ಮಕ್ಕಳಲ್ಲಿ ಬೊಜ್ಜು ಎಷ್ಟಿದೆ ಗೊತ್ತಾ? – ನಿಮ್ಮ ಮಗುವಿಗೆ ನೀವೇ ಶತ್ರು ಆಗ್ತೀರಾ?

ಮಕ್ಕಳಲ್ಲಿ ಬೊಜ್ಜು ಎಷ್ಟಿದೆ ಗೊತ್ತಾ? – ನಿಮ್ಮ ಮಗುವಿಗೆ ನೀವೇ ಶತ್ರು ಆಗ್ತೀರಾ?

ಮಕ್ಕಳಲ್ಲಿ ಕಾಡುತ್ತಿರುವ ಬೊಜ್ಜು ಸಮಸ್ಯೆ  ಅಪ್ಪ-ಅಮ್ಮ ಪಾಲಿಗೆ ದೊಡ್ಡ ಟೆನ್ಷನ್.. ಭಾರತದಲ್ಲಿ 1.25 ಕೋಟಿ ಮಕ್ಕಳು ಬೊಜ್ಜು ಸಮಸ್ಯೆ ಬಳಲುತ್ತಿದ್ದಾರೆ ಎಂಬ ಆತಂಕಕಾರಿ ವರದಿಯೊಂದು ಹೊರಬಿದ್ದಿದೆ. ಅಷ್ಕಕ್ಕೂ ಸಣ್ಣ ವಯಸ್ಸಿನಲ್ಲಿಯೇ ಬೊಜ್ಜು ಸಮಸ್ಯೆ ಕಾಣಿಸಿಕೊಳ್ಳಲು ಕಾರಣವೇನು? ಬೊಜ್ಜು ಸಮಸ್ಯೆಯಿಂದ ಮಕ್ಕಳಿಗೆ ಏನೆಲ್ಲಾ ತೊಂದರೆಗಳು ಕಾಡುತ್ತವೆ? ಈ ಸಮಸ್ಯೆಗೆ ಪರಿಹಾರವೇನು? ಇವೆಲ್ಲದ್ರ ಬಗ್ಗೆ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ಮಾರ್ಗ ಹೇಗಿದೆ? – ಇದರಲ್ಲಿ ಪ್ರಯಾಣ ಮಾಡೊದು ಎಷ್ಟು ಸೇಫ್?

ಕಾಲಕ್ಕೆ‌ ತಕ್ಕ ಕೋಲ ಎಂಬ ಮಾತಿದೆ. ಹಾಗೆಯೇ ಈಗಿನ ಕಾಲಕ್ಕೆ ತಕ್ಕಂತೆ ಜನರ ಜೀವನ ಶೈಲಿಯಿಂದ ಹಿಡಿದು, ತಿನ್ನೋ ಊಟ, ಆಡೋ ಆಟದವರೆಗೆ ಎಲ್ಲಾ ಬದಲಾಗ್ತಿದೆ. ಆದ್ರೆ ಈ ಬದಲಾವಣೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಬದಲಾದ ಜೀವನಶೈಲಿಯಿಂದಾಗಿ ಪುಟಾಣಿ ಮಕ್ಕಳಲ್ಲಿ ಬೊಜ್ಜು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದೀಗ ಭಾರತದಲ್ಲಿ 1.25 ಕೋಟಿ ಮಕ್ಕಳು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಶಾಕಿಂಗ್ ವರದಿ ಬಹಿರಂಗವಾಗಿದೆ. 1990ಕ್ಕೆ ಹೋಲಿಸಿದರೆ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಪ್ರಮಾಣದಲ್ಲಿ 40 ಲಕ್ಷ ಏರಿಕೆಯಾಗಿದೆ. ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, 2022ರಲ್ಲಿ ಭಾರತದಲ್ಲಿ 5ರಿಂದ 19ರ ವಯೋಮಾನದ ನಡುವಿನ 1.25 ಕೋಟಿ ಮಕ್ಕಳು ಬೊಜ್ಜಿನ ಸಮಸ್ಯೆಗೆ ತುತ್ತಾಗಿದ್ರು.. ಈ ಪೈಕಿ 73 ಲಕ್ಷ ಬಾಲಕರು ಮತ್ತು 52 ಲಕ್ಷ ಬಾಲಕಿಯರಿದ್ದಾರೆ.

