ಅಂದು ಕ್ರೀಡಾಸ್ಫೂರ್ತಿ ಬಗ್ಗೆ ಮಾತನಾಡಿದ್ದ ಬೆನ್‌ಸ್ಟೋಕ್ ಈಗ ಮಾಡಿದ್ದೇನು?- ಜಸ್ಪ್ರಿತ್ ಬುಮ್ರಾರನ್ನ ಸ್ಟಂಪ್ ಮಾಡೋಕೆ ಯತ್ನಿಸಿದ್ದು ಯಾಕೆ?
ಫಸ್ಟ್ ಟೆಸ್ಟ್ ಮ್ಯಾಚ್ನಲ್ಲಿ ಸೆಕೆಂಡ್ ಇನ್ನಿಂಗ್ಸ್ ವೇಳೆ ಇಂಗ್ಲೆಂಡ್ನ ವಿಕೆಟ್ ಕೀಪರ್ ಬೆನ್ ಫೋಕ್ಸ್ ಜಸ್ಪ್ರಿತ್ ಬುಮ್ರಾರನ್ನ ಸ್ಟಂಪ್ ಮಾಡೋಕೆ ಯತ್ನಿಸಿರೋದು ಭಾರಿ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಸ್ಪಿರಿಟ್ ಆಫ್ ಕ್ರಿಕೆಟ್ ಬಗ್ಗೆ ಮಾತನಾಡಿದ್ದ ಇದೇ ಇಂಗ್ಲೆಂಡ್ ಟೀಮ್ ಬಗ್ಗೆಯೇ ಈಗ ನಾನಾ ರೀತಿಯಲ್ಲಿ ಪ್ರಶ್ನೆಗಳು ಎದುರಾಗಿವೆ.
ಇದನ್ನೂ ಓದಿ: ಮಯಾಂಕ್ ಅಗರ್ವಾಲ್ ವಿಮಾನದಲ್ಲಿ ಕುಡಿದಿರುವ ಡ್ರಿಂಕ್ಸ್ ಯಾವುದು ಗೊತ್ತಾ? – ಕನ್ನಡಿಗನ ಅದೃಷ್ಟ ಚೆನ್ನಾಗಿತ್ತು..!
2023ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಆ್ಯಶಸ್ ಸರಣಿಯ 2ನೇ ಟೆಸ್ಟ್ ಮ್ಯಾಚ್ ವೇಳೆ ಒಂದು ದೊಡ್ಡ ಹೈಡ್ರಾಮವೇ ನಡೆದಿತ್ತು. ಇಂಗ್ಲೆಂಡ್ಗೆ ಗೆಲ್ಲೋಕೆ 371 ರನ್ಗಳ ಅವಶ್ಯಕತೆ ಇತ್ತು. ಐದು ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ತಂಡ ಸಂಕಷ್ಟದಲ್ಲಿತ್ತು. ಆಗ ಕ್ಯಾಪ್ಟನ್ ಬೆನ್‌ಸ್ಟೋಕ್ ಜೊತೆಗೂಡಿದ್ದು ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜಾನಿ ಬೇರ್ಸ್ಟೋ. ಇಂಗ್ಲೆಂಡಿಗರ ಗೆಲುವಿನ ನಿರೀಕ್ಷೆಯ ಭಾರ ಈ ಇಬ್ಬರು ಆಟಗಾರರ ಮೇಲೆಯೇ ಇತ್ತು. ಬೇರ್ಸ್ಟೋ 10 ರನ್ ಗಳಿಸಿ ಆಡುತ್ತಿದ್ದಾಗ ಕ್ಯಾಮರೂನ್ ಗ್ರೀನ್ ಬೌನ್ಸರ್ ಎಸೆಯುತ್ತಾರೆ. ಕೂಡಲೇ ಬೇರ್ಸ್ಟೋ ಹಾನಿಕಾರಕ ಬೌನ್ಸರ್ನಿಂದ ತಪ್ಪಿಸಿಕೊಳ್ತಾರೆ. ಬಾಲ್ ನೇರವಾಗಿ ಆಸ್ಟ್ರೇಲಿಯಾ ವಿಕೇಟ್ ಕೀಪರ್ ಅಲೆಕ್ಸ್ ಕ್ಯಾರಿ ಕೈ ಸೇರುತ್ತೆ. ಹೀಗಾಗಿ ಬೇರ್ಸ್ಟೋ ಕ್ರೀಸ್ನ್ನ ಸ್ಕ್ರಾಚ್ ಮಾಡಿ ನಾನ್ಸ್ಟ್ರೈಕರ್ ಎಂಡ್ನಲ್ಲಿದ್ದ ಬೆನ್‌ಸ್ಟೋಕ್ ಬಳಿ ತೆರಳುತ್ತಾರೆ. ಆಗ ಆಸ್ಟ್ರೇಲಿಯಾ ಕೀಪರ್ ಅಲೆಕ್ಸ್ ತಮ್ಮ ಕೈಯಲ್ಲಿದ್ದ ಬಾಲ್ನ್ನ ನೇರವಾಗಿ ಸ್ಟಂಪ್ಗೆ ಎಸೆಯುತ್ತಾರೆ. ಇಡೀ ಆಸ್ಟ್ರೇಲಿಯಾ ತಂಡ ಔಟ್ಗಾಗಿ ಅಪೀಲ್ ಮಾಡುತ್ತೆ. ಫೈನಲ್ ಡಿಸೀಶನ್ನನ್ನ ಥರ್ಡ್ ಅಂಪೈರ್ಗೆ ರವಾನಿಸಲಾಗುತ್ತೆ. ಥರ್ಡ್ ಅಂಪೈರ್ ಒಂದಷ್ಟು ಸಮಯ ಪರಿಶೀಲನೆ ನಡೆಸಿ ಕೊನೆ ಔಟ್ ಕೊಟ್ಟು ಬಿಡ್ತಾರೆ. ಇತ್ತ ಜಾನಿ ಬೇರ್ ಸ್ಟೋ ಮತ್ತು ಬೆನ್‌ಸ್ಟೋಕ್ ಇಬ್ಬರೂ ಶಾಕ್ಗೊಳಗಾಗಿದ್ರು. ಬೆನ್‌ಸ್ಟೋಕ್ ನೇರವಾಗಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಜೊತೆ ಮಾತಿಗಿಳಿಯುತ್ತಾರೆ. ಆದ್ರೆ ಥರ್ಡ್ ಅಂಪೈಟ್ ಸ್ಟಂಪ್ ಔಟ್ ಕೊಟ್ಟಿದ್ರಿಂದ ಬೇರ್ಸ್ಟೋ ಅನಿವಾರ್ಯವಾಗಿ ಪೆವಿಲಿಯನ್ನತ್ತ ತೆರಳಬೇಕಾಯ್ತು. ಅಸಲಿಗೆ ಜಾನ್ ಬೇರ್ಸ್ಟೋ ಬಾಲ್ ವಿಕೆಟ್ ಕೀಪರ್ ಕೈ ಸೇರುತ್ತಲೇ ಕ್ರೀಸ್ ಬಿಟ್ಟಿದ್ರು. ಆದ್ರೆ ಕ್ರೀಸ್ ಬಿಡುವ ಮುನ್ನ ಕಾಲಿನಿಂದ ಸ್ಕ್ರಾಚ್ ಮಾಡಿ ಸ್ಟಂಪ್ ಮಾರ್ಕ್ ಮಾಡಿ ಬಳಿಕ ಕ್ರೀಸ್ ಬಿಟ್ಟಿದ್ರು. ಅಷ್ಟರಲ್ಲೇ ಆಸ್ಟ್ರೇಲಿಯಾ ಕೀಪರ್ ಸ್ಟಂಪ್ಗೆ ಬಾಲ್ ಎಸೆದಿದ್ರು. ಆಸ್ಟ್ರೇಲಿಯಾ ಆಟಗಾರರ ಈ ನಡೆ ಬಗ್ಗೆ ಈಗ ಸಾಕಷ್ಟು ಟೀಕೆಗಳು ಕೇಳಿ ಬರ್ತಿದೆ. ಸ್ಪಿರಿಟ್ ಆಫ್ ದಿ ಗೇಮ್ನ್ನ ತೆಗೆದುಕೊಂಡ್ರೆ ಇಲ್ಲಿ ಆಸ್ಟ್ರೇಲಿಯನ್ನರು ಮಾಡಿರೋದು ತಪ್ಪು. ಜಂಟಲ್ಮನ್ ಗೇಮ್ನ್ನ ಜಂಟಲ್ಮನ್ಗಳಂತೆಯೇ ಆಡಬೇಕು ಅನ್ನೋ ಅಭಿಪ್ರಾಯ ಕೇಳಿ ಬಂದಿತ್ತು. ಈ ಒಂದು ಘಟನೆ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಕಿಚ್ಚು ಹಚ್ಚಿಬಿಡುತ್ತೆ. ಜಾನಿ ಬ್ಯಾರ್ಸ್ಟೋ ಔಟಾಗಿದ್ರ ಬಗ್ಗೆ ಮಾತನಾಡಿದ್ದ ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್, ನಾನಾಗಿರುತ್ತಿದ್ರೆ ಆ ಪಂದ್ಯವನ್ನ ಗೆಲ್ಲೋಕೆ ಬಯಸ್ತಾ ಇರಲಿಲ್ಲ. ಮ್ಯಾಚ್ ಗೆಲ್ಲೋದಕ್ಕಿಂತಲೂ ಕ್ರೀಡಾಸ್ಪೂರ್ತಿ ಮೆರೆಯಬೇಕಾಗಿರೋದು ಮುಖ್ಯ ಅಂತಾ ಆಸ್ಟ್ರೇಲಿಯಾ ಟೀಮ್ಗೆ ಟಾಂಗ್ ಕೊಟ್ಟಿದ್ರು.
