ಬುಮ್ರಾಗಿಲ್ಲ ಬದಲಿ.. ಪಾಂಡ್ಯಗಿಲ್ಲ ರಿಪ್ಲೇಸ್ – 10 ವರ್ಷಗಳಾದ್ರೂ ಪರ್ಯಾಯ ಸಿಕ್ಕಿಲ್ವಾ?
ಹೊಸ ಬ್ರಹ್ಮಾಸ್ತ್ರಗಳ ತಯಾರಿ ಯಾಕಿಲ್ಲ..?

ವಿಶ್ವಕ್ರಿಕೆಟ್ನಲ್ಲಿ ಭಾರತವೇ ಬಾಸ್. ಅದ್ರಲ್ಲಿ ಡೌಟೇ ಇಲ್ಲ. ಇಡೀ ಕ್ರಿಕೆಟ್ ಜಗತ್ತನ್ನೇ ಆಳಬಲ್ಲ ಸಮರ್ಥ ಕ್ರಿಕೆಟಿಗರ ಉದಯ ಕೂಡ ಇಲ್ಲೇ ಆಗ್ತಿದೆ. ಇಂಟ್ರೆಸ್ಟಿಂಗ್ ಏನಂದ್ರೆ ಟೀಂ ಇಂಡಿಯಾದಲ್ಲಿ ಲೆಜೆಂಡರ್ಸ್ನೂ ಮೀರಿಸೋ ರೇಂಜ್ನಲ್ಲಿ ಯಂಗ್ ಬ್ಯಾಟರ್ಸ್ ಬರ್ತಿದ್ದಾರೆ. ದಿಗ್ಗಜ ಬೌಲರ್ಗಳನ್ನ ಚೆಂಡಾಡ್ತಿದ್ದಾರೆ. ಆದ್ರೆ ವಾಟ್ ಅಬೌಟ್ ಬೌಲಿಂಗ್ ಯುನಿಟ್ ಅಂದ್ರೆ ಅಲ್ಲಿ ಕಾನ್ಫಿಡೆನ್ಸ್ಗಿಂತ ಜಾಸ್ತಿ ಟೆನ್ಷನ್ ಇದೆ. ಯಾಕಂದ್ರೆ ಬೌಲಿಂಗ್ ವಿಭಾಗದಲ್ಲಿ ಟ್ಯಾಲೆಂಟೆಡ್ ಪ್ಲೇಯರ್ಸ್ ಕೊರತೆ ಇದೆ. ಈಗ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ವಿಚಾರನೇ ತಗೊಳ್ಳಿ. ಇವ್ರಿಬ್ರೂ ಭಾರತದ ಗೆಲುವಿನ ಹೀರೋಗಳು. ಆದ್ರೆ ಇವ್ರಿಬ್ರು ತಂಡದಲ್ಲಿಲ್ಲ ಅಂದ್ರೆ ಬೌಲಿಂಗ್ ಸ್ಕ್ವಾಡ್ ಲೀಡ್ ಮಾಡೋ ಸಾಮರ್ಥ್ಯ ಯಾರಲ್ಲೂ ಇಲ್ಲ.
ಇದನ್ನೂ ಓದಿ : 4-3=1.. ಗಿಲ್ ಗೆ ಸಿಗ್ತಿಲ್ಲ ಗೆಲುವು – ODIಗೂ ಕುತ್ತು ತಂದ ಗಂಭೀರ್
ಭಾರತ ತಂಡದ ಬೌಲಿಂಗ್ ಬ್ರಹ್ಮಾಸ್ತ್ರ ಜಸ್ಪ್ರೀತ್ ಬುಮ್ರಾ. ಅವರ ವಿಶಿಷ್ಟ ಬೌಲಿಂಗ್ ಶೈಲಿ, ಮೂರೂ ಮಾದರಿಯ ಕ್ರಿಕೆಟ್ನಲ್ಲಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯದಿಂದಾಗಿಯೇ ಒನ್ಸ್ ಇನ್ ಎ ಜನರೇಷನ್ ಅಂದ್ರೆ ಶತಮಾನಕ್ಕೊಬ್ಬ ಬೌಲರ್ ಅಂತಾನೇ ಕರೆಯಲಾಗುತ್ತೆ. ಸೋ ಬುಮ್ರಾಗೆ ಕಾಂಪಿಟೇಷನ್ ಕೊಡೋ ಥರ ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಮತ್ತೊಬ್ಬ ಬೌಲರ್ ಇಲ್ಲ. ಇನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಅಷ್ಟೇ. ಬ್ಯಾಟಿಂಗ್, ಬೌಲಿಂಗ್ ಎರಡ್ರಲ್ಲೂ ಟೀಂ ಇಂಡಿಯಾಗೆ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡೋ ವಾರಿಯರ್. ಹೀಗಿದ್ರೂ ಪಾಂಡ್ಯ ಆಬ್ಸೆನ್ಸ್ನಲ್ಲಿ ಅವ್ರನ್ನ ರಿಪ್ಲೇಸ್ ಮಾಡಿ ಪಂದ್ಯ ಗೆಲ್ಲಿಸೋ ಥರ ಮತ್ತೊಬ್ಬ ಆಲ್ರೌಂಡರ್ ಭಾರತ ತಂಡದಲ್ಲಿಲ್ಲ. ಇವ್ರಿಬ್ರು ಇಲ್ಲ ಅಂದ್ರೆ ಬೇರೆಯವ್ರ ಮೇಲೆಯೂ ಭರವಸೆ ಇಡೋ ಥರ ಪ್ಲೇಯರ್ಸ್ ಇನ್ನೂ ತಯಾರಾಗಿಲ್ಲ.
