HITಮ್ಯಾನ್ ಟೆನ್ಷನ್.. KING ಕೂಲ್ – ರೋಹಿತ್ ಆಟವೇ ನಿವೃತ್ತಿ ಕೊಡಿಸುತ್ತಾ?
2027ರ ವಿಶ್ವಕಪ್ ವರೆಗೂ ಕೊಹ್ಲಿ ಸೇಫ್

HITಮ್ಯಾನ್ ಟೆನ್ಷನ್.. KING ಕೂಲ್ – ರೋಹಿತ್ ಆಟವೇ ನಿವೃತ್ತಿ ಕೊಡಿಸುತ್ತಾ?2027ರ ವಿಶ್ವಕಪ್ ವರೆಗೂ ಕೊಹ್ಲಿ ಸೇಫ್

ಭಾರತ ಮತ್ತು ಇಂಗ್ಲೆಂಡ್ ನಡುವೆ ಇವತ್ತು ಮೂರನೇ ಏಕದಿನ ಪಂದ್ಯ ನಡೆಯಲಿದೆ. ಲಾರ್ಡ್ಸ್​ ಮೈದಾನದಲ್ಲಿ ನಡೆಯೋ ಈ ಮ್ಯಾಚ್​ನಲ್ಲಿ ಗೆದ್ದವ್ರು ಸರಣಿಯ ವಿನ್ನರ್. ಸೋ ಇದಂತೂ ಕ್ಲಿಯರ್ ಇದೆ. ಆದ್ರೆ ಈ ಸರಣಿಗಿಂತ ಜಾಸ್ತಿ ಸದ್ದು ಮಾಡ್ತಿರೋದು ರೋಹಿತ್ ಶರ್ಮಾ ರಿಟೈರ್ಮೆಂಟ್ ಸುದ್ದಿ. ಹಿಟ್​ಮ್ಯಾನ್​ಗೆ ಇವತ್ತಿನ ಪಂದ್ಯನೇ ಕೊನೆನಾ ಅಥವಾ ಮತ್ತೆ ಭಾರತದ ಪರ ಅಖಾಡಕ್ಕೆ ಇಳೀತಾರಾ ಅಂತಾ. ಈ ಕನ್ಫ್ಯೂಷನ್​ಗೆ ಕಾರಣನೂ ಇದೆ. ಒಂದಷ್ಟು ರಿಪೋರ್ಟ್ಸ್ ಕ್ರಿಕೆಟ್ ಕಾಶಿಯಲ್ಲೇ ಕೆರಿಯರ್ ಎಂಡ್ ಅಂದ್ರೆ ಇನ್ನೊಂದಷ್ಟು ಮೂಲಗಳು ಇಲ್ಲ 2027ರ ವಿಶ್ವಕಪ್​ವರೆಗೂ ಆಡ್ತಾರೆ ಅಂತಾರೆ. ಆದ್ರೆ ಕಿಂಗ್ ವಿರಾಟ್ ಕೊಹ್ಲಿ ವಿಚಾರದಲ್ಲಿ ಇಲ್ಲದ ರೂಮರ್ಸ್ ರೋಹಿತ್ ಶರ್ಮಾ ವಿಚಾರದಲ್ಲಿ ಮಾತ್ರ ಯಾಕೆ ಅನ್ನೋ ಡೌಟ್ಸ್ ಕೂಡ ಬರುತ್ತೆ. ಅದಕ್ಕೆ ಕಾರಣನೂ ಇದೆ.

