ಮೂರು ಗಂಟೆಗಳಿಗೂ ಹೆಚ್ಚು ಕಾಲ ಕಾರಿನಲ್ಲೇ ಇದ್ದ ಶಂಕಿತ ಉಮರ್ – ಛಿದ್ರವಾದ ಕೈ ಉ*ಗ್ರನ ತಾಯಿ DNA ಜೊತೆ ಮ್ಯಾಚ್ ಆಗುತ್ತಾ?

ಮೂರು ಗಂಟೆಗಳಿಗೂ ಹೆಚ್ಚು ಕಾಲ ಕಾರಿನಲ್ಲೇ ಇದ್ದ ಶಂಕಿತ ಉಮರ್ – ಛಿದ್ರವಾದ ಕೈ ಉ*ಗ್ರನ ತಾಯಿ DNA ಜೊತೆ ಮ್ಯಾಚ್ ಆಗುತ್ತಾ?

ಕೆಂಪು ಕೋಟೆ  ಬಳಿಯ ಕಾರು ಸ್ಫೋಟದ ಬಗ್ಗೆ ತನಿಖೆ ಚುರುಕುಗೊಂಡಿದೆ. ಈ ನಡುವೆ ಈ ಘಟನೆ ಹೇಗೆ ನಡೀತು. ಕಾರಿನಲ್ಲಿದ್ದ ಶಂಕಿತ ಬಾಂಬರ್  ಉಮರ್‌ ಮಹೊಮ್ಮದ್‌ ಬದುಕಿದ್ದಾನಾ? ಅಥವಾ ಮೃತಪಟ್ಟಿದ್ದಾನಾ ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ.

ಮೂರು ಗಂಟೆಗಳಿಗೂ ಹೆಚ್ಚು ಕಾಲ ಕಾರಿನಲ್ಲಿ  ಉಮರ್

ಸಿಸಿಟಿವಿ ವಿಡಿಯೋ ಮತ್ತು ಚಿತ್ರಗಳ ಪ್ರಕಾರ, ಕೆಂಪು ಕೋಟೆ ಬಳಿ ಸ್ಫೋಟಗೊಂಡ ಬಿಳಿ ಹ್ಯುಂಡೈ ಐ20 ಕಾರು ಬಾದರ್‌ಪುರ ಗಡಿಯ ಮೂಲಕ ದೆಹಲಿಗೆ ಪ್ರವೇಶಿಸಿ, ಹೊರ ವರ್ತುಲ ರಸ್ತೆಯ ಮೂಲಕ ಹಳೆಯ ದೆಹಲಿಗೆ ಬಂದಿದೆ. ಮೂಲಗಳ ಪ್ರಕಾರ, HR 26CE7674 ನಂಬರ್ ಪ್ಲೇಟ್ ಹೊಂದಿದ್ದ. ಈ ವಾಹನವನ್ನು ಸಂಜೆ 3:19ಕ್ಕೆ ಕೆಂಪು ಕೋಟೆಯ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಸುಮಾರು 6:30ರ ಸುಮಾರಿಗೆ ಆತ್ಮಾಹುತಿ ಬಾಂಬರ್‌ ಅಲ್ಲಿಂದ ಕಾರನ್ನು ಹೊರತೆಗದಿದ್ದಾನೆ. ಈ ಮೂರು ಗಂಟೆಗಳಿಗೂ ಹೆಚ್ಚು ಕಾಲ ಶಂಕಿತ ಬಾಂಬರ್ ಒಂದು ನಿಮಿಷವೂ ಕಾರಿನಿಂದ ಹೊರಬಂದಿರಲಿಲ್ಲ.

ಇದನ್ನೂ ಓದಿ: ಕೆಂಪು ಕೋಟೆ ಸ್ಫೋ*ಟದ ಶಂಕಿತ ಡಾ. ಉಮರ್ ಮೊಹಮ್ಮದ್ ಫೋಟೋ ಬಿಡುಗಡೆ – ತಾಯಿ, ಸಹೋದರ ಖಾಕಿ ವಶಕ್ಕೆ

