RCB ಮೆಂಟರ್ ಮೇಲೆ CSK ಕಣ್ಣು – ಚೆನ್ನೈ ಕೋಚ್ ಆಗ್ತಾರಾ DK ಬಾಸ್?
ಫ್ಲೆಮಿಂಗ್ ಉತ್ತರಾಧಿಕಾರಿ ಯಾರು?

RCB ಮೆಂಟರ್ ಮೇಲೆ CSK ಕಣ್ಣು – ಚೆನ್ನೈ ಕೋಚ್ ಆಗ್ತಾರಾ DK ಬಾಸ್?ಫ್ಲೆಮಿಂಗ್ ಉತ್ತರಾಧಿಕಾರಿ ಯಾರು?

2027ರ ಐಪಿಎಲ್​ಗೂ ಮುನ್ನ ಫ್ರಾಂಚೈಸಿಗಳಲ್ಲಿ ಮೇಜರ್ ಸರ್ಜರಿಗಳೇ ಆಗ್ತಿವೆ. ಅದ್ರಲ್ಲೂ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಂತೂ ದೊಡ್ಡ ಕ್ರಾಂತಿಯೇ ಆಗಿದೆ. ಚೆನ್ನೈ ಟೀಮ್​ನಲ್ಲಿ ಬರೋಬ್ಬರಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್​ರನ್ನೇ ಕೈಬಿಟ್ಟು ಈಗ ಹೊಸ ದ್ರೋಣಾಚಾರ್ಯನ ಹುಡುಕಾಟದಲ್ಲಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಸಿಎಸ್​ಕೆಗೆ ಕೋಚ್ ಆಗೋಕೆ ಹಲವರ ಹೆಸರು ರೇಸ್​ನಲ್ಲಿದೆ. ನಮ್ಮ ಕನ್ನಡಿಗ ಇದ್ದಾರೆ. ಌಂಡ್ ಆರ್​ಸಿಬಿಯ ಆಪತ್ವಾಂಧವನ ಹೆಸರೂ ಲೀಡ್​ನಲ್ಲಿದ್ದಾರೆ.

ಇದನ್ನೂ ಓದಿ : PAK ಆಟಗಾರನ ಗಾಂ*ಜಾ ಗಮ್ಮತ್ತು! – ನಶೆಯಲ್ಲಿ T-20WC ಆಡಿದ್ದ ನವಾಜ್

ಐಪಿಎಲ್​ನಲ್ಲಿ ಒನ್ ಆಫ್ ದಿ ಮೋಸ್ಟ್ ಸಕ್ಸಸ್​ಫುಲ್ ಟೀಂ, ಫ್ಯಾನ್ಸ್ ಬೇಸ್ಡ್ ಟೀಂ ಆಗಿರೋ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಮೂರು ವರ್ಷಗಳಿಂದ ಕಳಪೆ ಪ್ರದರ್ಶನದಿಂದ ಒದ್ದಾಡ್ತಿದೆ. ಕಳೆದ 3 ವರ್ಷಗಳಲ್ಲಿ ಒಮ್ಮೆಯೂ ಪ್ಲೇಆಫ್​ಗೂ ಬರೋಕೆ ಆಗಿಲ್ಲ. ಆದರೆ ಮುಂದಿನ ಆವೃತ್ತಿಗೆ ಅತಿದೊಡ್ಡ ಬದಲಾವಣೆಯೊಂದಿಗೆ ಕಾಲಿಡೋಕೆ ರೆಡಿಯಾಗ್ತಿದ್ದಾರೆ.  ಐಕಾನಿಕ್ ಪ್ಲೇಯರ್​ ಆಗಿದ್ದವ್ರೇ ಕೋಚ್ ಹುದ್ದೆಗೂ ಏರ್ತಾರಾ ಅನ್ನೋ ಚರ್ಚೆಯೂ ಇದೆ.

ನಂಬರ್ 1 – ಮಹೇಂದ್ರ ಸಿಂಗ್ ಧೋನಿ!

