ಮಾರಿಷಸ್‌ನಲ್ಲಿ ರನ್‌ ವೇ ನಿರ್ಮಿಸಿದ್ಯಾಕೆ ಭಾರತ? – ಮಾಲ್ಡೀವ್ಸ್‌ಗೆ ಭಾರತ ಕೊಟ್ಟ ಗುನ್ನಾ ಹೇಗಿದೆ?

ಮಾರಿಷಸ್‌ನಲ್ಲಿ ರನ್‌ ವೇ ನಿರ್ಮಿಸಿದ್ಯಾಕೆ ಭಾರತ? – ಮಾಲ್ಡೀವ್ಸ್‌ಗೆ ಭಾರತ ಕೊಟ್ಟ ಗುನ್ನಾ ಹೇಗಿದೆ?

ಮಾಲ್ಡೀವ್ಸ್ ಮತ್ತು ಚೀನಾ ಎರಡೂ ದೇಶಗಳು ಒಟ್ಟಾಗಿ ಈಗಾಗ್ಲೇ ಭಾರತಕ್ಕೆ ಕಾಟ ಕೊಡೋಕೆ ಶುರು ಮಾಡಿವೆ. ಮೊಹಮ್ಮದ್ ಮೊಯಿಜು ಅಧ್ಯಕ್ಷನಾಗುತ್ತಲೇ ಮಾಲ್ಡೀವ್ಸ್ ಕಂಪ್ಲೀಟ್ ಆಗಿ ಚೀನಾದ ಕೈಗೊಂಬೆಯಾಗಿದೆ. ಸಾಲ ಕೊಟ್ಟು ಕೊಟ್ಟು ಇಡೀ ಮಾಲ್ಡೀವ್ಸ್ ದ್ವೀಪವನ್ನೇ ಕ್ಸಿ ಜಿನ್​ ಪಿಂಗ್ ಮುಳುಗಿಸ್ತಾ ಇದ್ದಾನೆ. ಮತ್ತೊಂದೆಡೆ ಮಾಲ್ಡೀವ್ಸ್​ ಒತ್ತಾಯದ ಮೇರೆಗೆ ಅಲ್ಲಿದ್ದ ನಮ್ಮ ಸೈನಿಕರನ್ನ ಕೂಡ ವಾಪಸ್ ಕರೆಸಿಕೊಳ್ಳಲಾಗ್ತಿದೆ.. ಮೇ 10ರೊಳಗೆ ಜಾಗ ಖಾಲಿ ಮಾಡಬೇಕು ಅಂತಾ ಮೊಯಿಜು ಗಡುವು ಬೇರೆ ನೀಡಿದ್ದಾನೆ. ನಮ್ಮ ಸೈನಿಕರು ಇತ್ತ ಬರುತ್ತಲೇ, ಚೀನಾದ ಗೂಢಾಚಾರಿಕೆ ಹಡಗು ಮಾಲ್ಡೀವ್ಸ್​​ನಲ್ಲಿ ಬೀಡುಬಿಟ್ಟಿದೆ. ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸೇನೆಗೆ ಸಂಬಂಧಿಸಿಯೂ ಮಾಲ್ಡೀವ್ಸ್ ಈಗ ಚೀನಾದ ಕಂಟ್ರೋಲ್​ನಲ್ಲೇ ಇದೆ. ಭಾರತದ ಪಾಲಿಗಂತೂ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಹೀಗಾಗಿ ಭಾರತ ಕೂಡ ಈಗ ಕೌಂಟರ್​ ಸ್ಟ್ರ್ಯಾಟಜಿಗಳನ್ನ ಮಾಡ್ತಿದೆ. ಮಾಲ್ಡೀವ್ಸ್​ಗೆ ಪರ್ಯಾಯವಾಗಿ ನಮ್ಮ ಹತ್ತಿರದಲ್ಲಿರೋ ಇತರೆ ದ್ವೀಪ ರಾಷ್ಟ್ರಗಳ ಜೊತೆ ಕೈಜೋಡಿಸಿ ಪಕ್ಕಾ ಪ್ಲ್ಯಾನ್ ಮಾಡ್ತಿದೆ. ಕೆಲ ದಿನಗಳ ಹಿಂದೆ ಶ್ರೀಲಂಕಾಗೆ ಸಬ್​​ಮರೀನ್ ಕಳುಹಿಸಿದ್ದ ಭಾರತ, ಈಗ ಮಾರಿಷಸ್​ನಲ್ಲಿ ಒಂದು ಏರ್​ಸ್ಟ್ರಿಪ್​ನ್ನ ನಿರ್ಮಾಣ ಮಾಡಿದೆ. ಹಾಗಿದ್ರೆ ಮಾರಿಷಸ್ ಮೂಲಕ ಮಾಲ್ಡೀವ್ಸ್​ಗೆ ಭಾರತ ಯಾವ ರೀತಿ ಗುನ್ನಾ ಕೊಡೋಕೆ ಮುಂದಾಗಿದೆ ಎಂಬ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮಾಲ್ಡೀವ್ಸ್‌ನಲ್ಲಿ ಚೀನಾ ಬೇಹುಗಾರಿಕಾ ಹಡಗು – ‘ದೋಸ್ತಿ-16’ ಹೆಸರಿನಲ್ಲಿ ಜಂಟಿ ಸಮರಾಭ್ಯಾಸ ಆರಂಭಿಸಿದ ಭಾರತ, ಶ್ರೀಲಂಕಾ, ಮಾಲ್ಡೀವ್ಸ್‌!

