RCB Vs GT ಅಥವಾ RCB Vs RR – ಫೈನಲ್ ಫೈಟ್ TICKET ಯಾರಿಗೆ?
2ನೇ ಕಪ್ ಟಾರ್ಗೆಟ್ ಗೆಲ್ಲೋದ್ಯಾರು?

ಪ್ಲೇ ಆಫ್ಸ್ ಬ್ಯಾಟಲ್ನಲ್ಲಿ ಸದ್ಯ 2 ಮ್ಯಾಚ್ ಮುಗ್ದು ಒಂದು ಟೀಂ ಮೈನಸ್ ಆಗಿ ಈಗ ರಣರೋಚಕ ಘಟ್ಟಕ್ಕೆ ಬಂದು ನಿಂತಿದ್ದೇವೆ. ಒಂದ್ಕಡೆ ಫಸ್ಟ್ ಅಂಟೆಂಪ್ಟ್ನಲ್ಲೇ ಫೈನಲ್ಗೆ ಲಗ್ಗೆ ಇಟ್ಟಿರೋ ಆರ್ಸಿಬಿ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ 2ನೇ ಕಪ್ ಗೆಲ್ಲೋಕೆ ರಣತಂತ್ರಗಳನ್ನ ರೆಡಿ ಮಾಡ್ತಿದೆ. ಮತ್ತೊಂದೆಡೆ ಇನ್ನೊಂದು ಫೈನಲ್ ಟಿಕೆಟ್ಗಾಗಿ ಗುಜರಾತ್ ಮತ್ತು ರಾಜಸ್ಥಾನ ತಂಡಗಳು ಈಗ ಡು ಆರ್ ಡೈ ಫೈಟ್ಗೆ ಸಿದ್ಧವಾಗಿವೆ.
ಇದನ್ನೂ ಓದಿ : ಸೂರ್ಯವಂಶಿ ಸಿಡಿಲಿಗೆ SRH ಭಸ್ಮ – ವೈಭವ್ ಏಟಿಗೆ ದಾಖಲೆಗಳೂ ದಿಕ್ಕಾಪಾಲು
ಪ್ಲೇ ಆಫ್ಸ್ ಮ್ಯಾಚ್ ಗಳಂದ್ರನೇ ಹೈಪ್ರೆಶರ್ ಗೇಮ್. ಯಾಕಂದ್ರೆ ಅದು ಇಡೀ ಸೀಸನ್ನ ಅಳಿವು ಉಳಿವಿನ ಪ್ರಶ್ನೆ. ಆದ್ರೆ ಈ ಸೀಸನ್ನ ಕಳೆದ ಎರಡೂ ಪ್ಲೇ ಆಫ್ ಪಂದ್ಯಗಳಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದವ್ರು ರನ್ ಸುನಾಮಿಯನ್ನೇ ಎಬ್ಬಿಸಿದ್ದಾರೆ. ಗುಜರಾತ್ ವಿರುದ್ಧ ಬೆಂಗಳೂರು ತಂಡ 254 ರನ್ಸ್ ಸಿಡಿಸಿ ಫೈನಲ್ಗೆ ನುಗ್ಗಿದ್ರು. ಈಗ ಎಲಿಮಿನೇಟರ್ ಮ್ಯಾಚಲ್ಲಿ ಹೈದ್ರಾಬಾದ್ ವಿರುದ್ಧ ರಾಜಸ್ಥಾನ 243 ರನ್ಸ್ ಬಾರಿಸಿ ಆರೆಂಜ್ ಆರ್ಮಿಗೆ ಆರೆಂಜ್ ಜ್ಯೂಸ್ ಕುಡಿದಷ್ಟೇ ಸಲೀಸಾಗಿ ಗೇಟ್ಪಾಸ್ ಕೊಟ್ಟಿದ್ದಾರೆ. ಈ ಎರಡೂ ಪಂದ್ಯಗಳ ಬ್ಯಾಟಿಂಗ್ ಆರ್ಭಟ ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯ ನಿರೀಕ್ಷೆಗಳನ್ನ ದುಪ್ಪಟ್ಟು ಮಾಡಿವೆ.
ಆರ್ ಸಿಬಿ ಎದುರಾಳಿ ಗುಜರಾತ್ ಅಥವಾ ರಾಜಸ್ಥಾನ?
ಆಲ್ರೆಡಿ ಬೆಂಗಳೂರು ಫೈನಲ್ಗೆ ಲಗ್ಗೆ ಇಟ್ಟಿರೋದ್ರಿಂದ ಎದುರಾಳಿ ಯಾರು ಅನ್ನೋದೇ ಈಗಿರೋ ಕುತೂಹಲ. ಒಂದ್ಕಡೆ ಗುಜರಾತ್ ಟೈಟಾನ್ಸ್ ಇನ್ನೊಂದ್ಕಡೆ ರಾಜಸ್ಥಾನ ರಾಯಲ್ಸ್. ಇವ್ರಿಬ್ರೂ ಕೂಡ ಮೇ 29 ಅಂದ್ರೆ ಶುಕ್ರವಾರ ಕ್ವಾಲಿಫೈಯರ್ 2ನಲ್ಲಿ ಮುಖಾಮುಖಿ ಆಗ್ತಾರೆ. ಇಲ್ಲಿ ಗೆದ್ದವ್ರು ಸೀದಾ ಫೈನಲ್ ಗೆ ಲಗ್ಗೆ ಇಡ್ತಾರೆ. ಸೋತವರು ಗಂಟು ಮೂಟೆ ಕಟ್ಟುತ್ತಾ ರೆ. ಆರ್ ಸಿಇ ವಿರುದ್ಧ ಸೋತಿರೋ ಗುಜರಾತ್ಗೆ ಮತ್ತೆ ಫೈನಲ್ಗೆ ಬರ್ಬೇಕು ಅನ್ನೋ ಟಾರ್ಗೆಟ್ ಇದ್ರೆ ಭಾನುವಾರ ಬೆಂಗಳೂರು ವಿರುದ್ಧ ಆಡ್ಬೇಕು ಅಂತಾ ಗುಜರಾತ್ ಕಾಯ್ತಿದೆ.
