ಮುಂಬೈಗೆ ಮತ್ತೆ ಪಾಂಡ್ಯ ಕ್ಯಾಪ್ಟನ್ – ರೋಹಿತ್, ಸೂರ್ಯ, ಬುಮ್ರಾ ಒಪ್ಪಿದ್ರಾ?
6ನೇ ಟ್ರೋಫಿಗೆ ಸ್ಟ್ರಾಟರ್ಜಿ ಹೇಗಿದೆ?

ಮುಂಬೈಗೆ ಮತ್ತೆ ಪಾಂಡ್ಯ ಕ್ಯಾಪ್ಟನ್ – ರೋಹಿತ್, ಸೂರ್ಯ, ಬುಮ್ರಾ ಒಪ್ಪಿದ್ರಾ?6ನೇ ಟ್ರೋಫಿಗೆ ಸ್ಟ್ರಾಟರ್ಜಿ ಹೇಗಿದೆ?

ಐಪಿಎಲ್ ರಿಟೇನ್ ಲಿಸ್ಟ್ ಅನೌನ್ಸ್ ಆಗೋಕೂ ಮುನ್ನ ಅಭಿಮಾನಿಗಳನ್ನ ತುಂಬಾ ಕಾಡಿದ್ದ ಫ್ರಾಂಚೈಸಿ ಅಂದ್ರೆ ಅದು ಮುಂಬೈ ಇಂಡಿಯನ್ಸ್. 2024ರ ಐಪಿಎಲ್ ಸೀಸನ್​ನಲ್ಲಿ ನೀತಾ ಅಂಬಾನಿ ಒಡೆತನದ ತಂಡದಲ್ಲಿ ಆದ ಕೆಲ ಬದಲಾವಣೆಗಳು ಇಡೀ ತಂಡದಲ್ಲಿ ಬಿರುಕು ಮೂಡಿಸಿತ್ತು. ಕ್ಯಾಪ್ಟನ್ಸಿ ಬದಲಾವಣೆ ಕಿಚ್ಚು ಟೂರ್ನಿಯುದ್ದಕ್ಕೂ ಹೊತ್ತಿ ಉರಿದಿತ್ತು. ಇಂಥಾ ಪರಿಸ್ಥಿತಿಯಲ್ಲಿ 2025ರ ಸೀಸನ್​ಗೆ ತಂಡದಲ್ಲಿ ಒಂದಷ್ಟು ಬದಲಾವಣೆ ಆಗುತ್ತೆ ಅಂತಾನೇ ಫ್ಯಾನ್ಸ್ ಅನ್ಕೊಂಡಿದ್ರು. ಬಟ್ ರಿಟೇನ್ ಪಟ್ಟಿ ಹೊರಬಿದ್ದ ಮೇಲೆ ಬೇರೆಯದ್ದೇ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಏನದು ಚರ್ಚೆ..? ಮುಂಬೈಗೆ ತಂಡಕ್ಕೆ ಕ್ಯಾಪ್ಟನ್ ಯಾರು? ಪಾಂಡ್ಯನೇ ನಾಯಕನಾಗಿ ಮುಂದುವರಿಯುತ್ತಾರಾ? ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಇದನ್ನ ಒಪ್ಪಿಕೊಳ್ತಾರಾ? ಅಥವಾ ಅಸಮಾಧಾನ ಹಾಗೇ ಕಂಟಿನ್ಯೂ ಆಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಇದನ್ನೂ ಓದಿ:ಹರಿಣಗಳ ಬೆಂಡೆತ್ತಿದ ಭಾರತ – 10 ಸಿಕ್ಸ್.. 7 ಫೋರ್.. ಸಂಜು ಹೀರೋ

