ಮೊದಲ ಗೆಲುವಿನ ಉತ್ಸಾಹದಲ್ಲಿ ಸಿಎಸ್ಕೆ, ಜಿಟಿ – ಯುವನಾಯಕರ ಜೋಶ್, ವಿನ್ನರ್ ಯಾರು?
ಫಸ್ಟ್ ಮ್ಯಾಚ್. ಫಸ್ಟ್ ವಿನ್.. ಗೆದ್ರೂ ಅಷ್ಟೋ ಸೋತ್ರು ಅಷ್ಟೇ, ಚೆನ್ನೈ ಸೂಪರ್ ಕಿಂಗ್ಸ್ ಕೂಲ್ ಆಗಿಯೇ ಇರುತ್ತೆ. ಯಾಕೆಂದ್ರೆ ಟೀಮ್ನಲ್ಲಿರೋದು ಕೂಲ್ ಐಕಾನ್ ಧೋನಿ ಮತ್ತು ಟೀಮ್ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್. ಸಿಎಸ್ಕೆ ವಿಚಾರಕ್ಕೆ ಬಂದಾಗ ಮುಖ್ಯವಾಗಿ ಕಾಣಿಸೋದೇ ಒನ್ ಟೀಮ್ ಒನ್ ಫ್ಯಾಮಿಲಿ ಎಂಬ ಕಾನ್ಸೆಪ್ಟ್. ಈ ಟೀಮ್ನಲ್ಲಿ ಸಿಕ್ಕಾಪಟ್ಟೆ ಒಗ್ಗಟ್ಟಿದೆ.. ಎದುರಾಳಿಯನ್ನೂ ಒಂದಾಗಿ ಸೋಲಿಸೋ ಸ್ಟ್ರೆಂಥ್ ಇದೆ. ಇದೇ ಸಿಎಸ್ಕೆ ಟೀಮ್ನ ಗೆಲುವಿನ ಸೀಕ್ರೆಟ್. ಇದೀಗ ರುತುರಾಜ್ ಗಾಯಕ್ವಾಡ್ ಕ್ಯಾಪ್ಟನ್ ಆದ್ರೂ ಧೋನಿಯೇ ಟೀಮ್ ಲೀಡರ್. ಫೀಲ್ಡಿಂಗ್, ಬೌಲಿಂಗ್ ಎಲ್ಲದ್ರಲ್ಲೂ ಧೋನಿ ಸಜೆಶನ್ ಮೇಲೆಯೇ ರುತುರಾಜ್ ನಿರ್ಧಾರ ಮಾಡೋದು. ಧೋನಿಯನ್ನು ಯಾವಾಗ್ಲೂ ಧೋನಿ ಭಾಯ್ ಎಂದು ಕರೆಯೋ ರುತು, ಮ್ಯಾಚ್ ಉದ್ದಕ್ಕೂ ತನ್ನ ಗುರುವಿನ ಆದೇಶವನ್ನೇ ಫಾಲೋ ಮಾಡ್ತಾರೆ. ಹೀಗಾಗಿ ಸಿಎಸ್ಕೆ ಟೀಮ್ಗೆ ಗುಜರಾತ್ ಟೈಟಾನ್ಸ್ ಎದುರಾಳಿಯಾದ್ರೂ ಅಷ್ಟೇನು ಚಿಂತೆಯಿಲ್ಲ. ಅನುಭವಿ ತಂಡ ಹೊಂದಿರೋ ಸಿಎಸ್ಕೆ ಎದುರಾಳಿ ತಂಡದ ಬಗ್ಗೆ ಯಾವಾಗ್ಲೂ ತಲೆಕೆಡಿಸಿಕೊಳ್ಳೋದೂ ಇಲ್ಲ. ಅಲ್ಲದೆ ಸಿಎಸ್ಕೆಗೆ ಸೆಕೆಂಡ್ ಮ್ಯಾಚ್ ಕೂಡಾ ಹೋಮ್ಗ್ರೌಂಡ್ನಲ್ಲೇ ನಡೆಯಲಿದೆ. ಜಿಟಿ ಟೀಮ್ನ್ನ ತವರಿನಲ್ಲೇ ಎದುರಿಸಲು ರೆಡಿಯಾಗಿದೆ ಸಿಎಸ್ಕೆ ತಂಡ.