ಶತಮಾನಕ್ಕೊಬ್ಬ ಬೌಲರ್ ಬುಮ್ರಾ!
ಬುಮ್ರಾ ಅವರ ವಿಚಿತ್ರ ಬೌಲಿಂಗ್ ಆ್ಯಕ್ಷನ್ ಜಡ್ಜ್ ಮಾಡಲು ಬ್ಯಾಟರ್ಸ್ ಗೆ ಕಷ್ಟ
ನ್ಯೂ ಬಾಲ್ ನಲ್ಲಿ ಸ್ವಿಂಗ್, ಡೆತ್ ಓವರ್ ಗಳಲ್ಲಿ ಯಾರ್ಕರ್ & ಸ್ಲೋವರ್ ಬಾಲ್ಸ್
ಎಂಥದ್ದೇ ಪ್ರೆಶರ್ ಟೈಮಲ್ಲೂ ಬ್ಯಾಟರ್ಸ್ ಕಟ್ಟಿ ಹಾಕಿ ಮ್ಯಾಚ್ ವಿನ್ನಿಂಗ್ ಸಾಮರ್ಥ್ಯ
ಪಂದ್ಯದ ಎಲ್ಲಾ ಹಂತಗಳಲ್ಲಿಯೂ ವಿಕೆಟ್ ತೆಗೆದು ಬ್ರೇಕ್ ಥ್ರ್ಯೂ ತಂದುಕೊಡ್ತಾರೆ
ಪ್ರಸೆಂಟ್ ಬೌಲರ್ ಗಳ ಪೈಕಿ ಅತೀ ಕಡಿಮೆ ಎಕಾನಮಿಯಲ್ಲಿ ರನ್ಸ್ ಕೊಡ್ತಿದ್ದಾರೆ
ಒಟ್ಟು 238 ಪಂದ್ಯಗಳಿಂದ 504 ವಿಕೆಟ್ಸ್ ಪಡೆದಿದ್ದು ಕೇವಲ 3.73 ಎಕಾನಮಿ
ಬುಮ್ರಾ ಬೌಲಿಂಗ್ ಮಾಡುವಾಗ ಇತರೆ ಬೌಲರ್ಸ್ ಕೂಡ ನಿಯಂತ್ರಣ
ಬುಮ್ರಾ ಬೌಲಿಂಗ್ ಇದ್ರೆ ಎದುರಾಳಿ ಬ್ಯಾಟರ್ ಗಳ ಮೇಲೆ ಹೆಚ್ಚಿನ ಪ್ರೆಶರ್
ಈ ಎಲ್ಲಾ ಕ್ವಾಲಿಟೀಸ್ ಇರೋ ಮತ್ತೊಬ್ಬ ಬೌಲರ್ ಇನ್ನೂ ಕೂಡ ಟೀಂ ಇಂಡಿಯಾದಲ್ಲಿ ತಯಾರಾಗಿಗಿಲ್ಲ. ಬುಮ್ರಾರಂತೆಯೇ ಹಾರ್ದಿಕ್ ಪಾಂಡ್ಯಗೂ ಕೂಡ ರಿಪ್ಲೇಸ್ ಪ್ಲೇಯರ್ ಸಿಕ್ಕಿಲ್ಲ.
ಪಾಂಡ್ಯ ಬೆಸ್ಟ್ ಆಲ್ ರೌಂಡರ್!
