RCB ಬೆಂಕಿ.. DC ಬಿರುಗಾಳಿ – ಬ್ಯಾಟಿಂಗ್ & ಬೌಲಿಂಗ್ ಪವರ್ ಹೇಗಿದೆ?

8 ಮ್ಯಾಚ್ ಆಡಿ 6ಪಂದ್ಯ ಗೆದ್ದು ಟಾಪ್ 2ನಲ್ಲಿರೋ ಡೆಲ್ಲಿ ಕ್ಯಾಪಿಟಕ್ಸ್.. 9 ಪಂದ್ಯ ಆಡಿ 6 ಮ್ಯಾಚ್ ಗೆದ್ದು ಟಾಪ್ 3ನಲ್ಲಿರೋ ಆರ್‌ಸಿಬಿ. ಈ ಎರಡೂ ತಂಡಗಳು ಈ ಸೀಸನ್ನಲ್ಲಿ ಮತ್ತೊಮ್ಮೆ ಅಖಾಡಕ್ಕೆ ಇಳಿಯೋಕೆ ರೆಡಿಯಾಗಿದ್ದಾರೆ. ಭಾನುವಾರ ರಾತ್ರಿ ನಡೆಯಲಿರೋ ಪಂದ್ಯದಲ್ಲಿ ಗೆದ್ದವ್ರು ಪಾಯಿಂಟ್ಸ್ ಟೇಬಲ್ ಸುಲ್ತಾನ ಆಗ್ತಾರೆ. ನಂಬರ್ 1 ಸ್ಥಾನಕ್ಕೆ ಜಂಪ್ ಆಗ್ತಾರೆ. ಪ್ಲೇಆಫ್ ಹೊಸ್ತಿಲಿಗೆ ಹೆಜ್ಜೆ ಇಡ್ತಾರೆ. ಈ ಸೀಸನ್ನಲ್ಲಿ ಎರಡೂ ತಂಡಗಳ ಆಟಗಾರರು ಪವರ್ ಹಿಟ್ಟಿಂಗ್ ಮತ್ತು ಮಾರಕ ಬೌಲಿಂಗ್ನಲ್ಲೇ ಸದ್ದು ಮಾಡ್ತಿದ್ದು ಈ ಪಂದ್ಯಗಳು ರೋಚಕ ಕಾಳಗ ನಡೆಯಲಿದೆ.
ಇದನ್ನೂ ಓದಿ : ಬ್ಯಾಟಿಂಗ್ & ಕೀಪಿಂಗ್ ನಲ್ಲಿ ಬೆಸ್ಟ್ ಪರ್ಫಾಮೆನ್ಸ್ – ಜಿತೇಶ್ ಶರ್ಮಾ ಪರ್ಫೆಕ್ಟ್ ಪ್ಲೇಯರ್
ಈ ಸಲ ಈ ಎರಡೂ ತಂಡಗಳ ನಡುವೆ ಅದ್ಭುತ ಪ್ರದರ್ಶನ ಮೂಡಿ ಬರೋಕೆ ಕಾರಣವೇ ಟೀಂ ಬ್ಯಾಲೆನ್ಸ್ ಆಗಿರೋದು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸ್ಟ್ರಾಂಗ್ ಆಗಿದ್ದಾರೆ. ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಒಳ್ಳೆ ಓಪನಿಂಗ್ ಮಾಡ್ತಿದ್ದಾರೆ. ಹಾಗೇ ಪಡಿಕ್ಕಲ್, ಪಾಟಿದಾರ್ ಮತ್ತು ಟಿಮ್ ಡೇವಿಡ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಜಿತೇಶ್ ಕೂಡ ಪವರ್ ಹಿಟ್ಟಿಂಗ್ ಮಾಡ್ತಿದ್ದಾರೆ. ಇನ್ನು ಸ್ಪಿನ್ ಬೌಲಿಂಗ್ ನಲ್ಲಿ ಸುಯಾಶ್ ಮತ್ತು ಕೃನಾಲ್ ಎಕಾನಮಿ ಸ್ಪೆಲ್ ಹಾಕಿದ್ರೆ ಪೇಸರ್ಗಳಾದ ಹೇಜಲ್ ವುಡ್ ಮತ್ತು ಭುವಿ ತಮ್ಮ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸ್ತಿದ್ದಾರೆ. ಹಾಗೇ ಡೆಲ್ಲಿ ಟೀಮ್ನಲ್ಲೂ ಕೂಡ ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಕ್ರೀಸ್ ಕಚ್ಚಿ ನಿಂತ್ರೆ ವಿಕೆಟ್ ತೆಗೆಯೋದು ಕಷ್ಟ. ಅಭಿಷೇಕ್ ಪೊರೆಲ್ ಮತ್ತು ಅಕ್ಷರ್ ಪಟೇಲ್ ಪವರ್ ಹಿಟ್ಟಿಂಗ್ ಪರ್ಫಾಮೆನ್ಸ್ ಕೊಡ್ತಾರೆ. ಸ್ಟಬ್ಸ್, ಅಶುತೋಶ್ ಫಿನಿಶಿಂಗ್ ರೋಲ್ ಚೆನ್ನಾಗಿ ನಿಭಾಯಿಸ್ತಿದ್ದಾರೆ. ಇತ್ತ ಬೌಲಿಂಗ್ ನಲ್ಲಿ ಮಿಚೆಲ್ ಸ್ಟಾರ್ಕ್, ಮುಕೇಶ್ ಕುಮಾರ್, ಚಮೀರ ಮತ್ತು ಕುಲ್ದೀಪ್ ಯಾದವ್ ಮೇನ್ ಅಸ್ತ್ರಗಳಾಗಿದ್ದಾರೆ.
