RCB ಫ್ರಾಂಚೈಸಿ ಸೇಲ್ ಸೇಲ್ – 17,587 ಕೋಟಿ ರೂ.. 6 ಕಂಪನಿ ರೇಸ್
ಅದಾನಿ ಗ್ರೂಪ್ ಗೆ ಬೆಂಗಳೂರು ಟೀಂ?

RCB ಫ್ರಾಂಚೈಸಿ ಸೇಲ್ ಸೇಲ್ – 17,587 ಕೋಟಿ ರೂ.. 6 ಕಂಪನಿ ರೇಸ್ಅದಾನಿ ಗ್ರೂಪ್ ಗೆ ಬೆಂಗಳೂರು ಟೀಂ?

2025ರ ಐಪಿಎಲ್ ಸೀಸನ್​ನ ಆರ್​ಸಿಬಿ ಫ್ಯಾನ್ಸ್ ಅಂತೂ ಮರೆಯೋಕೆ ಚಾನ್ಸೇ ಇಲ್ಲ. ಸತತ 18 ವರ್ಷಗಳ ತಪಸ್ಸಿಗೆ ಫಲ ಸಿಕ್ಕ ಸೀಸನ್ ಅದು. ಲೀಗ್​ನ ಇತಿಹಾಸದಲ್ಲೇ ಚೊಚ್ಚಲ ಬಾರಿಗೆ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು. ಹಾಗೇ ಬ್ಯಾಟಿಂಗ್ ಆರ್ಡರ್, ಬೌಲಿಂಗ್ ಸ್ಟ್ರೆಂಥ್, ಮಿಡಲ್ ಆರ್ಡರ್ ಕೂಡ ಸೂಪರ್ ಸ್ಟ್ರಾಂಗ್ ಆಗಿದೆ. ನೆಕ್ಸ್​ಟ್ ಸೀಸನ್​ಗೂ ಅದೇ ಟೀಂ, ಅದೇ ಟಾರ್ಗೆಟ್​ನೊಂದಿಗೆ ಅಖಾಡಕ್ಕಿಳಿಯೋಕೆ ರೆಡಿಯಾಗ್ತಿದ್ದಾರೆ. ಆದ್ರೆ ಈಗ ಫ್ರಾಂಚೈಸಿಯೇ ಮಾರಾಟವಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಆಲ್ರೆಡಿ 6 ಕಂಪನಿಗಳ ನಡುವೆ ಓನರ್​ಶಿಪ್ ರೇಸ್ ಶುರುವಾಗಿದೆ.

ಇದನ್ನೂ ಓದಿ : ಗಿಲ್ ಗೆ NO LOSS ಚಾಲೆಂಜ್.. ಇಂಡಿಯಾ ಸ್ಟ್ಯಾಂಡರ್ಡ್ ಉಳಿಸ್ತಾರಾ? – AUS ಬಗ್ಗು ಬಡಿಯೋದೇ ಸವಾಲ್

ಜಗತ್ತಿನ ಶ್ರೀಮಂತ ಲೀಗ್ ಆಗಿರೋ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್. ಬಟ್ 2026ರ ಟೂರ್ನಿಗೂ ಮುನ್ನ ತಂಡವನ್ನ ಮಾರಾಟ ಮಾಡೋ ಬಗ್ಗೆ ಬಿಸಿಬಿಸಿ ಚರ್ಚೆಯಾಗ್ತಿದೆ.  ಪ್ರಸ್ತುತ ಡಿಯಾಜಿಯೊ ಕಂಪನಿ ಮಾಲೀಕತ್ವದಲ್ಲಿರುವ ಆರ್​ಸಿಬಿ ಮೇಲೆ ಅದಾನಿ, ಜೆಎಸ್‌ಡಬ್ಲ್ಯೂ ಗ್ರೂಪ್, ಆದರ್ ಪೂನವಾಲ್ಲಾ ಸೇರಿದಂತೆ ಆರು ಕಂಪನಿಗಳು ಕಣ್ಣಿಟ್ಟಿವೆ. 17,500 ಕೋಟಿಗೂ ಹೆಚ್ಚು ಹಣ ಬಿಡ್ ಮಾಡೋಕೆ ರೆಡಿ ಇದ್ದಾರೆ.

ಆರ್ ಸಿಬಿ ಫ್ರಾಂಚೈಸಿ ಸೇಲ್ ಗಿಟ್ಟಿದೆಯಾ ಡಿಯಾಜಿಯೋ?

