ಕೆ.ಎಲ್ ರಾಹುಲ್‌ಗೆ ಚಾನ್ಸ್ ಮಿಸ್ಸಾಗಿದ್ದೇಕೆ? – ಟಿ20 ಬೌಲಿಂಗ್ ಯುನಿಟ್ ವೀಕಾಯ್ತಾ?

ಕೆ.ಎಲ್ ರಾಹುಲ್‌ಗೆ ಚಾನ್ಸ್ ಮಿಸ್ಸಾಗಿದ್ದೇಕೆ? – ಟಿ20 ಬೌಲಿಂಗ್ ಯುನಿಟ್ ವೀಕಾಯ್ತಾ?

ಕೆಎಲ್‌ ರಾಹುಲ್‌ ಅವರನ್ನು ಟಿ20 ವಿಶ್ವಕಪ್‌ನ 15 ಜನರ ತಂಡದಿಂದ ಕೈಬಿಟ್ಟಿದ್ದು ನಿಜಕ್ಕೂ ಎಲ್ಲರ ಹುಬ್ಬೇರುವಂತೆ ಮಾಡಿದೆ.. ಬ್ಯಾಟ್ಸ್‌ಮನ್‌ಗಳ ಬದಲು ಹೆಚ್ಚುವರಿ ಬೌಲರ್‌ಗಳಿಗೆ ಆದ್ಯತೆ ಕೊಟ್ಟಿರುವ ಟೀಂ ಯಾವುದನ್ನು ಬ್ಯಾಲೆನ್ಸ್ ಮಾಡಲು ಹೊರಟಿದೆ ಎನ್ನುವುದೇ ಅರ್ಥವಾಗ್ತಿಲ್ಲ.. ಹಾರ್ದಿಕ್‌ ಪಾಂಡ್ಯಾರನ್ನು ವೈಸ್‌ ಕ್ಯಾಪ್ಟನ್ ಮಾಡಿರುವ ಟೀಂ ಇಂಡಿಯಾದ ಸೆಲೆಕ್ಟರ್ಸ್‌, ಫಾಸ್ಟ್‌ ಬೌಲಿಂಗ್ ವಿಚಾರದಲ್ಲಿ ಸಿರಾಜ್ ಮತ್ತು ಅರ್ಷದೀಪ್‌ ರನ್ನು ನೆಚ್ಚಿಕೊಂಡಿರುವುದು ಇನ್ನೊಂದು ಅಚ್ಚರಿಗೆ ಕಾರಣವಾಗಿದೆ..

