸ ನಡೆಸಿವೆ. ಇದ್ರ ಸ್ಪೆಷಾಲಿಟಿ ಏನಂದ್ರೆ, ಭಾರತದಲ್ಲೇ ನಿರ್ಮಾಣವಾದ ಶಸ್ತ್ರಾಸ್ತ್ರಗಳನ್ನ, ಯುದ್ಧ ವಿಮಾನ, ಯುದ್ಧ ನೌಕೆ, ಹೆಲಿಕಾಪ್ಟರ್​​ಗಳನ್ನ, ಯುದ್ಧ ಟ್ಯಾಂಕ್​ಗಳನ್ನ ಬಳಸಲಾಗಿದೆ. ಅಂದ್ರೆ ಮೇಡ್​ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಪವರ್​​ನ್ನ ಇಡೀ ಜಗತ್ತಿಗೆ ತೋರಿಸಲಾಗಿದೆ. ರಫೇಲ್, ಸುಖೋಯ್ ಫೈಟರ್​ ಜೆಟ್​ಗಳನ್ನ ಬಳಸದೆ ತೇಜಸ್, ಕೆ9 ವಜ್ರ, ಪಿನಾಕ ರಾಕೆಟ್​ಗಳ ಮೂಲಕ ಸಮರಾಭ್ಯಾಸ ನಡೆಸಲಾಗಿದೆ. ಹೀಗಾಗಿ ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರಗಳನ್ನ ಪರ್ಚೇಸ್​ ಮಾಡೋಕೆ ಪ್ಲ್ಯಾನ್ ಮಾಡ್ತಾ ಇರೋ ದೇಶಗಳು ಈ ಸಮರಾಭ್ಯಾಸವನ್ನ ಗಮನಿಸುತ್ತವೆ. ಇದು ಕೇವಲ ಶಕ್ತಿ ಪ್ರದರ್ಶನ ಮಾತ್ರವಲ್ಲ ಮಾರ್ಕೆಟಿಂಗ್ ಸ್ಟ್ರ್ಯಾಟಜಿ ಕೂಡ. ಈಗ ಭಾರತ ಕೂಡ ಶಸ್ತ್ರಾಸ್ತ್ರಗಳ ತಯಾರಿಕೆಗೆ ಹೆಚ್ಚಿನ ಮಹತ್ವ ನೀಡ್ತಾ ಇದೆ. ಹೊಸ ಹೊಸ ಟೆಕ್ನಾಜಿಗಳನ್ನ ಕಂಡು ಹಿಡಿದು ಮಿಲಿಟರಿಗೆ ಬೇಕಾದ ವೆಪನ್ಸ್, ವೆಹಿಕಲ್​ ಇವೆಲ್ಲವನ್ನೂ ಭಾರತದಲ್ಲೇ ನಿರ್ಮಾಣ ಮಾಡಲಾಗ್ತಿದೆ. ಈಗಾಗ್ಲೇ ನಮ್ಮಲ್ಲಿ ತಯಾರಾದ ಶಸ್ತ್ರಾಸ್ತ್ರಗಳನ್ನ ಖರೀದಿಸೋಕೆ ಹಲವು ದೇಶಗಳು ಮುಂದೆ ಬಂದಿವೆ. ಒಪ್ಪಂದಗಳಿಗೂ ಸಹಿ ಬಿದ್ದಿವೆ. ಇನ್ನೂ ಕೆಲ ದೇಶಗಳಿಗೆ ಶಸ್ತ್ರಾಸ್ತ್ರಗಳ ಸಾಗಾಣೆಯಾಗಿದೆ. ಹೀಗಾಗಿ ಸಮರಾಭ್ಯಾಸದ ಮೂಲಕ ಮೇಡ್ ಇನ್ ಇಂಡಿಯಾ ವೆಪನ್ ಸಿಸ್ಟಮ್​ನ್ನ ಇನ್ನಷ್ಟು ಪ್ರಚಾರಗೊಳಿಸುವ ಪ್ರಯತ್ನ ನಡೀತಿದೆ. ಸಾಲದ್ದಕ್ಕೆ ಇಂಡಿಯನ್ ಏರ್​ಫೋರ್ಸ್​​ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​​ನ್ನ ಬಳಸಲಾಗ್ತಿದ್ದು, ಸಮರಾಭ್ಯಾಸದ ವೇಳೆ ಅದನ್ನ ಕೂಡ ಡಿಸ್​ಪ್ಲೇ ಮಾಡಲಾಗಿದೆ. ಈ ಒಂದು ಸ್ಟೆಪ್ ಇದ್ಯಲ್ಲಾ..