ಕರುಣ್ OUT.. ಸುದರ್ಶನ್ IN? – ಪಂತ್ ಗಾಯಕ್ಕೆ ಕೀಪರ್ KL ಮದ್ದು?
4ನೇ ಟೆಸ್ಟ್.. ಪ್ಲೇಯಿಂಗ್ 11 ಟ್ವಿಸ್ಟ್!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ಕಂಪ್ಲೀಟ್ ಡಾಮಿನೇಟ್ ಮಾಡಿದ್ರು. ಎರಡೂ ಕಡೆಗಳಲ್ಲಿ ರನ್‌ಗಳ ಹೊಳೆಯೇ ಹರಿದಿತ್ತು. ಬಟ್ ಮೂರನೇ ಮ್ಯಾಚಲ್ಲಿ ಬೌಲರ್ಗಳೇ ಪಾರುಪತ್ಯ ಮೆರೆದಿದ್ರು. ಸೋ ನಾಲ್ಕನೇ ಮ್ಯಾಚ್ನಲ್ಲಿ ಯಾರು ಮೇಲುಗೈ ಸಾಧಿಸ್ತಾರೆ ಅನ್ನೋ ಕ್ಯೂರಿಯಾಸಿಟಿಯೂ ಇದೆ. ಬಾಝ್ ಬಾಲ್ನೇ ಅಸ್ತ್ರ ಮಾಡಿಕೊಂಡಿರೋ ಇಂಗ್ಲೆಂಡ್ ತಂಡಕ್ಕೆ ನೀರು ಕುಡಿಸ್ಬೇಕು. ಮ್ಯಾಂಚೆಸ್ಟರ್ ಪಿಚ್ ರಿಪೋರ್ಟ್ ಮತ್ತು ಆಟಗಾರರ ಫಿಟ್ನೆಸ್ ಗಮನದಲ್ಲಿ ಇಟ್ಕೊಂಡು ಪ್ಲೇಯಿಂಗ್ 11 ಘೋಷಿಸಬೇಕಿದೆ.
ಇದನ್ನೂ ಓದಿ : ನಾಲ್ಕನೇ ಪಂದ್ಯಕ್ಕೂ ಮುನ್ನ ನಾಲ್ವರು ಆಟಗಾರರಿಗೆ ಇಂಜುರಿ – ಭಾರತದ ಮುಂದೀಗ ಬಿಗ್ ಚಾಲೆಂಜಸ್!
ಇಂಗ್ಲೆಂಡ್ ವರ್ಸಸ್ ಭಾರತ ನಡುವಿನ ಟೆಸ್ಟ್ ಸರಣಿಯಲ್ಲಿ ಕರುಣ್ ನಾಯರ್ ಉತ್ತಮ ಪ್ರದರ್ಶನ ನೀಡಿಲ್ಲ. ಹೆಡಿಂಗ್ಲಿ, ಎಡ್ಜ್‌ಬಾಸ್ಟನ್ ಮತ್ತು ಲಾರ್ಡ್ಸ್‌ನಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳ ನಂತರ, ಒಟ್ಟು 249 ಎಸೆತಗಳನ್ನು ಎದುರಿಸಿದ ಕರುಣ್ ನಾಯರ್ 22 ಕ್ಕಿಂತ ಕಡಿಮೆ ಸರಾಸರಿಯಲ್ಲಿ ಕೇವಲ 131 ರನ್‌ಗಳನ್ನು ಗಳಿಸಿದ್ದಾರೆ. ಸೋ ನಾಲ್ಕನೇ ಪಂದ್ಯಕ್ಕೆ ಮತ್ತೆ ಸಾಯಿ ಸುದರ್ಶನ್ ಕಮ್ ಬ್ಯಾಕ್ ಮಾಡೋ ಚಾನ್ಸಸ್ ಇದೆ. ಹೀಗಾಗಿ ಆಡಳಿತ ಮಂಡಳಿ ಕರುಣ್ ನಾಯರ್ ಅವರಿಗೆ ಅಂಟಿಕೊಳ್ಳಬೇಕೆ ಅಥವಾ ಸಾಯಿ ಸುದರ್ಶನ್ ಅವರಿಗೆ ಅವಕಾಶ ನೀಡಬೇಕೇ ಅನ್ನೋ ಗೊಂದಲದಲ್ಲಿದೆ. ಚೊಚ್ಚಲ ಪಂದ್ಯದ ನಂತರ ಆಡುವ ಹನ್ನೊಂದರ ಬಳಗದಿಂದ ಸಾಯಿ ಸುದರ್ಶನ್ ಹೊರಗುಳಿದಿದ್ದಾರೆ. ಸೋ ಈಗ ಸಾಯಿಗೆ ಮತ್ತೊಂದು ಚಾನ್ಸ್ ನೀಡಬಹುದು.
ಇಂಗ್ಲೆಂಡ್ ಸರಣಿಯಲ್ಲಿ ರಿಷಭ್ ಪಂತ್ ಒಳ್ಳೇ ಫಾರ್ಮ್ನಲ್ಲಿದ್ದಾರೆ. ಹೀಗಿದ್ರೂ ಗಾಯದ ಸಮಸ್ಯೆ ಹೊಸ ತಲೆನೋವು ತಂದಿಟ್ಟಿದೆ. ಕಳೆದ ಪಂದ್ಯದಲ್ಲಿ ತೋರುಬೆರಳಿಗೆ ಗಾಯವಾಗಿದ್ದು, ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡಿದ್ರು. ಇದೀಗ ಜುಲೈ 23 ರಂದು ಪಂದ್ಯ ಪ್ರಾರಂಭವಾಗುವ ಪಂದ್ಯಕ್ಕೆ ಪಂತ್ ಸಂಪೂರ್ಣವಾಗಿ ಫಿಟ್ ಆಗಿಲ್ಲದಿದ್ದರೆ, ಮ್ಯಾನೇಜ್‌ಮೆಂಟ್ ಜುರೆಲ್ ಅವರನ್ನು ಕೀಪರ್ ಆಗಿ ಆಯ್ಕೆ ಮಾಡಲಿದೆ. ಪಂತ್ ಅವರನ್ನು ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಆಡಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿದೆ. ಹಾಗೇ ಇಂಗ್ಲೆಂಡ್ ಟೆಸ್ಟ್ ಪ್ರವಾಸದ ಉಳಿದ ಪಂದ್ಯಗಳಿಂದ ನಿತೀಶ್ ಕುಮಾರ್ ರೆಡ್ಡಿ ರೂಲ್ಡ್ ಔಟ್ ಆಗಿದ್ದು, ಬ್ಯಾಟಿಂಗ್ ಮತ್ತು ಬಾಲ್ ಎರಡರಲ್ಲೂ ಉತ್ತಮ ಕೊಡುಗೆ ನೀಡಬಲ್ಲ ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆ ಅಥವಾ ತಜ್ಞ ಬ್ಯಾಟರ್ ಅಥವಾ ಬೌಲರ್ ಅನ್ನು ತರಬೇಕೆ ಎಂದು ಬಿಸಿಸಿಐ ತಲೆಕೆಡಿಸಿಕೊಂಡಿದೆ.
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಆಕಾಶ್ ದೀಪ್ ತೊಡೆಸಂದು ಸಮಸ್ಯೆಯಿಂದ ಬಳಲುತ್ತಿದ್ರು. ಸೋ ಅರ್ಷದೀಪ್ ಸಿಂಗ್ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ಇತ್ತು. ಆದ್ರೆ ಸಾಯಿ ಸುದರ್ಶನ್ ನೆಟ್ಸ್‌ನಲ್ಲಿ ನೀಡಿದ ಡ್ರೈವ್ ಅನ್ನು ತಡೆಯಲು ಪ್ರಯತ್ನಿಸುವಾಗ ಕೈಗೆ ಗಾಯವಾಗಿದೆ. ಆಕಾಶ್ ಚೇತರಿಸಿಕೊಳ್ಳಲು ವಿಫಲವಾದರೆ, ಪ್ರಸಿದ್ಧ್ ಕೃಷ್ಣ ಅಥವಾ ಅನ್ಶುಲ್ ಕಾಂಬೋಜ್ ಅವರನ್ನು ಮ್ಯಾಂಚೆಸ್ಟರ್ ಟೆಸ್ಟ್‌ಗಾಗಿ ಭಾರತದ XI ನಲ್ಲಿ ಸೇರಿಸಿಕೊಳ್ಳಬಹುದು. ಸೋ ಸಂಭಾವ್ಯ ಪ್ಲೇಯಿಂಗ್ 11 ಹೇಗಿದೆ ಅನ್ನೋದನ್ನ ನೋಡೋದಾದ್ರೆ..
ಸಂಭಾವ್ಯ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್
ಕೆಎಲ್ ರಾಹುಲ್
ಕರುಣ್ ನಾಯರ್ Or ಸಾಯಿ ಸುದರ್ಶನ್
ಶುಭಮನ್ ಗಿಲ್
ರಿಷಭ್ ಪಂತ್
ಶಾರ್ದೂಲ್ ಠಾಕೂರ್/ಕುಲದೀಪ್ ಯಾದವ್
ರವೀಂದ್ರ ಜಡೇಜಾ
ವಾಷಿಂಗ್ಟನ್ ಸುಂದರ್
ಆಕಾಶ್ ದೀಪ್ Or ಅನ್ಶುಲ್ ಕಾಂಬೋಜ್
ಮೊಹಮ್ಮದ್ ಸಿರಾಜ್
ಜಸ್ಪ್ರೀತ್ ಬುಮ್ರಾ

ನೋಡಿರಿ

