ಲವ್ ಮಾಕ್ಟೇಲ್ 3 ಸಿನಿಮಾ ಕಥೆ ನಿಜಕ್ಕೂ ಯಾರದ್ದು? – ಗುರು ದೇಶಪಾಂಡೆ ಮತ್ತು ಡಾರ್ಲಿಂಗ್ ಕೃಷ್ಣ ಏಟು ತಿರುಗೇಟು..!

ಲವ್ ಮಾಕ್ಟೇಲ್ 3 ಸಿನಿಮಾ ಕಥೆ ನಿಜಕ್ಕೂ ಯಾರದ್ದು? – ಗುರು ದೇಶಪಾಂಡೆ ಮತ್ತು ಡಾರ್ಲಿಂಗ್ ಕೃಷ್ಣ ಏಟು ತಿರುಗೇಟು..!

ಸ್ಯಾಂಡಲ್​ವುಡ್​ನಲ್ಲಿ ಈಗ ಕಥೆ ಕದ್ದ ಆರೋಪ ದೊಡ್ಡದಾಗಿ ಸೌಂಡ್ ಮಾಡುತ್ತಿದೆ. ಒಂದೆಡೆ ಲವ್ ಮಾಕ್ಟೇಲ್ 3 ಸಿನಿಮಾ ವೀಕ್ಷಕರಿಗೆ ಇಷ್ಟವಾಗಿದೆ. ಮತ್ತೊಂದೆಡೆ ಸಿನಿಮಾದ ಕುರಿತಾದ ವಿವಾದ ಮುಗಿಯುತ್ತಿಲ್ಲ.

ಇದನ್ನೂ ಓದಿ:ನಟ ಮೋಹನ್‌ಲಾಲ್ 66ನೇ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್‌ – ಬಹುನಿರೀಕ್ಷೆಯ ದೃಶ್ಯಂ 3 ರಿಲೀಸ್

ಲವ್ ಮಾಕ್ಟೇಲ್ 3 ಸಿನಿಮಾ ಕಥೆ ವಿರುದ್ಧ ಶುರುವಾದ ವಿವಾದ ಮತ್ತೆ ಮುಂದುವರೆದಿದೆ. ಡಾರ್ಲಿಂಗ್ ಕೃಷ್ಣ ಸುದ್ದಿಗೋಷ್ಠಿ ಮಾಡಿ ಮಾತನಾಡಿ ಕಥೆ ಕದ್ದ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದರು. ಅವರು ಮಾಡಿರುವ ಆರೋಪ ನಿಜವೇ ಆಗಿದ್ದರೆ, ನಾನು – ನನ್ನ ಪತ್ನಿ ಮಿಲನ ಮತ್ತು ಯದು ಯಾಕೆ 4 ವರ್ಷ ಕೂತು ‘ಲವ್ ಮಾಕ್ಟೇಲ್ 3’ ಚಿತ್ರದ ಕಥೆಯನ್ನ ಬರೆಯುತ್ತಿದ್ವಿ? ನನಗೆ ಏನು ಕಥೆ ಹೇಳಿದ್ರೋ.. ಅದನ್ನೇ ಸುಲಭವಾಗಿ ಬರೆಯಬಹುದಿತ್ತು ಅಲ್ವಾ?. ‘ಸೆಕೆಂಡ್ ಹಾಫ್ ಕಥೆ ಕದ್ದಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಬಂದಿದೆ. ಒಬ್ಬ ಫಿಲ್ಮ್ ಮೇಕರ್​ಗೆ ಇದಕ್ಕಿಂತ ಬೇರೆ ಅವಮಾನ ಇಲ್ಲ. ನಮ್ಮ ಮರ್ಯಾದೆ ಹೋಗಿದೆ. ಅದಕ್ಕಾಗಿ ನಾನು ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯ್ಕ್ ಮೇಲೆ ಕಾನೂನು ಹೋರಾಟ ಮಾಡುತ್ತೇನೆ. ನಾನು ರಾಜಿ ಆಗಲ್ಲ. ಇಂಥವರಿಗೆ ಈ ರೀತಿಯೇ ಉತ್ತರ ನೀಡಬೇಕು’ ಎಂದು ಡಾರ್ಲಿಂಗ್ ಕೃಷ್ಣ ಗರಂ ಆಗಿಯೇ ಪ್ರತಿಕ್ರಿಯೆ ನೀಡಿದ್ದರು.