ಅಂದ್ರೆ ನಮ್ಮ ಸೇನೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನ್ನ ಬಳಸ್ತಾ ಇರೋದು ಮೇಡ್​ ಇನ್ ಇಂಡಿಯಾ ವೆಪನ್​ಗಳಿಗೆ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಬೂಸ್ಟ್ ಕೊಡೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ಈಗ ಪಾಕಿಸ್ತಾನದ ವಿಚಾರಕ್ಕೆ ಬರೋಣ. ಪೋಖ್ರಾಣ್​ನಲ್ಲಿ ನಡೆದ ಭಾರತದ ಸೇನಾ ಸಮರಾಭ್ಯಾಸವನ್ನ ಪಾಕಿಸ್ತಾನ ಹದ್ದಿನ ಕಣ್ಣಿಟ್ಟು ನೋಡಿದೆ. ಜೊತೆಗೆ ಪಾಕಿಸ್ತಾನಕ್ಕೆ ಸ್ವಲ್ಪ ಟೆನ್ಷನ್ ಕೂಡ ಶುರುವಾಗಿರೋದು ಸುಳ್ಳಲ್ಲ. ಯಾಕಂದ್ರೆ ಪೋಖ್ರಾನ್‌ ಪಾಕಿಸ್ತಾನದ ಗಡಿಗೆ ಸಮೀಪದಲ್ಲೇ ಇರೋ ಪ್ರದೇಶ. ಅಲ್ಲೇ ನಮ್ಮ ಸೇನೆ ಸಮರಾಭ್ಯಾಸ ನಡೆಸಿತು ಅಂದ್ರೆ ಸಹಜವಾಗಿಯೇ ಪಾಕಿಸ್ತಾನಕ್ಕೆ ಬಾಲ ಸುಟ್ಟ ಅನುಭವವಾಗಿಬಿಡುತ್ತೆ. ಭಾರತದ ಜೊತೆಗಿನ ಯುದ್ಧದಲ್ಲಿ ಮೂರು ಬಾರಿ ಸೋತು, ಮಗುಚಿ ಬಿದ್ರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ವರ್ತಿಸುವ ಪಾಕಿಸ್ತಾನ ಈಗ ತನ್ನ ಬುಡದಲ್ಲೇ ಇರುವ ಪೋಖ್ರಾನ್‌​ನಲ್ಲಿ ಭಾರತ ಸಮರಾಭ್ಯಾಸ ನಡೆಸ್ತಾನೆ, ನಾವು ಯುದ್ಧಕ್ಕೆ ರೆಡಿ ಅಂತಾ ಪಾಕ್ ಸೇನೆ ಹೇಳಿದೆ. ಫುಲ್ಲೀ ಪ್ರಿಪೇರ್ಡ್ ಅನ್ನೋ ಮಾತನ್ನ ಪಾಕಿಸ್ತಾನ ಸೇನಾ ಮುಖ್ಯಸ್ಥರು ಹೇಳಿದ್ದಾರೆ. ಅಷ್ಟೇ ಅಲ್ಲ, ಭಾರತದ ಗಡಿ ಬಳಿಯೇ ಪಾಕ್ ಸೇನೆ ಕೂಡ ಸಮರಾಭ್ಯಾಸ ನಡೆಸಿದೆ. ಶಂಶೀರೆ ಸಹಾರಾ ಹೆಸರಲ್ಲಿ ಪಾಕ್​ ಯುದ್ಧಾಭ್ಯಾಸ ನಡೆಸಿದ್ದು, ತನ್ನ ಬಳಿಯಿರೋ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನ ಪ್ರದರ್ಶಿಸಿದ್ದೀವಿ ಅಂತಾ ಹೇಳಿಕೊಂಡಿದೆ. ಆದ್ರೆ ಪಾಕ್ ಸೇನೆಗೆ ಸಂಬಂಧಿಸಿದ ಚಾನೆಲ್​ನಲ್ಲಿ ಹಾಕಲಾಗಿರೋ ಈ ಸಮರಾಭ್ಯಾಸದ ವಿಡಿಯೋದಲ್ಲಿ ಅಂಥಾ ಭಯಾನಕ ಅಸ್ತ್ರಗಳು ಯಾವುದೂ ಕಂಡಿಲ್ಲ. ತೆರೆದ ಮೈದಾನದಲ್ಲಿ ಒಂದಷ್ಟು ಬ್ಲಾಸ್ಟ್​ಗಳಾಗೋ ವಿಡಿಯೋ ಬಿಟ್ರೆ ಮತ್ತಿನ್ನೇನೂ ಇಲ್ಲ ಅದ್ರಲ್ಲಿ. ಅಂಥಾ ಬ್ಲಾಸ್ಟ್​​ಗಳನ್ನ ಪಾಕ್​ ಸೈನಿಕರು ಯಾಕೆ ಅವರ ಉಗ್ರರೇ ಮಾಡ್ತಾರೆ.

