ಸೂರ್ಯ ಕುಮಾರ್ ಗೆ ಸಿಗಲ್ವಾ ಫಿಟ್ ನೆಸ್ NOC? – ಹರ್ನಿಯಾ ಸರ್ಜರಿ.. ರಿಕವರ್ ಆಗಿಲ್ವಾ?
ಏಷ್ಯಾಕಪ್ ಟೂರ್ನಿಗೆ ಕ್ಯಾಪ್ಟನ್ ಯಾರು?

ಸೂರ್ಯಕುಮಾರ್ ಯಾದವ್ ಸದ್ಯ ಭಾರತ ತಂಡದ ಟಿ-20ಐ ನಾಯಕ. ಏಷ್ಯಾಕಪ್ ಟೂರ್ನಿ ಕೂಡ ಟಿ-20ಐ ಮಾದರಿಯಲ್ಲೇ ನಡೆಯೋದ್ರಿಂದ ಸೂರ್ಯನೇ ಕ್ಯಾಪ್ಟನ್ ಆಗಬಹುದು ಅನ್ನೋ ನಿರೀಕ್ಷೆ ಇದೆ. ಆದ್ರೆ ಜೂನ್ ತಿಂಗಳ ಕೊನೆಯಲ್ಲಿ ಮ್ಯೂನಿಚ್ನಲ್ಲಿ 34 ವರ್ಷದ ಸೂರ್ಯ ಕ್ರೀಡಾ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ರು. ಇದಾದ ಬಳಿಕ ಚೇತರಿಸಿಕೊಳ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ತರಬೇತಿ ಪಡೀತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ವೀಡಿಯೋ ಹಂಚಿಕೊಂಡಿರೋ ಸೂರ್ಯಕುಮಾರ್, ಕಾಂಟ್ ವೇಯ್ಟ್ ಟು ಬಿ ಬ್ಯಾಕ್ ಡುಯಿಂಗ್ ವಾಟ್ ಐ ಲವ್ ಅಂತಾ ಬರ್ಕೊಂಡಿದ್ದಾರೆ. ಇಲ್ಲಿ ಸೂರ್ಯ ಫಿಟ್ ಅಂತಾ ಹೇಳ್ತಿದ್ರೂ ಕೂಡ ಸಿಒಇನಲ್ಲಿ ಪರ್ಮಿಷನ್ ಸಿಗ್ಬೇಕು. ಸಿಕ್ಕರೆ ಮಾತ್ರವೇ ಮೈದಾನಕ್ಕೆ ಇಳಿಯೋಕೆ ಸಾಧ್ಯ. ಹಾಗೇನಾದ್ರೂ ಸೂರ್ಯ ಕಂಪ್ಲೀಟ್ ಆಗಿ ಫಿಟ್ ಆಗಿಲ್ಲ ಅಂದ್ರೆ ಬೇರೆಯವ್ರಿಗೆ ನಾಯಕತ್ವ ನೀಡ್ಬೇಕಾಗುತ್ತೆ.
ಇದನ್ನೂ ಓದಿ : ಏಷ್ಯಾಕಪ್ ಗೆ ಮೂವರು RCB ಸ್ಟಾರ್ಸ್? – ಜಿತೇಶ್, ಕೃನಾಲ್, ರಜತ್.. ಯಾರಿಗೆ ಲಕ್?
