ನಂದಿನಿ ತುಪ್ಪ 90 ರೂ. ಹೆಚ್ಚಳ – ಹಾಲು ಉತ್ಪಾದಕರಿಗೆ ಅನುಕೂಲವಾಗುತ್ತದೆ ಎಂದು ಡಿಸಿಎಂ ಡಿಕೆಶಿ!

ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ನಿನ್ನೆಯಷ್ಟೇ ನಂದಿನಿ ತುಪ್ಪದ ದರ 90 ರೂಪಾಯಿ ಏರಿಕೆ ಮಾಡಲಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಇದ್ರ ನಡುವೆ ರಾಜ್ಯದಲ್ಲಿ ಮತ್ತೆ ನಂದಿನಿ ಹಾಲಿನ ದರ ಏರಿಕೆಯಾಗುವ ಬಗ್ಗೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಸುಳಿವು ನೀಡಿದ್ರು. ಇದೀಗ ಬೆಲೆ ಏರಿಕೆಯ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸಮರ್ಧಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿರೋ ಒಂಟಿ ಮಹಿಳೆಯರೇ ಟಾರ್ಗೆಟ್! – ಆಹ್ವಾನ ಪತ್ರಿಕೆ ಕೊಡಲು ಬಂದು ಚಿನ್ನಾಭರಣ ಕದ್ದೊಯ್ದರು
ಕರ್ನಾಟಕ ಹಾಲು ಮಹಾಮಂಡಲ ಜಿಎಸ್ ಟಿ ಬೆಲೆ ಇಳಿಕೆಯ ಬೆನ್ನಲ್ಲೇ ನಂದಿನಿ ತುಪ್ಪದ ಬೆಲೆಯನ್ನು 610 ರೂಪಾಯಿಗಳಿಂದ 700ರೂಪಾಯಿಗೆ ಹೆಚ್ಚಳ ಮಾಡಿದೆ. ಜೊತೆಗೆ ನಂದಿನಿ ಹಾಲಿನ ದರ ಹೆಚ್ಚಳವಾಗುವ ಬಗ್ಗೆ ಡಿಕೆ ಸುರೇಶ್ ಸುಳಿವು ನೀಡಿದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದನ್ನ ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದಿದ್ದಾರೆ.
ದರ ಹೆಚ್ಚಳದಿಂದ ರೈತರಿಗೆ ಒಳ್ಳೆದಾಗಲಿದೆ. ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಕೆಎಂಎಫ್ನ ಪ್ರಮುಖ ಉತ್ಪನ್ನವಾದ ನಂದಿನಿ ತುಪ್ಪದ ದರ ಹೆಚ್ಚಳವು ಹಾಲು ಉತ್ಪಾದಕರು ನ್ಯಾಯಯುತ ಬೆಲೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ನೋಡಿರಿ