ಕೃಷ್ಣ ಮಾತಿನ ಏಟಿಗೆ‌ ತಿರುಗೇಟು ಕೊಟ್ಟಿದ್ದಾರೆ ನಿರ್ದೇಶಕ ರಾಘವೇಂದ್ರ ನಾಯಕ್ ಹಾಗೂ ಗುರುದೇಶ ಪಾಂಡೆ. ಈ ವಿಚಾರದ ಬಗ್ಗೆ ಮಾತನಾಡಿದ ಗುರು ದೇಶಪಾಂಡೆ, ನಮ್ಮದೇ ಕಥೆಯ ಕೋರ್ ಪಾಯಿಂಟ್ ಕದ್ದಿದ್ದಾರೆ. ಇಂಟರ್ ವಲ್ ಬ್ಲಾಕ್ನಿಂದ ನಮ್ಮದೇ ಕಥೆ. ಕಥೆ ನಮ್ಮಿಂದ ಇನ್​ಸ್ಪೈರ್ ಅನ್ನೋದನ್ನ ಹೇಳಲಿ ಅಷ್ಟೇ ಎಂದು ಹೇಳಿದ್ದಾರೆ. ಅವರು ಮಗಳ‌ ಮೇಲೆ ಹೆಂಡತಿ ಮೇಲೆ ಪ್ರಮಾಣ ಮಾಡಿದ್ಮೇಲೆ ಬಿಟ್ಟಿದ್ದೆ. ಕೇಸ್ ಹಾಕ್ತೀನಿ ಅಂತ ಹೋಗ್ತಿರೋದು ಅವರೇ. ನಾವು ಕೋರ್ಟ್ ನಲ್ಲಿ ಪ್ರೂವ್ ಮಾಡೋಕೆ ಏನ್ ಬೇಕೋ ಅದೆಲ್ಲ ಇದೆ , ಸಾಕ್ಷಿ ‌ಇದೆ ನಮ್ಮ‌ಬಳಿ. ನಾವು ಸಾಬೀತು ಮಾಡ್ತೀವಿ ಎಂದಿದ್ದಾರೆ.

ರಾಘವೇಂದ್ರ ನಾಯಕ್ ಮಾತನಾಡಿ, ನಾನು ಸಿನಿಮಾ ನೋಡಿ ಪೋಸ್ಟ್ ಮಾಡ್ದೆ. ಏನಾಯ್ತು ಅನ್ನೋದನ್ನ ಸಭ್ಯ ಭಾಷೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬರೆದೆ. ಇಷ್ಟಾದ್ಮೇಲೆ ನಮ್ಮ ಕಥೆ ನಾವು ಡಿಫೈನ್ ಮಾಡಿಕೊಳ್ಳಬೇಕಾಗುತ್ತೆ. ನಾವು ಫಿಲ್ಮ್ ಚೇಂಬರ್ ಗೆ ದೂರು ಕೊಟ್ಟಿದ್ದೀವಿ. ಈಗ ಪ್ರೆಸ್ ಮೀಟ್ ತುಂಬಾ ಉಡಾಫೆಯಾಗಿ ಮಾತಾಡಿದ್ದಾರೆ. ಗೂಗಲ್ ನಿಂದ ಕದ್ದಿರೋದಲ್ಲ. ಸ್ಕ್ರೀನ್ ಪ್ಲೇ ಯಲ್ಲಿ ಎಲ್ಲ ರೆಡಿ ಮಾಡ್ಕೊಂಡಿದ್ದು. ನಾವು ಮಗು ಮೇಲೆ ಕಥೆ ಮಾಡಿಕೊಂಡಿದ್ದೇವೆ ಲವ್ ಮಾಕ್ಟೇಲ್ 3 ಅಂದ್ರು. ನಾವು ಕಥೆ ಹೇಳಿದ್ಮೇಲೆ ಈ ಥರ ಆಗುತ್ತೆ ಅಂತ ಗೊತ್ತಿಲ್ಲ. ಕೋರ್ಟ್‌ ರೂಂ‌ ಡ್ರಾಮಾ ಅಂದ್ರು. ನಾವು ಕೃಷ್ಣ ಅವರಿಗೆ ಕಥೆ ಹೇಳಿಲ್ಲ ಅಂದ್ರೆ ಇಷ್ಟು ಆಗ್ತಿರಲಿಲ್ಲ ಸೋ ಕಾಲ್ಡ್ ಗೂಗಲ್ ರೈಟರ್ ಅಂದ್ರು. ನಾವು ಪೇಯ್ಡ್ ಪ್ರೀಮಿಯರ್‌ ನೋಡಿಕೊಂಡೇ ಬಂದಿದ್ದೀವಿ , ರಿಲೀಸ್ ಗೂ ಮುಂಚೆ ಫೋನ್ ಮಾಡಿ ಹೇಳಿದ್ದೇವೆ ಎಂದಿದ್ದಾರೆ. ಅವರು ಹೇಳ್ತಾರೆ ನಾವು ಕಥೆ ನರೇಟ್ ಮಾಡೋಕೂ‌ ಮುಂಚೆ ಕಥೆ ಮಾಡ್ಕೊಂಡಿದ್ರು ಅಂತ. ಸೇಮ್ ಕಥೆ ಇದ್ದಿದ್ರೆ ಅವರು ಈ ಥರ ಕಥೆ ಮಾಡ್ಕೊಂಡಿದ್ದೀವಿ ಅಂತ ಹೇಳಿದ್ರು ಎಂದು ರಾಘವೇಂದ್ರ ನಾಯಕ್ ಹೇಳಿದ್ದಾರೆ.

Sulekha