ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಡಿಕೆಶಿ ಸಿಎಂ ಆಗಲ್ವಾ..?
ಸಿಎಂ ರೇಸ್‌ನಲ್ಲಿ ಇರೋ ನಾಯಕರು ಇವರೇ

ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಡಿಕೆಶಿ ಸಿಎಂ ಆಗಲ್ವಾ..?ಸಿಎಂ ರೇಸ್‌ನಲ್ಲಿ ಇರೋ ನಾಯಕರು ಇವರೇ

ರಾಜ್ಯರಾಜಕೀಯದಲ್ಲಿ ದೊಡ್ಡ ಸಂಚನ ಸೃಷ್ಟಿಯಾಗಿದೆ. ಸಿಎಂ ಕುರ್ಚಿ ಖಾಲಿ ಆಗುತ್ತಾ ಅನ್ನೋ ಮಾತು ಕೇಳಿ ಬರ್ತಿದೆ. ಮುಡಾ ಕೇಸ್‌ನಿಂದ  ಸಿದ್ದರಾಮಯ್ಯ ಜೈಲು ಪಾಲಾದ್ರೆ ಯಾರು ಸಿಎಂ ಆಗ್ತಾರೆ ಅನ್ನೋ ಪ್ರಶ್ನೆಗಳು ಹುಟ್ಟಿದೆ.. ಇದಕ್ಕೆ ಬಹುತೇಕರ ಉತ್ತರ ಸಿದ್ದರಾಮಯ್ಯ ಅಧಿಕಾರದಿಂದ ಕಳೆಗಿಳಿದ್ರೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಅನ್ನೋದು.. ಆದ್ರೆ ಒಂದು ವೇಳೆ ಮುಡಾ ಕೇಸ್‌ನಿಂದಲೇ ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಕಳಗಿಳಿದ್ರೆ, ಆ ಕುರ್ಚಿ ಮೇಲೆೆ ಡಿಕೆಶಿ ಕೂರಲ್ಲ..

ಇದನ್ನೂ ಓದಿ: ಪಾರ್ವತಿ ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್​.. –  ಹೊಸ ಬಾಂಬ್‌ ಸಿಡಿಸಿದ ಹೆಚ್‌ಡಿಕೆ!

ಸಿಎಂ ಸಿದ್ದರಾಮಯ್ಯ ಮೇಲೆ ಮುಡಾ ತೂಗುಗತ್ತಿ ತೇಲಾಡುತ್ತಿದೆ.. ಈ ಕೇಸ್‌ನಲ್ಲಿ ಒಂದು ವೇಳೆ ಸಿದ್ದರಾಮಯ್ಯ ಅರೆಸ್ಟ್ ಆದ್ರೆ, ಡಿಕೆಶಿ ಮುಂದಿನ ಸಿಎಂ ಆಗ್ತಾರಾ ಅನ್ನೋದು ಎಲ್ಲರ ಪ್ರಶ್ನೆ.. ಡಿಕೆ ಶಿವಕುಮಾರ್‌ಗೆ ಕೂಡ ಸಿಎಂ ಕುರ್ಚಿ ಮೇಲೆ ಬೆಟ್ಟದಷ್ಟು ಕನಸಿದೆ. ಅದಕ್ಕಾಗಿಯೇ ಅವರು ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ.. ಅವರ ಅಭಿಮಾನಿಗಳು ಕೂಡ ಮುಂದಿನ ಸಿಎಂ ಡಿಕೆ ಶಿವಕುಮಾರ್ ಅಂತಾ ಹೊದಲ್ಲಿ ಬಂದಲ್ಲಿ ಹೇಳುತ್ತಿದ್ದಾರೆ. ಆದ್ರೆ ಒಂದು ವೇಳೆ ಮುಡಾ ಕೇಸ್‌ನಿಂದ ಸಿದ್ದರಾಮಯ್ಯ ಕುರ್ಚಿಯಿಂದ ಕೆಳಗಿಳಿದ್ರೆ ಡಿಕೆಶಿ ಆ ಕುರ್ಚಿ ಮೇಲೆ ಕೂರಲ್ಲ.. ಹಾಗಂತ ಸಿದ್ದರಾಮಯ್ಯ ಆಪ್ತರು ಯಾರಾದ್ರೂ ಸಿಎಂ ಆಗ್ತಾರಾ ಅಂತಾ ಕೇಳಬಹುದು.. ಗೊತ್ತಿಲ್ಲ.. ಆದ್ರೆ ಡಿಕೆಶಿ ಸಾಕಷ್ಟ ಯೋಚನೆ ಮಾಡೇ ಈ ವಿಚಾರದಲ್ಲಿ ಹೆಜ್ಜೆಯಿಡ್ತಾರೆ..

