ಒಂದು ನಿಂಬೆ ಹಣ್ಣಿನ ದರ ಒಂದು ಕೆಜಿ ಟೊಮ್ಯಾಟೋ ಬೆಲೆಗೆ ಸಮ! – ಬಿಸಿಲ ಝಳದಂತೆ ದರವೂ ಏರಿಕೆ

ಒಂದು ನಿಂಬೆ ಹಣ್ಣಿನ ದರ ಒಂದು ಕೆಜಿ ಟೊಮ್ಯಾಟೋ ಬೆಲೆಗೆ ಸಮ! – ಬಿಸಿಲ ಝಳದಂತೆ ದರವೂ ಏರಿಕೆ

ಬಿಸಿಲಿನ ತಾಪಕ್ಕೆ ಜನರು ಹೈರಾಣಗಿದ್ದಾರೆ. ಸುಡು ಬಿಸಿಲಿನಲ್ಲಿ ದೇಹಕ್ಕೆ ತಂಪು ನೀಡಬೇಕಿದ್ದ ನಿಂಬೆ ಹಣ್ಣು ಕೂಡ ಈಗ ಬಲು ದುಬಾರಿ ಆಗಿದೆ. ನಿಂಬೆ ಹಣ್ಣಿನ  ಬೆಲೆ ಏರಿಕೆಯಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಇದನ್ನೂ ಓದಿ: ಇದೇ ಮೊದಲ ಬಾರಿಗೆ ಗಾಜಾದಲ್ಲಿ ಕದನ ವಿರಾಮಕ್ಕೆ ಆಗ್ರಹಿಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿ!

ಹೌದು, ಈ ಬೇಸಿಗೆಯಲ್ಲಿ ಹೊರ ಹೋಗಿ ಬಂದರೆ ಸಾಕು ಫುಲ್ ಸುಸ್ತು. ಮನೆಗೆ ಬಮದ ಕೂಡಲೆ ತಣ್ಣಗೆ ನಿಂಬೆ ಹಣ್ಣಿನ ಶರಬತ್ತು ಕುಡಿಯಬೇಕು ಎನಿಸಿದರೇ ಈಗ ಅದೂ ಕೂಡ ಆಗುವುದಿಲ್ಲ. ಏಕೆಂದರೆ ದಿನ ದಿನಕ್ಕೂ ಗಗನಕ್ಕೆ ಏರುತ್ತಿದೆ ನಿಂಬೆ ಹಣ್ಣಿನ ಬೆಲೆ. ಸದ್ಯ ಬೆಂಗಳೂರಿನಲ್ಲಿ ನಿಂಬೆ ಹಣ್ಣಿನ ಬೆಲೆ ಇವತ್ತು ಇದ್ದಂತೆ ನಾಳೆ ಇರುವುದಿಲ್ಲ. ಶರಬತ್ತು, ಲೈಮ್ ಸೋಡಾ ಕುಡಿಯುವುದು ಅಂದುಕೊಂಡಷ್ಟು ಸುಲಭವಲ್ಲ. ಒಂದು ಕೆಜಿ ಟೊಮೆಟೋ ಬೆಲೆಗೆ ಒಂದೇ ಒಂದು ನಿಂಬೆ ಹಣ್ಣು ಸಿಗುವಂತಾಗಿದೆ ಪರಿಸ್ಥಿತಿ. ಒಂದು ಕೆಜಿ ಟೊಮೆಟೋ ಬೆಲೆ 10 ರಿಂದ 12 ರೂಪಾಯಿಯಿದೆ. ಹಾಗೆ ಒಂದು ನಿಂಬೆ ಹಣ್ಣಿನ ಬೆಲೆ ಕೂಡ 12 ರೂಪಾಯಿಯಾಗಿದೆ.

ಸಾಮಾನ್ಯ ಗಾತ್ರದ ನಿಂಬೆ ಹಣ್ಣಿಗೆ 10 ರೂ ಇದೆ. ಇನ್ನು ಸಣ್ಣ ಗಾತ್ರದ ನಿಂಬೆ ಹಣ್ಣಿಗೆ 5 ರಿಂದ 7 ರೂ ಇದೆ. ಇನ್ನು ದೊಡ್ಡ ಗಾತ್ರದ ನಿಂಬೆ ಹಣ್ಣು 12ರಿಂದ 15 ರೂ.ಗೆ ಮಾರಾಟವಾಗುತ್ತಿದೆ. ನಿಂಬೆ ಶರಬತ್ತಿನ ಬೆಲೆಯೂ ಹೆಚ್ಚಳವಾಗಿದೆ.

ಕಾರಣವೇನು?

ಮಾರುಕಟ್ಟೆಯಲ್ಲಿ ನಿಂಬೆ ಆವಕ ಕಡಿಮೆ ಆಗಿದ್ದರಿಂದ ಸಾಮಾನ್ಯಕ್ಕಿಂತ ದರ ಹೆಚ್ಚಾಗಿದೆ. ಈ ಬಾರಿ ಬರ ಗಾಲದ ಹೊಡೆತ ಬಿದ್ದಿದ್ದರಿಂದ ನಿಂಬೆ ಹಣ್ಣಿನ ಉತ್ಪಾದನೆ ಅಷ್ಟೊಂದು ಆಗಿಲ್ಲ. ನೀರಿಲ್ಲದೆ ಇಳುವರಿ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಮಾರು ಕಟ್ಟೆಯಲ್ಲಿ ಬೇಡಿಕೆ ಇರುವಷ್ಟು ನಿಂಬೆ ಹಣ್ಣು ಪೂರೈಕೆ ಆಗುತ್ತಿಲ್ಲ.

Shwetha M