ಐಪಿಎಲ್ ಇತಿಹಾಸದಲ್ಲಿ ಒನ್ ಆಫ್ ದಿ ಸಕ್ಸಸ್​ಫುಲ್ ಟೀಂ ಅಂದ್ರೆ ಅದು ಮುಂಬೈ ಇಂಡಿಯನ್ಸ್. 17 ಸೀಸನ್​ಗಳ ಪೈಕಿ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಅಚ್ಚರಿ ಎನ್ನುವಂತೆ 2024ರ ಸೀಸನ್​ಗೂ ಮುನ್ನ ರೋಹಿತ್ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಇಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟಾಭಿಷೇಕ ಮಾಡ್ಲಾಗಿತ್ತು. ಫ್ರಾಂಚೈಸಿಯ ಇದೇ ನಿರ್ಧಾರ ಇಡೀ ತಂಡದಲ್ಲಿ ಬಿರುಕು ಮೂಡಿಸಿತ್ತು. ಸೋ 2025ರ ಟೂರ್ನಿಗೂ ಮುನ್ನ ರೋಹಿತ್ ಶರ್ಮಾ ತಂಡದಿಂದ ಹೊರಬರ್ತಾರೆ. ಕ್ಯಾಪ್ಟನ್ ಬದಲಾವಣೆ ಫಿಕ್ಸ್ ಅಂತಾನೇ ಅಂದುಕೊಂಡಿದ್ರು. ಬಟ್ ಈಗ ಫ್ರಾಂಚೈಸಿ ಬೇರೆಯದ್ದೇ ಪ್ಲ್ಯಾನ್ ಮಾಡಿದೆ.

ಹರಾಜಿಗೂ ಮುನ್ನ ಐವರು ಸೂಪರ್ ಸ್ಟಾರ್ಸ್ ಗೆ ಮುಂಬೈ ಮಣೆ!

ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಐವರು ಆಟಗಾರರನ್ನು ಉಳಿಸಿಕೊಂಡಿದೆ. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನ ಮೊದಲ ರಿಟೇನ್​ ಆಗಿ ಆಯ್ಕೆ ಮಾಡಿದ್ದು, ದಾಖಲೆಯ 18 ಕೋಟಿ ಸಂಭಾವನೆ ನೀಡಿ ಉಳಿಸಿಕೊಂಡಿದೆ. ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯರನ್ನ ತಲಾ 16.35 ಕೋಟಿಗೆ ಆಯ್ಕೆ ಮಾಡಿಕೊಂಡಿದೆ. ನಾಲ್ಕನೇ ಆಟಗಾರನಾಗಿ ಮಾಜಿ ನಾಯಕ ರೋಹಿತ್ ಶರ್ಮಾಗೆ 16.3 ಕೋಟಿ ನೀಡಿದೆ. ಹೈದರಾಬಾದ್ ಸ್ಟಾರ್ ತಿಲಕ್ ವರ್ಮಾಗೆ 8 ಕೋಟಿ ನೀಡಿ ಉಳಿಸಿಕೊಂಡಿದೆ. ಈ ಐವರು ಆಟಗಾರರಿಗೆ ಮುಂಬೈ ಇಂಡಿಯನ್ಸ್ 75 ಕೋಟಿ ಖರ್ಚು ಮಾಡಿದೆ. ಫ್ರಾಂಚೈಸಿ ಇನ್ನೂ 45 ಕೋಟಿ ಪರ್ಸ್ ಹೊಂದಿದ್ದು, ಈ ಹಣದಲ್ಲಿ ಸುಮಾರು 17 ಆಟಗಾರರನ್ನು ಖರೀದಿಸಬೇಕಿದೆ. ಒಂದು RTM ಕಾರ್ಡ್ ಉಳಿದಿರೋದ್ರಿಂದ ಇಶಾನ್ ಕಿಶನ್ ಅಥವಾ ಟಿಮ್ ಡೇವಿಡ್​ರನ್ನ ಹರಾಜಿನಲ್ಲಿ ಮರಳಿ ಖರೀದಿಸಬಹುದು.

ಮುಂಬೈ ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ ಕಂಟಿನ್ಯೂ!

