ಗಂಭೀರ್ ಮಾನ ಕಳೆದ ICELAND ಕ್ರಿಕೆಟ್ – KKR ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ?
ಅಭಿಷೇಕ್ ಅರ್ಧ ಶತಕ ರದ್ದು!

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಭಾನುವಾರ ನಡೆದ ಮಹಿಳಾ ಟಿ20 ವಿಶ್ವಕಪ್ 2026ರ ನಿರ್ಣಾಯಕ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ಗಳ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ ಭಾರತ ಟಿ20 ವಿಶ್ವಕಪ್ ಫೈನಲ್ ರೇಸ್ನಿಂದ ಹೊರಬಿದ್ದರೆ, ಬಲಿಷ್ಠ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ‘ಎ’ ಗುಂಪಿನಿಂದ ಸೆಮಿಫೈನಲ್ಗೆ ಅರ್ಹತೆ ಪಡೆದವು. ಇದೀಗ ಆಸ್ಟ್ರೇಲಿಯಾVs ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ VS ಇಂಗ್ಲೆಂಡ್ ಸೆಮಿಫೈನಲ್ ಆಡಲಿವೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಟಾರ್ ಆಲ್ರೌಂಡರ್ ದೀಪ್ತಿ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಎಂಬ ದಾಖಲೆಯನ್ನು ಬರೆದರು. ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿ ಬೆತ್ ಮೂನಿ ಅವರನ್ನು ಔಟ್ ಮಾಡುವ ಮೂಲಕ ದೀಪ್ತಿ ಈ ಸಾಧನೆ ಮಾಡಿದರು. ಇದಕ್ಕೂ ಮುನ್ನ ಅವರು ಜೂಲನ್ ಗೋಸ್ವಾಮಿ 355 ವಿಕೆಟ್ ಪಡೆದು ಈ ದಾಖಲೆ ಹೊಂದಿದ್ದರು. ಇದೀಗ ದೀಪ್ತಿ 279 ಪಂದ್ಯಗಳಿಂದ 356 ವಿಕೆಟ್ಗಳನ್ನು ಕಲೆ ಹಾಕಿದ್ದಾರೆ.
ಇದನ್ನೂ ಓದಿ : ಕೋಚ್ & ಕ್ಯಾಪ್ಟನ್ COLD WAR – ಶ್ರೇಯಸ್-ಗಂಭೀರ್ ಟೀಂ ಮುಗಿಸಿದ್ರಾ?
ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ ತಂಡ ಸೋತ ನಂತ್ರ ಐಸ್ಲ್ಯಾಂಡ್ ಕ್ರಿಕೆಟ್, ಗಂಭೀರ್ ಅವರ ಕಾಲೆಳೆದಿದೆ. ಗೌತಮ್ ಗಂಭೀರ್ ಅವರನ್ನು ನಮ್ಮ ಕೋಚಿಂಗ್ ಸಿಬ್ಬಂದಿಗೆ ಸೇರಿಸಿಕೊಳ್ಳಲು ನಾವು ಬಯಸುವುದಿಲ್ಲ. ಭಾರತದ ಪ್ರತಿಭಾನ್ವಿತ ಆಟಗಾರರನ್ನು ಕರೆದುಕೊಂಡು ಹೋಗಿ ಐರ್ಲೆಂಡ್ನಲ್ಲಿ ಇಂತಹ ಫಲಿತಾಂಶ ಪಡೆದುಕೊಂಡಿದ್ದು ನಿಜಕ್ಕೂ ಅದ್ಭುತ ಸಾಧನೆ ಎಂದು ಐಸ್ಲ್ಯಾಂಡ್ ಕ್ರಿಕೆಟ್ ಟ್ರೋಲ್ ಮಾಡಿದೆ.
ಐರ್ಲೆಂಡ್ ವಿರುದ್ಧದ ಟಿ20 ಸರಣಿ ಸಮಯದಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಭಾರತ ತಂಡದ ಪ್ಲೇಯಿಂಗ್ 11ನಲ್ಲಿ ಸ್ಥಾನ ನೀಡುವ ಬಗ್ಗೆ ದಂತಕಥೆ ಸುನೀಲ್ ಗವಾಸ್ಕರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. 15 ವರ್ಷದ ಈ ಆಟಗಾರ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ ಮತ್ತು ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವರನ್ನು ಪ್ಲೇಯಿಂದ್ XI ನಲ್ಲಿ ಸೇರಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದು ಹೇಳಿದ್ದಾರೆ.
ಐರ್ಲೆಂಡ್ ವಿರುದ್ಧ ಭಾರತ ಸೋಲಿಗೆ ಭಾರತೀಯನೇ ಕಾರಣವಾಗಿದ್ದಾನೆ. ಭಾರತ ಮೂಲದ ಜೈ ಮೂಂದ್ರಾ ಐರ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದು, ಇವರು ಭಾರತದ ವಿರುದ್ಧದ 2 ಪಂದ್ಯದಲ್ಲಿ 5 ವಿಕೆಟ್ ಪಡೆದು ಮಿಂಚಿದ್ದಾರೆ. ರಾಜಸ್ಥಾನದಲ್ಲಿ 14 ವರ್ಷದೊಳಗಿನ ಕ್ರಿಕೆಟ್ ಆಡಿದ್ದ ಜೈ ಮೂಂದ್ರಾ, ಈ ಸಲ ಐರ್ಲೆಂಡ್ ಟಿ20I ತಂಡದಲ್ಲಿ ಚಾನ್ಸ್ ಪಡೆದಿದ್ದು, ಭಾರತ ವಿರುದ್ಧದ ಪಂದ್ಯದಲ್ಲಿ ಅತ್ಯತ್ತಮ ಪ್ರದರ್ಶ ನೀಡಿದ್ದಾರೆ.
ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋತ ನಂತ್ರ ಪರ ವಿರೋಧ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಟಿ20ಐ ಟೀಂನಿಂದ ವಾಷಿಂಗ್ಟನ್ ಸುಂದರ್ ಮತ್ತು ತಿಲಕ್ ವರ್ಮಾರನ್ನ ಕೈ ಬಿಟ್ಟು, ವೈಭವ್ ಸೂರ್ಯವಂಶಿ ಮತ್ತು ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ಗೆ ಚಾನ್ಸ್ ನೀಡಿ ಅನ್ನೋ ಒತ್ತಾಯ ಕೇಳಿ ಬರ್ತಿದೆ.
ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕೋಲ್ಕತಾ ನೈಟ್ ರೈಡರ್ಸ್ ಭರ್ಜರಿ ಪ್ರಯತ್ನ ಶುರುಮಾಡಿದೆ. ಒಂದು ವೇಳೆ ಹಾರ್ದಿಕ್ ತಂಡಕ್ಕೆ ಬಂದರೆ, ಅವರಿಗೆ ನಾಯಕನ ಪಟ್ಟ ನೀಡುವುದಾಗಿ KKR ಭರವಸೆ ನೀಡಿದೆ. ಈ ವಿಚಾರವಾಗಿ ಕೋಲ್ಕತಾ ಮ್ಯಾನೇಜ್ಮೆಂಟ್, ಮುಂಬೈ ಇಂಡಿಯನ್ಸ್ ಜೊತೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದೆ.
ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭಮನ್ ಗಿಲ್ ಅವರು ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯವೊಂದನ್ನು ವೀಕ್ಷಿಸಿದ್ದಾರೆ. ಬ್ರೆಜಿಲ್ ತಂಡದ ದಿಗ್ಗಜ ಮಾಜಿ ಆಟಗಾರ ರೊನಾಲ್ಡಿನೊ ಜೊತೆಗೆ ಕುಳಿತು ಪಂದ್ಯ ವೀಕ್ಷಿಸಿದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಿಲ್ ಅವರು ಬ್ರೆಜಿಲ್ ತಂಡದ ಅಭಿಮಾನಿಯಾಗಿದ್ದಾರೆ. ನೇಮರ್ ಜೂನಿಯರ್ ಅಪ್ಪಟ ಅಭಿಮಾನಿಯಾಗಿರುವ ಗಿಲ್ ಅವರ ಪಂದ್ಯವನ್ನು ವೀಕ್ಷಿಸಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಘಟನೆಯೊಂದಕ್ಕೆ IND & IRE ನಡುವಿನ ಮೊದಲ T20 ಪಂದ್ಯ ಸಾಕ್ಷಿಯಾಗಿದೆ. ಕೇವಲ 19 ಎಸೆತಗಳಲ್ಲಿ 50 ರನ್ ಚಚ್ಚಿ ಸಂಭ್ರಮಿಸಿದ್ದ ಅಭಿಷೇಕ್ ಶರ್ಮಾರ ಅರ್ಧಶತಕವನ್ನು ಅಧಿಕೃತ ದಾಖಲೆಯಿಂದ ಕೈಬಿಡಲಾಗಿದೆ. ಅಲ್ಲದೆ 1 ರನ್ ಮೈನಸ್ ಮಾಡಲಾಗಿದೆ. ಇದಕ್ಕೆ ಕಾರಣ ಲೆಗ್ ಬೈ ರನ್. 2ನೇ ಓವರ್ನಲ್ಲಿ ಅಭಿ ಲೆಗ್ ಸೈಡ್ನಲ್ಲಿ ಶಾರ್ಟ್ ಬಾಲ್ನ ಪುಲ್ ಮಾಡಲು ಯತ್ನಿಸಿದ್ರು. ಆದ್ರೆ ಚೆಂಡು ಬ್ಯಾಟ್ಗೆ ತಗುಲದೆ, ಥೈಪ್ಯಾಡ್ ಗೆ ಬಡಿದು ಫೈನ್ ಲೆಗ್ ಕಡೆ ಹೋಗಿತ್ತು. ಆ ವೇಳೆ ಅಭಿ 1 ರನ್ ಓಡಿದ್ದರು. ಹೀಗಾಗಿ 1 ರನ್ ಕಟ್ ಮಾಡಲಾಗಿದೆ.
ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಪಂದ್ಯದ ನಡುವೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಬೆನ್ ಸ್ಟೋಕ್ಸ್ ದಿಢೀರ್ ನಿವೃತ್ತಿಗೆ ಮುಖ್ಯ ಕಾರಣ ಮಾನಸಿಕ ಒತ್ತಡ ಮತ್ತು ಮನಸ್ತಾಪ ಎನ್ನಲಾಗುತ್ತಿದೆ. ಇತ್ತೀಚೆಗೆ ನಡೆದ ನೈಟ್ ಕ್ಲಬ್ ವಿವಾದದ ವೇಳೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತನ್ನ ಬೆನ್ನಿಗೆ ನಿಲ್ಲದೆ ಕೇವಲ ಶಿಸ್ತು ಕ್ರಮಕ್ಕೆ ಮುಂದಾಗಿದ್ದು ಅವರಲ್ಲಿ ಬೆಸರವನ್ನುಂಟು ಮಾಡಿದೆ ಎಂದು ತಿಳಿದು ಬಂ

ನೋಡಿರಿ