ಭಾರತ ಮತ್ತು ಮಾರಿಷಸ್ ಮಧ್ಯೆ 5,110 ಕಿಲೋ ಮೀಟರ್ ಡಿಸ್ಟೆನ್ಸ್ ಇದೆ. ಈ ಮಾರಿಷಸ್​​ನಲ್ಲಿ ಅಗಲೆಗಾ ಅನ್ನೋ ಒಂದು ಐಲ್ಯಾಂಡ್ ಇದೆ. ಈ ಐಲ್ಯಾಂಡ್​ನಲ್ಲೇ ಭಾರತ ಹೊಸ ಏರ್​​​ಸ್ಟ್ರಿಪ್​​ ನಿರ್ಮಾಣ ಮಾಡಿದೆ. ಭದ್ರತಾ ಕಾರಣಕ್ಕೋಸ್ಕರವೇ ಈ ಏರ್​ಸ್ಟ್ರಿಪ್​​ನ್ನ ನಿರ್ಮಿಸಲಾಗಿದ್ದು ಹೀಗಾಗಿ ಇದು ಭಾರಿ ಮಹತ್ವ ಪಡೆದುಕೊಂಡಿದೆ. ಹಾಗಿದ್ರೆ ಈ ಏರ್​ಸ್ಟ್ರಿಪ್ ಅಷ್ಟೊಂದು ಮಹತ್ವ ಪಡೆದುಕೊಂಡಿರೋದು ಯಾಕೆ ಅನ್ನೋ ಬಗ್ಗೆ ವಿವರಿಸ್ತಾ ಹೋಗ್ತೀನಿ. ಮಾರಿಷಸ್ ಅನ್ನೋದು ಸಣ್ಣ ಸಣ್ಣ ದ್ವೀಪಗಳನ್ನ ಒಳಗೊಂಡಂತಾ ರಾಷ್ಟ್ರ. ಪೋರ್ಟ್ ಲೂಯಿಸ್ ಮಾರಿಷಸ್​​ನ ರಾಜಧಾನಿಯಾಗಿದೆ. ಪೋರ್ಟ್ ಲೂಯಿಸ್​ನ ಉತ್ತರ ದಿಕ್ಕಿನಲ್ಲಿ ಅಗಲೆಗಾ ಅನ್ನೋ ಐಲ್ಯಾಂಡ್ ಇದೆ. ಪೋರ್ಟ್ ಲೂಯಿಸ್ ಮತ್ತು ಅಗಲೆಗಾ ನಡುವೆ ಕೇವಲ 1,100 ಕಿಲೋ ಮೀಟರ್​​ಗಳ ಡಿಸ್ಟೆನ್ಸ್ ಇದೆ. ಅದೇ ಮಾಲ್ಡೀವ್ಸ್​ ರಾಜಧಾನಿ ಮಾಲೆಯಿಂದ ಅಗಲೆಗಾ ಐಲ್ಯಾಂಡ್​ಗೆ 2,500 ಕಿಲೋ ಮೀಟರ್ ಅಂತರ ಇದೆ. ಇದೇ ಅಗಲೆಗಾ ಐಲ್ಯಾಂಡ್​ನಲ್ಲಿ ಭಾರತ ಏರ್​ಸ್ಟ್ರಿಪ್​​ ನಿರ್ಮಾಣ ಮಾಡಿದೆ. ಜೊತೆಗೆ ಒಂದು ಜೆಟ್ಟಿಯನ್ನ ಕೂಡ ರೆಡಿಮಾಡಲಾಗಿದೆ. ಜೆಟ್ಟಿ ಅನ್ನೋದು ಕರಾವಳಿ ತೀರದಲ್ಲಿ ನಿರ್ಮಿಸುವ ಒಂದು ಸ್ಟ್ರಕ್ಚರ್. ನೋಡೋಕೆ ಅದು ಕೂಡ ಏರ್​​ಸ್ಟ್ರಿಪ್ ರೀತಿಯೇ ಇದೆ. ಸಮುದ್ರ ದಡದಿಂದ ಕೆಲವು ಕಿಲೋ ಮೀಟರ್ ದೂರದಲ್ಲಿ ಈ ಜೆಟ್ಟಿಯನ್ನ ನಿರ್ಮಿಸೋದ್ರಿಂದ ಬಂದರು ಪ್ರದೇಶಕ್ಕೆ ಸಮುದ್ರದ ಅಲೆಗಳಿಂದ ಯಾವುದೇ ಹಾನಿಯಾಗೋದಿಲ್ಲ. ಅಲೆಗಳನ್ನ ಈ ಜೆಟ್ಟಿಯೇ ತಡೆದು ಬಿಡುತ್ತೆ. ಹಾಗೆಯೇ ದೊಡ್ಡ ದೊಡ್ಡ ಶಿಪ್​ಗಳನ್ನ ಈ ಜೆಟ್ಟಿ ಬಳಿಯೇ ನಿಲ್ಲಿಸಲಾಗುತ್ತೆ. ಅಂದ್ರೆ ಡಾಕ್ ಮಾಡೋದು. ಈ ಏರ್​ಸ್ಟ್ರಿಪ್​ ಮತ್ತು ಜೆಟ್ಟಿಯನ್ನ ನಿರ್ಮಿಸಲಾಗಿರೋ ಅಗಲೆಗಾ ಐಲ್ಯಾಂಡ್​ ಒಟ್ಟು ಎರಡು ಭಾಗಗಳಾಗಿವೆ. ಉತ್ತರ ಅಗಲೆಗಾ ಐಲ್ಯಾಂಡ್ ಮತ್ತು ದಕ್ಷಿಣ ಅಗಲೆಗಾ ಐಲ್ಯಾಂಡ್. ಈ ಪೈಕಿ ಉತ್ತರ ಅಗಲೆಗಾ ಐಲ್ಯಾಂಡ್​​ನಲ್ಲಿ ಭಾರತ ಏರ್​ಸ್ಟ್ರಿಪ್​​ನ್ನ ನಿರ್ಮಿಸಿದೆ. ಹಾಗಂತಾ ಮಾಲ್ಡೀವ್ಸ್​ ವಿಚಾರದಲ್ಲಿ ಇತ್ತೀಚೆಗೆ ಆಗಿರೋ ಬೆಳವಣಿಗೆಗಳ ಬಳಿಕವೇ ಇಲ್ಲಿ ಭಾರತ ಏರ್​ಸ್ಟ್ರಿಪ್​​ನ್ನ ನಿರ್ಮಿಸಿರೋದಲ್ಲ. ಅಗಲೆಗಾ ಐಲ್ಯಾಂಡ್​ನ್ನ ಏರ್​ಸ್ಟ್ರಿಪ್​​ ನಿರ್ಮಿಸಬೇಕು ಅಂತಾ ಭಾರತ ಈ ಹಿಂದೆ ಯೇ ನಿರ್ಧರಿಸಿತ್ತು. ಆದ್ರೆ ಅಲ್ಲಿ ಏರ್​ಸ್ಟ್ರಿಪ್​ ನಿರ್ಮಿಸೋದು ಅಷ್ಟು ಸುಲಭ ಇರಲಿಲ್ಲ. ಯಾಕಂದ್ರೆ ಭಾರತದ ಪ್ರಾಜೆಕ್ಟ್ ಬಗ್ಗೆ ಮಾರಿಷಸ್ ಜನರಿಗೂ ಒಂದಷ್ಟು ಅನುಮಾನ ಇತ್ತು. ಬೇರೆ ದೇಶಗಳೂ ಭಾರತದ ನಡೆಯನ್ನ ಅನುಮಾನದ ಕಣ್ಣಿನಿಂದ್ಲೇ ನೋಡ್ತಾ ಇದ್ವು. ಆದ್ರೆ ಮಾರಿಷಸ್ ಸರ್ಕಾರದ ಮನವೊಲಿಸುವಲ್ಲಿ ಭಾರತ ಸಕ್ಸಸ್ ಆಗಿದೆ. ಯಾಕಂದ್ರೆ ಅಷ್ಟರ ಮಟ್ಟಿಗೆ ನಮ್ಮ ಮತ್ತು ಮಾರಿಷಸ್ ನಡುವಿನ ಸ್ನೇಹ ಬೆಳೆದಿದೆ. ಅದ್ರಲ್ಲೂ ಪ್ರಧಾನಿ ಮೋದಿ ಮತ್ತು ಮಾರಿಷಸ್​ನ ಪಿಎಂ ಜಗನ್ನಾಥ್ ಇಬ್ಬರ ನಡುವೆ ತುಂಬಾ ಒಳ್ಳೆಯ ಬಾಂಡ್ ಇದೆ. ಇನ್ನು ಮಾರಿಷಸ್ ಪ್ರಧಾನಿ ಜಗನ್ನಾಥ್ ಅಂತೂ ಅಗಲೆಗಾದಲ್ಲಿ ಭಾರತ ಯಾವುದೇ ಮಿಲಿಟರಿ ಬೇಸ್ ನಿರ್ಮಿಸ್ತಿಲ್ಲ ಅಂತಾನೂ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಮೂಲಕ ಭಾರತದ ನಡೆಯನ್ನ ಪ್ರಶ್ನಿಸೋ ದೇಶಗಳಿಗೆ ಮಾರಿಷಸ್ ಪ್ರಧಾನಿಯೇ ಆನ್ಸರ್ ಕೊಟ್ಟಿದ್ದಾರೆ. ಅಸಲಿಗೆ ನೆರೆಹೊರೆಯ ದೇಶಗಳ ಫಸ್ಟ್ ಪಾಲಿಸಿಯಲ್ಲಿ ಮಾರಿಷಸ್ ಭಾರತದ ಅತ್ಯಂತ ಪ್ರಮುಖ ಪಾರ್ಟ್ನರ್. ಹೀಗಾಗಿ ಯಾರು ಎಷ್ಟೇ ಹುಳಿ ಹಿಂಡೋಕೆ ಯತ್ನಿಸಿದ್ರೂ ಭಾರತ-ಮಾರಿಷಸ್ ನಡುವಿನ ಫ್ರೆಂಡ್​​ಶಿಪ್​​ನ್ನ ಒಡೆಯೋಕೆ ಸದ್ಯಕ್ಕಂತೂ ಸಾಧ್ಯವಿಲ್ಲ.

ಇನ್ನು ಮಾರಿಷಸ್​ನ ಅಗಲೆಗಾದಲ್ಲಿ ಭಾರತ ನಿರ್ಮಿಸಿರೋ ಏರ್​ಸ್ಟ್ರಿಪ್​​​ನ ಸ್ಟ್ರ್ಯಾಟಜಿಕ್ ಇಂಪಾರ್ಟೆನ್ಸ್ ಏನು ಅನ್ನೋದು ಇಲ್ಲಿ ತುಂಬಾನೆ ಇಂಪಾರ್ಟೆಂಟ್ ಆಗುತ್ತೆ. ಅಗಲೆಗಾದಲ್ಲಿ ಈ ಹಿಂದೆಯೂ ಒಂದು ಏರ್​ಸ್ಟ್ರಿಪ್ ಇತ್ತು. ಆದ್ರೆ ಅದ್ರಲ್ಲಿ ಸಣ್ಣ ಗಾತ್ರದ ವಿಮಾನಗಳನ್ನಷ್ಟೇ ಲ್ಯಾಂಡ್ ಮಾಡಬಹುದಾಗಿತ್ತು. ಆದ್ರೀಗ ಭಾರತ ದೊಡ್ಡ ಏರ್​​ಸ್ಟ್ರಿಪ್​ ನಿರ್ಮಿಸಿದ್ದು ಹೀಗಾಗಿ ದೊಡ್ಡ ಗಾತ್ರದ ವಿಮಾನಗಳನ್ನ ಕೂಡ ಲ್ಯಾಂಡ್ ಮಾಡಬಹುದು. ನಮ್ಮಲ್ಲಿರೋ ಪಿ81 ಸರ್ವೈಲೆನ್ಸ್ ವಿಮಾನವನ್ನ ಕೂಡ ಅಗಲೆಗಾದ ಏರ್​ಸ್ಟ್ರಿಪ್​​ನಲ್ಲಿ ಇಳಿಸಬಹುದು. ಅಗಲೆಗಾದಲ್ಲಿ ನಮ್ಮ ಸರ್ವೈಲೆನ್ಸ್ ವಿಮಾನವನ್ನ ಲ್ಯಾಂಡ್ ಮಾಡಿದ್ರೆ ಹಿಂದೂ ಮಹಾಸಾಗರ ಮತ್ತು ಆಫ್ರಿಕಾದ ಸಮುದ್ರದ ಭಾಗದ ಮೇಲೂ ಭಾರತಕ್ಕೆ ನಿಗಾ ವಹಿಸಬಹುದು. ಹಿಂದೂ ಮಹಾಸಾಗರದಲ್ಲಿ ಚೀನಾ ಮತ್ತು ಮಾಲ್ಡೀವ್ಸ್​ನ ಚಟುವಟಿಕೆಗಳ ಮೇಲೂ ಕಣ್ಣಿಡಬಹುದು. ನಿಮಗೆ ಗೊತ್ತಿರಬಹುದು. ಚೀನಾ ಈಗಾಗ್ಲೇ ಹಿಂದೂ ಮಹಾಸಾಗರದ ಸುತ್ತಮುತ್ತಲಿರೋ ದೇಶಗಳ ಮೇಲೆ ಪ್ರಭಾವ ಬೀರ್ತಿದೆ. ಆಫ್ರಿಕಾದ ಕೆಲ ರಾಷ್ಟ್ರಗಳಲ್ಲೂ ತನ್ನ ಸೇನಾ ನೆಲೆಗಳನ್ನ ನಿರ್ಮಿಸಿದೆ..