ಇದನ್ನೂ ಓದಿ:
ಎರಡೂ ಟೀಮ್ನಲ್ಲಿ ಇರೋದು ಇಬ್ಬರು ಯುವನಾಯಕರು. ಈ ಸೀಸನ್ನಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ಆದವರು. ಇನ್ನು ಚೆನ್ನೈನ ಬ್ಯಾಟಿಂಗ್ ಲೈನ್ಪ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿದೆ. ನಾಯಕ ರುತುರಾಜ್ ಗಾಯಕ್ವಾಡ್ ಜೊತೆಗೆ ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ ಲಯ ಮುಂದುವರಿಸುವ ನಿರೀಕ್ಷೆಯಿದೆ. ಮುಸ್ತಾಫಿಜುರ್ ರಹಮಾನ್ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದು, ಈ ಪಂದ್ಯದಲ್ಲಿ ತುಷಾರ್ ದೇಶಪಾಂಡೆ ಬದಲು ಶಾರ್ದೂಲ್ ಠಾಕೂರ್ ಅಥವಾ ಮುಕೇಶ್ ಚೌಧರಿ ಕಣಕ್ಕಿಳಿಯಬಹುದು. ಹಾಗಿದ್ದರೂ ಒಂದೇ ಪಂದ್ಯದಲ್ಲಿ ಆದ ವೈಫಲ್ಯಕ್ಕೆ ತುಷಾರ್ ದೇಶಪಾಂಡೆಯನ್ನು ತಂಡದಿಂದ ಹೊರಗಿಡುವ ತೀರ್ಮಾನಕ್ಕೆ ಧೋನಿ ಬರುತ್ತಾರಾ ಎಂದು ನೋಡಬೇಕಿದೆ..
ಇನ್ನು ಕಳೆದ ಸೀಸನ್ ನ ಫೈನಲ್ನಲ್ಲಿ ಜಿಟಿಯನ್ನು ಕಡೆಯದಾಗಿ ಸಿಎಸ್ಕೆ ಎದುರಿಸಿತ್ತು.. ಅಲ್ಲಿ ಗುಜರಾತ್ ಟೈಟನ್ಸ್ ಕೆಡವಿ ಧೋನಿ ಪ್ರಶಸ್ತಿಗೆ ಮುತ್ತಿಕ್ಕದ್ದರು. ಹೀಗಾಗಿ ಈ ಸೀಸನ್ನಲ್ಲಿ ಮತ್ತೊಮ್ಮೆ ಮುಖಮುಖಿಯಾಗುತ್ತಿರುವ ಬಲಿಷ್ಠ ತಂಡಗಳ ರೋಚಕ ಹಣಾಹಣಿ ನೋಡಲು ಫ್ಯಾನ್ಸ್ ಕೂಡಾ ಕಾಯ್ತಿದ್ದಾರೆ. ಮೊದಲ ಗೆಲುವಿನ ಹುಮ್ಮಸ್ಸಿನಲ್ಲಿರುವ ಶುಭಮನ್ ಗಿಲ್, ಎರಡನೇ ಗೆಲುವಿಗೆ ಕಾತರರಾಗಿದ್ದಾರೆ. ಚೆನ್ನೈ ತಂಡಕ್ಕೆ ಹೋಲಿಸಿದರೆ ಗುಜರಾತ್ ತಂಡದಲ್ಲಿ ಅಷ್ಟಾಗಿ ಎಕ್ಸಪೀರಿಯನ್ಸ್ ಆಟಗಾರರಲಿಲ್ಲ. ಹಾಗಂತ ಯುವ ಪಡೆಯನ್ನೇ ನೆಚ್ಚಿಕೊಂಡ ಈ ಜಿಟಿಯನ್ನು ಈಸಿಯಾಗಿ ತೆಗೆದುಕೊಳ್ಳುವಂತಿಲ್ಲ. ಭಾನುವಾರದ ಪಂದ್ಯದಲ್ಲಿ ಗಿಲ್ ಪಡೆ ಬಲಿಷ್ಠ ತಂಡವಾದ ಮುಂಬೈಗೆ ಸೋಲುಣಿಸಿತ್ತು. ಆದ್ದರಿಂದ ಚೆನ್ನೈ ಕೂಡಾ ಎಚ್ಚರಿಕೆಯಿಂದ ಆಡಬೇಕಿದೆ. ಇನ್ನು ಜಿಟಿ ತಂಡದಲ್ಲಿ ಗೇಮ್ ಚೇಂಜರ್ ಬೌಲರ್ಗಳ ಬಲಿಷ್ಠ ಪಡೆಯಿದೆ.. ಬೌಲರ್ ಗಳಾದ ಮೋಹಿತ್ ಶರ್ಮಾ , ಸಾಯಿ ಕಿಶೋರ್, ರಶೀದ್ ಖಾನ್ ಯಾವ ಮೂಮೆಂಟ್ಲ್ಲಾದ್ರೂ ಮ್ಯಾಚ್ ಟರ್ನ್ ಮಾಡಬಲ್ಲರು.. ಇನ್ನು ಈ ಎರಡೂ ತಂಡಗಳಲ್ಲಿ ಇದುವರೆಗೆ ಮೇಲುಗೈ ಸಾಧಿಸಿದ್ದು ಯಾರು ಅಂತ ನೋಡೋದಾದ್ರೆ..
