ಬ್ರಹ್ಮಚಾರಿಗಳಾಗಿಯೇ ಉಳಿಯಬೇಕಾದ ಅನಿವಾರ್ಯತೆಯಲ್ಲಿ ಯುವಕರು – ವಿದ್ಯಾವಂತರಾದರೂ ಹೆಣ್ಣು ಸಿಗುತ್ತಿಲ್ಲವೇಕೆ?

ಬ್ರಹ್ಮಚಾರಿಗಳಾಗಿಯೇ ಉಳಿಯಬೇಕಾದ ಅನಿವಾರ್ಯತೆಯಲ್ಲಿ ಯುವಕರು – ವಿದ್ಯಾವಂತರಾದರೂ ಹೆಣ್ಣು ಸಿಗುತ್ತಿಲ್ಲವೇಕೆ?

ಈ ಹಳ್ಳಿಯ ಎಲ್ಲಾ ಯುವಕರು ವಿದ್ಯಾವಂತರು. ಎಲ್ಲರ ಬಳಿಯೂ ಬೇಕಾದಷ್ಟು ಆಸ್ತಿ, ಅಂತಸ್ತು ಇದೆ. ಆದ್ರೆ ಈ ಹಳ್ಳಿಯ ಯುವಕರು ಮಾತ್ರ ಇನ್ನೂ ಬ್ರಹ್ಮಚಾರಿಗಳಾಗಿಯೇ ಇದ್ದಾರಂತೆ. ಯುವಕರನ್ನು ಮದುವೆಯಾಗಲು ಯುವತಿಯರು ಹೆದರುತ್ತಾರೆ. ಹೆಣ್ಣು ಮಕ್ಕಳ ಪೋಷಕರು ಕೂಡ ಈ ಹಳ್ಳಿಗೆ ತಮ್ಮ ಮಕ್ಕಳನ್ನು ಮದುವೆ ಮಾಡಿ ಕೊಡಲು ಒಪ್ಪುತ್ತಿಲ್ಲವಂತೆ. ಇದಕ್ಕೆ ಕಾರಣ ಈ ಹಳ್ಳಿಯಲ್ಲಿರುವ ಒಂದು ಸಮಸ್ಯೆ. ಹೀಗಾಗಿ ಗ್ರಾಮಕ್ಕೆ ಹೆಣ್ಣು ಕೊಡಲು ಹೆದರುತ್ತಿದ್ದಾರೆ.

ಈ ಹಳ್ಳಿ ಇರುವುದು ಬಿಹಾರದ ಜಮುಯಿ ಜಿಲ್ಲೆಯಲ್ಲಿ. ಜಿಲ್ಲಾ ಕೇಂದ್ರದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಬರುತ್ತಾ ಗ್ರಾಮದ ಐದನೇ ವಾರ್ಡ್‌ನ ಮಹಾದಲಿತ ಬಸ್ತಿ ಎಂಬ ಹಳ್ಳಿಯ ಕರುಣಾಜನಕ ಕಥೆ. ಈ ಹಳ್ಳಿಗೆ ಮದುವೆಯಾಗಿ ಬರಲು ಯುವತಿಯರು ಹೆದರುತ್ತಾರೆ. ಯಾವ ತಂದೆಯೂ ಕೂಡ ತನ್ನ ಮಗಳನ್ನು ಮದುವೆ ಮಾಡಿಕೊಡಲು ಒಪ್ಪುತ್ತಿಲ್ಲ. ಈ ಗ್ರಾಮದಲ್ಲಿ ಯಾರಾದರೂ ತೀವ್ರ ಅನಾರೋಗ್ಯಕ್ಕೆ ಒಳಗಾದರೆ ಜನರು ಹೆದರುತ್ತಾರೆ. ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಸಾವನ್ನಪ್ಪಿದರೆ..! ಎಂದು ಭೀತಿ ಎದುರಾಗಿದೆ.

ಇದನ್ನೂ ಓದಿ: ಈ ಹಳ್ಳಿಗೆ ಹೋದರೆ ಕಾರು, ಬಂಗಲೆ ಎಲ್ಲಾನೂ ಫ್ರೀ! – ಸೂಪರ್‌ ವಿಲೇಜ್ ಬಗ್ಗೆ ನಿಮಗೆ ಗೊತ್ತಾ?

ಮಹಾದಲಿತ ಬಡಾವಣೆಯಲ್ಲಿ ಸುಮಾರು 50 ಕುಟುಂಬಗಳು ವಾಸಿಸುತ್ತಿವೆ. ಸುಸಜ್ಜಿತ ರಸ್ತೆಯನ್ನು ಮರೆತುಬಿಡಿ, ಗ್ರಾಮಕ್ಕೆ ಹೋಗಲು ಸಣ್ಣ ರಸ್ತೆ ಕೂಡ ಇಲ್ಲ. ಅವರು ಹೊಲಗಳ ಮೂಲಕ ಹೋಗಬೇಕು. ಮಳೆಗಾಲದಲ್ಲಿ  ಈ ಗ್ರಾಮ ದ್ವೀಪದಂತೆ ಆಗುತ್ತದೆ. ಮನೆಯಿಂದ ಹೊರಬರಲಾಗದೇ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಹೀಗಾಗಿಯೇ ಈ ಹಳ್ಳಿಯಲ್ಲಿ ವಾಸಿಸಲು ಭಯಪಡುತ್ತಿದ್ದಾರೆ.