ನಿರ್ಮಿಸ್ತಾನೆ ಇದೆ. ಹೀಗಾಗಿ ಮಾರಿಷಸ್​​ನ ಅಗಲೆಗಾ ಐಲ್ಯಾಂಡ್​​ನಿಂದ ಚೀನಾ ನಡೆಸ್ತಿರೋ ಕಾರುಬಾರನ್ನ ಭಾರತಕ್ಕೆ ಗಮನಿಸಬಹುದು. ಇನ್ನು ಮಾರಿಷಸ್ ಅಂತೂ ಭಾರತವನ್ನ ಬಿಟ್ಟು ಕೊಡೋದೆ ಇಲ್ಲ. ಈಗಾಗ್ಲೇ ಈ ಪುಟ್ಟ ದ್ವೀಪ ರಾಷ್ಟ್ರ ದೈತ್ಯ ಚೀನಾದ ಆಫರ್​​ಗಳನ್ನೆಲ್ಲಾ ರಿಜೆಕ್ಟ್ ಮಾಡಿದೆ. ತನ್ನ ನೆರೆ ದೇಶ ಮಾಲ್ಡೀವ್ಸ್​​ನ ಕಥೆಯೇನಾಗಿದೆ ಅನ್ನೋದನ್ನ ಅರ್ಥಮಾಡಿಕೊಂಡಿರೋ ಕಾರಣ ಮಾರಿಷಸ್ ಚೀನಾದ ಟ್ರ್ಯಾಪ್​ಗೆ ಬೀಳದೆ ಬಚಾವಾಗಿದೆ. ಭಾರತವನ್ನೇ ಹೆಚ್ಚು ನಂಬಿಕೊಂಡಿದೆ.

ಮಾರಿಷಸ್​ನಲ್ಲಿ ಏರ್​ಸ್ಟ್ರಿಪ್ ನಿರ್ಮಿಸಿರೋದ್ರ ಹಿಂದೆ ಇನ್ನೊಂದು ಸೂಕ್ಷ್ಮ ಸಂಗತಿ ಕೂಡ ಇದೆ. ಕೆಂಪು ಸಮುದ್ರದಲ್ಲಿ ಬಂಡುಕೋರರ ಕಾಟ ಹೆಚ್ಚಾಗಿದೆ. ಸೊಮಾಲಿಯಾ ಕಡಲ್ಗಳ್ಳರು ಕೂಡ ಶಿಪ್​ಗಳ ಮೇಲೆ ಅಟ್ಯಾಕ್ ಮಾಡ್ತಿದ್ದಾರೆ. ಹೀಗಾಗಿ ಭಾರತ ಸೇರಿದಂತೆ ಇತರೆ ದೇಶಗಳ ಹಡಗುಗಳು ಆಫ್ರಿಕಾದ ಕೇಪ್​ ಆಫ್ ಗುಡ್ ಹೋಪ್ ಮೂಲಕ ಯುರೋಪ್​ ರಾಷ್ಟ್ರಗಳತ್ತ ತೆರಳ್ತಾ ಇವೆ. ಮುಂದಿನ ದಿನಗಳಲ್ಲಿ ಆಫ್ರಿಕಾದ ಭಾಗದಲ್ಲೂ ಏನಾದ್ರೂ ಭದ್ರತಾ ಸಮಸ್ಯೆಯಾಗಬಹುದು. ಹೀಗಾಗಿ ಅದನ್ನ ನಿಯಂತ್ರಿಸೋಕೆ, ಶಿಪ್​ಗಳನ್ನ ರಕ್ಷಿಸೋಕೆ ಮಾರಿಷಸ್​​ನ ಅಗಲೆಗಾ ಏರ್​ಸ್ಟ್ರಿಪ್ ನೆರವಾಗುತ್ತೆ. ಅಲ್ಲಿ ನಮ್ಮ ರಕ್ಷಣಾ ವಿಮಾನಗಳನ್ನ ನಿಯೋಜಿಸಿದ್ರೆ ಹಡಗುಗಳನ್ನ ಕೂಡ ಸೇವ್ ಮಾಡಬಹುದು.