ಬ್ಯಾಟಿಂಗ್ & ಬೌಲಿಂಗ್ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಪಾಂಡ್ಯ ಬೆಸ್ಟ್
ಪವರ್ ಪ್ಲೇ ಅಥವಾ ಡೆತ್ ಓವರ್ ಗಳಲ್ಲೂ ಮ್ಯಾಚ್ ವಿನ್ ಬೌಲಿಂಗ್
ಮೇನ್ ಬೌಲರ್ಸ್ ಕೈಕೊಟ್ಟಾಗ್ಲೂ ಪಾಂಡ್ಯ ಕಡೆಯಿಂದ ಬಿಗ್ ಬ್ರೇಕ್ ಥ್ರ್ಯೂ
ಕ್ಯಾಪ್ಟನ್ಸಿ ಅನುಭವ ಕೂಡ ಇರೋದ್ರಿಂದ ಒತ್ತಡ ನಿಭಾಯಿಸುವ ಗುಣ
ಐಸಿಸಿ ಟೂರ್ನಮೆಂಟ್ ಗಳಲ್ಲಿ ಭಾರತ ಕಪ್ ಗೆಲುವಿನ ರೂವಾರಿ
ಹೀಗೆ ಪಾಂಡ್ಯ ಕೂಡ ಮ್ಯಾಚ್ ವಿನ್ನರ್ ಬೌಲರ್. ಆದ್ರೆ ಪಾಂಡ್ಯಗೆ ಇಂಜುರಿಯಾದ್ರೆ ಅಥವಾ ಸರಣಿಯಿಂದ ಹೊರಗಿದ್ರೆ ಅವ್ರ ಪ್ಲೇಸ್ನಲ್ಲಿ ನಿಂತು ಬ್ಯಾಟಿಂಗ್ ಬೌಲಿಂಗ್ ಎರಡ್ರಲ್ಲೂ ಇಂಪ್ಯಾಕ್ಟ್ ಮಾಡೋ ಮತ್ತೊಬ್ಬ ಪ್ಲೇಯರ್ ಇನ್ನೂ ಭಾರತ ತಂಡದಲ್ಲಿ ಸಿಕ್ಕಿಲ್ಲ. ಭಾರತದ ಪರ ಮೂರೂ ಮಾದರಿಯಲ್ಲಿ 4,724 ರನ್ಸ್ ಗಳಿಸಿರೋ ಪಾಂಡ್ಯ 222 ವಿಕೆಟ್ಗಳನ್ನೂ ಪಡೆದಿದ್ದಾರೆ. ಇನ್ನು ಟಿ-20ಐನಲ್ಲಿ ಸಾವಿರ ಪ್ಲಸ್ ರನ್ಸ್ ಹಾಗೇ 100+ ವಿಕೆಟ್ ಪಡೆದ ಮೊದಲ ವೇಗದ ಆಲ್ ರೌಂಡರ್ ಆಗಿದ್ದಾರೆ. ಌಕ್ಚುಲಿ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರೂ ಒಟ್ಟಿಗೇ ಭಾರತಕ್ಕೆ ಡೆಬ್ಯೂ ಮಾಡಿದ್ದು. 2016ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸಿರೀಸ್ನಲ್ಲಿ 3 ದಿನಗಳ ಅಂತರದಲ್ಲೇ ಭಾರತದ ಪರ ಅಖಾಡಕ್ಕಿಳಿದಿದ್ರು. ಅಂದ್ರೆ ಈಗ 10 ವರ್ಷ ಆಯ್ತು. ಈಗ್ಲೂ ಕೂಡ ಅವ್ರ ಆಬ್ಸೆನ್ಸ್ ತಂಡಕ್ಕೆ ಕಾಡುತ್ತೆ ಅಂದ್ರೆ ಇದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಫಾಲ್ಟ್. ಹಾಗಂತ ನಾವಿಲ್ಲಿ ಮತ್ತೊಬ್ಬ ಬುಮ್ರಾ ಅಥವಾ ಪಾಂಡ್ಯ ಬೇಕಂತ ಹೇಳ್ತಿಲ್ಲ. ಅಟ್ಲೀಸ್ಟ್ ಅವ್ರ ಆಬ್ಸೆನ್ಸ್ ಇದ್ರೂ ಮ್ಯಾಚ್ ವಿನ್ ಮಾಡಿಸೋ ಬೌಲರ್ಗಳನ್ನ ರೆಡಿ ಮಾಡಿ ಅಂತಷ್ಟೇ ಕೇಳ್ತಿರೋದು.

ನೋಡಿರಿ