ಯಾರಿಗೆ ಫೈನಲ್ ಟಿಕೆಟ್?
ಟಾಪ್-2ನಲ್ಲಿ ಲೀಗ್ ಫಿನಿಶ್ ಮಾಡಿದ್ದ ಜಿಟಿಗೆ ಫೈನಲ್ ಟಿಕೆಟ್ ನಿರೀಕ್ಷೆ
ಕ್ವಾಲಿಫೈಯರ್ 1 ಎಡವಿದ್ರೂ ಕ್ವಾಲಿಫೈಯರ್ 2ನಲ್ಲಿ ಗೆದ್ದು ಬರುವ ಆಸೆ
ಎಲಿಮಿನೇಟರ್ ಮ್ಯಾಚಲ್ಲಿ ಭರ್ಜರಿಯಾಗಿ ಗೆದ್ದಿರುವ ರಾಜಸ್ಥಾನ ಪಡೆ
ಕ್ವಾಲಿಫೈಯರ್ 2ನಲ್ಲೂ ಗೆದ್ದು ಫೈನಲ್ ಗೆ ಬರೋ ಟಾರ್ಗೆಟ್ ಫಿಕ್ಸ್
ಗುಜರಾತ್ ಅಥವಾ ರಾಜಸ್ಥಾನ ಯಾರೇ ಬಂದ್ರೂ ಹೈವೋಲ್ಟೇಜ್ ಫೈಟ್
ಹೀಗೆ ಜಿಟಿ ಮತ್ತು ಆರ್ ಆರ್ ಇಬ್ರೂ ಕೂಡ ಆರ್ಸಿಬಿನ ಫೇಸ್ ಮಾಡೋಕೆ ಪಣ ತೊಟ್ಟಿದ್ದಾರೆ. ಜಿಟಿ ಲಾಸ್ಟ್ ಮ್ಯಾಚಲ ಸೋತಿದ್ರೂ ಅಷ್ಟು ಈಸಿ ಟಾರ್ಗೆಟ್ ಆಗಲ್ಲ. ಅತ್ತ ರಾಜಸ್ಥಾನ ಭರ್ಜರಿಯಾಗೇ ಗೆದ್ದು ಬರ್ತಿರೋದ್ರಿಂದ ಈಗಲೂ ಟಾರ್ಗೆಟ್ ಮಾಡೋ ಮೈಂಡ್ಸೆಟ್ನಲ್ಲೇ ಇರ್ತಾರೆ. ಇನ್ನು ಈ ಬಾರಿ ಐಪಿಎಲ್ನಲ್ಲಿ ಸ್ಪೆಷಾಲಿಟಿ ಏನಂದ್ರೆ ಇಲ್ಲಿ ಯಾರೇ ಕಪ್ ಗೆದ್ರೂ 2ನೇ ಬಾರಿ ಕಪ್ ಗೆದ್ದಂತಾಗುತ್ತೆ.
ಯಾರಿಗೆ 2ನೇ ಕಪ್?
ತಂಡ ಚಾಂಪಿಯನ್ಸ್
ಬೆಂಗಳೂರು 2025
ಗುಜರಾತ್ 2022
ರಾಜಸ್ಥಾನ 2008
ಈ ಮೂರೂ ತಂಡಗಳಿಗೂ ಈ ಸೀಸನ್ನಲ್ಲಿ 2ನೇ ಕಪ್ ಗೆಲ್ಲೋ ಚಾನ್ಸ್ ಇದೆ. ಒಂದ್ಕಡೆ ಬೆಂಗಳೂರು ತಂಡ ಆಲ್ರೆಡಿ ಫೈನಲ್ನಲ್ಲಿ ಇರೋದ್ರಿಂದ ಅಡ್ವಾಂಟೇಜಸ್ ಜಾಸ್ತಿ ಇದೆ. ಗುಜರಾತ್ ಹಾಗೂ ರಾಜಸ್ಥಾನಕ್ಕೆ ಈಕ್ವಲ್ ಚಾನ್ಸ್ ಇದ್ದು ಯಾರು ಫೈನಲ್ ಗೆ ಬರ್ತಾರೆ. ಸೂಪರ್ ಸಂಡೇಯಲ್ಲಿ ಗೆದ್ದು ಯಾರು ಚಾಂಪಿಯನ್ ಪಟ್ಟಕ್ಕೇರುತ್ತಾರೆ ಅನ್ನೋದನ್ನ ಕಾದು ನೋಡ್ಬೇಕು.

ನೋಡಿರಿ