ಒಂದು ವೇಳೆ ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಕಳಗಿಳಿದ ತಕ್ಷಣ ಡಿಕೆ ಶಿವಕುಮಾರ್ ಆ ಕುರ್ಚಿ ಮೇಲೆ ಹೋಗಿ ಕುಳಿತ್ರೆ ಡಿಕೆಶಿಗೆ ಸಂಕಷ್ಟ ಆಗಬಹುದು. ಸಿಎಂ ಕುರ್ಚಿ ಆಸೆಗೆ ಡಿಕೆಶಿನೇ ಸಿದ್ದರಾಮಯ್ಯರನ್ನ ಮುಡಾ ಹಗರಣದಲ್ಲಿ ಸಿಲುಕಿಸಿದ್ದಾರೆ ಅನ್ನೋ ಆರೋಪ ಕೇಳಿ ಬರಬಹುದು. ಸಿದ್ದರಾಮಯ್ಯ ಹೇಳದಿದ್ರೂ ವಿರೋಧ ಪಕ್ಷದ ನಾಯಕರೇ ಈ ಆರೋಪ ಮಾಡಬಹುದು. ಇದರಿಂದ ಡಿಕೆಶಿಗೆ ಸಾಕಷ್ಟು ಡ್ಯಾಮೇಜ್ ಆಗಬಹುದು.. ಅಲ್ಲದೇ ಕರುಬು ಸಮುದಾಯದ ಕೆಂಗಣ್ಣಿಗೆ ಗುರಿಯಾಗ್ತಾರೆ.. ಸಿದ್ದರಾಮಯ್ಯ ಆಪ್ತರ ವಿರೋಧಕ್ಕೆ ಕಾರಣ ಆಗಬಹುದು..  ಆತುರಕ್ಕೆ ಬಿದ್ದು ಭವಿಷ್ಯದಲ್ಲಿ ಸಿಗುವ ದೊಡ್ಡ ಚಾನ್ಸ್‌ ಮಿಸ್ಸ್ ಆಗಬಹುದು.. ಹೀಗಾಗಿ ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಟ್ಟುಕೊಟ್ಟರೇ ಡಿಕೆಶಿ ಆ ಸ್ಥಾನದಲ್ಲಿ ಕೂರುವುದು ಡೌಟ್‌.. ಹಾಗಂತ ಡಿಕೆಶಿ ಸಿಎಂ ಆಗಲ್ವಾ ಅಂತಾ ನೀವು ಕೇಳಬಹುದು.. ಖಂಡಿತ ಡಿಕೆಶಿ ಮುಂದೆ ಸಿಎಂ ಆಗ್ತಾರೆ..  ಸದ್ಯಕ್ಕೆ  ಆಗಲ್ಲ ಅನ್ನೋದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರ್ತಿರೋ ಮಾತು.. ಒಮ್ಮ ಸಿದ್ದು ಕಳಗಿಳಿದ್ರೆ ಸದ್ಯಕ್ಕೆ ತಮ್ಮ ಕಡೆಯವರನ್ನ ಅಂದ್ರೆ ತಮ್ಮ ಆಪ್ತರನ್ನೇ ಸಿಎಂ ಮಾಡೋ ಪ್ಲ್ಯಾನ್ ಅನ್ನೋ ಡಿಕೆಶಿ ಮಾಡಿದ್ದಾರೆ.. ಹಾಗೇ ದಲಿತರನ್ನೇ ಸಿಎಂ ಮಾಡಬೇಕು ಅನ್ನೋದು ಹೈಕಮಾಂಡ್‌ ನಿರ್ಧಾರವಾಗಿದೆ. ರಾಹುಲ್ ಗಾಂಧಿಗೆ ದಲಿತ ನಾಯಕರಾಗಿರೋ ಪರಮೇಶ್ವರ್ ಅಥವಾ ಮಲ್ಲಿಕಾರ್ಜುನ ಖರ್ಗೆಯನ್ನ ಸಿಎಂ ಮಾಡೋ ಆಸೆಯಿದೆ. ಹೀಗಾಗಿ ಈ ವಿಚಾರದಲ್ಲಿ ಡಿಕೆ ಶಿವಕುಮಾರ್ ಸಾಕಷ್ಟು ಯೋಚನೆ ಮಾಡಿ ಹೆಜ್ಜೆ ಇಡ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿದೆ.