ಪಾಕಿಸ್ತಾನ ನಡೆಸಿರೋ ಸಮರಾಭ್ಯಾಸದ ಲೊಕೇಶನ್ ಮಾತ್ರ ತುಂಬಾ ಇಂಪಾರ್ಟೆಂಟ್ ಆಗುತ್ತೆ. ರಹೀಮ್ ಯಾರ್ ಖಾನ್ ಅನ್ನೋ ಜಾಗದಲ್ಲಿ ಪಾಕ್ ಸೇನೆ ಯುದ್ಧಾಭ್ಯಾಸ ನಡೆಸಿದೆ. ಇದು ನಮ್ಮ ರಾಜಸ್ಥಾನದ ಪೋಖ್ರಾಣ್​​​ಗೆ ಹತ್ತಿರದಲ್ಲೇ ಇದೆ. ಹಾಗಂತಾ ಭಾರತ ಇಲ್ಲಿ ಪಾಕಿಸ್ತಾನವನ್ನ ಗುರಿಯಾಗಿಸಿ ಸಮರಾಭ್ಯಾಸ ನಡೆಸಿಲ್ಲ. ನಮ್ಮ ರಕ್ಷಣಾ ಸಾಮರ್ಥ್ಯವನ್ನ, ಉಪಕರಣಗಳನ್ನ ತೋರಿಸೋದಷ್ಟು ಭಾರತದ ಉದ್ದೇಶ. ಆದ್ರೆ ಭಾರತ ತನ್ನ ಹಿತಾಸಕ್ತಿಗೋಸ್ಕರ ಏನೇ ಮಾಡಿದ್ರೂ ಪಾಕಿಸ್ತಾನ ಮಾತ್ರ ಅದನ್ನ ನೋಡೋ ರೀತಿಯೇ ಬೇರೆ. ನಮ್ಮನ್ನ ಹೆದರಿಸೋಕೆ, ನಮ್ಮನ್ನ ಟಾರ್ಗೆಟ್ ಮಾಡಿಯೇ ಭಾರತ ಸಮರಾಭ್ಯಾಸ ನಡೆಸಿದೆ ಅಂತಾ ಅಂದುಕೊಂಡೇ ಪಾಕ್ ಸೇನಾ ಮುಖ್ಯಸ್ಥ ನಾವು ಎಲ್ಲದಕ್ಕೂ ರೆಡಿಯಾಗಿದ್ದೇವೆ ಅಂತಾ ಪ್ರತಿಕ್ರಿಯಿಸಿದ್ದಾರೆ.

ಇಲ್ಲಿ ಇನ್ನೊಂದು ವಿಚಾರವನ್ನ ಕೂಡ ಹೇಳಲೇಬೇಕು. ಭಾರತ ಈಗಲೂ ಕೂಡ ಅತೀ ಹೆಚ್ಚು ಶಸ್ತ್ರಾಸ್ತ್ರಗಳನ್ನ ಆಮದು ಮಾಡಿಕೊಳ್ತಿರೋ ದೇಶಗಳ ಪೈಕೀ ನಾವು ಈಗಾಗಲೂ ಟಾಪ್ ಪೊಸೀಶನ್​ನಲ್ಲೇ ಇದ್ದಾರೆ. ಅಮೆರಿಕ ಮತ್ತು ಫ್ರಾನ್ಸ್ ಅತೀ ಹೆಚ್ಚು ವೆಪನ್​ಗಳನ್ನ ಸಪ್ಲೈ ಮಾಡೋ ದೇಶಗಳು. 2019ರಿಂದ 2023ರ ಅವಧಿಯಲ್ಲಿ ಈ ಎರಡೂ ದೇಶಗಳ ವೆಪನ್ ಸಪ್ಲೈ 34 ಪರ್ಸೆಂಟ್​​ನಿಂದ 42 ಪರ್ಸೆಂಟ್​​ನಷ್ಟು ಹೆಚ್ಚಾಗಿದೆ. ಆದ್ರೆ ರಷ್ಯಾದ ವೆಪನ್ ಎಕ್ಸ್​​ಪೋರ್ಟ್ 53 ಪರ್ಸೆಂಟ್​​ನಷ್ಟು ಕಡಿಮೆಯಾಗಿದೆ. ಸ್ಯಾಂಕ್ಷನ್​ಗಳಿಂದಾಗಿ ಈ ರೇಂಜಿಗೆ ಡೌನ್​ಫಾಲ್ ಆಗಿದೆ. ಇನ್ನು ಅತೀ ಹೆಚ್ಚು ವೆಪನ್ ಸಪ್ಲೈ ಆಗೋದೆ ಏಷ್ಯಾದ ರಾಷ್ಟ್ರಗಳಿಗೆ. ಈ ಪೈಕಿ ಭಾರತವೇ ಅತೀ ಹೆಚ್ಚು ಶಸ್ತ್ರಾಸ್ತ್ರಗಳನ್ನ ಖರೀದಿಸ್ತಾ ಇರೋದು.