ಇನ್ನು ಮಾರಿಷಸ್​ನ ಭಾಗವಾಗಿರೋ ಡಿಯಾಗೊ ಗಾರ್ಸಿಯಾ ಅನ್ನೋ ದ್ವೀಪದಲ್ಲಿ ಅಮೆರಿಕ ನೌಕಾಪಡೆಯ ಬೇಸ್ ಕೂಡ ಇದೆ. ಅಗಲೆಗಾದಲ್ಲಿ ಭಾರತೀಯ ಸೇನೆ, ಹಾಗೆಯೇ ಪಕ್ಕದಲ್ಲೇ ಇರೋ ಗಾರ್ಸಿಯಾದಲ್ಲಿ ಅಮೆರಿಕ ಸೇನೆ. ಈ ಮೂಲಕ ಭಾರತ ಮತ್ತು ಅಮೆರಿಕ ಎರಡೂ ದೇಶಗಳು ಹಿಂದೂ ಮಹಾಸಾಗರದ ಆಯಕಟ್ಟಿನ ಜಾಗದಲ್ಲಿ ನೆಲೆಯೂರೋದ್ರಿಂದ ಚೀನಾದ ಹುಚ್ಚಾಟಗಳಿಗೂ ಬ್ರೇಕ್ ಹಾಕಬಹುದು. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಎಷ್ಟು ಗಟ್ಟಿಯಾಗಿದೆ ಅನ್ನೋದು ನಿಮಗ ಗೊತ್ತೇ ಇದೆ. ಅಮೆರಿಕ-ಚೀನಾಗೂ ಸರಿ ಇಲ್ಲ. ಇವೆಲ್ಲದವೂ ಭಾರತದ ಪಾಲಿಗೆ ಪ್ಲಸ್ ಪಾಯಿಂಟ್ ಆಗುತ್ತೆ.

ಹಾಗಿದ್ರೆ ತನ್ನ ದ್ವೀಪದಲ್ಲಿ ಏರ್​ಸ್ಟ್ರಿಪ್ ನಿರ್ಮಿಸೋದಕ್ಕೆ ಮಾರಿಷಸ್ ಭಾರತವನ್ನೇ ಚೂಸ್ ಮಾಡಿದ್ಯಾಕೆ ಅನ್ನೋದು ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ. ಸ್ನೇಹಿತರೇ..1948ರಿಂದಲೂ ಭಾರತ ಮತ್ತು ಮಾರಿಷಸ್ ನಡುವೆ ವಿಶೇಷ ಸಂಬಂಧ ಇದೆ. ಭಾರತೀಯ ಮೂಲದ ಶೇಕಡಾ 70ರಷ್ಟು ಜನರು ಮಾರಿಷಸ್​ನಲ್ಲಿದ್ದಾರೆ. ಹೀಗಾಗಿ ಐತಿಹಾಸಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕ್ರತಿಕವಾಗಿ ಭಾರತ-ಮಾರಿಷಸ್ ಮಧ್ಯೆ ಸ್ಪೆಷಲ್ ಬಾಂಡ್ ಇದೆ. ಮಾರಿಷಸ್ ಪಾಲಿಗೆ ಭಾರತ ಈ ಹಿಂದಿನಿಂದಲೂ ಅತ್ಯಂತ ನಂಬಿಕಸ್ಥ ರಾಷ್ಟ್ರ. ಹೀಗಾಗಿಯೇ ಅಗಲೆಗಾದಲ್ಲಿ ಏರ್​ಸ್ಟ್ರಿಪ್​ ನಿರ್ಮಾಣಕ್ಕೆ ಮಾರಿಷಸ್ ಭಾರತವನ್ನೇ ಆಯ್ಕೆ ಮಾಡಿತ್ತು. ಅಗಲೆಗಾದಲ್ಲಿ ಏರ್​ಸ್ಟ್ರಿಪ್​ ನಿರ್ಮಾಣ ಮಾಡೋ ಬಗ್ಗೆ 2005ರಿಂದಲೂ ಮಾತುಕತೆ ನಡೀತಾನೆ ಇತ್ತು. ನಂತರ 2015ರಲ್ಲಿ ಪ್ರಧಾನಿ ಮೋದಿ ಮಾರಿಷಸ್​​ಗೆ ವಿಸಿಟ್ ಮಾಡ್ತಾರೆ. ಈ ವೇಳೆ ಏರ್​ಸ್ಟ್ರಿಪ್​​ ನಿರ್ಮಾಣ ವಿಚಾರವಾಗಿ ಎರಡೂ ದೇಶಗಳ ಮಧ್ಯೆ ಒಪ್ಪಂದ ಫೈನಲ್ ಆಗುತ್ತೆ. ಈಗ ಏರ್​ಸ್ಟ್ರಿಪ್ ಕೂಡ ಕಂಪ್ಲೀಟ್​​ ಆಗಿದೆ.