 

ಸಿದ್ದರಾಮಯ್ಯ ಆಪ್ತರಿಗೆ ಸಿಗುತ್ತಾ ಸಿಎಂ ಸ್ಥಾನ..?

ಸಿಎಂ ಆಪ್ತರಾದ ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್ , ಪರಮೇಶ್ವರ್‌, ಕೂಡ ಡಿಸಿಎಂ ಹಾಗೂ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ.. ಆದ್ರೆ ಮೊದಲಿಂದಲೂ ರೇಸ್‌ನಲ್ಲಿರೋ ಡಿಕೆಶಿ ಸಿಎಂ ಸ್ಥಾನದಲ್ಲಿ ಕೂರದೆ ಇರಬಹುದು. ಆದ್ರೆ ಅವರ ಕಡೆಯವರನ್ನೇ ಸಿಎಂ ಮಾಡಬಹುದು. ಸುಮ್ಮನೆ ರಿಸ್ಕ್‌  ತೆಗೆದುಕೊಳ್ಳಲು ಡಿಕೆಶಿ ರೆಡಿಯಿಲ್ಲ. ಹೀಗಾಗಿ ಡಿಕೆಶಿ ಆಪ್ತ ಬಳಗದಿಂದ ಹೊಸ ಹೆಸರು ಕೇಳಿ ಬರುವ ಸಾಧ್ಯತೆಯಿದೆ. ಅಲ್ಲದೇ ಸರ್ಕಾರ ರಚನೆ ಆದಾಗ 5 ವರ್ಷಕ್ಕೆ ಇಬ್ಬರು ಸಿಎಂ ಅನ್ನೋ ಮಾತು ಕೇಳಿ ಬರುತಿತ್ತು.. ಈ ಪ್ರಕಾರ ನೋಡೋಕೆ ಹೋದ್ರೂ ಸಿದ್ದರಮಯ್ಯ ಅವಧಿ ಮುಗಿದಿಲ್ಲ.. ಎರಡೂವರೇ ವರ್ಷ ಇನ್ನೂ ಕಳೆದಿಲ್ಲ.. ಈಗ ಡಿಕೆಶಿ ಸಿಎಂ ಕುರ್ಚಿ ಮೇಲೆ ಕುಳಿತ್ರೆ, ನಂತ್ರ ಸಿದ್ದರಾಮಯ್ಯ ಆರೋಪದಿಂದ ಮುಕ್ತರಾಗಿ ಹೊರ ಬಂದ್ರೆ ಸಮಸ್ಯೆ ಆಗುತ್ತೆ.. ಮತ್ತೆ ಸಿದ್ದರಾಮಯ್ಯ ಸಿಎಂ ಆಗಲಿ ಅನ್ನೋ ಕೂಗು ಕೇಳಿ ಬರಬಹುದು.. ಕುರ್ಚಿ ಹತ್ತಿದ ತಕ್ಷಣ ಇಳಿಯೋ ಹಾಗೇ ಆಗಬಹುದು.. ಹೀಗಾಗಿ ಮುಡಾ ಕೇಸ್‌ನಿಂದ ಸಿದ್ದರಾಮಯ್ಯ ಕೇಳಗಿದ್ರೆ ಆ ಸ್ಥಾನಕ್ಕೆ ಡಿಕೆಶಿ ಕೂರಲ್ಲ ಅನ್ನೋ ಮಾತು ಬಲವಾಗಿ ಕೇಳಿ ಬರ್ತಿದೆ. ಎರಡೂವರೇ ವರ್ಷದ ನಂತ್ರ ಅಥವಾ ಮುಂದಿನ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಆಗ ಡಿಕೆಶಿ ಸಿಎಂ ಆಗಲಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ..