ಇದನ್ನೂ ಓದಿ: 10 ಬಾಲ್.. 50 ರನ್.. ಸಿಡಿಲಬ್ಬರ! – ವಿಲ್ ಜಾಕ್ಸ್ 6 ನಿಮಿಷದ ಸೀಕ್ರೆಟ್

ಟೀಂ ಇಂಡಿಯಾದ ಸೆಲೆಕ್ಷನ್‌ ಲಿಸ್ಟ್‌ನಿಂದ ಔಟಾಗಿದ್ದಕ್ಕೋ ಏನೋ…  ಟೀಂ ಇಂಡಿಯಾದ ಕ್ಯಾಪ್ಟನ್‌ ಮತ್ತು ವೈಸ್‌ ಕ್ಯಾಪ್ಟನ್‌ ಇರುವ ತಂಡವನ್ನು ಕನ್ನಡಿಗ ಕೆ.ಎಲ್‌.ರಾಹುಲ್‌ ಮಕಾಡೆ ಮಲಗಿಸಿದ್ದಾರೆ.. ಇದರೊಂದಿಗೆ, ತಾನೇನು.. ತನ್ನ ಕ್ಯಾಪ್ಟೆನ್ಸಿ ಏನು ಎನ್ನುವುದನ್ನು ರಾಹುಲ್‌ ತೋರಿಸಿಕೊಟ್ಟಿದ್ದಾರೆ.. ಈಗ ಟೀಂ ಇಂಡಿಯಾದಲ್ಲಿ ಚಾನ್ಸ್‌ ಪಡೆಯಲು ರಾಹುಲ್‌ ಇನ್ನೇನು ಮಾಡಬೇಕು ಎನ್ನುವ ಪ್ರಶ್ನೆಯೂ ಇದೆ..  ಈ ಬಾರಿಯ ಐಪಿಎಲ್‌ನಲ್ಲಿ ಕೆ.ಎಲ್‌.ರಾಹುಲ್‌ ಲಕ್ನೋ ತಂಡವನ್ನು ಮುನ್ನಡೆಸಿದ ರೀತಿ, ಹಾಗೂ ಪ್ರತಿ ಪಂದ್ಯದಲ್ಲೂ ತಂಡದ ಬ್ಯಾಟಿಂಗ್‌ ಬೆನ್ನುಲೆಬಾಗಿ ನಿಂತಿರುವುದನ್ನು ನೋಡಿದ್ರೆ ಅವರು ಚಾನ್ಸ್‌ ಮಿಸ್‌ ಮಾಡ್ಕೊಳ್ಳಲು ಸಾಧ್ಯವೇ ಇರಲಿಲ್ಲ.. ಐಪಿಎಲ್‌ ನಲ್ಲಿ ರಾಹುಲ್‌ 10 ಇನ್ನಿಂಗ್ಸ್‌ ಗಳಲ್ಲಿ 406 ರನ್‌ ಬಾರಿಸಿದ್ದಾರೆ. 40ರ ಆ್ಯವರೇಜ್‌ನಲ್ಲಿ ಬ್ಯಾಟ್‌ ಬೀಸಿರುವ ರಾಹುಲ್‌ ಅವರ ಸ್ಟ್ರೈಕ್ ರೇಟ್‌ ಕೂಡ 140ಕ್ಕಿಂತ ಮೇಲಿದೆ.. ಒಬ್ಬ ಬ್ಯಾಟ್ಸ್‌ಮನ್‌ ಇದಕ್ಕಿಂತ ಉತ್ತಮ ಬ್ಯಾಟಿಂಗ್‌ ಫರ್ಫಾರ್ಮೆನ್ಸ್‌ ಇನ್ನೇನು ತೋರಿಸಬೇಕು ಅನ್ನೋದೇ ಅರ್ಥವಾಗ್ತಿಲ್ಲ.. ಓಪನಿಂಗ್ ಬ್ಯಾಟ್ಸ್‌ಮನ್‌ ಜೊತೆಗೆ ಕೀಪಿಂಗ್‌ ಮೂಲಕವೂ ತಂಡಕ್ಕೆ ಕೊಡುಗೆ ನೀಡುವ ಆಟಗಾರ ಅಂದ್ರೆ ಅದು ರಾಹುಲ್‌.. ಈಗ ಟೀಂ ಇಂಡಿಯಾ ರಾಹುಲ್‌ ಬದಲು ಯಶಸ್ವಿ ಜೈಸ್ವಾಲ್‌ ಅವರನ್ನೇ ಆಯ್ಕೆ ಮಾಡಿಕೊಂಡಿದೆ.. ಆದ್ರೆ  ಜೈಸ್ವಾಲ್‌ ಈ ಐಪಿಎಲ್‌ನಲ್ಲಿ 9 ಇನ್ನಿಂಗ್ಸ್‌ಗಳಲ್ಲಿ ಗಳಿಸಿರೋದು ಕೇವಲ 249 ರನ್‌ ಮಾತ್ರ.. ಬ್ಯಾಟಿಂಗ್‌ ಆ್ಯವರೇಜ್‌ ಕೂಡ ಕೇವಲ 31ಕ್ಕಿಂತ ಸ್ವಲ್ಪ ಮೇಲಿದೆ.. ಅದರಲ್ಲೂ ಒಂದು ಸೆಂಚುರಿ ಹೊರತುಪಡಿಸಿದ್ರೆ, ಜೈಸ್ವಾಲ್‌ ಈ ಬಾರಿಯ ಐಪಿಎಲ್‌ನಲ್ಲಿ ವಿಫಲವಾಗಿದ್ದೇ ಹೆಚ್ಚು.. ಆದ್ರೆ ಅನುಭವಿ ರಾಹುಲ್‌ ಬದಲು ಯಂಗ್‌ಸ್ಟರ್‌ ಮತ್ತು ಲೆಫ್ಟ್‌ ರೈಟ್‌ ಕಾಂಬಿನೇಷನ್‌ ಕಾರಣಕ್ಕೆ ಜೈಸ್ವಾಲ್‌ ಅವರನ್ನು ಆಯ್ಕೆ ಮಾಡಿದಂತಿದೆ.. ಇಲ್ಲದೇ ಹೋದ್ರೆ ರಾಹುಲ್‌ ಜೊತೆಗೆ ರುತುರಾಜ್‌ ಗಾಯಕ್ವಾಡ್‌ ಕೂಡ ಓಪನಿಂಗ್‌ ವಿಚಾರದಲ್ಲಿ ಬೆಸ್ಟ್‌ ಆಪ್ಷನ್‌ ಆಗಿದ್ದರು.. ಆದ್ರೆ ಐಪಿಎಲ್‌ನಲ್ಲಿ ಸತತವಾಗಿ ಒಳ್ಳೆಯ ಬ್ಯಾಟಿಂಗ್‌ ಮಾಡ್ತಿದ್ದರೂ ರುತುರಾಜ್‌ಗೂ ಚಾನ್ಸ್‌ ಮಿಸ್ಸಾಗಿದೆ..