ಮುರಿದು ಬೀಳುವ ಮದುವೆಗಳು!

ಮದುವೆಗೆ ಸಂಬಂಧಗಳು ಸಾಕಷ್ಟು ಬರುತ್ತವೆ. ಆದರೆ ಮದುವೆ ಮಾತುಕತೆ ಮುಗಿದು ಮದುವೆ ಸಿದ್ಧತೆ ಮಾಡಿಕೊಳ್ಳುವಾಗ ವಿವಾಹ ಮುರಿದು ಬೀಳುತ್ತದೆ ಎನ್ನುತ್ತಾರೆ ಗ್ರಾಮಸ್ಥರು. ಪ್ರತಿ ಹುಡುಗನ ಮದುವೆಗೆ 10-11 ಸಂಬಂಧಗಳನ್ನು ನೋಡಬೇಕು. ಸಾಕಷ್ಟು ಪ್ರಯತ್ನಗಳ ನಂತರವೇ ಮದುವೆ ನಡೆಯುತ್ತದೆ. ಇಲ್ಲಿನ ಜನರ ದೊಡ್ಡ ಸಮಸ್ಯೆ ಎಂದರೆ ಅವರ ಮನೆಗೆ ರಸ್ತೆಯೇ ಇಲ್ಲ. ಮಳೆಗಾಲದಲ್ಲಿ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಅವರು ಮನೆಯಿಂದ ಅರ್ಧ ಕಿಲೋಮೀಟರ್ ದೂರದ ಹೊಲಗಳಲ್ಲಿ ಹಾದು ಹೋಗಬೇಕು. ಮುಖ್ಯ ರಸ್ತೆಗೆ ಹೋಗಲು ಮೊಣಕಾಲು ಆಳದ ನೀರು ಮತ್ತು ಕೆಸರಿನ ಮೂಲಕ ಸಾಗಬೇಕು. ಇದೇ ಕಾರಣಕ್ಕೆ ಅಪ್ಪಂದಿರು ಈ ಹಳ್ಳಿಗೆ ಮಗಳನ್ನು ಮದುವೆ ಮಾಡಿಕೊಡಲು ಬಯಸುವುದಿಲ್ಲ.

ಹೆಗಲ ಮೇಲೆ ಬ್ಯಾಗ್ ಹೊತ್ತುಕೊಂಡು ಶಾಲೆ ತಲುಪಬೇಕು

ಗ್ರಾಮದ ಮಧ್ಯಭಾಗದಲ್ಲಿ ಸರ್ಕಾರಿ ಶಾಲೆಯೂ ಇದೆ. ಈ ಬಡಾವಣೆಯ ಹತ್ತಕ್ಕೂ ಹೆಚ್ಚು ಮಕ್ಕಳು ಪ್ರತಿದಿನ ಶಾಲೆಗೆ ಹೋಗುತ್ತಾರೆ. ಮಳೆಗಾಲದಲ್ಲಿ ಆರು ತಿಂಗಳ ಕಾಲ ಇದೇ ಸ್ಥಿತಿ ಇದ್ದು, ರಸ್ತೆಗಳು ನೀರಿನಿಂದ ತುಂಬಿರುತ್ತವೆ. ಕೆಲವೊಮ್ಮೆ ನೀರು ಮೊಣಕಾಲುಗಳ ಮೇಲೆ ಹರಿಯಲು ಪ್ರಾರಂಭಿಸುತ್ತದೆ. ಇದಾದ ನಂತರ ಚಿಕ್ಕ ಮಕ್ಕಳು ಈ ಕಡೆ ಬರಲು ಮತ್ತು ಹೋಗಲು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಸಮಯದಲ್ಲಿ ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಶಾಲೆ ತಲುಪಬೇಕಾಗಿದೆ.

ಗ್ರಾಮದ ಮುಖ್ಯಸ್ಥರು ಹೇಳಿದ್ದೇನು?

ಗ್ರಾ.ಪಂ.ಅಧ್ಯಕ್ಷೆ ರಾಜ್ ಬರುವತ್ತದ ಚಂಪಾದೇವಿ ಮಾತನಾಡಿ, ನಿವೇಶನ ಇಲ್ಲದ ಕಾರಣ ರಸ್ತೆ ನಿರ್ಮಾಣಕ್ಕೆ ತೊಂದರೆಯಾಗಿದೆ. ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಿಸಲು ಆಗುತ್ತಿಲ್ಲ. ಅದರಿಂದ ತೊಂದರೆಯಾಗಿದೆ.

ಜಮೀನು ಮಾಲೀಕರ ಅಭಿಮತ ಜಮೀನಿನ ಮಾಲೀಕ ಶಾಂತನು ಪಾಂಡೆ ಮಾತನಾಡಿ, ರಸ್ತೆ ನಿರ್ಮಿಸಲು ಜಮೀನಿನ ಸಮಸ್ಯೆ ಇಲ್ಲ, ಈ ಪ್ರದೇಶಕ್ಕೆ ಬರಲು ಭೂಮಿ ಇದ್ದು, ಇಲ್ಲಿ ರಸ್ತೆ ನಿರ್ಮಾಣವಾಗಬೇಕು, ಇದಕ್ಕಾಗಿ ನಮ್ಮ ಜಮೀನು ನೀಡಲು ಸಿದ್ಧರಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಯತ್ನ ಮಾಡಿಲ್ಲ.

suddiyaana