ಇನ್ನು ಉಭಯ ತಂಡಗಳ ಹೆಡ್ ಟು ಹೆಡ್ ರೆಕಾರ್ಡ್ಸ್ ತೆಗೆದು ನೋಡಿದ್ರೆ ಆರ್ ಸಿಬಿಯೇ ಮೇಲುಗೈ ಸಾಧಿಸಿದೆ. ಎರಡೂ ತಂಡಗಳು ಇಲ್ಲಿಯವರೆಗೆ ಪರಸ್ಪರ 32 ಪಂದ್ಯಗಳನ್ನು ಆಡಿದ್ದು, ಆರ್‌ಸಿಬಿ 19 ಪಂದ್ಯಗಳನ್ನು ಗೆದ್ದಿದೆ. ಮತ್ತೊಂದೆಡೆ, ಡಿಸಿ 12 ಬಾರಿ ವಿನ್ ಆಗಿದೆ. ಒಂದು ಪಂದ್ಯ ಮಾತ್ರ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಇನ್ನು ಆರ್ ಸಿಬಿ ಟೀಂ ಅವ್ರದ್ದೇ ತವರು ನೆಲದಲ್ಲಿಯೂ ಡಿಸಿ ವಿರುದ್ಧ ಪ್ರಾಬಲ್ಯ ಸಾಧಿಸಿದೆ. ಎರಡೂ ತಂಡಗಳು ದೆಹಲಿಯಲ್ಲಿ 10 ಪಂದ್ಯಗಳನ್ನು ಆಡಿದ್ದು, ಆರ್‌ಸಿಬಿ 6 ಪಂದ್ಯಗಳನ್ನು ಗೆದ್ದರೆ, ಡಿಸಿ 4 ಪಂದ್ಯಗಳನ್ನು ಗೆದ್ದಿದೆ. ಅಂದ್ರೆ ಅರುಣ್ ಜೇಟ್ಲಿ ಮೈದಾನದಲ್ಲಿ ಆರ್ಸಿಬಿಯೇ ಹೆಚ್ಚು ಪಂದ್ಯಗಳನ್ನ ವಿನ್ ಆಗಿದೆ. ಡಿಸಿ ಮತ್ತು ಆರ್‌ಸಿಬಿ ನಡುವಿನ ಕಳೆದ ಐದು ಪಂದ್ಯಗಳ ರಿಸಲ್ಟ್ ನೋಡಿದ್ರೆ ಡಿಸಿ ಎರಡು ಮ್ಯಾಚ್ ಮತ್ತು ಆರ್ ಸಿಬಿ ಮೂರು ಮ್ಯಾಚ್ ಗೆದ್ದಿದೆ. ಕರೆಂಟ್ ಸೀಸನ್ನಲ್ಲಿ ಎರಡೂ ತಂಡಗಳು ಈಗಾಗಲೇ ಪರಸ್ಪರ ಒಂದು ಪಂದ್ಯವನ್ನು ಆಡಿವೆ. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಡಿಸಿ ತಂಡ 6 ವಿಕೆಟ್‌ಗಳಿಂದ ಜಯಗಳಿಸಿತು. ಇದೀಗ ಮತ್ತೊಮ್ಮೆ ಎದುರು ಬದುರಾಗ್ತಿವೆ.