ವಾಂಖೆಡೆ ಸ್ಟೇಡಿಯಂನಲ್ಲಿ ಲಂಕಾ – ಭಾರತ ಮುಖಾಮುಖಿ – ವಾಖೆಂಡೆ ಪಿಚ್ ಯಾರಿಗೆ ಫೇವರ್ ಆಗಿದೆ?

ವಾಂಖೆಡೆ ಸ್ಟೇಡಿಯಂನಲ್ಲಿ ಲಂಕಾ – ಭಾರತ ಮುಖಾಮುಖಿ – ವಾಖೆಂಡೆ ಪಿಚ್ ಯಾರಿಗೆ ಫೇವರ್ ಆಗಿದೆ?

ಭಾರತ ಮತ್ತು ಶ್ರೀಲಂಕಾ ಗುರುವಾರ ಮುಖಾಮುಖಿಯಾಗಲಿವೆ. 2011ರ ವರ್ಲ್ಡ್​ಕಪ್​​ ಫೈನಲ್​ ನಡೆದಿದ್ದು ಇದೇ ಸ್ಟೇಡಿಯಂನಲ್ಲಿ. ಮುಂಬೈನ ವಾಂಖೆಡೆ ಸ್ಟೇಡಿಯಂ ಟೀಮ್ ಇಂಡಿಯಾ ಕ್ರಿಕೆಟಿಗರ ಫೆವರೇಟ್ ಸ್ಟೇಡಿಯಂ ಕೂಡಾ ಹೌದು. ವಾಖೆಂಡೆ ಪಿಚ್ ಯಾರಿಗೆ ಫೇವರ್ ಆಗಿದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಲ್ಲಿ ಸೆಮೆಫೈನಲ್ ಲೆಕ್ಕಾಚಾರ ಶುರು – ಸೆಮಿಫೈನಲ್‌ಗೆ ಎಂಟ್ರಿಯಾಗುವ ಟಾಪ್-4 ಟೀಂಗಳು ಯಾವುದು?

ವಾಂಖೆಡೆ ಸ್ಟೇಡಿಯಂನದ್ದು ಯಾವಾಗಲೂ ಬ್ಯಾಟ್ಸ್​ಮನ್​ಗಳಿಗೆ ಫೇವರ್ ಆಗಿರುವಂಥಾ ಪಿಚ್. ಅದ್ರಲ್ಲೂ ವೈಡ್ ಬಾಲ್​​ ಕ್ರಿಕೆಟ್​​ನ ಬಿಗ್ ಹಿಟ್ಟರ್ಸ್​ಗಳಿಗೆ ಇದು ಸ್ವರ್ಗ ಇದ್ದ ಹಾಗೆ. ಇತ್ತೀಚೆಗೆ ಇಲ್ಲಿ ನಡೆದ ಮ್ಯಾಚ್​ಗಳೆಲ್ಲೆಲ್ಲಾ ಹೈಸ್ಕೋರ್ ಆಗಿವೆ. ಇದೇ ವರ್ಲ್ಡ್​​ಕಪ್​​ನಲ್ಲಿ ದಕ್ಷಿಣ ಆಫ್ರಿಕಾ ತಂಡ ವಾಂಖೆಡೆಯಲ್ಲಿ ಒಂದು ಮ್ಯಾಚ್​ನಲ್ಲಿ 399 ರನ್ ಗಳಿಸಿತ್ತು. ಮತ್ತೊಂದು ಪಂದ್ಯದಲ್ಲಿ 382 ಸ್ಕೋರ್​ ಮಾಡಿತ್ತು. ಹಾಗಂತಾ ಬೌಲರ್ಸ್​​ಗಳಿಗೆ ಯಾವುದೇ ಅಡ್ವಾಂಟೇಜ್ ಇಲ್ಲ ಅಂತೇನಲ್ಲ. ಸೆಕೆಂಡ್​ ಇನ್ನಿಂಗ್ಸ್​​ ವೇಳೆ ಬೌಲರ್ಸ್​ಗಳು ತಮ್ಮ ಕರಾಮತ್ತು ತೋರಿಸಬಹುದು. ಅದ್ರಲ್ಲೂ ಸೆಕೆಂಡ್​​ ಇನ್ನಿಂಗ್ಸ್​ ವೇಳೆ ಹೊಸ ಬಾಲ್​​ನ್ನ ಫೇಸ್ ಮಾಡೋವಾಗ ಬ್ಯಾಟ್ಸ್​ಮನ್​ಗಳು ತುಂಬಾನೆ ಎಚ್ಚರಿಕೆಯಿಂದ ಆಡಬೇಕಾಗಬಹುದು. ಹೀಗಾಗಿ ಇಲ್ಲಿ ಟಾಸ್ ಬಹು ಮುಖ್ಯ ಪಾತ್ರವಹಿಸುತ್ತದೆ. ಟಾಸ್ ಗೆದ್ದ ಟೀಂ ಮೊದಲು ಬ್ಯಾಟಿಂಗ್ ಸೆಲೆಕ್ಟ್ ಮಾಡುವ ಸಾಧ್ಯತೆಯೇ ಹೆಚ್ಚಿದೆ. ​ಫಸ್ಟ್​ ಬ್ಯಾಟಿಂಗ್ ಮಾಡಿ, ದೊಡ್ಡ ಮೊತ್ತದ ಸ್ಕೋರ್ ಮಾಡಿ ಬಳಿಕ ಡಿಫೆಂಡ್ ಮಾಡೋದು ಬೆಟರ್ ಆಪ್ಷನ್ ಆಗಿರುತ್ತೆ.