ಒಬ್ಬರಿಂದ ಒಬ್ಬರ ಕೈಗೆ ಬದಲಾದ  ದಾಳಿಗೆ ಬಳಸಿದ ಕಾರು

ಪ್ರಾರಂಭಿಕ ತನಿಖೆಯ ಪ್ರಕಾರ, ದಾಳಿಗೆ ಬಳಸಿದ ಕಾರನ್ನು ಒಬ್ಬರಿಂದ ಒಬ್ಬರಿಗೆ ಬದಲಿಸಲಾಗಿದೆ. ಮೂಲಗಳ ಪ್ರಕಾರ, ಮಾರ್ಚ್ 2025ರಲ್ಲಿ ಸಲ್ಮಾನ್ ಎಂಬಾತನಿಂದ ದೇವಿಂದರ್ ಎಂಬಾತನಿಗೆ ಕಾರನ್ನು ಮಾರಾಟವಾಗಿತ್ತು. ನಂತರ, ಅಕ್ಟೋಬರ್ 29 ರಂದು ದೇವಿಂದರ್‌ನಿಂದ ಅಮೀರ್‌ಗೆ, ತದನಂತರ ತಾರಿಖ್ ಮತ್ತು ಉಮರ್‌ಗೆ ಹಸ್ತಾಂತರಗೊಂಡಿತ್ತು. ಅಮೀರ್ ಮತ್ತು ತಾರಿಖ್ ಇಬ್ಬರನ್ನೂ ದೆಹಲಿ ಪೊಲೀಸ್ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದೆ. ಅಮೀರ್, ಡಾ. ಉಮರ್ ಮೊಹಮ್ಮದ್‌ನ ಸಹೋದರನಾಗಿದ್ದಾನೆ. ದೇವಿಂದರ್‌ನಿಂದ ಕಾರು ಖರೀದಿಸಿದ ನಂತರ ಆತ ಕಾರಿನ ಕೀಯನ್ನು ಹಿಡಿದಿರುವುದು ಸಿಸಿ ಟೀವಿಯ ಚಿತ್ರದಲ್ಲಿ ಕಂಡುಬಂದಿದೆ.

ಶಂಕಿತ ಉಮರ್‌ ಮಹೊಮ್ಮದ್‌ ಯಾರು?

1989ರ ಫೆಬ್ರುವರಿ 24 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜನಿಸಿದ ಉಮರ್, ಆಲ್ ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ಪೊಲೀಸ್ ತಂಡಗಳು ಭೇದಿಸಿದ್ದ “ವೈಟ್ ಕಾಲರ್” ಭಯೋತ್ಪಾದನಾ ಜಾಲದ ಪ್ರಮುಖ ಸದಸ್ಯರಾದ ಡಾ. ಆದೀಲ್ ಅಹ್ಮದ್ ರಾಥರ್ ಮತ್ತು ಡಾ. ಮುಜಮ್ಮಿಲ್ ಶಕೀಲ್ ಅವರ ಆಪ್ತ ಸಹಾಯಕನಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ತನಿಖಾಧಿಕಾರಿಗಳು ಈ ಜಾಲದ ಇಬ್ಬರು ಪ್ರಮುಖ ಸದಸ್ಯರನ್ನು ಬಂಧಿಸಿ, ಕಳೆದ ಕೆಲವು ದಿನಗಳಲ್ಲಿ ಸುಮಾರು 2,900 ಕೆಜಿಗೂ ಹೆಚ್ಚು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದ ತಕ್ಷಣ ಉಮರ್ ಆತಂಕ್ಕೀಡಾಗಿ ಆಗಿ ಫರಿದಾಬಾದ್‌ನಿಂದ ತಪ್ಪಿಸಿಕೊಂಡಿದ್ದ. ವರದಿಯ ಪ್ರಕಾರ, ಈತನೇ ಸ್ಫೋಟಕ್ಕೆ ಕಾರಣನಾಗಿದ್ದಾನೆ.

ಡಿಎನ್‌ಎ ಮೂಲಕ ಉಮರ್ ದೇಹ ಪತ್ತೆ 

ಸ್ಫೋಟದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಡಾ. ಉಮರ್‌ನ ತಾಯಿ ಹಾಗೂ ಸಹೋದರನನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ.   ಸ್ಫೋಟದ ಸ್ಥಳದಲ್ಲಿ ಮೃತರ ದೇಹಗಳು ದೊರೆತಿದ್ದು, ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಇದ್ರಲ್ಲಿ ಉಮರ್ ದೇಹದ ಭಾಗ ಸಿಕ್ಕಿದ್ರೆ ಅದ್ರ ಜೊತೆೆ ಅವರ ತಾಯಿ ಡಿಎನ್‌ಎ ಮ್ಯಾಚ್ ಮಾಡಲಾಗುತ್ತೆ. ಒಂದು ವೇಳೆ ಅವನ ದೇಹದ ಭಾಗಕ್ಕೆ ಮ್ಯಾಚ್ ಆದ್ರೆ ಅವನ ಈ ಸ್ಫೋಟದಲ್ಲಿ ಮೃತಪಟ್ಟಿದ್ದಾನೆ ಅನ್ನೋದು ಗೊತ್ತಾಗಲಿದೆ.

Kishor KV