ಇವಿಷ್ಟು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳೋದಾಯ್ತು. ಇನ್ನು ನಮ್ಮ ಎಕ್ಸ್​ಪೋರ್ಟ್ ಬಗ್ಗೆ ನೋಡೋಣ. ವರ್ಷದಿಂದ ವರ್ಷಕ್ಕೆ ನಮ್ಮ ಡಿಫೆನ್ಸ್ ಪ್ರೊಡಕ್ಷನ್ ಮತ್ತು ಎಕ್ಸ್​​ಪೋರ್ಟ್​ ಹೆಚ್ಚಾಗ್ತಾ ಇದೆ. 2023ರಲ್ಲಿ ಡಿಫೆನ್ಸ್ ಪ್ರೊಡಕ್ಷನ್ ಮೊತ್ತ 1 ಲಕ್ಷ ಕೋಟಿ ದಾಟಿದೆ. ಈ ಪೈಕಿ 16,000 ಕೋಟಿಯಷ್ಟು ಎಕ್ಸ್​ಪೋರ್ಟ್​ ಆಗಿದೆಯಷ್ಟೇ. ಅಂದ್ರೆ ನಮ್ಮಲ್ಲಿ ತಯಾರಾಗಿರೋ ದೊಡ್ಡ ದೊಡ್ಡ ಸೇನಾ ಸಾಮಗ್ರಿಗಳನ್ನ ಇನ್ನೂ ಕೂಡ ಯಾರೂ ಪರ್ಚೇಸ್ ಮಾಡಿಲ್ಲ. ಉದಾಹರಣೆಗೆ ತೇಜಸ್ ಫೈಟರ್​ ಜೆಟ್. ಭಾರತದಲ್ಲೇ ತಯಾರಾಗ್ತಾ ಇರೋದು. ಇಂಥಾ ಫೈಟರ್​ ಜೆಟ್​​ಗಳನ್ನ ಖರೀದಿಸೋಕೆ ಬೇರೆ ದೇಶಗಳು ಮುಂದಾದಾಗ ನಮ್ಮ ಎಕ್ಸ್​​ಪೋರ್ಟ್​ ಪ್ರಮಾಣ ಕೂಡ ಏರಿಕೆಯಾಗುತ್ತೆ. ಹೀಗಾಗಿಯೇ ಪೋಖ್ರಾಣ್​ನಲ್ಲಿ ನಡೆದ ಸಮರಾಭ್ಯಾಸದಲ್ಲಿ ಮೇಡ್ ಇನ್​ ಇಂಡಿಯಾ ವೆಪನ್​​ಗಳನ್ನ, ಫೈಟರ್​​ ಜೆಟ್​​ಗಳನ್ನ, ಯುದ್ಧ ಟ್ಯಾಂಕ್​​ಗಳನ್ನೇ ಬಳಸಿರೋದು.

