ರೋಹಿತ್ 0.. ಕೊಹ್ಲಿ 1 ರನ್! – KL ರಾಹುಲ್ ಮಾತ್ರ ಡ್ರಾಪ್ ಯಾಕೆ?
ಸ್ಟಾರ್ ಬ್ಯಾಟರ್ಸ್ ಫಾರ್ಮ್ ಲೆಕ್ಕಕ್ಕಿಲ್ವಾ?

ರೋಹಿತ್ 0.. ಕೊಹ್ಲಿ 1 ರನ್! – KL ರಾಹುಲ್ ಮಾತ್ರ ಡ್ರಾಪ್ ಯಾಕೆ?ಸ್ಟಾರ್ ಬ್ಯಾಟರ್ಸ್ ಫಾರ್ಮ್ ಲೆಕ್ಕಕ್ಕಿಲ್ವಾ?

ನ್ಯೂಜಿಲೆಂಡ್ ತಂಡದ ಎದುರು ಪುಣೆಯಲ್ಲೂ ಕೂಡ ಟೀಂ ಇಂಡಿಯಾ ಫ್ಲ್ಯಾಪ್ ಶೋ ತೋರಿಸಿದೆ. ಎರಡನೇ ಟೆಸ್ಟ್‌ ಮೊದಲ ಇನ್ನಿಂಗ್ಸ್​ನಲ್ಲಿ 259 ರನ್‌ಗಳಿಗೆ ಆಲೌಟ್ ಮಾಡಿದ್ರೂ ಕೂಡ ಬ್ಯಾಟಿಂಗ್​ನಲ್ಲಿ ಕಂಪ್ಲೀಟ್ ಫೇಲ್ಯೂರ್ ಆಗಿದೆ. ಕೇವಲ 156ರನ್​ಗಳಿಗೆ ಆಲೌಟ್ ಆಗುವ ಮೂಲಕ ರೋಹಿತ್ ಶರ್ಮಾ ನೇತೃತ್ವದ ತಂಡ  ತವರಿನಲ್ಲೇ ಭಾರಿ ಆಘಾತ ಅನುಭವಿಸಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೇ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಫೇಲ್ಯೂರ್ ಆಗಿದ್ದಾರೆ. ಇದೇ ಫೇಲ್ಯೂರ್ ಈಗ ಟ್ರೋಲಿಗರಿಗೆ ಆಹಾರವಾಗಿದೆ. ಕೆಎಲ್ ರಾಹುಲ್​ರನ್ನ ಡ್ರಾಪ್ ಮಾಡಿದ್ದ ರೋಹಿತ್​ ವಿರುದ್ಧ ಕನ್ನಡಿಗರು ಕೂಡ ಕೆಂಡವಾಗಿದ್ದಾರೆ. ಸೊನ್ನೆ ಸುತ್ತಿದ್ರೂ ಕೂಡ ನೀವು ಮಾತ್ರ ಆಡಬಹುದು ಅಂತಾ ರೋಹಿತ್​ರನ್ನ ಪ್ರಶ್ನೆ ಮಾಡ್ತಿದ್ದಾರೆ. ಅಷ್ಟಕ್ಕೂ ಕಿವೀಸ್ ಬೌಲರ್ಸ್​ಗೆ ಟೀಂ ಇಂಡಿಯಾ ಬ್ಯಾಟರ್ಸ್ ಸುಲಭವಾಗಿ ವಿಕೆಟ್ ಒಪ್ಪಿಸ್ತಿರೋದೇಗೆ? ರೋಹಿತ್ & ಕೊಹ್ಲಿ ಫಾರ್ಮ್ ಕಳ್ಕೊಂಡ್ರಾ? ಕೆಎಲ್ ರಾಹುಲ್ ಗೆ ಮತ್ತೊಂದು ಚಾನ್ಸ್ ಕೊಡ್ಬೇಕಿತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 156 ರನ್.. ಭಾರತ ಆಲೌಟ್ – ಸೂಪರ್ ಸ್ಟಾರ್ಸ್ ಬ್ಯಾಟಿಂಗ್ ಮರೆತ್ರಾ?