ಆದರೆ, ಅಂದು ಕ್ರೀಡಾಸ್ಫೂರ್ತಿ ಬಗ್ಗೆ ಮಾತನಾಡಿದ್ದ ಅದೇ ಬೆನ್ಸ್ಟೋಕ್ಸ್ ಈಗ ಸೈಲೆಂಟ್ ಆಗಿದ್ದಾರೆ. ಯಾಕಂದ್ರೆ ಭಾರತ ವಿರುದ್ಧದ ಫಸ್ಟ್ ಟೆಸ್ಟ್ ಮ್ಯಾಚ್ನಲ್ಲಿ ಜಸ್ಪ್ರಿತ್ ಬುಮ್ರಾ ಕ್ರೀಸ್ನಲ್ಲಿದ್ದಾಗ ಇಂಗ್ಲೆಂಡ್ ವಿಕೆಟ್ ಕೀಪರ್ ಬೆನ್ ಫೋಕ್ಸ್ ಒಂದು ಕಂತ್ರಿ ಕೆಲಸ ಮಾಡಿದ್ರು. ಟಾಮ್ ಹಾರ್ಟ್ಲಿ ಎಸೆದ ಬಾಲ್ಗೆ ಬುಮ್ರಾ ಹೊಡೆಯೋಕೆ ಮುಂದಾಗಿದ್ರು. ಆದ್ರೆ ಬಾಲ್ ಬ್ಯಾಟ್ಗೆ ಕನೆಕ್ಟೇ ಆಗಿರಲಿಲ್ಲ. ಬೀಟ್ ಆಗಿ ಸೀದಾ ವಿಕೆಟ್ ಕೀಪರ್ ಕೈ ಸೇರುತ್ತೆ. ಆ ಬಾಲ್ಗೆ ಹೊಡೆಯೋಕೆ ಆಗಿಲ್ವಲ್ಲಾ ಅಂತಾ ಜಸ್ಪ್ರಿತ್ ಫ್ರಸ್ಟ್ರೇಶನ್ನಲ್ಲಿ ನಿಂತಲ್ಲೇ ಜಂಪ್ ಮಾಡ್ತಾರೆ. ಆಲ್ರೆಡಿ ಕ್ರೀಸ್ನಲ್ಲೇ ಇದ್ರು, ಬಟ್ ಜಂಪ್ ಮಾಡ್ತಾರೆ ಅಷ್ಟೇ. ಜಂಪ್ ಮಾಡಿದ ಕೂಡಲೇ ಇಂಗ್ಲೆಂಡ್ ವಿಕೆಟ್ ಕೀಪರ್ ಬೆನ್ ಫೋಕ್ಸ್ ಸ್ಟಂಪ್ ಮಾಡಿ, ಅಂಪೈರ್ಗೆ ಅಪೀಲ್ ಮಾಡ್ತಾರೆ. ಥರ್ಡ್ ಅಂಪೈರ್ ಚೆಕ್ ಮಾಡಿ. ನಾಟ್ಔಟ್ ಕೊಡ್ತಾರೆ. ಯಾಕಂದ್ರೆ ಜಸ್ಪ್ರಿತ್ ಬುಮ್ರಾ ಅದಾಗ್ಲೇ ಕ್ರೀಸ್ನೊಳಗೇ ಇದ್ರು. ಬಟ್, ಇಂಗ್ಲೆಂಡ್ ಕೀಪರ್ನ ನಡೆಯಿಂದ ಬೆನ್ಸ್ಟೋಕ್ಸ್ ಹೇಳ್ತಿದ್ದ ಕ್ರೀಡಾ ಸ್ಫೂರ್ತಿ ಅಂದ್ರೆ ಇದೇನಾ ಅಂತಾ ಹಲವು ಪ್ರಶ್ನಿಸಿದ್ದಾರೆ.