ಇದನ್ನೂ ಓದಿ : KL ಇಲ್ಲದೇ ಸೋತ IND- ಎದ್ದು ಬಿದ್ದು ಗೆದ್ದ ಬ್ರೂಕ್

ಒಂದ್ಕಡೆ ಬ್ಯಾಟಿಂಗ್​ನಲ್ಲಿ ಸ್ಟ್ರಗಲ್ ಮಾಡ್ತಿರೋ ರೋಹಿತ್​ ಶರ್ಮಾ.. ಇನ್ನೊಂದ್ಕಡೆ ಹೆಂಗಾದ್ರೂ ಮಾಡಿ ತಂಡದಿಂದ ಕೈಬಿಡ್ಲೇಬೇಕು ಅಂತಾ ಕಸರತ್ತು ಮಾಡ್ತಿರೋ ಬಿಸಿಸಿಐ. ಇನ್ನೊಂದ್ಕಡೆ ಇದೆಲ್ಲಾ ಸುಳ್ಳು ಅಂತಾ ತೇಪೆ ಹಚ್ಚುತ್ತಿರೋ ಮ್ಯಾನೇಜ್​ಮೆಂಟ್ ಸ್ಟಾಫ್ಸ್.. ಹೀಗೆ ಹಿಟ್​ಮ್ಯಾನ್ ವಿಚಾರದಲ್ಲಿ ದಿನಕ್ಕೊಂದು ಡವಲಪ್​ಮೆಂಟ್ಸ್ ಆಗ್ತಾನೇ ಇದೆ. ಈಗ ಇದು ಪೀಕ್​ಗೆ ಬಂದಿದೆ. ಅಂದ್ರೆ ರೋಹಿತ್ ಶರ್ಮಾ ಲಾರ್ಡ್ಸ್ ಮೈದಾನದಲ್ಲೇ ಕೊನೇ ಮ್ಯಾಚ್ ಆಡ್ತಾರೆ ಅನ್ನೋ ಸುದ್ದಿ ಫುಲ್ ಟ್ರೆಂಡಿಂಗ್​ನಲ್ಲಿದೆ. ಆದ್ರೆ ಎಲ್ಲಿಯೂ ಕೂಡ ಕೊಹ್ಲಿ ನಿವೃತ್ತಿ ಬಗ್ಗೆ ಸುದ್ದಿಯಾಗ್ತಿಲ್ಲ. ಅರೆ ಇಬ್ಬರು ಲೆಜೆಂಡರಿ ಪ್ಲೇಯರ್ಸ್.. ಮಾಜಿ ನಾಯಕರು. ಭಾರತದ ಪರ ಟಿ-20ಐನೂ ಆಡ್ತಿಲ್ಲ. ಟೆಸ್ಟ್ ಮ್ಯಾಚ್​ನೂ ಆಡ್ತಿಲ್ಲ. 2027ರ ಏಕದಿನ ವಿಶ್ವಕಪ್ ಗೆಲ್ಬೇಕು ಅಂತಾ ಏಕದಿನ ಮಾದರಿಯಲ್ಲಿ ಮಾತ್ರ ಆಡ್ತಿದ್ದಾರೆ. ಹೀಗಿದ್ದಾಗ ಆಡಿದ್ರೆ ಇಬ್ರೂ ವಿಶ್ವಕಪ್ ಆಡ್ಬೇಕು ಇಲ್ಲದಿದ್ರೆ ಇಬ್ರೂ ನಿವೃತ್ತಿ ತಗೊಳ್ಬೇಕು. ಆದ್ರೂ ರೋಹಿತ್ ಹೆಸರು ಮಾತ್ರ ಯಾಕೆ ಸದ್ದು ಮಾಡ್ತಿದೆ ಅಂದ್ರೆ ಅದಕ್ಕೆ ಒಂದಷ್ಟು ಕಾರಣಗಳೂ ಇದೆ.

ರೋಹಿತ್ ಹೆಸರು ಮಾತ್ರ ಟ್ರೆಂಡ್ ಏಕೆ?

