ಗಣೇಶ ಚತುರ್ಥಿಯಲ್ಲಿ ಮಣ್ಣಿನ ಗಣಪತಿ ಯಾಕೆ – ವಿನಾಯಕನ ವಿಸರ್ಜನೆಯವರೆಗೆ ಏನಿದರ ಮಹತ್ವ?

ಗಣೇಶ ಚತುರ್ಥಿ ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತೆ. ವಿಘ್ನ ವಿನಾಶಕ ಗಣಪತಿಯನ್ನು ಮನೆಗೆ ಆಹ್ವಾನಿಸಿ, ಭಕ್ತಿಯಿಂದ ಪೂಜಿಸಿ, ನಂತರ ವಿಸರ್ಜನೆ ಮಾಡುವ ಪದ್ಧತಿ ನೂರಾರು ವರ್ಷಗಳಿಂದ ನಡೆದುಕೊಂಡು ಒಂದಿದೆ.
ಇದನ್ನೂ ಓದಿ: ಶಿವನ ವಿಶೇಷ ಕೃಪೆಗೆ ಪಾತ್ರರಾಗಬೇಕಾ? – ಸೋಮವಾರದ ಪೂಜೆಯಲ್ಲಿ ಶಿವನಿಗೆ ಈ ವಸ್ತುಗಳನ್ನ ಅರ್ಪಿಸಿ
ಗಣಪತಿಯನ್ನು ಮನೆಗೆ ಆಹ್ವಾನಿಸುವುದು ಸಂತೋಷ ಮತ್ತು ಶುಭವನ್ನು ಆಹ್ವಾನಿಸುವ ಸಂಕೇತವೆಂದು ಭಕ್ತರು ನಂಬುತ್ತಾರೆ. ಪೂಜೆಯ ದಿನಗಳಲ್ಲಿ ಕುಟುಂಬದ ಸದಸ್ಯರು ಒಟ್ಟಾಗಿ ಪ್ರಾರ್ಥಿಸುವುದರಿಂದ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚುತ್ತದೆ. ನಂತರ ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ. ವಿಸರ್ಜನೆಯ ಸಂದರ್ಭದಲ್ಲಿ ಭಕ್ತರು ಗಣಪತಿಯನ್ನು ಭಕ್ತಿಯಿಂದ ಬೀಳ್ಕೊಡುತ್ತಾರೆ. ಇದರ ಹಿಂದೆ ಒಂದು ಆಧ್ಯಾತ್ಮಿಕ ಸಂದೇಶವೂ ಇದೆ—ಬಂದದ್ದು ಮತ್ತೆ ಪ್ರಕೃತಿಯಲ್ಲೇ ಲೀನವಾಗುತ್ತದೆ ಎಂಬ ಜೀವನದ ಸತ್ಯವನ್ನು ಇದು ನೆನಪಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಬಳಸುವ ಬಗ್ಗೆ ಹೆಚ್ಚಿನ ಜಾಗೃತಿ ಮೂಡುತ್ತಿದೆ. ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಮಣ್ಣಿನ ಗಣಪತಿಯನ್ನು ಬಳಸುವುದು ಮತ್ತು ಸ್ಥಳೀಯ ನಿಯಮಗಳಿಗೆ ಅನುಗುಣವಾಗಿ ವಿಸರ್ಜನೆ ಮಾಡುವುದು ಪರಿಸರದ ದೃಷ್ಟಿಯಿಂದ ಉತ್ತಮ.
ಹೀಗಾಗಿ ಗಣೇಶ ಚತುರ್ಥಿ ಭಕ್ತಿ, ಕುಟುಂಬದ ಒಗ್ಗಟ್ಟು, ಸಂಸ್ಕೃತಿ ಮತ್ತು ಪ್ರಕೃತಿಯೊಂದಿಗೆ ನಮ್ಮ ಸಂಬಂಧವನ್ನು ನೆನಪಿಸುವ ವಿಶೇಷ ಹಬ್ಬವಾಗಿದೆ.

ನೋಡಿರಿ