ಇನ್ನು ವಾಂಖೆಡೆ ಸ್ಟೇಡಿಯಂನಲ್ಲಾದ ಮ್ಯಾಚ್​​ಗಳ ರಿಸಲ್ಟ್​ ಕುರಿತ ಟ್ರ್ಯಾಕ್​ ರೆಕಾರ್ಡ್ ಹೇಗಿದೆ ಅನ್ನೋದನ್ನ ಕೂಡ ನೋಡೋಣ.

ವಾಂಖೆಡೆ ರೆಕಾರ್ಡ್ ಹೇಗಿದೆ?

  • ವಾಂಖೆಡೆಯಲ್ಲಿ ಒಟ್ಟು ಒಟ್ಟು 31 ಮ್ಯಾಚ್​ ಗಳಾಗಿವೆ
  • ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂ 16 ಬಾರಿ ಗೆದ್ದಿದೆ
  • ಫಸ್ಟ್ ಬೌಲಿಂಗ್ ಮಾಡಿದ ಟೀಂ 15 ಬಾರಿ ಗೆದ್ದಿದೆ
  • ಫಸ್ಟ್ ಇನ್ನಿಂಗ್ಸ್ ಎವರೇಜ್ ಸ್ಕೋರ್ 243 ರನ್
  • ಸೆಕೆಂಡ್ ಇನ್ನಿಂಗ್ಸ್ ಎವರೇಜ್ ಸ್ಕೋರ್ 201 ರನ್
  • ದ.ಆಫ್ರಿಕಾದಿಂದ ಹೈಯೆಸ್ಟ್ ಟೋಟಲ್ ಸ್ಕೋರ್ 438/4

ಇನ್ನು ಭಾರತ ಮತ್ತು ಶ್ರೀಲಂಕಾ ಹಲವು ವಂಡೇ ಮ್ಯಾಚ್​ಗಳನ್ನ ಆಡಿವೆ. ಎರಡೂ ತಂಡಗಳ ಹೆಡ್ ಟು ಹೆಡ್ ಟ್ರ್ಯಾಕ್​ ರೆಕಾರ್ಡ್ ಏನು? ಮುಖಾಮುಖಿಯಾದಾಗ ಯಾರು ಹೆಚ್ಚು ಪಂದ್ಯಗಳನ್ನ ಗೆದ್ದಿದ್ದಾರೆ ಎಂಬ ಮಾಹಿತಿ ಈ ಕೆಳಗೆ ಇದೆ.

  • ಭಾರತ-ಶ್ರೀಲಂಕಾ ಮಧ್ಯೆ 167 ವಂಡೇ ಮ್ಯಾಚ್​ ಗಳಾಗಿವೆ
  • 98 ಪಂದ್ಯಗಳನ್ನ ಟೀಂ ಇಂಡಿಯಾದ ಗೆದ್ದುಕೊಂಡಿದೆ
  • 57 ಮ್ಯಾಚ್ ​ಗಳನ್ನ ಶ್ರೀಲಂಕಾ ಗೆದ್ದಿದೆ

ಹೀಗಾಗಿ ಶ್ರೀಲಂಕಾ ಮೇಲೆ ಟೀಂ ಇಂಡಿಯಾ ಯಾವ ಮಟ್ಟಿಗೆ ಡಾಮಿನೆನ್ಸ್ ಮಾಡ್ತಾ ಬಂದಿದೆ ಅನ್ನೋದಕ್ಕೆ ಈ ನಂಬರ್​ಗಳೇ ಸಾಕ್ಷಿ. ​ಈಗ 99ನೇ ಬಾರಿಗೆ ಲಂಕಾ ದಹನ ಮಾಡೋಕೆ ರೋಹಿತ್ ಶರ್ಮಾ ಪಡೆ ರೆಡಿಯಾಗಿದೆ.

Sulekha