ಇನ್ನು ರಿಂಕು ಸಿಂಗ್‌ ಒಬ್ಬ ಫಿನಿಷರ್‌ ಆಗಿ ತಂಡದಲ್ಲಿಸ್ಥಾನ ಪಡೆಯಬಹುದು ಎಂಬ ನಿರೀಕ್ಷೆಯಿತ್ತು. ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಾಗಲೂ ರಿಂಕು ಅದನ್ನು ಚೆನ್ನಾಗಿಯೇ ಬಳಸಿಕೊಂಡಿದ್ದರು.. ಅಲ್ಲದೆ ಈ ಐಪಿಎಲ್‌ನಲ್ಲೂ ಅವರ ಸ್ಟ್ರೈಕ್ ರೇಟ್‌ ಚೆನ್ನಾಗಿಯೇ ಇದೆ.. ಬಹುತೇಕ ಶಿವಂ ದುಬೆ ಹಾಗೂ ರಿಷಬ್ ಪಂತ್‌ ಪ್ಲೇಯಿಂಗ್‌ ಲೆವೆನ್‌ನಲ್ಲಿ ಚಾನ್ಸ್ ಪಡೆದರೆ, ರಿಂಕು ಗೆ ಅವಕಾಶ ಕೊಡುವುದು ಕಷ್ಟ ಆಗಬಹುದು.. ಇದೇ ಕಾರಣದಿಂದ ರಿಂಕು ಸಿಂಗ್‌ಗೆ ಅವಕಾಶ ನೀಡದಿರುವ ತೀರ್ಮಾನಕ್ಕೆ ಸೆಲೆಕ್ಟರ್ಸ್‌ ಬಂದಂತಿದೆ.. ರಿಷಬ್‌,  ದುಬೆ ಹಾಗೂ ಹಾರ್ದಿಕ್‌ ಬೆಸ್ಟ್‌ ಫಿನಿಷರ್‌ ರೋಲ್‌ ನಿಭಾಯಿಸಬೇಕಿದೆ.. ಆದ್ರೆ ಇದರಲ್ಲಿ ರಿಷಬ್‌ ಬಿಟ್ಟರೆ ಉಳಿದವರು ಅಂತಾರಾಷ್ಟ್ರೀಯ ಮ್ಯಾಚ್‌ನಲ್ಲಿ ಎಷ್ಟರ ಮಟ್ಟಿಗೆ ಜವಾಬ್ದಾರಿ ನಿಭಾಯಿಸುತ್ತಾರೆ ಎಂಬ ಕುತೂಹಲ ಇದ್ದೇ ಇದೆ..

ಇನ್ನು ಬೌಲಿಂಗ್‌ ಯುನಿಟ್‌ಗೆ ಬಂದಾಗ, ಟೀಂ ಇಂಡಿಯಾದ ಸೆಲೆಕ್ಟರ್ಸ್‌ ಸ್ಪಿನ್‌ ಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದಾರೆ.. ಯುಎಸ್‌ ಮತ್ತು ವೆಸ್ಟಿಂಡೀಸ್‌ನಲ್ಲಿ ಮ್ಯಾಚ್‌ಗಳು ನಡೆಯೋದ್ರಿಂದ ಸ್ಲೋ ಪಿಚ್‌ ಹಾಗೂ ಫ್ಲಾಟ್‌ ಪಿಚ್‌ಗಳು ಹೆಚ್ಚಾಗಿರಬಹುದು.. ಇದೇ ಕಾರಣಕ್ಕೆ ಪಿಚ್‌ಗೆ ತಕ್ಕಂತೆ ಪ್ಲ್ಯಾನ್‌ ರೂಪಿಸಲು, ಕುಲ್ದೀಪ್‌ ಯಾದವ್‌, ಯುಜವೇಂದ್ರ ಚಹಾಲ್‌. ಅಕ್ಷರ್‌ ಪಟೇಲ್ ಹಾಗೂ ರವೀಂದ್ರ ಜಡೇಜ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.. ಇದರಲ್ಲಿ ಜಡೇಡ ಪರ್ಮನೆಂಟ್‌ ಸ್ಥಾನ ಪಡೆದರೆ, ಇನ್ನೊಬ್ಬ ಸ್ಪಿನ್ನರ್‌ ವಿಚಾರದಲ್ಲಿ ಕುಲ್ದೀಪ್ ಹಾಗೂ ಚಹಾಲ್‌ ನಡುವೆ ಹೆಚ್ಚು ಕಾಂಪಿಟೀಷನ್‌ ನಡೆಯಬಹುದು..

ಆದ್ರೆ ಫಾಸ್ಟ್‌ ಬೌಲಿಂಗ್ ಯುನಿಟ್‌ ಮತ್ತೊಮ್ಮೆ ಕೇವಲ ಬುಮ್ರಾರನ್ನು ನೆಚ್ಚಿಕೊಂಡಿದೆ.. ಬುಮ್ರಾ ಜೊತೆಗೆ ಅರ್ಷದೀಪ್‌ ಮತ್ತು  ಮೊಹಮದ್ ಸಿರಾಜ್‌ ಸ್ಥಾನ ಪಡೆದಿರೋದು ಮೇಲ್ನೋಟಕ್ಕೆ ಸರಿ ಅನ್ನಿಸಿದರೂ ಇವರಲ್ಲಿ ಡೆತ್‌ ಓವರ್‌ ಯಾರು ಮಾಡ್ತಾರೆ ಎಂಬ ಪ್ರಶ್ನೆಯಿದೆ.. ಡೆತ್‌ ಓವರ್‌ನಲ್ಲಿ ಬುಮ್ರಾ ಬಿಟ್ಟರೆ, ಅರ್ಷದೀಪ್‌ ಹಾಗೂ ಸಿರಾಜ್‌ರನ್ನು ನೆಚ್ಚಿಕೊಳ್ಳುವುದು ಕಷ್ಟ.. ಯಂಗ್‌ ಪ್ಲೇಯರ್‌ ಮಯಂಕ್‌ ಯಾದವ್‌ ಈ ಸ್ಥಾನಕ್ಕೆ ಆಯ್ಕೆಯಾಗಬಹುದು ಎಂಬ ನಿರೀಕ್ಷೆಯಿತ್ತು.. ಅವರು ತೀರಾ ಅನನುಭವಿ ಅನ್ನಿಸಿದರೆ, ನಟರಾಜನ್‌,  ಸಂದೀಪ್‌ ಶರ್ಮಾ ಹಾಗೂ ಆವೇಶ್‌ ಖಾನ್‌.. ಈ ಮೂವರಲ್ಲಿ ಒಬ್ಬರಿಗೆ ಚಾನ್ಸ್‌ ಸಿಗಬೇಕಿತ್ತು.. ಡೆತ್‌ ಓವರ್‌ನಲ್ಲಿ ಪ್ರೆಷರ್ ಹ್ಯಾಂಡಲ್‌ ಮಾಡೋದು ತುಂಬಾನೇ ಮುಖ್ಯ.. ಈ ಮೂವರು ಅಂತಹ ಸ್ಥಿತಿಯಲ್ಲಿ ಹೆಚ್ಚು ಎಫೆಕ್ಟಿವ್‌ ಬೌಲರ್‌ ಆಗುವ ನಿರೀಕ್ಷೆಯಿತ್ತು..

