ಸ್ಟೋಕ್ಸ್, ಬೌಲ್ಟ್ ಗೆ ಭರ್ಜರಿ ಬೇಡಿಕೆ – ಹೆಟ್ಮೆಯರ್ ಮೇಲೆ ಹಣದ ಮಳೆ
ಮಿನಿ ಆಕ್ಷನ್ ಕುಬೇರರು ಯಾರೆಲ್ಲಾ?

ಸ್ಟೋಕ್ಸ್, ಬೌಲ್ಟ್ ಗೆ ಭರ್ಜರಿ ಬೇಡಿಕೆ – ಹೆಟ್ಮೆಯರ್ ಮೇಲೆ ಹಣದ ಮಳೆಮಿನಿ ಆಕ್ಷನ್ ಕುಬೇರರು ಯಾರೆಲ್ಲಾ?

20ನೇ ಆವೃತ್ತಿಯ ಐಪಿಎಲ್​ಗೆ ಅಖಾಡ ರಂಗೇರ್ತಿದ್ದು ಫ್ರಾಂಚೈಸಿಗಳ ಟಾರ್ಗೆಟ್ ಎಲ್ಲವೂ ಮಿನಿ ಆಕ್ಷನ್ ಮೇಲಿದೆ. ಹರಾಜಿನ ಅಖಾಡದಲ್ಲಿರೋ ಪ್ಲೇಯರ್ಸ್, ಪರ್ಸ್ ಬ್ಯಾಲೆನ್ಸ್, ಟೀಂ ಸ್ಲಾಟ್ ಟಾರ್ಗೆಟ್ ಹೀಗೆ ಎಲ್ಲಾ ವಿಚಾರಗಳಲ್ಲೂ ಅಳೆದುತೂಗಿ ಶಾರ್ಟ್ ಲಿಸ್ಟ್ ರೆಡಿ ಮಾಡಿಕೊಳ್ತಿದ್ದಾರೆ.

ಇದನ್ನೂ ಓದಿ : ಸೂರ್ಯವಂಶಿ ಬ್ಯಾಟ್‌ನಲ್ಲಿ AI ಚಿಪ್!‌ – PAKಗೆ ವೈಭವ್ ವಯಸ್ಸಿನದ್ದೇ ಡೌಟ್

20ನೇ ಆವೃತ್ತಿ ಐಪಿಎಲ್​ ಮಿನಿ ಹರಾಜಿಗೆ ಬರೋಬ್ಬರಿ 1,220 ಆಟಗಾರರು ತಮ್ಮ ಹೆಸರನ್ನ ರಿಜಿಸ್ಟರ್ ಮಾಡಿದ್ದಾರೆ. ಆದ್ರೆ ಖಾಲಿ ಇರುವ ಸ್ಥಾನಗಳು ಕೇವಲ 66 ಮಾತ್ರ. ಒಟ್ಟಾರೆ  ಎಲ್ಲಾ ಫ್ರಾಂಚೈಸಿಗಳ ಬಳಿ ಬರೋಬ್ಬರಿ 297.95 ಕೋಟಿ ರೂಪಾಯಿ ಹಣವಿದೆ. ಹೀಗಿದ್ರೂ ಆಕ್ಷನ್​ನಲ್ಲಿ ಕೆಲವರ ಖರೀದಿಗೆ ಬಾರೀ ಪೈಪೋಟಿಯೂ ಇರಲಿದೆ.

ಯಾರಿಗಾಗಿ ಪೈಪೋಟಿ?

2 ಕೋಟಿ ರೂ.ಗೆ ಮಿನಿ ಹರಾಜಿಗೆ ಹೆಸರು ನೋಂದಾಯಿಸಿದ ಬೆನ್ ಸ್ಟೋಕ್ಸ್

2026ರಲ್ಲಿ 18 ಕೋಟಿ ಪಡೆದಿದ್ದ ಬೌಲಿಂಗ್ ಸ್ಪೆಷಲಿಸ್ಟ್ ಮತೀಶ ಪತಿರಾಣಾ

ನ್ಯೂಜಿಲೆಂಡ್ ಬೌಲರ್ ಟ್ರೆಂಟ್ ಬೌಲ್ಟ್ ಕಳೆದ ಆವೃತ್ತಿಯಲ್ಲಿ 12.50 ಕೋಟಿ

ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ₹11 ಕೋಟಿ

ದಕ್ಷಿಣ ಆಫ್ರಿಕಾ ವೇಗಿಗಳಾದ ಆನ್ರಿಚ್ ನಾರ್ಟ್ಜೆ ಮತ್ತು ಜೆರಾಲ್ಡ್ ಕೋಟ್ಜಿ ಟಾರ್ಗೆಟ್

ಇನ್ನು ಮಿನಿ ಹರಾಜಿನಲ್ಲಿ ಆವೇಶ್ ಖಾನ್ ₹9.75 ಕೋಟಿ ಮತ್ತು ದೀಪಕ್ ಚಹರ್ ₹9.25 ಕೋಟಿ ರಂತಹ ಭಾರತದ ಕಾಸ್ಟ್ಲಿ ಪ್ಲೇಯರ್ಸ್ ಕೂಡ ಇದ್ದಾರೆ. ಆದ್ರೆ ಹರಾಜಿನಲ್ಲಿ ಕಳೆದ ವರ್ಷದಷ್ಟೇ ಸಂಭಾವನೆ ಸಿಗುತ್ತೆ ಅನ್ನೋದನ್ನ ಹೇಳೋದು ಕಷ್ಟ. ಹೀಗಾಗಿ ಈ ಲಿಸ್ಟ್​ನಲ್ಲಿರೋರ ಪೈಕಿ ಕೆಲವ್ರು ಕಳೆದ ಬಾರಿಗಿಂತ ಹೆಚ್ಚಿನ ಸಂಭಾವನೆ ಪಡೀಬಹುದು ಅಥವಾ ಇನ್ನೂ ಕಡಿಮೆ ಮೊತ್ತಕ್ಕೆ ಸೇಲ್ ಆಗಬಹುದು.

Shantha Kumari

Leave a Reply

Your email address will not be published. Required fields are marked *