ಪುಣೆ ಟೆಸ್ಟ್ ಮ್ಯಾಚ್​ನಲ್ಲೂ ಟೀಂ ಇಂಡಿಯಾ ಉತ್ತಮ ಇನ್ನಿಂಗ್ಸ್ ಆರಂಭಿಸುವಲ್ಲಿ ವಿಫಲವಾಗಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಲೈನಪ್ ಕಂಪ್ಲೀಟ್ ಹಳ್ಳ ಹಿಡಿದಿತ್ತು. ಇಡೀ ತಂಡದ ಯಾವೊಬ್ಬ ಆಟಗಾರ ಕೂಡ ಹಾಫ್ ಸೆಂಚುರಿ ಗಳಿಸೋಕು ಸಾಧ್ಯವಾಗ್ಲಿಲ್ಲ. ರವೀಂದ್ರ ಜಡೇಜಾ 38 ರನ್ ಗಳಿಸಿದ್ದೇ ಭಾರತ ಪರ ಹೈಯೆಸ್ಟ್ ಸ್ಕೋರ್ ಎನಿಸಿಕೊಂಡಿದೆ.  ಹೀಗೆ ಭಾರತ ತಂಡದ ಆಟಗಾರರು ಪೆವಿಲಿಯನ್ ಪರೇಡ್ ನಡೆಸ್ತಿದ್ರೆ ಮತ್ತೊಂದೆಡೆ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿತ್ತು. ಕೆಎಲ್ ರಾಹುಲ್ ಫ್ಯಾನ್ಸ್ ಅಂತೂ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ.

ರೋಹಿತ್-ಕೊಹ್ಲಿ ಫೇಲ್ಯೂರ್ ಆದ್ರೂ ಚಾನ್ಸ್ ಯಾಕೆ?

ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಮ್ಯಾಚ್​ನಲ್ಲಿ ಐವರು ಬ್ಯಾಟರ್ಸ್ ಮೊದಲ ಇನ್ನಿಂಗ್ಸ್​ನಲ್ಲಿ ಡಕ್ ಔಟ್ ಆಗಿದ್ರು. ರೋಹಿತ್ ಶರ್ಮಾ 2 ರನ್​ಗೆ ವಿಕೆಟ್ ಒಪ್ಪಿಸಿದ್ರೆ ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆಎಲ್ ರಾಹುಲ್, ಆರ್ ಅಶ್ವಿನ್, ಆರ್ ಜಡೇಜಾ ಶೂನ್ಯಕ್ಕೆ ಔಟಾಗಿದ್ರು. ಸೆಕೆಂಡ್ ಇನ್ನಿಂಗ್ಸ್​ನಲ್ಲಿ ರೋಹಿತ್ ಶರ್ಮಾ 52 ರನ್ ಹೊಡೆದ್ರೆ ವಿರಾಟ್ ಕೊಹ್ಲಿ 70 ರನ್​ಗಳನ್ನ ಗಳಿಸಿದ್ರು. ಬಟ್ ಕೆಎಲ್ ರಾಹುಲ್ ಜಸ್ಟ್ 12 ರನ್ ಗಳಿಗೆ ಔಟಾಗಿದ್ರು. ಇದೇ ಕಾರಣಕ್ಕೆ ಪುಣೆಯಲ್ಲಿನ ಸೆಕೆಂಡ್ ಟೆಸ್ಟ್ ಮ್ಯಾಚ್​ನಿಂದ ರಾಹುಲ್ ಅವ್ರನ್ನ ಕೈಬಿಡಲಾಗಿತ್ತು. ಹಾಗೇ ಬೌಲಿಂಗ್​ನಲ್ಲೂ ಒಂದಷ್ಟು ಬದಲಾವಣೆ ಮಾಡಿದ್ರು. ಟೀಂ ಇಂಡಿಯಾದ ಬೌಲಿಂಗ್ ಸ್ಟ್ರಾಟಜಿ ಏನೋ ಸಕ್ಸಸ್ ಆಯ್ತು. ಬಟ್ ಬ್ಯಾಟಿಂಗ್ ಫಾರ್ಮುಲಾ ಕಂಪ್ಲೀಟ್ ಹಳ್ಳ ಹಿಡಿದಿದೆ. ಮೊದಲ ಇನ್ನಿಂಗ್ಸ್​ನಲ್ಲಿ ರೋಹಿತ್ ಶರ್ಮಾ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದ್ದಾರೆ. ಹಾಗೇ ವಿರಾಟ್ ಕೊಹ್ಲಿ 1 ರನ್ಗೆ ಔಟಾದ್ರು. ಇದೇ ಕಾರಣಕ್ಕೆ ರಾಹುಲ್ ಫ್ಯಾನ್ಸ್ ಸಿಕ್ಕಾಗಿದ್ದಾರೆ. ಸ್ಟಾರ್ ಬ್ಯಾಟರ್ಸ್ ಫೇಲ್ಯೂರ್ ಅನುಭವಿಸಿದ್ರೂ ತಂಡದಿಂದ ಹೊರ ಹಾಕಲ್ಲ. ಬಟ್ ಕೆಎಲ್ ರಾಹುಲ್​ರನ್ನ ಮಾತ್ರ ಯಾಕೆ ಡ್ರಾಪ್ ಮಾಡಿದ್ರಿ ಅಂತಾ ಪ್ರಶ್ನೆ ಮಾಡ್ತಿದ್ದಾರೆ.