ಜಿಟಿ ಮತ್ತು ಸಿಎಸ್ಕೆ 5 ಬಾರಿ ಮುಖಾಮುಖಿಯಾಗಿವೆ. ಇದ್ರಲ್ಲಿ ಮೂರಲ್ಲಿ ಗುಜರಾತ್ ಟೈಟಾನ್ಸ್ ಗೆಲುವು ದಾಖಲಿಸಿದೆ. ಕೇವಲ ಎರಡರಲ್ಲಿ ಮಾತ್ರ ಸಿಎಸ್ಕೆ ಗೆದ್ದಿದೆ. ಅದರಲ್ಲೊಂದು ಫೈನಲ್ ಮ್ಯಾಚ್.
ಇಂದು ನಡೆಯುವ ಪಂದ್ಯ ಚೆನ್ನೈಗೆ ತವರಿನ ಪಂದ್ಯವಾದ ಕಾರಣ ಗೆಲ್ಲುವ ಅವಕಾಶ ಹೆಚ್ಚಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನ ಪಿಚ್, ಸ್ಪಿನ್ ಸ್ನೇಹಿ ಜತೆಗೆ ಬ್ಯಾಟಿಂಗ್ಗೂ ನೆರವಾಗಲಿದೆ. ಈ ಮೈದಾನದಲ್ಲಿ ನಡೆದ ಕಳೆದ 20 ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 150 ರನ್. ಮೈದಾನದಲ್ಲಿ ಟಾಸ್ ಗೆಲ್ಲುವ ತಂಡ ದಿನದ ಪಿಚ್ಗೆ ಅನುಗುಣವಾಗಿ ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ಕೆ ಮಾಡಿಕೊಳ್ಳಬಹುದು.. ಮೈದಾನದಲ್ಲಿ ರನ್ ಮಳೆ ಹರಿಯುವ ಸಾಧ್ಯತೆ ಕಡಿಮೆ. 180 ರನ್ ಹೊಡೆದ್ರೆ ಗೆಲ್ಲೋ ಚಾನ್ಸಸ್ ಜಾಸ್ತಿಯಿರುತ್ತೆ.
ಇನ್ನು ಗುಜರಾತ್ ತಂಡದ ಪ್ಲೇಯಿಂಗ್ ಲೆವೆನ್ ನೋಡೋದಾದ್ರೆ,
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11
- ಶುಭಮನ್ ಗಿಲ್ (ನಾಯಕ)
- ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್)
- ಸಾಯಿ ಸುದರ್ಶನ್
- ವಿಜಯ್ ಶಂಕರ್
- ಡೇವಿಡ್ ಮಿಲ್ಲರ್
- ಅಜ್ಮತುಲ್ಲಾ ಒಮರ್ಜಾಯ್
- ರಾಹುಲ್ ತೆವಾಟಿಯಾ
- ರಶೀದ್ ಖಾನ್
- ಉಮೇಶ್ ಯಾದವ್
- ಸಾಯಿ ಕಿಶೋರ್
- ಸ್ಪೆನ್ಸರ್ ಜಾನ್ಸನ್
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಲೆವೆನ್ ನೋಡೋದ್ರಾದ್ರೆ,
CSK ಪ್ಲೇಯಿಂಗ್ 11
- ರುತುರಾಜ್ ಗಾಯಕ್ವಾಡ್ (ನಾಯಕ)
- ರಚಿನ್ ರವೀಂದ್ರ
- ಅಜಿಂಕ್ಯ ರಹಾನೆ
- ಡೇರಿಲ್ ಮಿಚೆಲ್
- ರವೀಂದ್ರ ಜಡೇಜಾ
- ಸಮೀರ್ ರಿಜ್ವಿ
- ಎಂಎಸ್ ಧೋನಿ (ವಿಕೆಟ್ ಕೀಪರ್)
- ದೀಪಕ್ ಚಾಹರ್
- ಮಹೇಶ್ ತೀಕ್ಷಣ
- ಮುಸ್ತಾಫಿಜುರ್ ರೆಹಮಾನ್
- ತುಷಾರ್ ದೇಶಪಾಂಡೆ
ಹೀಗೆ ಎರಡೂ ಬಲಿಷ್ಠ ತಂಡಗಳು ಮತ್ತೆ ಮುಖಾಮುಖಿಯಾಗುತ್ತಿವೆ.. ಇದರಲ್ಲಿ ಗೆಲುವು ಯಾರಿಗೆ ಸಿಗುತ್ತೆ ಅನ್ನೋದ್ರ ಮೇಲೆ ಪಾಯಿಂಟ್ ಟೇಬಲ್ನಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದು ನಿರ್ಧಾರವಾಗಲಿದೆ.. ಆರಂಭದಿಂದಲೇ ಹಿಡಿತ ಸಾಧಿಸುವ ವಿಶ್ವಾಸದಲ್ಲಿ ಜಿಟಿಯಿದ್ದರೆ, ಹೊಸ ಹುಮ್ಮಸ್ಸಿನಲ್ಲಿರುವ ಚೈನ್ನೈ ಸೂಪರ್ ಕಿಂಗ್ಸ್ ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳುವ ಸಾಧ್ಯತೆ ಕಡಿಮೆ.