ಸದ್ಯಕ್ಕೆ ಚೆನ್ನೈ ಕೋಚ್ ಹುದ್ದೆ ವಿಚಾರದಲ್ಲಿ ಟ್ರೆಂಡಿಂಗ್​ನಲ್ಲಿ ಇರೋ ಹೆಸ್ರು ಮಹೇಂದ್ರ ಸಿಂಗ್ ಧೋನಿ. ಧೋನಿ ಎಂದರೆ ಸಿಎಸ್‌ಕೆ, ಮತ್ತು ಸಿಎಸ್‌ಕೆ ಎಂದರೆ ಧೋನಿ. ಚೆನ್ನೈ ತಂಡದ ಜೀವಾಳವೇ ಆಗಿರೋ ಧೋನಿ ಮುಂದೊಂದು ದಿನ ಬೇರೆ ರೋಲ್​ನಲ್ಲಿ ಕಂಟಿನ್ಯೂ ಆಗ್ತಾರೆ ಅಂತಾ ಫ್ರಾಂಚೈಸಿಯೇ ಹೇಳಿತ್ತು. ಧೋನಿ ಕೂಡ ಚೆನ್ನೈಗಾಗಿ ಎಲ್ಲವನ್ನೂ ಕೊಟ್ಟಿದ್ದಾರೆ. ಈಗ ಕೋಚ್ ಆಗಿ ಮುಂದಿನ ಆವೃತ್ತಿಯಿಂದ ತಂಡವನ್ನ ಲೀಡ್ ಮಾಡ್ತಾರೆ ಅನ್ನೋ ಮಾತುಗಳಿವೆ. ಅದೂ ಅಲ್ದೇ ನಿವೃತ್ತಿಯ ಅಂಚಿನಲ್ಲಿದ್ದಾರೆ. ಕಳೆದ ವರ್ಷ ಐಪಿಎಲ್​ನಲ್ಲಿ ಆಡಿಯೂ ಇಲ್ಲ. ಹೀಗಾಗಿ ಧೋನಿಗೆ ಪಟ್ಟಕಟ್ಟೋದು ಬಹುತೇಕ ಪಕ್ಕಾ ಎನ್ನಲಾಗಿದೆ. ಇದು ನಿಜವೇ ಆದ್ರೆ ಚೆನ್ನೈ ತಂಡಕ್ಕೆ ಆನೆಬಲ ಬಂದಂತಾಗುತ್ತೆ.

ನಂಬರ್-2 : ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್‌ನಲ್ಲಿ ಒಂದು ದೊಡ್ಡ ಹೆಸರು. ಐಪಿಎಲ್ ಅನುಭವಿ ಮತ್ತು T20 ವಿಶ್ವಕಪ್ ವಿಜೇತ ಕೋಚ್. ಅನುಭವಿ ಆಟಗಾರನಾಗಿ, ತರಬೇತುದಾರನಾಗಿ ಸಕ್ಸಸ್ ಕೂಡ ಆಗಿದ್ದಾರೆ. ಪ್ರತಿ ಪಂದ್ಯಕ್ಕೂ ಡೇಟಾ ಅನಾಲಿಸಿಸ್ ಜೊತೆ  ಕರೆಕ್ಟ್ ರಿಸಲ್ಟ್ ತರ್ತಾರೆ. ಹಲವು ವರ್ಷಗಳಿಂದ ಕೂಲ್ ಌಂಡ್ ಕಾಮ್ ಆಗೇ ಸಕ್ಸಸ್ ಕಾಣ್ತಿರೋ ದ್ರಾವಿಡ್ ಪ್ರಸ್ತುತ ಯಾವುದೇ ತಂಡದಲ್ಲೂ ಕಾರ್ಯ ನಿರ್ವಹಿಸ್ತಾ ಇಲ್ಲ. ಹೀಗಾಗಿ ಚೆನ್ನೈ ತಂಡ ದ್ರಾವಿಡ್ ಕಡೆ ನೋಡಬಹುದು.