ಸದ್ಯದ ಮಾಹಿತಿ ಪ್ರಕಾರ ಸೂರ್ಯಕುಮಾರ್ ಸ್ಥಾನ ಪಡೆಯೋ ಬಗ್ಗೆ ಹೆಚ್ಚಿನ ಹೋಪ್ಸ್ ಇದ್ರೂ ಅಂತಿಮವಾಗಿ ವೈದ್ಯಕೀಯ ಅನುಮತಿಯ ಮೇಲೆ ಡಿಪೆಂಡ್ ಆಗಿದೆ. ಸೂರ್ಯಕುಮಾರ್ ಯಾದವ್ 2025 ರ ದುಲೀಪ್ ಟ್ರೋಫಿಯಿಂದ ಹಿಂದೆ ಸರಿದಿದ್ರು. ಹಾಗೇ ಬೆಂಗಳೂರಿನ NCAನಲ್ಲಿ ಫಿಟ್ನೆಸ್ ಗಾಗಿ ಬೆವರು ಸುರಿಸ್ತಿದ್ದಾರೆ. ಒಂದು ವೇಳೆ ಇನ್ ಟೈಮ್ಗೆ ಚೇತರಿಸಿಕೊಳ್ಳದಿದ್ದರೆ ಬೇರೆಯವ್ರು ತಂಡವನ್ನ ಲೀಡ್ ಮಾಡಬಹುದು. ಸಂಭಾವ್ಯ ನಾಯಕರ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್ ಅಥವಾ ಸಂಜು ಸ್ಯಾಮ್ಸನ್ ಸೇರಿದ್ದಾರೆ
ಇನ್ನು ಟಿ-20ಐ ಕ್ರಿಕೆಟ್ನ ಸ್ಪೆಷಲಿಸ್ಟ್ ಆಗಿರೋ ಸೂರ್ಯ 167.07 ಸ್ಟ್ರೈಕ್ ರೇಟ್ನಲ್ಲಿ 2,598 ಟಿ20ಐ ರನ್ಗಳನ್ನು ಗಳಿಸಿದ್ದಾರೆ. 160 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ನೊಂದಿಗೆ 3,000 ಟಿ20ಐ ರನ್ ಗಳನ್ನ ಕಂಪ್ಲೀಟ್ ಮಾಡಿದ ಮೊದಲ ಆಟಗಾರನಾಗಲು ಕೇವಲ 402 ರನ್ಗಳ ಅಗತ್ಯವಿದೆ. ರೋಹಿತ್ ಶರ್ಮಾ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ಐದು ಟಿ20ಐ ಶತಕಗಳ ದಾಖಲೆಯನ್ನು ಸರಿಗಟ್ಟಲು ಇನ್ನೊಂದು ಶತಕದ ಅಗತ್ಯವಿದೆ. ಹೆಚ್ಚುವರಿಯಾಗಿ, 146 ಸಿಕ್ಸರ್ಗಳೊಂದಿಗೆ, ಅವರು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 150 ಸಿಕ್ಸರ್ಗಳನ್ನು ಹೊಡೆದ ಐದನೇ ಆಟಗಾರನಾಗುವ ಹತ್ತಿರದಲ್ಲಿದ್ದಾರೆ, ಬಹುಶಃ ಏಷ್ಯಾ ಕಪ್ ಆರಂಭಿಕ ಪಂದ್ಯದಲ್ಲಿ ಈ ಮೈಲಿಗಲ್ಲು ಸಾಧಿಸಬಹುದು.
ಇನ್ನು ಏಷ್ಯಾಕಪ್ ಟೂರ್ನಿ ಬಗ್ಗೆ ಹೇಳೋದಾದ್ರೆ ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇಯಲ್ಲಿ ನಡೆಯಲಿರುವ ಈ ಟೂರ್ನಿ ಭಾರತಕ್ಕೆ ತುಂಬಾನೇ ಮುಖ್ಯವಾಗಿದೆ. ಭಾರತೀಯ ತಂಡವು ಐಸಿಸಿ ಟಿ 20 ವಿಶ್ವಕಪ್ 2026 ಕ್ಕೆ ಮುಂಚಿತವಾಗಿ ಟಿ 20 ಐ ಟ್ಯೂನ್-ಅಪ್ಗೆ ತಯಾರಿ ನಡೆಸುತ್ತಿದೆ. ಭಾರತವು ಸೆಪ್ಟೆಂಬರ್ 10 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಯುಎಇ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ, ನಂತರ ಸೆಪ್ಟೆಂಬರ್ 14 ರಂದು ಪಾಕಿಸ್ತಾನದೊಂದಿಗೆ ಫೈಟ್ ಇದೆ. ನಂತರ ಸೆಪ್ಟೆಂಬರ್ 19 ರಂದು ಗುಂಪು ಹಂತದಲ್ಲಿ ಓಮನ್ ತಂಡವನ್ನು ಎದುರಿಸಲಿದೆ. ಈ ಮೂರು ಪಂದ್ಯಗಳ ಬಳಿಕ ಸೂಪರ್ ಫೋರ್ ಸ್ಟೇಜ್ ಪಂದ್ಯಗಳಿರುತ್ತಿವೆ.

ನೋಡಿರಿ