ಈ ವರದಿಯಿಂದ ಭಾರತದಲ್ಲಿ ಬಾಲ್ಯದ ಬೊಜ್ಜಿನ ಸಮಸ್ಯೆ ಸಾಂಕ್ರಾಮಿಕ ರೋಗದಂತೆ ಬದಲಾಗಿರುವುದು ಅರ್ಥವಾಗುತ್ತದೆ. ಇನ್ನು ಬಾಲ್ಯದ ಸ್ಥೂಲಕಾಯತೆಗೆ ಕಾರಣವೇನು ಅಂತಾ ನೋಡೊದಾದ್ರೆ.. ಮಕ್ಕಳ ಆಟ ಬದಲಾಗಿರುವುದೇ ಮುಖ್ಯ ಕಾರಣ.. ಮಕ್ಕಳ‌ ಪಾಲಿಗೆ ಮೊಬೈಲ್, ಕಂಪ್ಯೂಟರ್, ಟ್ಯಾಬ್ , ಟಿವಿಯೇ ಪ್ರಪಂಚ ಅನ್ನುವಂತಾಗಿದೆ. ದಿನವಿಡೀ ಅದ್ರಲ್ಲೇ ಕಾಲ ಕಳೀತಾರೆ.. ತಡರಾತ್ರಿವರೆಗೂ ನಿದ್ದೆ ಮಾಡೋದೇ ಇಲ್ಲ.  ಯಾವುದೇ ರೀತಿಯ ದೈಹಿಕ ಚಟುವಟಿಕೆಯಲ್ಲಿ ತಮ್ಮನ್ನ ತೊಡಗಿಸಿಕೊಳ್ಳೊದಿಲ್ಲ. ಇದೂ ಕೂಡ ಬಾಲ್ಯದ ಬೊಜ್ಜಿಗೆ ಪ್ರಮುಖ ಕಾರಣ.. ಇಷ್ಟೇ ಸಾಲದು ಎಂಬಂತೆ ಆಹಾರ ಪದ್ದತಿ ಕೂಡ ಸಂಪೂರ್ಣ ಬದಲಾಗಿದೆ.  ಜಂಕ್ ಫುಡ್ ಗಳನ್ನೇ ಮಕ್ಕಳು ಇಷ್ಟ ಪಡ್ತಾರೆ.. ಹಣ್ಣು-ತರಕಾರಿ ಇಷ್ಟಪಡೋದೇ‌ ಇಲ್ಲ.. ಇದೂ ಕೂಡ ಚಿಕ್ಕ ಮಕ್ಕಳು ಹಾಗೂ ಹದಿಹರೆಯದವರಲ್ಲಿ ಸ್ಥೂಲಕಾಯದ ಸಮಸ್ಯೆ ಹೆಚ್ಚಲು ಮತ್ತೊಂದು ಕಾರಣ.

ಇನ್ನು ಈ ಬಾಲ್ಯದ ಬೊಜ್ಜು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.. ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಕೀಲು ಸಮಸ್ಯೆ ಹಾಗೂ ಲಿವರ್  ಸಮಸ್ಯೆಗಳಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಬಾಲ್ಯದಿಂದಲೇ ಮಕ್ಕಳ ತೂಕ ಹೆಚ್ಚಳದ ಬಗ್ಗೆ ಪೋಷಕರು ಗಮನ ಹರಿಸದೇ ಇದ್ದರೆ, ಅದು ಅವರ ಜೀವಿತಾವಧಿಯ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಮಕ್ಕಳನ್ನು‌ ನಿಜಕ್ಕೂ ನೀವು ಮುದ್ದು‌ ಮಾಡುವುದಿದ್ದರೆ ಅವರು ಹಠ ಹಿಡಿದಾಕ್ಷಣ ಕರಗದೆ, ಅವರ ಆರೋಗ್ಯದ ದೃಷ್ಟಿಯಿಂದಲೂ ಯೋಚಿಸಿ ವ್ಯವಹರಿಸಿ.

Shwetha M