RCB ಡಿಜೆಗೆ ಉರಿದುಬಿದ್ದ CSK – ದೋಸೆ, ಇಡ್ಲಿ, ಚಟ್ನಿ.. ಟ್ರೋಲ್ ಯಾಕೆ?
ಪಂತ್ ಇಂಜುರಿಯನ್ನೂ ಅಣಕಿಸಿದ್ರಾ?

ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಆರ್ಸಿಬಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನ ಗೆಲ್ಲುತ್ತಿದೆ. ಈ ಸೀಸನ್ನಲ್ಲೇ ಹ್ಯಾಟ್ರಿಕ್ ವಿಕ್ಟರಿ ಬಾರಿಸಿದೆ. ಹೋಂ ಟೀಮ್ನಲ್ಲಿ ಬೆಂಗಳೂರು ಟೀಂ ಡಾಮಿನೇಷನ್ ಖುಷಿ ಪಡೋ ವಿಚಾರವೇ. ಆದ್ರೆ ಪಂದ್ಯದ ವೇಳೆ ಪ್ಲೇ ಆಗ್ತಿರೋ ಡಿಜೆ ಮ್ಯೂಸಿಕ್ ಬಗ್ಗೆ ವಿವಾದ ಭುಗಿಲೆದ್ದಿದೆ. ಅದೂ ಕೂಡ ಚೆನ್ನೈ ಸೂಪರ್ ಕಿಂಗ್ಸ್ ಇದೇ ವಿವಾದ ಮುಂದಿಟ್ಟುಕೊಂಡು ಬಿಸಿಸಿಐ ಮೆಟ್ಟಿಲೇರಿದೆ.
ಇದನ್ನೂ ಓದಿ : ಆರ್ ಸಿಬಿ ವಿರುದ್ಧ ಮತ್ತೆ ಅಬ್ಬರಿಸ್ತಾರಾ ಕೆಎಲ್ – ಗ್ರೌಂಡ್ ನಂದು.. ಹೇಗಿತ್ತು ರಾಹುಲ್ ಕಿಚ್ಚು?
ಐಪಿಎಲ್ನಲ್ಲಿ ಸೌತರ್ನ್ ಡರ್ಬಿ, ಗ್ರೇಟೆಸ್ಟ್ ರೈವಲ್ರಿ, ಪ್ರೆಸ್ಟೀಜ್ ಫೈಟ್.. ಫ್ಯಾನ್ಸ್ ವಾರ್ ಹೀಗೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರೋ ಮ್ಯಾಚ್ ಅಂದ್ರೆ ಅದು ಬೆಂಗಳೂರು ವರ್ಸಸ್ ಚೆನ್ನೈ ಮ್ಯಾಚ್. ಫೈನಲ್ ಪಂದ್ಯಗಳಿಗೂ ಇಲ್ಲದೇ ಇರುವಂಥ ಕ್ರೇಜ್ ಈ ಪಂದ್ಯಕ್ಕೆ ಇರುತ್ತೆ. ಯಾಕಂದ್ರೆ ಈ ಪಂದ್ಯ ಆನ್ಫೀಲ್ಡ್ ಅಷ್ಟೇ ಅಲ್ಲ ಆಫ್ ದಿ ಫೀಲ್ಡ್ ನಲ್ಲಿ ಟಾಂಟ್ಗಳು ಜೋರಾಗಿರುತ್ತೆ. ಐಪಿಎಲ್ ಆರಂಭದ ಸೀಸನ್ಗಳಲ್ಲಿ ಆರ್ಸಿಬಿ ವಿರುದ್ಧ ಸಿಎಸ್ಕೆ ಡಾಮಿನೇಟ್ ಮಾಡ್ತಿತ್ತು ಌಂಡ್ ಇತ್ತೀಚಿನ ಸೀಸನ್ಗಳಲ್ಲಿ ಆರ್ಸಿಬಿ ಡಾಮಿನೇಟ್ ಮಾಡ್ತಿದೆ. ಈ ಸೀಸನ್ನಲ್ಲೂ ಅದೇ ಆಯ್ತು. ಆದ್ರೆ ಬೆಂಗಳೂರು ವಿರುದ್ಧ ಸೋತು 10 ದಿನ ಆದ್ಮೇಲೆ ಚೆನ್ನೈ ಫ್ರಾಂಚೈಸಿ ಕ್ಯಾತೆ ತೆಗೆದಿದೆ. ಅದೂ ಕೂಡ ದೋಸೆ, ಇಡ್ಲಿ, ಚಟ್ರಿ ಹಾಡು ಮುಂದಿಟ್ಟುಕೊಂಡು ಬಿಸಿಸಿಐ ಮೆಟ್ಟಿಲೇರಿದೆ.