ಒಂದ್ಕಡೆ ಸೇನಾ ಸಮರಾಭ್ಯಾಸ ನಡೆದ್ರೆ, ಮತ್ತೊಂದೆಡೆ ಭಾರತ ಅತ್ಯಂತ ಪವರ್​ಫುಲ್​ ಕ್ಷಿಪಣಿಯನ್ನ ಪರೀಕ್ಷಿಸಿದೆ. ಅಗ್ನಿ-5 ಮಿಸೈಲ್​ ಟೆಸ್ಟ್​​ ನಡೆಸಲಾಗಿದ್ದು, ಇದು ನಮ್ಮ ಸೇನಾ ಶಕ್ತಿಗೆ ಇನ್ನಷ್ಟು ತಾಕತ್ತು ತಂದುಕೊಟ್ಟಿರೋದ್ರಲ್ಲಿ ಯಾವುದೇ ಅನುಮಾನ ಇಲ್ಲ. 6000 ಕಿಲೋ ಮೀಟರ್​​ ದೂರದಲ್ಲಿರೋ ಟಾರ್ಗೆಟ್​ನ್ನ ಕೂಡ ನಾಶ ಮಾಡೋ ಸಾಮರ್ಥ್ಯ ಅಗ್ನಿ-5 ಮಿಸೈಲ್​​ಗಿದೆ. ಅಂದ್ರೆ ಇದು ಖಂಡಾಂತರ ಕ್ಷಿಪಣಿ. ಸಬ್​ಮರೀನ್​ನಿಂದಲೂ ಇದನ್ನ ಲಾಂಚ್ ಮಾಡಬಹುದು. ಅಮೆರಿಕ, ರಷ್ಯಾ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್​ ಬಳಿಕ ಈಗ ಭಾರತ ಮಾತ್ರ ಈ ರೀತಿಯ ಕ್ಷಿಪಣಿಯನ್ನ ಹೊಂದಿರೋದು. ಈವನ್ ಉತ್ತರ ಕೊರಿಯಾ ಬಳಿಯೂ ಖಂಡಾಂತರ ಕ್ಷಿಪಣಿ ಇದೆ. ಹಾಗಂತಾ ಸಬ್​ಮರೀನ್ ಮೂಲಕ ಲಾಂಚ್​ ಮಾಡೋ ಕ್ಷಿಪಣಿ ಅವರ ಜೊತೆಗಿಲ್ಲ. ಇನ್ನು ಭಾರತದ ಬಳಿ ಬ್ರಹ್ಮೋಸ್ ಸೇರಿದಂತೆ ಇತರೆ ಮಿಸೈಲ್​​ಗಳು ಕೂಡ ಇದ್ದಾವೆ. ಆದ್ರೆ ಶತ್ರು ದೇಶದ ಮಿಸೈಲ್ ಡಿಫೆನ್ಸ್ ಸಿಸ್ಟಮ್​ನ್ನ, ಅವರ ರೇಡಾರ್​​ನ್ನ ಕಣ್ತಪ್ಪಿಸಿ ಹೋಗುವಂಥಾ ಮಿಸೈಲ್​ಗಳನ್ನ ನಮ್ಮ ಬಳಿ ಇರಲಿಲ್ಲ. 2017ರಲ್ಲಿ ಪಾಕಿಸ್ತಾನ ಅಬದೀಲ್ ಹೆಸರಲಿ ಮಿಸೈಲ್ ಟೆಸ್ಟ್ ಮಾಡಿತ್ತು. ಆ ಮಿಸೈಲ್​ಗೆ ಭಾರತದ ಡಿಫೆನ್ಸ್ ಸಿಸ್ಟಮ್​ನ್ನ ಕೂಡ ಭೇದಿಸುವ ತಾಕತ್ತಿದೆ ಅಂತಾ ಹೇಳಿಕೊಂಡಿತ್ತು. ಆದ್ರೆ ಈ ಮಿಸೈಲ್​ನ್ನ ಅಂತಾರಾಷ್ಟ್ರೀಯ ಸಮುದಾಯ ಅಷ್ಟೊಂದು ಸೀರಿಯಸ್ ಆಗಿ ಪರಿಗಣಿಸಿಲ್ಲ. ಆದ್ರೀಗ ಭಾರತ ಟೆಸ್ಟ್​ ಮಾಡಿರೋ ಅಗ್ನಿ-5 ಮಿಸೈಲ್​ ಎದುರಾಳಿಯ ಡಿಫೆನ್ಸ್ ಸಿಸ್ಟಮ್​​ನ್ನ ಕೂಡ ನಾಶ ಮಾಡಿ, ಅವರ ಮಿಸೈಲ್​ನ್ನ ಕೂಡ ಹೊಡೆದುರುಳಿಸಿ ತನ್ನ ಟಾರ್ಗೆಟ್​ನತ್ತ ನುಗ್ಗುವ ಕೆಪಾಸಿಟಿ ಹೊಂದಿದೆ. ಹೀಗಾಗಿ ಅಗ್ನಿ-5 ಮಿಸೈಲ್​ನಿಂದ ಪಾಕಿಸ್ತಾನ ಮತ್ತು ಚೀನಾಗೆ ಮೆಸೇಜ್ ಪಾಸ್ ಮಾಡಿದಂತಾಗಿದೆ.

Sulekha