ಕಿವೀಸ್ ಬೌಲರ್ಸ್ ಎದುರು ಮತ್ತೊಮ್ಮೆ ಮಂಕಾದ ಟೀಂ ಇಂಡಿಯಾ

ಇತ್ತೀಚೆಗೆ ಬಾಂಗ್ಲಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಭಾರತ ತಂಡ ಕಿವೀಸ್ ವಿರುದ್ಧ ಮಾತ್ರ ಮಂಕಾಗಿದೆ. ಟೀಂ ಇಂಡಿಯಾದಂಥ ಬಲಿಷ್ಠ ತಂಡವನ್ನೇ ನ್ಯೂಜಿಲೆಂಡ್ ಆಟಗಾರರು ಕಾಡ್ತಿದ್ದಾರೆ. ಪುಣೆ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ 9 ಎಸೆತಗಳಲ್ಲಿ ಕೇವಲ 1 ರನ್ ಬಾರಿಸಿ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್​ಗೆ ಬಲಿಯಾಗಿದ್ದಾರೆ. ಸ್ಯಾಂಟ್ನರ್ ಎಸೆತವನ್ನು ಲಾಂಗ್ ಆನ್ ಕಡೆಗೆ ಹೊಡೆಯುವ ಯತ್ನದಲ್ಲಿ ಕೊಹ್ಲಿ ಬೌಲ್ಡ್ ಆದರು. ಇನ್ನು ಟೀಮ್‌ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ 11ನೇ ಬಾರಿ ಡಕೌಟ್‌ ಆಗಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಪುಣೆ ಟೆಸ್ಟ್‌ನಲ್ಲಿ ವೇಗಿ ಟಿಮ್ ಸೌಥಿ ಎಸೆತದಲ್ಲಿ ಖಾತೆ ತೆರೆಯದೆ ಹಿಟ್‌ಮ್ಯಾನ್‌ ವಿಕೆಟ್‌ ಒಪ್ಪಿಸಿದರು.

ಎಡಗೈ ಸ್ಪಿನ್ನರ್ ಗೆ ಬಲಿಯಾಗ್ತಿದ್ದಾರೆ ಕಿಂಗ್ ವಿರಾಟ್!

ಕಿವೀಸ್ ಎದುರು ಔಟಾಗೋ ಮೂಲಕ ಕಿಂಗ್ ವಿರಾಟ್ ಕೊಹ್ಲಿ ಮತ್ತೆ ತನ್ನ ಹಳೆಯ ದೌರ್ಬಲ್ಯವನ್ನು ಕಂಟಿನ್ಯೂ ಮಾಡಿದ್ದಾರೆ. ವಾಸ್ತವವಾಗಿ, ಕಳೆದ ಕೆಲವು ವರ್ಷಗಳಲ್ಲಿ ಎಡಗೈ ಸ್ಪಿನ್ ವಿರುದ್ಧ ವಿರಾಟ್ ಅವರ ದಾಖಲೆ ತುಂಬಾ ಕೆಟ್ಟದಾಗಿದೆ. ಎದುರಾಳಿ ತಂಡಗಳು ಕೊಹ್ಲಿಯ ಈ ದೌರ್ಬಲ್ಯದ ಲಾಭ ಪಡೆಯುತ್ತಿವೆ. ಇದಕ್ಕೂ ಮುನ್ನ ಕಾನ್ಪುರ ಟೆಸ್ಟ್‌ನಲ್ಲಿ ಬಾಂಗ್ಲಾದೇಶದ ಎಡಗೈ ಸ್ಪಿನ್ನರ್ ಶಕೀಬ್ ಅಲ್ ಹಸನ್ ಎಸೆತದಲ್ಲಿ ಕೊಹ್ಲಿ ಔಟಾಗಿದ್ದರು. ಈಗಷ್ಟೇ ಅಲ್ಲ ಎಡಗೈ ಸ್ಪಿನ್ನರ್‌ಗಳ ವಿರುದ್ಧ ವಿರಾಟ್ ಕೊಹ್ಲಿ ತುಂಬಾ ದಿನಗಳಿಂದಲೂ ರನ್​ ಗಳಿಸಲು ಹೆಣಗಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಿಚೆಲ್ ಸ್ಯಾಂಟ್ನರ್, ಶಕಿಬ್ ಅಲ್ ಹಸನ್ ಮತ್ತು ದುನಿತ್ ವೆಲಾಲಗೆ ಅವರಂತಹ ಬೌಲರ್‌ಗಳು ಕೊಹ್ಲಿಯನ್ನು ಸುಲಭವಾಗಿ ಔಟ್ ಮಾಡ್ತಿದ್ದಾರೆ. ಈ ಹಿಂದಿನ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಕೊಹ್ಲಿ, ವೆಲಾಲೆಗೆ ಬಲಿಯಾಗಿದ್ದರು. ಇನ್ನು 2021 ರಿಂದ ಕೊಹ್ಲಿ ಆಡಿರುವ ಟೆಸ್ಟ್ ಪಂದ್ಯಗಳ 21 ಇನ್ನಿಂಗ್ಸ್‌ಗಳಲ್ಲಿ ಎಡಗೈ ಸ್ಪಿನ್ನರ್​ಗಳನ್ನು ಎದುರಿಸಿದ್ದು, ಈ ವೇಳೆ ಕೇವಲ 28.78 ಸರಾಸರಿಯಲ್ಲಿ 259 ರನ್ ಗಳಿಸಿದ್ದರೆ, 9 ಬಾರಿ ವಿಕೆಟ್ ಒಪ್ಪಿಸಿದ್ದಾರೆ.

