ಬಿಗ್‌ಬಾಸ್ ಟ್ರೋಫಿ ಯಾರ ಕೈ ಸೇರಲಿದೆ? – ಫಿನಾಲೆಗೆ ಶುರುವಾಯ್ತು ಕ್ಷಣಗಣನೆ

ಬಿಗ್‌ಬಾಸ್ ಟ್ರೋಫಿ ಯಾರ ಕೈ ಸೇರಲಿದೆ? – ಫಿನಾಲೆಗೆ ಶುರುವಾಯ್ತು ಕ್ಷಣಗಣನೆ

ಕಿರುತೆರೆಯಲ್ಲಿ ದಾಖಲೆ ಬರೆದಿರುವ ಬಿಗ್‌ಬಾಸ್ ಕನ್ನಡದ ಸೀಸನ್ 10ರ ಗ್ರ್ಯಾಂಡ್ ಫಿನಾಲೆ ಬಂದೇ ಬಿಟ್ಟಿದೆ. ಜನವರಿ 27 ಮತ್ತು 28ರಂದು ಫಿನಾಲೆ ನಡೆಯಲಿದೆ. 16 ವಾರಗಳಿಂದ ನಡೆದ ಜರ್ನಿಯಲ್ಲಿ 19 ಸ್ಪರ್ಧಿಗಳು ಭಾಗಿಯಾಗಿದ್ದರು. ಸದ್ಯ  6 ಜನ ಫೈನಲ್ ಲಿಸ್ಟ್‌ನಲ್ಲಿ ಇದ್ದಾರೆ. ಮನೆಯಿಂದ ಹೊರಗೆ ಹೋಗಿರುವ ಸ್ಪರ್ಧಿಗಳು ತಮ್ಮ ನೃತ್ಯದ ಮೂಲಕ ಫಿನಾಲೆಯ ರಂಗು ಹೆಚ್ಚಿಸಲಿದ್ದಾರೆ.

ಇದನ್ನೂ ಓದಿ: ಸಂತು ಪಂತು ಗೆಳೆತನಕ್ಕೆ ಸಾಕ್ಷಿಯಾದ ಬಿಗ್‌ಬಾಸ್ – ಸ್ನೇಹಿತರ ಮನದಾಳದ ಮಾತು ಕೇಳಿ ಕಿಚ್ಚ ಸುದೀಪ್ ಭಾವುಕ

ಈ ಸಲ ಐದು ಜನ ಅಲ್ಲ, ಆರು ಜನ ಫಿನಾಲೆ ರೌಂಡ್‌ನಲ್ಲಿ ಇದ್ದಾರೆ. ಈ ಫಿನಾಲೆ ವಾರದಲ್ಲಿ  ಅಂತಿಮ ಸ್ಪರ್ಧಿಗಳಾಗಿ ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ತುಕಾಲಿ ಸ್ಟಾರ್ ಸಂತೋಷ್, ವರ್ತೂರು ಸಂತೋಷ್ ಇದ್ದಾರೆ. ಸತತ 16 ವಾರಗಳು ಟಾಪ್ ಟಿಆರ್‌ಪಿಯಲ್ಲೇ  ಮುಂದುವರೆದಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 10’  ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಒಬ್ಬರ ಕೈಯನ್ನು ಎತ್ತಿ ಹಿಡಿಯಲಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ರಾರಾಜಿಸುತ್ತಿರುವ ಕಪ್ ಅವರ ಕೈ ಸೇರಲಿದೆ. ಇವರಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

ಬಿಗ್ ಬಾಸ್ ಕನ್ನಡ 10 ವಿಜೇತರಿಗೆ ಕಾನ್ಫಿಡೆಂಟ್ ಗ್ರೂಪ್ ಕಡೆಯಿಂದ 50 ಲಕ್ಷ ರೂಪಾಯಿ ನಗದು ಬಹುಮಾನ ದೊರೆಯಲಿದೆ. ಇಷ್ಟೇ ಅಲ್ಲದೇ ಜೊತೆಗೆ ಹೊಸ ಮಾರುತಿ ಸುಜುಕಿ ಬ್ರೆಜಾ ಕಾರು ಮತ್ತು ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಸಿಗಲಿದೆ. ಬಿಗ್ ಬಾಸ್ ಕನ್ನಡ 10 ರನ್ನರ್ ಆದವರಿಗೆ ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಲಭಿಸಲಿದೆ.

ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ  ಹಳೆಯ ಸ್ಪರ್ಧಿಗಳ ಎಂಟ್ರಿ ಕೂಡ ಆಗಿದೆ. ಎಲ್ಲರೂ ಸೇರಿ ಭರ್ಜರಿಯಾಗಿ ಪರ್ಫಾರ್ಮೆನ್ಸ್ ನೀಡಿದ್ದಾರೆ. ಕಿಚ್ಚ ಸುದೀಪ್ ಈ ವಾರ ಫೈನಲ್ ವೀಕ್‌ನ ನಿರೂಪಣೆ ಮಾಡಲಿದ್ದಾರೆ. ಎಲಿಮಿನೇಟ್ ಆದ ಸ್ಪರ್ಧಿಗಳು ಬಿಗ್ ಬಾಸ್ ವೇದಿಕೆಯ ರಂಗನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ. ತನಿಷಾ ಕುಪ್ಪಂಡ ಅವರು ಡ್ಯಾನ್ಸ್ ಮಾಡಿದ್ದಾರೆ. ಮೈಕಲ್ ಅಜಯ್ ಕೂಡ ಸ್ಟೆಪ್ ಹಾಕಿದ್ದಾರೆ. ಸ್ನೇಹಿತ್ ಗೌಡ ಡ್ಯಾನ್ಸ್, ಈಶಾನಿ ಹಾಡು ಕೂಡಾ ಫಿನಾಲೆಯಲ್ಲಿ ಇರಲಿದೆ.

Sulekha