ಅಗಲೆಗಾದಲ್ಲಿ ಏರ್​ಸ್ಟ್ರಿಪ್​ ನಿರ್ಮಾಣದಿಂದ ಭಾರತಕ್ಕೆ ಮಾತ್ರವಲ್ಲ ಮಾರಿಷಸ್​​ಗೂ ಹೆಲ್ಪ್ ಆಗುತ್ತೆ. ಮಾರಿಷಸ್ ರಾಜಧಾನಿ ಪೋರ್ಟ್ ಲೂಯಿಸ್ ಮತ್ತು ಅಗಲೆಗಾ ದ್ವೀಪಗಳ ಮಧ್ಯೆ 1,100 ಕಿಲೋ ಮೀಟರ್ ಡಿಸ್ಟೆನ್ಸ್ ಇದೆ. ಈ ಎರಡೂ ದ್ವೀಪಗಳ ಮಧ್ಯೆ ಹಡುಗಗಳ ಸಂಚಾರಕ್ಕೆ ಕನಿಷ್ಠ ಎರಡು ದಿನಗಳಾದ್ರೂ ಬೇಕಾಗುತ್ತೆ. ಆದ್ರೀಗ ಅಗಲೆಗಾದಲ್ಲಿ ಭಾರತ ಏರ್​ಸ್ಟ್ರಿಪ್​ ನಿರ್ಮಿಸಿರೋದ್ರಿಂದ ವಿಮಾನದಲ್ಲಿ ಅರ್ಧ ಗಂಟೆಯಲ್ಲೇ ಎರಡೂ ದ್ವೀಪಗಳನ್ನ ಕನೆಕ್ಟ್ ಮಾಡಬಹುದು. ಅಗಲೆಗಾದಲ್ಲಿ ಅಷ್ಟಾಗಿ ವೈದ್ಯಕೀಯ ವ್ಯವಸ್ಥೆಗಳಿಲ್ಲ. ಗಂಭೀರ ಆರೋಗ್ಯ ಸಮಸ್ಯೆಯಾದ್ರೆ ಅಗಲೆಗಾದ ಜನರು ಹೆಚ್ಚಿನ ಚಿಕಿತ್ಸೆಗೆ ರಾಜಧಾನಿ ಪೋರ್ಟ್ ಲೂಯಿಸ್​ಗೆ ಬರಲೇಬೇಕಾಗುತ್ತೆ. ಈ ಏರ್​ಸ್ಟ್ರಿಪ್​ನಿಂದ ಅಗಲೆಗಾದ ಜನರಿಗೂ ಹೆಲ್ಪ್ ಆಗುತ್ತೆ. ಜೊತೆಗೆ ಅಗಲೆಗಾದಲ್ಲಿ ಮಾರಿಷಸ್ ಸರ್ಕಾರ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನ ಕೈಗೊಳ್ಳಲಿದೆ. ಟೂರಿಸಂಗೂ ಬೂಸ್ಟ್​ ಸಿಕ್ಕಂತಾಗುತ್ತೆ. ಹಾಗೆಯೇ ಅಗಲೆಗಾದಲ್ಲಿ ಭಾರತ ಜೆಟ್ಟಿಯನ್ನ ಕೂಡ ನಿರ್ಮಿಸಿರೋದ್ರಿಂದ ಮಾರಿಷಸ್​ನ ಶಿಪ್​ಗಳ ನಿಲುಗಡೆಗೂ ಸಹಕಾರಿಯಾಗುತ್ತೆ. ಹಾಗಂತಾ ಅಗಲೆಗಾದಲ್ಲಿ ಭಾರತ ತನ್ನ ಸೇನಾ ನೆಲೆಯನ್ನಂತೂ ಸ್ಥಾಪಿಸ್ತಾ ಇಲ್ಲ. ಮಾರಿಷಸ್​ನ್ನ ಡಾಮಿನೇಟ್ ಮಾಡುವ ಇಲ್ಲ. ಯಾವ ದೇಶವನ್ನೂ ಸಾಲದ ಸುಳಿವಿಗೆ ತಳ್ಳೋದಿಲ್ಲ. ಭಾರತ ಯಾವತ್ತಿಗೂ ಅಂಥಾ ಕೆಲಸಕ್ಕೆ ಕೈ ಹಾಕೋದೇ ಇಲ್ಲ. ಎರಡೂ ದೇಶಗಳಿಗೆ ನೆರವಾಗುವಂಥಾ ಕಾರ್ಯಗಳನ್ನಷ್ಟೇ ಭಾರತ ಕೈಗೊಳ್ಳುತ್ತೆ. ಅದು ಕೂಡ ಅಲ್ಲಿನ ಜನರ, ಸರ್ಕಾರದ ಅನುಮತಿ ಇದ್ರಷ್ಟೇ ಏರ್​ಸ್ಟ್ರಿಪ್​​ ನಿರ್ಮಾಣದಂಥಾ ಕಾರ್ಯಗಳನ್ನ ಕೈಗೊಳ್ಳುತ್ತೆ.

ಚೀನಾ ಕೈಗೊಂಬೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಜುನನ್ನ ಸರ್ವಾಧಿಕಾರಿ ಕ್ಸಿ ಜಿನ್​ಪಿಂಗ್ ಅಕ್ಷರಶ: ಕಾಲಿನ ಅಡಿಗೆ ಹಾಕಿ ತುಳಿಯೋಕೆ ಶುರು ಮಾಡಿದ್ದಾನೆ. ಚೀನಾದಿಂದ ಸಾಲ ತಗೊಂಡು ಅದನ್ನ ತೀರಿಸೋಕೆ ಆಗದ ಪರಿಸ್ಥಿತಿ ಮಾಲ್ಡೀವ್ಸ್ ತಲುಪಿಯಾಗಿದೆ. ಈಗಾಗ್ಲೇ ಮಾಲ್ಡೀವ್ಸ್ ಆಲ್​​ಮೋಸ್ಟ್ ದಿವಾಳಿಯಾಗಿದೆ. ಇನ್ನು ಚೀನಾದ ಮುಷ್ಠಿಯಿಂದ ತಪ್ಪಿಸಿಕೊಳ್ಳೋಕೂ ಆಗದ ಸ್ವಿಚ್ಯುವೇಶನ್​​ನಲ್ಲಿ ಮಾಲ್ಡೀವ್ಸ್ ಇದೆ. ಇದೀಗ ಲೇಟೆಸ್ಟ್​ ಬೆಳವಣಿಗೆಯನ್ನ ಮಾಲ್ಡೀವ್ಸ್​ಗೆ ಯಾವುದೇ ರೀತಿಯ ಸೇನಾ ನೆರವು ಬೇಕಿದ್ರೂ ನೀಡೋದಾಗಿ ಚೀನಾ ಹೇಳಿದೆ. ಅಂದ್ರೆ ಮುಂದಿನ ದಿನಗಳಲ್ಲಿ ಚೀನಾದ ಮಿಲಿಟರಿ ಬೇಸ್​ ಮಾಲ್ಡೀವ್ಸ್​​ನಲ್ಲಿ ನಿರ್ಮಾಣಗೊಂಡ್ರೂ ಆಶ್ಚರ್ಯ ಇಲ್ಲ. ಇದೇ ಕಾರಣಕ್ಕೆ ಭಾರತ ಮಾಲ್ಡೀವ್ಸ್​ ಪಕ್ಕದಲ್ಲೇ ಇರೋ ಮಾರಿಷಸ್​ನ ದ್ವೀಪದಲ್ಲಿ ಏರ್​ಸ್ಟ್ರಿಕ್ ನಿರ್ಮಿಸಿರೋದು. ಅಂತೂ ಭಾರತ-ಚೀನಾ ಮತ್ತು ಮಾಲ್ಡೀವ್ಸ್​ ನಡುವಿನ ಬೆಳವಣಿಗೆ ಇನ್ನಷ್ಟು ರೋಚಕವಾಗ್ತಿದೆ.

Sulekha