ಖರ್ಗೆ ಮೂಲಕ ದಾಳ ಉರುಳಿಸುತ್ತಾರಾ ಡಿಕೆಶಿ..?

ನಿಮಗೆ ನೆನೆಪಿರಲಿ 2013ರಲ್ಲಿ ಕಾಂಗ್ರೆಸ್‌ನಿಂದ ಯಾರು ಸಿಎಂ ಆಗ್ತಾರೆ ಅನ್ನೋವಾಗ. ಡಿಕೆಶಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನ ಪ್ರಸ್ತಾಪ ಮಾಡಿದ್ರು. ದಲಿತ ಸಿಎಂ ಅಸ್ತ್ರವನ್ನ ಕನಕಪುರದ ಬಂಡೆ ಬಿಟ್ಟಿದ್ರು. ಹೀಗಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಬಣಬಡಿದಾಟ ನಡೆಯಬಹುದು. ಡಿಕೆಶಿ ಬಣದವರು ಸಿಎಂ ಆದ್ರೆ ಸಿದ್ದರಾಮಯ್ಯ ಬಣದವರು ವಿರೋಧಿಸಬಹುದು. ಸಿದ್ದರಾಮಯ್ಯ ಬಣದವರು ಸಿಎಂ ಆದ್ರೆ ಶಿವಕುಮಾರ್ ಬಣದವರು ವಿರೋಧಿಸಬಹುದು. ಈ ವೇಳೆ ಡಿಕೆಶಿಯ ಹಳೇ ಮಾತು ಖರ್ಗೆ ಅವರನ್ನ ಸಿಎಂ ಮಾಡಬಹುದು ಅನ್ನೋ ಮಾತು ಮತ್ತೆ ಮುನ್ನಲೆಗೆ ಬರುತ್ತೆ.. ಆಗ ದಲಿತ ಸಿಎಂ ಅನ್ನೋ ವಿಚಾರವನ್ನ ಮುಂದಿಟ್ಟುಕೊಂಡು ಖರ್ಗೆಯವರನ್ನ ಸಿಎಂ ಮಾಡಿದ್ರೆ, ಸಿದ್ದರಾಮಯ್ಯವರಿಗೆ ಕೂಡ .ಯಾವ ವಿರೋಧ ಮಾಡೋಕೆ ಆಗಲ್ಲ.  ಹಾಗೇ ಎಲ್ಲರು ಕೂಡ ಒಪ್ಪಿಕೊಳ್ಳಬೇಕಾದ ನಾಯಕತ್ವ ಖರ್ಗೆಯವರದಾಗಿರುತ್ತೆ. ಹೀಗಾಗಿ ಖರ್ಗೆಯವರನ್ನ ಮುಖ್ಯಮಂತ್ರಿ ಮಾಡೋ ಸಾಧ್ಯತೆ ಹೆಚ್ಚಿರುತ್ತೆ.

ಅಪ್ಪಿತಪ್ಪಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರೆ ಡಿಕೆಶಿ ಬಣದವರು ಸಿಎಂ ಆಗ್ತಾರಾ..? ಸಿದ್ದರಾಮಯ್ಯ ಬಣದವರು ಸಿಎಂ ಆಗ್ತರಾ..? ಅನ್ನೋ ಕುತೂಹಲ ಹೆಚ್ಚಾಗಿದೆ.  ಈ ನಡುವೆ ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯ ಹೆಸರು ಕೇಳಿ ಬಂದ್ರೂ ಇದ್ರಿಂದ ಗೆ ಏನು ಎಫೆಕ್ಟ್ ಆಗಲ್ಲ ಅನ್ನೋ ಮಾತು ಕೇಳಿ ಬರ್ತಿದೆ. ಹಾಗೇ ರಾಜೀನಾಮೆ ನೀಡುವುದು ದೂರದ ಮಾತು.. ಹೀಗಾಗಿ ಡಿಕೆಶಿ ಕೂಡ ಇದ್ರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.. ಕಾದು ನೋಡುವ ತಂತ್ರಕ್ಕೆ ಕನಕಪುರದ ಬಂಡೆ ಮುಂದಾಗಿದ್ದು, ರಣತಂತ್ರ ಹೆಣೆಯುತ್ತಿದ್ದಾರೆ..

Kishor KV

Leave a Reply

Your email address will not be published. Required fields are marked *