ಟೆಲಿಫೋನ್ ಗಳ ವೈರ್ ಸುರುಳಿಯಾಗಿ ಯಾಕಿರುತ್ತೆ – ಲ್ಯಾಂಡ್ ಲೈನ್ ವೈರ್ ಬಗ್ಗೆ ಇಲ್ಲಿದೆ ಅಚ್ಚರಿಯ ಮಾಹಿತಿ

ಟೆಲಿಫೋನ್ ಗಳ ವೈರ್ ಸುರುಳಿಯಾಗಿ ಯಾಕಿರುತ್ತೆ – ಲ್ಯಾಂಡ್ ಲೈನ್ ವೈರ್ ಬಗ್ಗೆ ಇಲ್ಲಿದೆ ಅಚ್ಚರಿಯ ಮಾಹಿತಿ

ನೀವೆಲ್ಲಾ ಲ್ಯಾಂಡ್​ಲೈನ್ ಫೋನ್ ನೋಡೇ ಇರ್ತೀರಾ. ಈಗ ಮನೆಗಳಲ್ಲಿ ಇಲ್ಲ ಅಂದ್ರೂ ಆಫೀಸ್ ಗಳಲ್ಲಿ ಬಳಸುತ್ತಾರೆ. ಅಷ್ಟೇ ಯಾಕೆ ಮನೆಗಳಲ್ಲಿ, ಆಫೀಸ್ ಗಳಲ್ಲಿ ನೋಡಿಲ್ಲ ಅಂದ್ರೂ ಟಿವಿಗಳಲ್ಲಾದ್ರೂ ನೋಡೇ ಇರ್ತೀರಾ. ಆದ್ರೆ ಈ ಫೋನ್​ಗಳ ವೈರ್ ಯಾಕೆ ಸುರುಳಿಯಾಗಿರುತ್ತೆ ಅಂತಾ ಯೋಚಿಸಿದ್ದೀರಾ?

ಇದನ್ನೂ ಓದಿ : ಮಟ ಮಟ ಮಧ್ಯಾಹ್ನವೂ ಮೈಕೊರೆಯುವ ಚಳಿ! – ಹಿಂದೆಂದೂ ಕಂಡು ಕೇಳರಿಯದ ಚಳಿಗೆ ತತ್ತರಿಸಿದ ಜನ!

ಈಗಂತೂ ಸ್ಮಾರ್ಟ್ ಫೋನ್ ಜಮಾನ. ಮನೆಗಳಲ್ಲಿ ಲ್ಯಾಂಡ್​ಲೈನ್ ಬಳಸೋರೇ ಇರಲ್ಲ. ಆದ್ರೆ ಕೆಲ ಆಫೀಸ್​ಗಳಲ್ಲಿ ಈಗ್ಲೂ ಟೆಲಿಫೋನ್ ಬಳಸ್ತಾರೆ. ಈ ಲ್ಯಾಂಡ್​ಲೈನ್ ಗಳ ವೈರ್​ಗಳು ಮಾತ್ರ ನೇರವಾಗಿರಲ್ಲ. ಯಾಕಂದ್ರೆ    ಪವರ್ ಸೇವಿಂಗ್ಸ್​​ಗಾಗಿ ಪ್ಲಾಸ್ಟಿಕ್ ನಿರೋಧಕದಲ್ಲಿ ವೈರ್​ಗಳನ್ನು ಲೇಪಿಸಲಾಗಿರುತ್ತದೆ. ನಂತ್ರ ವಿಶೇಷ ಪ್ಲಾಸ್ಟಿಕ್​ನಲ್ಲಿ ಮುಚ್ಚಲಾಗುತ್ತೆ. ಅದು ಬಳಿಕ ಸ್ಪ್ರಿಂಗ್ ಅಥವಾ ಕಾಯಿಲ್ ಆಗಿ ರೂಪುಗೊಳ್ಳುತ್ತದೆ. ಈ ಹಂತದಲ್ಲಿ ಕೇಬಲ್ ಸುರುಳಿಯಾಕಾರಕ್ಕೆ ತಿರುಗುತ್ತದೆ. ಅಲ್ಲದೆ ಟೆಲಿಫೋನ್​ಗಳಲ್ಲಿ ಮಾತನಾಡುವಾಗ, ಜನ ಫೋನ್​ನಿಂದ ರಿಸೀವರ್  ಎಳೆಯುತ್ತಾರೆ. ಇಂಥಾ ಟೈಮಲ್ಲಿ ಕಾಯಿಲ್ ವೈರ್​ಗಳು ಹೆಚ್ಚು ಮೃದುವಾಗಿರೋದ್ರಿಂದ ದೂರದವರೆಗೆ ವಿಸ್ತರಿಸಬಹುದು. ಆದ್ರೆ ರಿಸೀವರ್ ಅನ್ನು ಮತ್ತೆ ಫೋನ್​ನಲ್ಲಿ ಇಟ್ಟಾಗ, ಈ ವೈರ್​ಗಳು ಮತ್ತೆ ಅದರ ಮೂಲ ಆಕಾರವನ್ನೇ ಪಡೆದುಕೊಳ್ಳುತ್ತವೆ. ಈ ರೀತಿಯಾಗಿ ಆಗುವುದರಿಂದ ವೈರ್​ಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಅಲ್ಲದೆ ಗಂಟು ಬೀಳುವ, ಡ್ಯಾಮೇಜ್ ಆಗುವ ಸಾಧ್ಯತೆಯೂ ಕಡಿಮೆ. ಇದೇ ಕಾರಣಕ್ಕೆ ಟೆಲಿಫೋನ್​ಗಳಿಗೆ ಸುರುಳಿಯಾಕಾರಾದ ವೈರ್​ಗಳನ್ನ ಮಾಡಿರುತ್ತಾರೆ.

Shantha Kumari