ಇನ್ನು ಮುಂಬೈ ಇಂಡಿಯನ್ಸ್‌ ಐಪಿಎಲ್‌ನಲ್ಲಿ ಪ್ಲಾಫ್‌ ಆದರೂ ಸೆಲೆಕ್ಟರ್ಸ್‌ ಮಾತ್ರ ಹಾರ್ದಿಕ್‌ ಪಾಂಡ್ಯಾಗೆ ಉಪನಾಯಕನ ಪಟ್ಟ ಕಟ್ಟಿದ್ದಾರೆ.. ಐಪಿಎಲ್‌ನಲ್ಲಿ ಹೇಳಿಕೊಳ್ಳುವ ಸಾಧನೆ ಮಾಡದಿದ್ದರೂ ಪಾಂಡ್ಯಾ, ಯಾವುದೇ ಕ್ಷಣದಲ್ಲೂ ಸಿಡಿಯಬಲ್ಲ ಆಟಗಾರ.. ಫಾಸ್ಟ್‌ ಬೌಲಿಂಗ್‌ ಯುನಿಟ್‌ನಲ್ಲೂ ಪಾಂಡ್ಯಾ ಮಹತ್ವದ ಪಾತ್ರ ನಿಭಾಯಿಸಬಹುದು.. ಏನೇ ಆದ್ರೂ ಹಿಟ್‌ ಮ್ಯಾನ್‌ ಸೇನೆ ಈಗ ಸಜ್ಜಾಗಿದೆ.. ಯಾರು ಟೀಂಗೆ ಸೇರಿದ್ದಾರೆ.. ಯಾರಿಗೆ ಚಾನ್ಸ್‌ ಮಿಸ್ಸಾಗಿದೆ ಎನ್ನುವ ಚರ್ಚೆ ಇದ್ದಿದ್ದೇ.. ಕಡೆಗೂ ಸಂಜೂ ಸ್ಯಾಮ್ಸನ್‌ಗೆ ಟೀಂನಲ್ಲಿ ಅವಕಾಶ ಸಿಕ್ಕರೂ ಪ್ಲೇಯಿಂಗ್‌ ಲೆವೆನ್‌ನಲ್ಲಿ ಸ್ಥಾನ ಸಿಗುತ್ತದಾ ಎಂದು ನೋಡಬೇಕಿದೆ.. ಒಂದು ವೇಳೆ ಜೈಸ್ವಾಲ್‌ ಫೇಲ್ ಆದ್ರೆ ಸಂಜು ಓಪನರ್‌ ಆಗಿಯೂ ಟೀಂನಲ್ಲಿ ಸ್ಥಾನ ಪಡೆಯಬಹುದು.. ಇದೇನೇ ಇದ್ದರೂ ರೋಹಿತ್‌ ನೇತೃತ್ವದಲ್ಲಿ ಟೀಂ ಇಂಡಿಯಾ ಈ ಬಾರಿಯಾದರೂ ಟಿ20 ವಿಶ್ವಕಪ್ ಗೆದ್ದು ಬರಲಿ.. ಏಕದಿನ ವಿಶ್ವಕಪ್‌ನ ಫೈನಲ್‌ ನಲ್ಲಿ ಮುಗ್ಗರಿಸುವ ಮೂಲಕ ಐಸಿಸಿ ಟೈಟಲ್ ಗೆಲ್ಲುವ ರೋಹಿತ್ ಕನಸು ಕನಸಾಗಿಯೇ ಉಳಿದಿದೆ.. ಟೀಂ ಇಂಡಿಯಾಗೆ ಎಲ್ಲವನ್ನೂ ಕೊಟ್ಟಿರುವ ಹಾಗೂ ಯುವ ಆಟಗಾರರನ್ನು ಪ್ರೋತ್ಸಾಹಿಸುತ್ತಲೇ ತಂಡವನ್ನು ಬ್ಯಾಲೆನ್ಸ್‌ ಮಾಡುವ ರೋಹಿತ್‌ ಒಂದಾದರೂ ಕಪ್ ಗೆಲ್ಲಲೇಬೇಕು ಎನ್ನುವುದು ಕೋಟಿ ಕೋಟಿ ಕ್ರಿಕೆಟ್‌ ಅಭಿಮಾನಿಗಳ ಹಾರೈಕೆ..

Sulekha

Leave a Reply

Your email address will not be published. Required fields are marked *