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2026ರ ಐಪಿಎಲ್ ವೇಳೆಗೆಲ್ಲಾ ಟೂರ್ನಮೆಂಟ್‌ಗೆ ಮುಂಚಿತವಾಗಿ ಹೊಸ ಮಾಲೀಕರ ಕೈಸೇರಲಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಕ್ರಿಕ್‌ಬಜ್ ಪ್ರಕಾರ, ಆರು ಕಂಪನಿಗಳು ಆರ್​ಸಿಬಿ ಫ್ರಾಂಚೈಸಿಯನ್ನು ಖರೀದಿಸಲು ಮುಂದಾಗಿದ್ದು, ಸುಮಾರು 17,587 ಕೋಟಿ ರೂಪಾಯಿ ದರವನ್ನು ನಿಗದಿಪಡಿಲಾಗಿದೆ. ಪ್ರಸ್ತುತ ಆರ್​ಸಿಬಿ ತಂಡದ ಮಾಲೀಕತ್ವ ಡಿಯಾಜಿಯೊ ಕಂಪನಿಯ ಬಳಿ ಇದೆ. ಪ್ರಸ್ತುತ ಐಪಿಎಲ್ ಚಾಂಪಿಯನ್ ಆಗಿರುವ ಆರ್​ಸಿಬಿಯನ್ನು ಮಾರಾಟ ಮಾಡೋಕೆ ಕಂಪನಿಯಲ್ಲೇ ಪರವಿರೋಧ ಇದೆ. ಯಾಕಂದ್ರೆ ಡಿಯಾಜಿಯೊದ ಭಾರತೀಯ ಶಾಖೆಯು ಆರ್​ಸಿಬಿ ಮಾರಾಟ ಬೇಡ ಅಂತಾ ಪಟ್ಟು ಹಿಡಿದಿದೆ. ಯಾಕಂದ್ರೆ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಅತ್ಯಂತ ಜನಪ್ರಿಯ ತಂಡ. ಅದೂ ಅಲ್ದೇ ಹಾಲಿ ಚಾಂಪಿಯನ್. ಹೀಗಾಗಿ ಮಾರಾಟ ಮಾಡೋದು ಬೇಡ ಅನ್ನೋ ವಾದ ಮುಂದಿಟ್ಟಿದ್ದಾರೆ.

ಆರ್ ಸಿಬಿ ಖರೀದಿ ಮಾಡೋಕೆ 6 ಕಂಪನಿಗಳ ರೇಸ್!

ಐಪಿಎಲ್ ಅಷ್ಟೇ ಅಲ್ದೇ ಜಗತ್ತಿನಾದ್ಯಾಂತ ಫ್ಯಾನ್ ಬೇಸ್ ಇರೋ ಆರ್ ಸಿಬಿಗೆ ಭರ್ಜರಿ ಡಿಮ್ಯಾಂಡ್ ಅಂತೂ ಇದೆ. ಎಷ್ಟೋ ಆಟಗಾರರು ಆರ್ ಸಿಬಿ ಪರ ಆಡ್ಭೇಕು ಅನ್ನೋ ಕನಸು ಕಂಡಿರ್ತಾರೆ. ಸದ್ಯ ಮಾರಾಟದ ಟಾಪಿಕ್ ಶುರು ಆದ್ಮೇಲೆ ಫ್ರಾಂಚೈಸಿಯನ್ನ ಖರೀದಿ ಮಾಡೋಕೆ 6 ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಸೀರಮ್ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಆದರ್ ಪೂನವಾಲ್ಲಾ ಫ್ರಾಂಚೈಸಿಯನ್ನು ಖರೀದಿಸೋ ಚಿಂತನೆಯಲ್ಲಿದ್ದಾರೆ. ಪೂನವಾಲ್ಲಾ ಜೊತೆಗೆ, ಜೆಎಸ್‌ಡಬ್ಲ್ಯೂ ಗ್ರೂಪ್ ಮತ್ತು ಅದಾನಿ ಗ್ರೂಪ್ ಕೂಡ ಆಸಕ್ತಿ ಹೊಂದಿವೆ. ದೆಹಲಿ ಮೂಲದ ಬಿಲಿಯನೇರ್ ಕೈಗಾರಿಕೋದ್ಯಮಿ ಮತ್ತು ಎರಡು ಅಮೇರಿಕನ್ ಖಾಸಗಿ ಇಕ್ವಿಟಿ ಸಂಸ್ಥೆಗಳು ಸಹ ಆರ್​ಸಿಬಿ ಖರೀದಿಸುವ ಪ್ಲ್ಯಾನ್​ನಲ್ಲಿವೆ ಎಂಬ ವರದಿಯಾಗಿದೆ. ಌಕ್ಚುಲಿ ಐಪಿಎಲ್‌ನಲ್ಲಿ ಯಾವುದಾದ್ರೂ ತಂಡ ಖರೀದಿಸಬೇಕೆಂಬ ಅಂತಾ ಅದಾನಿ ಗ್ರೂಪ್‌ಗೆ ಮೊದ್ಲಿಂದಲೂ ಇದೆ.  2022 ರಲ್ಲಿ ಬಿಸಿಸಿಐ ಎರಡು ಹೊಸ ತಂಡಗಳನ್ನು ಮಾರಾಟ ಮಾಡಿದಾಗ, ಅದಾನಿ ಗ್ರೂಪ್ ಗುಜರಾತ್ ತಂಡವನ್ನು ಖರೀದಿಸುವುದಕ್ಕೆ ಬಿಡ್ ಮಾಡಿತ್ತು. ಆದರೆ ಬಿಡ್ ಗೆಲ್ಲೋಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಆರ್​ಸಿಬಿ ತಂಡ ಖರೀದಿಸುವ ಪ್ರಯತ್ನದಲ್ಲಿದೆ. ಮತ್ತೊಂದೆಡೆ, ಜಿಂದಾಲ್ ಗ್ರೂಪ್ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಶೇಕಡಾ 50 ರಷ್ಟು ಪಾಲನ್ನು ಹೊಂದಿದೆ. ಹೀಗಾಗಿ ಒಂದು ವೇಳೆ ಜಿಂದಾಲ್ ಗ್ರೂಪ್, ಆರ್‌ಸಿಬಿಗೆ ಬಿಡ್ ಮಾಡಿದರೆ ಡೆಲ್ಲಿ ಫ್ರಾಂಚೈಸಿಯಿಂದ ಹೊರಬರಬೇಕಾಗುತ್ತದೆ. ಸದ್ಯದ ಡವಲಪ್​ಮೆಂಟ್ಸ್​ ಪ್ರಕಾರ ಮಾರಾಟದ ಕುರಿತು ಸಜೇಷನ್ಸ್ ತಗೊಳ್ಳೋಕೆ ಡಿಯಾಜಿಯೊ ಸಿಟಿ ಸೇರಿದಂತೆ ಎರಡು ಖಾಸಗಿ ಬ್ಯಾಂಕ್‌ಗಳನ್ನು ನೇಮಿಸಿಕೊಂಡಿದೆ. ಆದ್ರೆ ಈ ಖರೀದಿ ಒಪ್ಪಂದ ಪೂರ್ಣಗೊಳ್ಳುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಕ್ಲಿಯರ್ ಆಗಿಲ್ಲ. ಟ್ರೇಡ್ ವಿಂಡೋ ಮತ್ತು ಮಿನಿ ಹರಾಜಿನ ಮೊದಲು ಆರ್​ಸಿಬಿ ಫ್ರಾಂಚೈಸಿ ಹೊಸ ಮಾಲೀಕರ ಕೈಸೇರುತ್ತೋ ಅಥವಾ ಹಳೆ ಮಾಲೀಕರ ಬಳಿಯೇ ಉಳಿಯುತ್ತೋ ಅನ್ನೋ ಕುತೂಹಲವೂ ಇದೆ.