ಆರ್ ಸಿಬಿ ನಮ್ಮನ್ನು ಅವಮಾನಿಸಿದೆ ಎಂದು ಬಿಸಿಸಿಐಗೆ ಸಿಎಸ್ ಕೆ ದೂರು!
ಏಪ್ರಿಲ್ 5ರಂದು ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಬೆಂಗಳೂರು ವರ್ಸಸ್ ಚೆನ್ನೈ ಮ್ಯಾಚ್ ಇತ್ತು. ಈ ಪಂದ್ಯದಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಬೆಂಗಳೂರು 250 ರನ್ಸ್ ಹೊಡೆದಿತ್ತು. ಈ ಟಾರ್ಗೆಟ್ ಬೆನ್ನತ್ತಿದ ಚೆನ್ನೈ 207 ರನ್ಗಳಿಗೆ ಆಲೌಟ್ ಆಗಿತ್ತು. ಈ ಪಂದ್ಯ ಮುಗ್ದು 10 ದಿನಗಳ ಮೇಲಾಯ್ತು. ಆದ್ರೆ ಇದೇ ಪಂದ್ಯದ ಬಗ್ಗೆ ಚೆನ್ನೈ ಟೀಂ ಮ್ಯಾನೇಜ್ಮೆಂಟ್ ಈಗ ಕ್ಯಾತೆ ತೆಗೆದಿದೆ. ಏನಂತಾ ಅಂದ್ರೆ ಡಿಜೆ ನಮಿಗೆ ಅವಮಾನ ಮಾಡಿದ್ದಾರೆ ಅಂತಾ. ಮ್ಯಾಚ್ ಟೈಮಲ್ಲಿ ಆರ್ಸಿಬಿ ಡಿಜೆ ದೋಸೆ, ಇಡ್ಲಿ, ಸಾಂಬಾರ್, ಚಟ್ನಿ ಚಟ್ನಿ ಹಾಡು ಹಾಕೋ ಮೂಲಕ ನಮ್ಮ ಟೀಂ ಮತ್ತು ನಮ್ಮ ಆಟಗಾರರನ್ನ ಅವಮಾನಿಸಿದ್ದಾರೆ. ಇದು ಕೇವಲ ಹಾಡಲ್ಲ, ಬದಲಾಗಿ ತಮ್ಮ ತಂಡದ ಆಟಗಾರರನ್ನು ಹೀಯಾಳಿಸಲು ಬಳಸಲಾದ ತಂತ್ರ ಎಂದು ಸಿಎಸ್ಕೆ ಮಂಡಳಿ ಬಿಸಿಸಿಐಗೆ ದೂರು ಕೊಟ್ಟಿದೆ. ಹಾಗೇ ಡಿಜೆ ವಿರುದ್ಧ ಕ್ರಮ ಕೈಗೊಳ್ಬೇಕು ಅಂತಾ ಒತ್ತಾಯಿಸಿದೆ. ಈ ಬಗ್ಗೆ ಮಾತ್ನಾಡಿರೋ ಸಿಎಸ್ಕೆ ವ್ಯವಸ್ಥಾಪಕ ನಿರ್ದೇಶಕ ಕಾಸಿ ವಿಶ್ವನಾಥನ್, ಸಾಮಾನ್ಯವಾಗಿ ಡಿಜೆಗಳು ಆತಿಥೇಯ ತಂಡವನ್ನು ಬೆಂಬಲಿಸಲು ಇರುತ್ತಾರೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಮ್ಮ ಆಟಗಾರರ ವಿರುದ್ಧ ಕಮೆಂಟ್ಸ್ ಮಾಡಿದ್ದಾರೆ. ಹೀಗಾಗಿ ಬಿಸಿಸಿಐಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸಿದ್ದೇವೆ ಎಂದಿದ್ದಾರೆ. ರಿಯಾಲಿಟಿ ಏನಂದ್ರೆ ಇದೇ ಸಿಎಸ್ಕೆ ಡಿಜೆ ಲಾಸ್ಟ್ ಸೀಸನ್ನಲ್ಲಿ ನಮ್ಮ ಆರ್ಸಿಬಿ ಆಟಗಾರ ಜಿತೇಶ್ ಶರ್ಮಾರನ್ನು ಅವಮಾನಿಸಿದ್ದನ್ನ ಮರೆತಿದ್ದಾರೆ ಅನ್ಸುತ್ತೆ. ಕಳೆದ ವರ್ಷ ಸಿಎಸ್ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ಜಿತೇಶ್ ಶರ್ಮಾ ದೋಸೆ ಇಡ್ಲಿ ಚಟ್ನಿ ಚಟ್ನಿ ಸಾಂಗ್ ಹಾಡಿದ್ದ ವಿಡಿಯೋವನ್ನ ಆರ್ಸಿಬಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿತ್ತು. ಆ ನಂತ್ರ ಪಂದ್ಯದ ವೇಳೆ ಜಿತೇಶ್ ಶರ್ಮಾ ಔಟ್ ಆಗಿ ಪೆವಿಲಿಯನ್ಗೆ ಹೋಗುವಾಗ ಚೆನ್ನೈ ಫ್ರಾಂಚೈಸಿಯ ಡಿಜೆ ಇದೇ ಸಾಂಗ್ ಪ್ಲೇ ಮಾಡಿದ್ರು. ಈ ವೇಳೆ ಸ್ಟೇಡಿಯಮ್ನಲ್ಲಿದ್ದವ್ರೆಲ್ಲಾ ಜೋರಾಗಿ ಕೂಗಿ ಎಂಜಾಯ್ ಮಾಡಿದ್ರು.
ಸೋ ಜಿತೇಶ್ಗೆ ಅವಮಾನ ಮಾಡಿದಾಗ ಚೆನ್ನೈ ತಂಡಕ್ಕೆ ಇದೆಲ್ಲಾ ಮ್ಯಾಟ್ರೇ ಅಲ್ಲ. ಆದ್ರೆ ಅವ್ರ ವಿರುದ್ಧ ಪಂದ್ಯ ಇದ್ದಾಗ ಅವ್ರದ್ದೇ ಸಾಂಗ್ ಪ್ಲೇ ಮಾಡಿದ್ರೆ ಅದು ಅವಮಾನ ಅಂತೆ. ಇದೇ ಕಾರಣಕ್ಕೆ ಒಂದಷ್ಟು ಜನ ಸಿಎಸ್ಕೆ ನಿರ್ಧಾರದ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಹೀಟಪ್ ಸಿಚುಯೇಷನ್ ಕ್ರಿಯೇಟ್ ಆಗಿದೆ. ಕರ್ನಾಟಕದ ಫ್ಯಾನ್ಸ್ ಅಂತೂ ಈ ಸಾಂಗ್ನ ಸಮರ್ಥನೆ ಮಾಡಿಕೊಳ್ತಿದ್ದಾರೆ. ನಿಮ್ದೇ ಹಾಡು ಇದು ಇದ್ರಲ್ಲಿ ತಪ್ಪೇನಿದೆ ಅಂತಾ ಪ್ರಶ್ನಿಸಿದ್ದಾರೆ.
ಲಕ್ನೋ ಮ್ಯಾಚಲ್ಲಿ ಪಂತ್ ಗೂ ಅವಮಾನಿಸಿದ್ರಾ ಡಿಜೆ?