ಕಳೆದ ಬಾರಿ ರೋಹಿತ್​ ಶರ್ಮಾರನ್ನ ನಾಯಕತ್ವದಿಂದ ಕೆಳಗಿಳಿಸಿದ್ದ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯಗೆ ವಹಿಸಿತ್ತು. ಆದರೆ ಪಾಂಡ್ಯ ನೇತೃತ್ವದಲ್ಲಿ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ತಂಡದಲ್ಲಿ ಅಸಮಾಧಾನ ಜಾಸ್ತಿಯಾಗಿತ್ತು. ಹೀಗಾಗಿ ನಾಯಕತ್ವದ ಬದಲಾವಣೆ ಬಗ್ಗೆ ನಿರೀಕ್ಷೆ ಮಾಡಲಾಗಿತ್ತು. ಬಟ್ ಮುಂದಿನ ಸೀಸನ್​ಗೂ ಹಾರ್ದಿಕ್ ಪಾಂಡ್ಯ ಮುಂಬೈ ತಂಡದ ಕ್ಯಾಪ್ಟನ್ ಆಗಿರೋದು ಪಕ್ಕಾ ಆಗಿದೆ.   ಹಾರ್ದಿಕ್ ಪಾಂಡ್ಯ ಮಾತನಾಡುತ್ತಿರುವ ವೀಡಿಯೋವನ್ನ ಫ್ರಾಂಚೈಸಿ ಹಂಚಿಕೊಂಡಿದ್ದು, ಈ ಬಗ್ಗೆ ಕ್ಲಾರಿಟಿ ಸಿಕ್ಕಂತಾಗಿದೆ.

ಪಾಂಡ್ಯ ನಾಯಕತ್ವದಡಿ ಆಡ್ತಾರಾ ರೋಹಿತ್, ಸೂರ್ಯ & ಬುಮ್ರಾ?

ಅಭಿಮಾನಿಗಳನ್ನ ಕಾಡ್ತಿರೋ ಬಹುದೊಡ್ಡ ಪ್ರಶ್ನೆಯೇ ಇದು. ಪಾಂಡ್ಯ ಕ್ಯಾಪ್ಟನ್ಸಿ ಅಡಿಯಲ್ಲಿ ಈ ಸ್ಟಾರ್ ಪ್ಲೇಯರ್ಸ್ ಆಡ್ತಾರಾ ಅನ್ನೋದು. ರೋಹಿತ್ ಶರ್ಮಾ ಟೀಂ ಇಂಡಿಯಾದ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ. ಇನ್ನು ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾದಲ್ಲಿ ಟಿ-20 ತಂಡವನ್ನ ಮುನ್ನಡೆಸೋ ಸಾರಥಿ. ಮತ್ತೊಂದೆಡೆ ಬುಮ್ರಾ ಟೆಸ್ಟ್ ಟೀಮ್​ನಲ್ಲಿ ವೈಸ್ ಕ್ಯಾಪ್ಟನ್. ಸೋ ಭಾರತ ತಂಡದಲ್ಲಿ ನಾಯಕ, ಉಪನಾಯಕರಾಗಿರೋ ಇವ್ರೆಲ್ಲಾ ಪಾಂಡ್ಯ ಅಡಿಯಲ್ಲಿ ಆಡ್ತಾರಾ ಅನ್ನೋ ಪ್ರಶ್ನೆ ಎಲ್ರನ್ನೂ ಕಾಡ್ತಿದೆ.

ಒಟ್ನಲ್ಲಿ ಸ್ಟಾರ್ ಆಟಗಾರರ ದಂಡೇ ಇರೋ ಮುಂಬೈ ತಂಡ ಕಳೆದ ಸೀಸನ್​ನಲ್ಲಿ ಮನೆಯೊಂದು ಮೂರು ಬಾಗಿಲಿನಂತಾಗಿತ್ತು. ನೆಕ್ಸ್​ಟ್ ಸೀಸಸ್​ನಲ್ಲಿ ಈ ಬಿರುಕುಗಳನ್ನ ಮುಚ್ಚಿಕೊಂಡು ಅಖಾಡಕ್ಕೆ ಇಳಿಯಬೇಕಿದೆ. ನಾಯಕತ್ವದ ಮೇಲೆ ತಂಡದಲ್ಲಿ ಅಸಮಾಧಾನ ಇದ್ರೆ ಮತ್ತೊಮ್ಮೆ ಫ್ಲ್ಯಾಪ್ ಶೋ ನೀಡೋದು ಗ್ಯಾರಂಟಿ.

Shwetha M

Leave a Reply

Your email address will not be published. Required fields are marked *