ನಂಬರ್-3 : ದಿನೇಶ್ ಕಾರ್ತಿಕ್

ಈ ಹೆಸ್ರು ಕೇಳ್ದಾಗ ಕೆಲವ್ರಿಗೆ ಆಶ್ಚರ್ಯ ಆಗ್ಬೋದು. ಏನು ದಿನೇಶ್ ಕಾರ್ತಿಕ್ ಚೆನ್ನೈ ಸೂಪರ್ ಕಿಂಗ್ಸ್ ಹೆಡ್ ಕೋಚ್ ಆಗ್ತಾರಾ ಅಂತಾ. ಬಟ್ ಅವ್ರ ಹೆಸ್ರೂ ಕೂಡ ಲಿಸ್ಟ್​ನಲ್ಲಿದೆ. ಫ್ಲೆಮಿಂಗ್ ಬದಲಿಗೆ ಭಾರತೀಯರಲ್ಲೇ ಕೋಚ್ ಹುಡುಕುತ್ತಿರೋ ಚೆನ್ನೈ ಫ್ರಾಂಚೈಸಿಯ ಶಾರ್ಟ್ ಲಿಸ್ಟ್​ನಲ್ಲಿ ಡಿಕೆ ಬಾಸ್ ಕೂಡ ಇದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರ್ಗದರ್ಶಕ ಅಂದ್ರೆ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿರೋ ದಿನೇಶ್ ಕಾರ್ತಿಕ್‌ ಬೆಸ್ಟ್ ಸೆಲೆಕ್ಷನ್ ಆಗ್ತಾರೆ. ಆರ್‌ಸಿಬಿ ಪರ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದ ಅನುಭವ ಕಾರ್ತಿಕ್‌ಗೆ ಇದೆ. ಹೀಗಾಗಿ ಹೆಡ್​ಕೋಚ್ ಹುದ್ದೆಗೆ ಬಡ್ತಿ ನೀಡಬಹುದು. ಌಂಡ್ ಆಂಡಿ ಫ್ಲವರ್ ಜೊತೆಗಿದ್ದು ಕೋಚ್ ಸ್ಥಾನದ ಬಗ್ಗೆ ಸಾಕಷ್ಟು ತಿಳ್ಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ದಿನೇಶ್ ಕಾರ್ತಿಕ್ ದೇಶೀಯ ಕ್ರಿಕೆಟ್‌ನಲ್ಲಿ ತಮಿಳುನಾಡು ತಂಡದ ನಾಯಕತ್ವ ವಹಿಸಿದ್ದಾರೆ. ಹೀಗಾಗಿ ರಾಜ್ಯ ಮತ್ತು ಫ್ರಾಂಚೈಸಿ ನಡುವಿನ ಸಂಪರ್ಕ ಹೆಚ್ಚಿಸಬಹುದು. ಸೋ ಡಿಕೆ ಹೆಸ್ರು ಕೂಡ ಕೇಳಿ ಬರ್ತಿದೆ.

ನಂಬರ್-4 : ರವಿಚಂದ್ರನ್ ಅಶ್ವಿನ್

ಟೀಂ ಇಂಡಿಯಾದ ಮತ್ತೊಬ್ಬ ಅನುಭವಿ ಆಟಗಾರ ಆರ್.ಅಶ್ವಿನ್ ಹೆಸರೂ ಕೂಡ ಸದ್ದು ಮಾಡ್ತಿದೆ. ಐಪಿಎಲ್‌ನಲ್ಲಿ ನಾಯಕತ್ವ ವಹಿಸಿದ್ದಾರೆ. ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಧುನಿಕ ದೃಷ್ಟಿಕೋನವನ್ನು ಹೊಂದಿದ್ದಾರೆ. ಹಾಗೇ ಸಿಎಸ್​ಕೆ ಪರ ಹಲವು ವರ್ಷಗಳ ಕಾಲ ಆಡಿ ದಂತಕಥೆಯಾಗಿದ್ದಾರೆ. ಌಂಡ್ ತರಬೇತಿಯಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಹಾಗೇ ಫ್ಯೂಚರ್​ನಲ್ಲಿ ಎಲ್ಲಾ ರೀತಿಯ ಜವಾಬ್ದಾರಿಗಳನ್ನ ತೆಗೆದುಕೊಳ್ಳೋಕೆ ಸಿದ್ಧ ಎಂದಿದ್ರು.

ನಂಬರ್ -5 : ಹೇಮಾಂಗ್ ಬದನಿ

ಇನ್ನು ಭಾರತದ ಮಾಜಿ ಕ್ರಿಕೆಟಿಗ ಹೇಮಾಂಗ್ ಬದಾನಿ ಕೂಡ ಫ್ಲೆಮಿಂಗ್ ಸ್ಥಾನಕ್ಕೆ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಬದಾನಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ತರಬೇತುದಾರರಾಗಿದ್ದರು. ಬಟ್ ಡೆಲ್ಲಿ ತಂಡ ಪ್ಲೇ ಆಫ್ಸ್​ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಡಿಸಿ ಮಾಲೀಕರು ಹೊಸ ತರಬೇತುದಾರರ ಹುಡುಕಾಟದಲ್ಲಿದ್ದಾರೆ. ಹೀಗಾಗಿ 2027 ರಲ್ಲಿ ಕೆಲಸದಿಂದ ಹೊರಗುಳಿಯುವ ಸಾಧ್ಯತೆಯಿದೆ. ಸಿಎಸ್‌ಕೆ ಅವರ ಹಿಂದಿನ ಸಿವಿಯನ್ನು ನೋಡಿ ಸಂಪರ್ಕ ಮಾಡಿದ್ರೂ ಮಾಡಬಹುದು. ಹೀಗೆ ಸದ್ಯಕ್ಕೆ ಐವರ ಹೆಸರು ಕೋಚ್ ಹುದ್ದೆ ರೇಸ್​ನಲ್ಲಿದೆ. ಆದ್ರೆ ಫ್ರಾಂಚೈಸಿಯ ಲೆಕ್ಕಾಚಾರ ಏನಿದೆ ನೋಡ್ಬೇಕು.

Shantha Kumari

Leave a Reply

Your email address will not be published. Required fields are marked *