ಸದ್ಯಕ್ಕಿರೋ ಮಾಹಿತಿ ಪ್ರಕಾರ ಫ್ರಾಂಚೈಸಿ ಮಾರಾಟಕ್ಕೆ ಹಲವು ಕಾರಣಗಳು ಕೇಳಿ ಬರ್ತಿವೆ. ಫ್ರಾಂಚೈಸಿಗಳ ಖರ್ಚುಗಳು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗ್ತಿದೆ. ಇತ್ತೀಚೆಗೆ ಆಲ್​ನೈನ್​ ಬೆಟ್ಟಿಂಗ್​ ಗೇಮಿಂಗ್ ಅಪ್ಲಿಕೇಶನ್‌ಗಳ ಮೇಲೆ ನಿಷೇಧ ಹೇರಿದ್ದರಿಂದ ಇದು ಐಪಿಎಲ್ ತಂಡದ ಮಾಲೀಕರ ಆದಾಯದ ಮೇಲೂ ಹೊಡೆತ ಬಿದ್ದಿದೆ.  ಡಿಯಾಜಿಯೊ ಮುಖ್ಯವಾಗಿ ಮದ್ಯ ತಯಾರಿಕಾ ಕಂಪನಿ. ಹೀಗಾಗಿ ಹೆಚ್ಚಿನ ವೆಚ್ಚದೊಂದಿಗೆ ಐಪಿಎಲ್ ಫ್ರಾಂಚೈಸಿ ನಡೆಸಲು ಹೆಚ್ಚಿನ ಆಸಕ್ತಿ ಹೊಂದಿಲ್ಲ. ಹೀಗಾಗೇ ಆರ್‌ಸಿಬಿಯಲ್ಲಿನ ತನ್ನ ಪಾಲನ್ನು ಮಾರಾಟ ಮಾಡಲು ನಿರ್ಧರಿಸಿದೆ ಎನ್ನಲಾಗ್ತಿದೆ. ಒಟ್ನಲ್ಲಿ ಆರ್​ಸಿಬಿಗೆ ಯಾರೇ ಮಾಲೀಕರಾದ್ರೂ ಜನಪ್ರಿಯತೆ ಮಾತ್ರ ಕಿಂಚಿತ್ತೂ ಕಮ್ಮಿ ಆಗಲ್ಲ. ಫಸ್ಟ್ ಟ್ರೋಫಿ ಗೆದ್ದಿರೋ ತಂಡ ಮುಂದಿನ ಸೀಸನ್​ನಲ್ಲೂ ಅದ್ಭುತ ಪ್ರದರ್ಶನ ನೀಡೋಕೆ ರೆಡಿಯಾಗಿದ್ದಾರೆ.

Shantha Kumari