ವಿಶ್ವಕಪ್ ವೇಳೆಗೆ ಕೊಹ್ಲಿಗೆ 39 ವರ್ಷ.. ರೋಹಿತ್ ಗೆ 40 ವರ್ಷ

ಬ್ಯಾಟಿಂಗ್ ನಲ್ಲಿ ರೋಹಿತ್ ಮತ್ತು ಕೊಹ್ಲಿ ನಡುವೆ ಬ್ಯಾಟಿಂಗ್ ವ್ಯತ್ಯಾಸ

2026ರಲ್ಲಿ ಕೊಹ್ಲಿ 5 ಪಂದ್ಯ, 62ರ ಸರಾಸರಿ, 310 ರನ್ಸ್.. 1 ಶತಕ, 2 ಅರ್ಧಶತಕ

2026ರ ಐಪಿಎಲ್ ನಲ್ಲಿ ಕೊಹ್ಲಿ 16 ಇನ್ನಿಂಗ್ಸ್ ಗಳಲ್ಲಿ 675 ರನ್ಸ್ ಗಳಿಸಿದ ಕೊಹ್ಲಿ

2026ರಲ್ಲಿ ರೋಹಿತ್ ಏಕದಿನದಲ್ಲಿ 8 ಇನ್ನಿಂಗ್ಸ್, 241 ರನ್ಸ್, 1 ಅರ್ಧಶತಕ

2026ರ ಐಪಿಎಲ್ ನಲ್ಲಿ ರೋಹಿತ್ ಇಂಜುರಿ ಸಮಸ್ಯೆ, 283 ರನ್ಸ್ ಗಳಿಕೆ

ಫಾರ್ಮ್ ವಿಚಾರದಲ್ಲೂ ವಿರಾಟ್ ಕೊಹ್ಲಿಯವರಲ್ಲಿ ಕನ್ಸಿಸ್ಟೆನ್ಸಿ ಬ್ಯಾಟಿಂಗ್

ವಿಶ್ವಕ್ರಿಕೆಟ್ ನ ಬ್ರ್ಯಾಂಡ್ ಆಗಿರೋ ಕೊಹ್ಲಿ ಭಾರತದ ಪರ ಆಡಿದ್ರೆ ತಂಡಕ್ಕೇ ಲಾಭ

ಚೇಸಿಂಗ್ ಮಾಸ್ಟರ್, ಫಿಟ್ ನೆಸ್ ಫ್ರೀಕ್, ರಣಬೇಟೆಗಾರನಾಗಿ ಅಬ್ಬರಿಸೋ ಕೊಹ್ಲಿ

ಹಾಗ್ ನೋಡಿದ್ರೆ ರೋಹಿತ್ ಶರ್ಮಾ ಕೂಡ ಲೆಜೆಂಡರಿ ಪ್ಲೇಯರ್. ಆದ್ರೆ ಇತ್ತೀಚಿನ ಅವ್ರ ಕಳಪೆ ಪ್ರದರ್ಶನವೇ ಅವ್ರ ಕ್ರಿಕೆಟ್ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನ ಮೂಡಿಸಿದೆ. ಬಿಸಿಸಿಐ ಕೂಡ ಕೊಹ್ಲಿ ವಿಚಾರದಲ್ಲಿ ಕ್ಲಿಯರ್ ಇದ್ರೂ ರೋಹಿತ್ ಬೇಕಾ ಬೇಡ್ವಾ ಅನ್ನೋ ಬಗ್ಗೆ ಪ್ರಶ್ನೆಗಳನ್ನ ಮೂಡಿಸಿದೆ. ಇವತ್ತಿನ ಪಂದ್ಯವೇ ಕೊನೇ ಅನ್ನೋ ಸುದ್ದಿ ಹಬ್ಬಿದೆ. ಆದ್ರೆ ಈ ಸುದ್ದಿಗಳಿಗೆಲ್ಲಾ ರೋಹಿತ್ ತಮ್ಮ ಬ್ಯಾಟ್ ಮೂಲಕವೇ ಉತ್ತರ ಕೊಟ್ಟು 2027ರ ಏಕದಿನ ವಿಶ್ವಕಪ್ ನಲ್ಲಿ ನಾನೂ ಆಡಬಲ್ಲೆ ಅನ್ನೋ ಮೆಸೇಜ್​ನ ಬಿಸಿಸಿಐಗೆ ಪಾಸ್ ಮಾಡ್ಬೇಕು.

Shantha Kumari

Leave a Reply

Your email address will not be published. Required fields are marked *