ಇಲ್ಲಿ ಕೆಎಲ್ ರಾಹುಲ್ ಬ್ಯಾಟ್ ಸೈಲೆಂಟ್ ಆಗಿದ್ರೂ ಕೂಡ ಅಭಿಮಾನಿಗಳು ಅವ್ರ ಪರ ಬ್ಯಾಟ್ ಬೀಸಬಹುದು. ಆದ್ರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗಾಗ್ಲೇ ಭಾರತ ತಂಡಕ್ಕಾಗಿ ಸಾಕಷ್ಟು ಸಾಧನೆಗಳನ್ನ ಮಾಡಿದ್ದಾರೆ. ಏಕಾಂಗಿಯಾಗಿ ನಿಂತು ಎಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಹೀಗಾಗಿ ಫಾರ್ಮ್ ಕಳ್ಕೊಂಡ್ರೂ ಕೂಡ ಪದೇ ಪದೆ ಅವಕಾಶಗಳು ಸಿಗುತ್ತೆ. ಬಟ್ ರಾಹುಲ್ ವಿಚಾರದಲ್ಲಿ ಹಾಗಲ್ಲ. ಸಿಕ್ಕಿರೋ ಅವಕಾಶಗಳನ್ನ ಪದೇಪದೇ ಕೈ ಚೆಲ್ಲಿಕೊಳ್ತಿರೋ ರಾಹುಲ್ ಅವಶ್ಯಕತೆ ಇದ್ದಾಗ ತಂಡಕ್ಕೆ ಆಸರೆಯಾಗ್ಬೇಕು. ಎಲ್ಲಾ ಪಂದ್ಯಗಳಲ್ಲೂ ಸ್ಫೋಟಕ ಬ್ಯಾಟಿಂಗ್ ಮಾಡೋಕೆ ಆಗಲ್ಲ ನಿಜ. ಹಾಗಂತ ಎಲ್ಲಾ ಪಂದ್ಯಗಳಲ್ಲೂ ಕಳಪೆ ಪ್ರದರ್ಶನ ತೋರಿದ್ರೆ ಚಾನ್ಸ್ ಸಿಗೋದು ಕಷ್ಟವೇ. ಯಾಕಂದ್ರೆ ಟೀಂ ಇಂಡಿಯಾ ಸೇರೋಕೆ ಯಂಗ್​ಸ್ಟರ್ಸ್ ಕಾಯ್ತಿದ್ದಾರೆ. ಸೀನಿಯರ್ಸ್ ಕೂಡ ನಾಚುವಂತೆ ಪ್ರದರ್ಶನ ನೀಡ್ತಾರೆ. ಫಾರ್ ಎಕ್ಸಾಂಪಲ್ ವಾಷಿಂಗ್ಟನ್ ಸುಂದರ್.

Shwetha M

Leave a Reply

Your email address will not be published. Required fields are marked *