ರಾಯನ ಡಬಲ್ ರೋಲ್ ಹವಾ – ಐ ಆ್ಯಮ್ ಹೋಮ್ ಡ್ಯಾಡಿ ಎಂದಿದ್ದು ಯಾರು?

ಬಹುನಿರೀಕ್ಷೆಯ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಟಾಕ್ಸಿಕ್ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ. ಅದಕ್ಕೂ ಮೊದಲು ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಹಲ್ಚಲ್ ಸೃಷ್ಟಿ ಮಾಡಿದ್ದು ರಾಯ ಡಬಲ್ ರೋಲ್ನಲ್ಲಿರೋದು ಪಕ್ಕಾ ಆಗಿದೆ.
ಇದನ್ನೂ ಓದಿ: ಫಾರಿನ್ನಲ್ಲೂ ಟಾಕ್ಸಿಕ್ BIG ಡೀಲ್ – ರಿಲೀಸ್ಗೂ ಮುಂಚೆಯೇ 1000 ಕೋಟಿ ಕಲೆಕ್ಷನ್?
ಟಾಕ್ಸಿಕ್ ಸಿನಿಮಾ ಟೀಸರ್ ನೋಡಿ ಯಶ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿ ಒಂದು ಗಂಟೆಯೊಳಗೆ ಹಲ್ಚಲ್ ಎಬ್ಬಿಸಿದೆ. ರಾಯನಾಗಿ ಯಶ್ ಲುಕ್ ಭಯಂಕರವಾಗಿದೆ. ರಾಯನಿಗೆ ಎದುರಾಗಿ ನಿಂತವರು ಉಳಿಯೋದೇ ಇಲ್ಲ ಅನ್ನೋ ಸೂಚನೆ ಟೀಸರ್ ನೋಡಿದವರಿಗೆ ಸಿಕ್ಕಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಟೀಸರ್ಗಿಂತ ಈ ಟೀಸರ್ ತುಂಬಾನೇ ಭಿನ್ನವಾಗಿದೆ. ಯಶ್ ಅವರ ರಾ ಲುಕ್ ಗಮನ ಸೆಳೆದಿದೆ. ಈ ಸಲ ಯುದ್ಧನೇ ಬೇರೆ ಎಂಬ ಡೈಲಾಗ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಜೊತೆಗೆ ರಾಯ ಹಠಗಾರ, ಛಲಗಾರ, ಎದುರಿಗಿದ್ದವರನ್ನು ಧ್ವಂಸ ಮಾಡುವ ರಣಬೇಟೆಗಾರ ಎಂಬುದು ಟೀಸರ್ನಲ್ಲಿ ರಿವೀಲ್ ಆಗಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಟೀಸರ್ನಲ್ಲಿ ಯಶ್ ಯಂಗ್ ಲುಕ್ನಲ್ಲಿಯೂ ಕಾಣಿಸಿಕೊಂಡಿದ್ದು, ರಾಯನ ಮಗ ಇರಬಹುದೇ ಎಂಬ ಪ್ರಶ್ನೆ ಮೂಡಿದೆ. ಯಶ್ ಅವರು ಸಖತ್ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್ನಲ್ಲಿ ಸಾಕಷ್ಟು ರಕ್ತ ಕೂಡ ಹರಿದಿದೆ. ಅಂತೂ ಹೊಸ ಟೀಸರ್ ಮತ್ತಷ್ಟು ಗಮನ ಸೆಳೆದಿದ್ದು, ಯಶ್ ಹೊಸ ಲುಕ್ ಕೊನೇಯಲ್ಲಿ ರಿವೀಲ್ ಆಗಿದ್ದು ಸಿಕ್ಕಾಪಟ್ಟೆ ಥ್ರಿಲ್ ನೀಡಿದೆ. ಟಾಕ್ಸಿಕ್ ಚಿತ್ರವನ್ನು ಗೀತು ಮೋಹನ್ದಾಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕೆವಿಎನ್ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ. ಯಶ್ ಕೂಡ ನಿರ್ಮಾಪಕ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಮೊದಲಾದವರು ನಟಿಸಿದ್ದಾರೆ.

ನೋಡಿರಿ