ಇನ್ನು ಸಿಎಸ್ಕೆ ವಿರುದ್ಧದ ದೋಸೆ, ಇಡ್ಲಿ ಚಟ್ನಿ ಕಾಂಟ್ರವರ್ಸಿ ಬಳಿಕ ಲಕ್ನೋ ವಿರುದ್ಧದ ಮ್ಯಾಚಲ್ಲಿ ರಿಷಭ್ ಪಂತ್ರನ್ನೂ ಅವಮಾನ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಜೋಶ್ ಹೇಜಲ್ವುಡ್ ಬೌಲಿಂಗ್ನಲ್ಲಿ ರಿಷಭ್ ಪಂತ್ ಅವ್ರ ಎಡಗೈ ಎಲುಬಿಗೆ ಬಾಲ್ ಬಡಿದು ನೋವಿನಿಂದಾಗಿ ರಿಟೈರ್ಡ್ ಹರ್ಟ್ ಆಗಿದ್ರು. ಆ ನಂತ್ರ ಮತ್ತೆ ಬಂದು ಬ್ಯಾಟಿಂಗ್ ಮಾಡಿದ್ರು. ಬಟ್ ತುಂಬಾನೇ ಸ್ಟ್ರಗಲ್ಸ್ ಕಾಣ್ತಿತ್ತು. ಈ ಟೈಮಲ್ಲಿ ಫಾ ಅನ್ನೋ ಸೌಂಡ್ ಪ್ಲೇ ಆಗಿದೆ. ಒಬ್ಬ ಆಟಗಾರ ನೋವಿನಿಂದ ಬ್ಯಾಟಿಂಗ್ ಮಾಡೋಕಾಗ್ದೇ ಒದ್ದಾಡ್ತಿದ್ರೆ ನೀವು ಕ್ರೌಡ್ನ ಚಿಯರ್ ಮಾಡೋಕೆ ಬೇರೆಯವ್ರನ್ನ ಅವಮಾನ ಮಾಡ್ತೀರಾ ಅಂತಾ ಕೆಲವ್ರು ಪ್ರಶ್ನಿಸಿದ್ದಾರೆ.
ಇನ್ನು ಇಷ್ಟೇ ಅಲ್ಲದೆ ಲಕ್ನೋ ಬ್ಯಾಟ್ಸ್ಮನ್ಸ್ ವಿಕೆಟ್ಸ್ ಬಿದ್ದಾಗ ಅಪಹಾಸ್ಯದ ಮ್ಯೂಸಿಕ್ಗಳನ್ನೇ ಬಳಸುತ್ತಿದ್ದು ಎಂಬ ಆರೋಪವೂ ಇದೆ. ಒಟ್ನಲ್ಲಿ ಐಪಿಎಲ್ ಪಂದ್ಯಗಳ ವೇಳೆ ಎಲ್ಲಾ ಮೈದಾನಗಳಲ್ಲೂ ಡಿಜೆಗಳು ಕೆಲ ಸಾಂಗ್ಸ್ ಹಾಗೇ ಚಿಯರ್ ಅಪ್ ಮ್ಯೂಸಿಕ್ಗಳನ್ನ ಪ್ಲೇ ಮಾಡ್ತಾ ಇರ್ತಾರೆ. ಹೋಂ ಗ್ರೌಂಡ್ಗಳಿಗೆ ಹೆಚ್ಚಿನ ಸಪೋರ್ಟ್ಸ್ ಇರುತ್ತೆ. ಈಗ ಚೆನ್ನೈನಲ್ಲಿ ಸಿಎಸ್ಕೆ ತಂಡದ ಪರವಾಗಿಯೇ ಡಿಜೆ ಕೆಲಸ ಮಾಡ್ತಾರೆ. ಬೆಂಗಳೂರಲ್ಲಿ ಆರ್ ಸಿಬಿ ಪರ ಮಾಡ್ತಾರೆ. ಇಲ್ಲಿ ಯಾರನ್ನೂ ಅವಮಾನ ಮಾಡ್ಬೇಕು ಅನ್ನೋ ಇಂಟೆಂಟ್ ಇರಲ್ಲ. ಚೆನ್ನೈ ತಂಡಕ್ಕೆ ಚೆಪಾಕ್ನಲ್ಲಿ ಏನೇ ಮಾಡಿದ್ರೂ ಅದು ಸ್ಪೋರ್ಟ್ಸ್ ಸ್ಪಿರಿಟ್ ಬೇರೆಯವ್ರು ಮಾಡಿದ್ರೆ ಟೀಸ್ ಅಷ್ಟೇ.

ನೋಡಿರಿ

